ಬೆಂಗಳೂರು: ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ (Congress) ನೇತೃತ್ವದ ಸರ್ಕಾರ (government) ಅಸ್ಥಿತ್ವಕ್ಕೆ ಬಂದಿದ್ದೂ ಆಯ್ತು, ಸಿಎಂ ಆಗಿ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ (DK Shivakumar) ಅಧಿಕಾರ ಸ್ವೀಕರಿಸಿದ್ದೂ ಆಯ್ತು. ಆದರೆ ಸಿದ್ದರಾಮಯ್ಯ ಎಷ್ಟು ವರ್ಷ ಸಿಎಂ ಆಗಿ ಇರ್ತಾರೆ, ಮುಂದೆ ಡಿಕೆಶಿ ಸಿಎಂ ಆಗ್ತಾರಾ? ಆದರೂ ಎಷ್ಟು ವರ್ಷ ಸಿಎಂ ಆಗಿ ಅಧಿಕಾರ ನಡೆಸ್ತಾರೆ ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಅದಕ್ಕೆ ತುಪ್ಪ ಹಾಕುವಂತೆ ನಿನ್ನೆ ಸಚಿವ ಎಂ.ಬಿ. ಪಾಟೀಲ್ (MB Patil) ಸ್ಫೋಟಕ ಹೇಳಿಕೆ ನೀಡಿದ್ದರು. ಮುಂದಿನ ಐದೂ ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಅಂತ ಹೇಳುವ ಮೂಲಕ ಡಿಕೆಶಿ ಸಿಎಂ ಆಸೆಗೆ ತಣ್ಣೀರು ಎರಚಿದ್ದರು. ಇದೀಗ ಜ್ಯೋತಿಷಿಯೊಬ್ಬರು (astrologer) ಡಿಕೆ ಶಿವಕುಮಾರ್ ಅವರ ರಾಜಕೀಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಡಿಕೆ ಶಿವಕುಮಾರ್ ಬರೀ ಎರಡೂವರೆ ವರ್ಷವಷ್ಟೇ ಅಲ್ಲ, 8 ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಅಂತ ಜ್ಯೋತಿಷಿ ಹೇಳಿದ್ದಾರೆ. ಇದೀಗ ಆ ಜ್ಯೋತಿಷಿಯ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಡಿಕೆ ಶಿವಕುಮಾರ್ 8 ವರ್ಷ ಸಿಎಂ ಆಗಿರುತ್ತಾರೆ!
ಹೌದು, ಹೀಗಂತ ಖ್ಯಾತ ಜ್ಯೋತಿಷಿಯೊಬ್ಬರು ಡಿಕೆ ಶಿವಕುಮಾರ್ ಅವರ ರಾಜಕೀಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಡಿಕೆಶಿ ಸಿಎಂ ಆಗುತ್ತಾರಾ? ಆದರೂ ಎಷ್ಟು ವರ್ಷ? ಎರಡೂವರೆ ವರ್ಷವೋ ಅಥವಾ ಮೂರು ವರ್ಷವೋ ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂತ ಹೊತ್ತಲ್ಲೇ ಜ್ಯೋತಿಷಿಯೊಬ್ಬರು ಡಿಕೆ ಶಿವಕುಮಾರ್ ಬರೀ ಎರಡೂವರೆ ವರ್ಷವಷ್ಟೇ ಅಲ್ಲ, 8 ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಅಂತ ಹೇಳಿದ್ದಾರೆ.
ಭವಿಷ್ಯ ನುಡಿದ ಜ್ಯೋತಿಷಿ ಬಿ.ಬಿ. ಆರಾಧ್ಯ
ಡಿಕೆ ಶಿವಕುಮಾರ್ ಜಾತಕದ ಪ್ರಕಾರ ಅವರ ರಾಜಕೀಯ ಭವಿಷ್ಯ ಚೆನ್ನಾಗಿದೆ ಅಂತ ಆರಾಧ್ಯ ಹೇಳಿದ್ದಾರೆ. ಎರಡು ವರ್ಷಗಳ ಬಳಿಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು, ಎಂಟು ವರ್ಷಗಳ ಕಾಲ ಆಡಳಿತ ನಡೆಸುತ್ತೀರಿ ಅಂತ ಡಿಕೆಶಿಗೆ ಆರಾಧ್ಯ ಹೇಳಿದ್ದಾರೆ.
ಇದನ್ನೂ ಓದಿ: DK Shivakumar: ಪೊಲೀಸ್ ಇಲಾಖೆ ಕೇಸರಿಕರಣ ಮಾಡಲು ಹೊರಟಿದ್ದೀರಾ? ಸಭೆಯಲ್ಲಿ ಪೊಲೀಸರಿಗೆ ಡಿಕೆಶಿ ಕ್ಲಾಸ್!
