Belagavi Politics: ಕಾಂಗ್ರೆಸ್ ಪ್ರತಿಷ್ಠೆಯ ಕಿತ್ತಾಟ; ಚುನಾವಣೆಗೆ 9 ತಿಂಗಳು ಮೊದಲ ಬಣ ರಾಜಕೀಯ

ಇನ್ನೂ ಚುನಾವಣೆಗೆ ಒಂಬತ್ತು ತಿಂಗಳು ಬಾಕಿ ಇದ್ದು, ಈಗಿನಿಂದಲೇ ಅಭ್ಯರ್ಥಿಗಳು ಟಿಕೆಟ್ ಖಾತರಿ ಪಡಿಸಿಕೊಳ್ಳಲು ಓಡಾಡುತ್ತಿದ್ದಾರೆ. ಪ್ರತಿಷ್ಠೆ, ಜಿದ್ದಾಜಿದ್ದಿನ ಹೋರಾಟವನ್ನು ಆರಂಭ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಾವಿ: ರಾಜ್ಯದಲ್ಲಿ ಇನ್ನೂ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ (Assembly Election) 9 ತಿಂಗಳು ಬಾಕಿ ಉಳಿದಿದೆ. ಈಗಾಗಲೇ ಕಾಂಗ್ರೆಸ್ (Congress) ಪಕ್ಷದಲ್ಲಿ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಅನೇಕ ನಾಯಕರು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah), ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (KPCC President DK Shivakumar) ನಡುವೆ ಟಾಕ್ ವಾರ್ ನಡೆದಿತ್ತು. ಹುಟ್ಟುಹಬ್ಬ ಆಚರಣೆ ಮೂಲಕ ಪಕ್ಷದಲ್ಲಿ ತಮ್ಮ ಹಿಡಿತ ಸಾಬೀತು ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್ (Karnataka Congress) ಗೊಂದಲ ನಡುವೆ ಕಿತ್ತೂರು (kittur) ಕಾಂಗ್ರೆಸ್ ನಲ್ಲಿಯೂ ಎಲ್ಲವು ಸರಿ ಇಲ್ಲ ಎಂಬುದು ಬಹಿರಂಗವಾಗಿದೆ. ಕಿತ್ತಾಟಕ್ಕೆ ಮುಲಾಮು ಹಚ್ಚುವ ಜವಾಬ್ದಾರಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ (Former Minister Vinay Kulakarni) ನೀಡಲಾಗಿದ್ದು, ಇನ್ನೂ ಯಾವುದೇ ಸಂಧಾನ ಸಭೆ ನಡೆದಿಲ್ಲ.

ರಾಜ್ಯದಲ್ಲಿ ಅಧಿಕಾರ ಹಿಡಿಯಲು ಯಾವುದೇ ಪಕ್ಷಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚ ಸ್ಥಾನಗೆಲ್ಲಬೇಕಾಗಿರೋ ಅನಿವಾರ್ಯ. ಜಿಲ್ಲೆಯ 18 ಕ್ಷೇತ್ರಗಳ ಪೈಕಿ ಹೆಚ್ಚು ಸ್ಥಾನ ಗೆದ್ದರೆ ಸರ್ಕಾರ ಗದ್ದುಗೆ ಸುಲಭವಾಗಲಿದೆ.  ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ.

ಜಿದ್ದಾಜಿದ್ದಿನ ಹೋರಾಟ ಆರಂಭ

ಇನ್ನೂ ಚುನಾವಣೆಗೆ ಒಂಬತ್ತು ತಿಂಗಳು ಬಾಕಿ ಇದ್ದು, ಈಗಿನಿಂದಲೇ ಅಭ್ಯರ್ಥಿಗಳು ಟಿಕೆಟ್ ಖಾತರಿ ಪಡಿಸಿಕೊಳ್ಳಲು ಓಡಾಡುತ್ತಿದ್ದಾರೆ. ಪ್ರತಿಷ್ಠೆ, ಜಿದ್ದಾಜಿದ್ದಿನ ಹೋರಾಟವನ್ನು ಆರಂಭ ಮಾಡಿದ್ದಾರೆ.