ವಿಧಾನಸೌಧ ಕೊಠಡಿ ನಂ. 336 ತೆಗೆದುಕೊಂಡ ಡಿಕೆಶಿ
ಸಿಎಂ, ಡಿಸಿಎಂ ಸೇರಿದಂತೆ ಸಚಿವರಿಗೆ ವಿಧಾನಸೌಧದ ಕೊಠಡಿ ಹಂಚಿಕೆಯಾಗಿದೆ. ಈ ವೇಳೆಯೂ ಡಿಕೆ ಶಿವಕುಮಾರ್ ಜ್ಯೋತಿಷಿಗಳ ಸಲಹೆ ಕೇಳಿ ಕೊಠಡಿ ಪಡೆದಿದ್ದಾರೆ. ವಿಧಾನಸೌಧದ ಕೊಠಡಿ ಸಂಖ್ಯೆ 336ರಲ್ಲಿ ಡಿಕೆಶಿ ಇರಲಿದ್ದಾರೆ. ಮುಂದಿನ ಗುರುವಾರ ಪೂಜೆ ನೆರವೇರಲಿದೆ. ಜಾತಕ ಫಲದ ಪ್ರಕಾರ ಮುಹೂರ್ತ ನೀಡಿರುವ ಜ್ಯೋತಿಷಿ ಬಿಬಿ ಆರಾಧ್ಯ, ಅಭಿಜಿನ್ ಲಗ್ನದಲ್ಲಿ ಪೂಜೆ ನೆರವೇರಿಸಲು ಸೂಚನೆ ನೀಡಿದ್ದಾರಂತೆ.
5 ವರ್ಷ ಸಿದ್ದರಾಮಯ್ಯ ಸಿಎಂ ಎಂದಿದ್ದ ಎಂಬಿ ಪಾಟೀಲ್!
ರಾಜ್ಯದಲ್ಲಿ ಸಿದ್ದರಾಮಯ್ಯ 5 ವರ್ಷ ಪೂರ್ಣಾವಧಿ ಸಿಎಂ ಆಗಲಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಅಂತ ನಿನ್ನೆ ಎಂ.ಬಿ. ಪಾಟೀಲ್ ಹೇಳಿದ್ದರು. ಮೈಸೂರಿನ ಸುತ್ತೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದ ಸಚಿವ ಎಂಬಿ ಪಾಟೀಲ್, ಲೋಕಸಭೆ ಚುನಾವಣೆ ಬಳಿಕ ರಾಜ್ಯದ ಸಿಎಂ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಿಎಂ ಬದಲಾವಣೆ ಬಗ್ಗೆ ಎಐಸಿಸಿ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದಿದ್ದರು.
ಇದನ್ನೂ ಓದಿ: Siddaramaiah: ನಾನು ಕೊಡುವುದು ಸೂಚನೆಯಲ್ಲ, ಎಚ್ಚರಿಕೆ! ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ವಾರ್ನಿಂಗ್
ಎಂಬಿ ಪಾಟೀಲ್‌ಗೆ ಡಿಕೆ ಸುರೇಶ್ ಎಚ್ಚರಿಕೆ
ಇನ್ನು ಎಂಬಿ ಪಾಟೀಲ್ ಹೇಳಿಕೆಗೆ ಡಿಕೆಶಿ ಸಹೋದರ ಡಿಕೆ ಸುರೇಶ್ ಕಿಡಿಕಾರಿದ್ದಾರೆ. ನಾನು ತೀಕ್ಷ್ಣವಾಗಿ ಮಾತನಾಡಬಲ್ಲೆ. ಸಚಿವರ ಹೇಳಿಕೆಗೆ ಉತ್ತರ ಕೊಡಬಲ್ಲೆ ಎಂಬುದನ್ನು ಎಂ.ಬಿ.ಪಾಟೀಲ್ ಅವರಿಗೆ ಹೇಳಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಎಂಬಿ ಪಾಟೀಲ್ ಹೇಳಿಕೆ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕು ಅಂದ್ರೆ ನೀವೇ ರಣ್ದೀಪ್ ಸುರ್ಜೇವಾಲ ಹತ್ತಿರ ಮಾತನಾಡಿ. ಎಂಬಿ ಪಾಟೀಲ್‌ಗೆ ಹೇಳಿ ಇದೆಲ್ಲ ಬೇಡ ಎಂದು ನೇರವಾಗಿ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