ಇದನ್ನೂ ಓದಿ:  Polyester Flags: ಇವರ ಚಿಂತನೆಯೇ ರಾಷ್ಟ್ರದ್ರೋಹದ್ದು, ಧ್ವಜವೇ ಬೇರೆ; ಕೇಂದ್ರದ ವಿರುದ್ಧ ಉಮಾಶ್ರೀ ವಾಗ್ದಾಳಿ

ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ಕಳೆದ ಸಲ ಚುನಾವಣೆಯಲ್ಲಿ ಮಾವ, ಅಳಿಯ ನಡುವೆ ತೀವ್ರ ಪೈಪೋಟೆ ನಡೆದಿತ್ತು.  ಕೊನೆಗೆ ಇಬ್ಬರ ಜಗಳದಲ್ಲಿ ಬಿಜೆಪಿ ಗೆದ್ದು ಬಂದಿದ್ದು, ಈಗ ಇತಿಹಾಸ. ಸೋತ ಬಳಿಕವು ಮಾಜಿ ಸಚಿವ ಡಿ ಬಿ ಇನಾಮದಾರ್ ಹಾಗೂ ಅವರ ಅಳಿಯ ಬಾಬಾಸಾಹೇಬ್ ಪಾಟೀಲ್ ನಡುವೆ ಪ್ರತಿಷ್ಠೆ ಇತ್ಯರ್ಥವಾಗಿಲ್ಲ. ಮುಂದಿನ ಚುನಾವಣೆಗೆ ಟಿಕೆಟ್ ಪಡೆಯಲು ಈಗ ಹೋರಾಟ ಆರಂಭವಾಗಿದೆ.

ಟೆಕೆಟ್ ನೀಡುವಂತೆ ಮನವಿ

ಮಾಜಿ ಸಚಿವ ಡಿ ಬಿ ಇನಾಮದಾರ್ ನಮಗೆ ಟಿಕೆಟ್ ಕೊಡಬೇಕು ಎಂದು ವರಿಷ್ಠರ ಬಳಿ ಬೇಡಿಕೆ ಇಟ್ಟಿದ್ದಾರೆ. ಆದರೇ ನೇಸರ್ಗಿ, ಕಿತ್ತೂರು ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕದಲ್ಲಿ ಬಾಬಾ ಸಾಹೇಬ್ ಪಾಟೀಲ್ ಹಿಡಿತ ಸಾಧಿಸಿದ್ದಾರೆ. ಇದು ಡಿ ಬಿ ಇನಾಮದಾರ್ ಬೆಂಬಲಿಗರ ಕಣ್ಣು ಕೆಂಪಾಗುವಂತೆ ಮಾಡಿದೆ.

ಇತ್ತೀಚಿಗೆ ಕಿತ್ತೂರಿಗೆ ಡಿಕೆಶಿ ಭೇಟಿ ವೇಳೆಯಲ್ಲಿ ಹಬೀಬ್ ಶಿಲೇದಾರ್ ನೇತೃತ್ವದಲ್ಲಿ ಪ್ರತಿಭಟನೆ ಸಹ ನಡೆಸಲಾಗಿತ್ತು. ಮೂಲ, ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ವೇಳೆಯಲ್ಲಿ ಕಿತ್ತೂರು ಜಗಳ ಇತ್ಯರ್ಥಪಡಿಸುವ ಜವಾಬ್ದಾರಿಯನ್ನು ಮಾಜಿ ಸಚಿವ ವಿನಯ್ ಕುಲಕರ್ಣಿಗೆ ನೀಡಲಾಗಿದೆ. ಕುಲಕರ್ಣಿ ಯಾರ ಜೊತೆಗೆ ಹೇಗೆ ಸಂಧಾನ ಮಾಡಲಿದ್ದಾರೆ ಎಂಬುದು ಈಗ ಕೂತುಹಲದ ಪ್ರಶ್ನೆಯಾಗಿದೆ.

ಹಳಸಿತ್ತು ಮಾವ-ಅಳಿಯನ ಸಂಬಂಧ

ಮಾಜಿ ಸಚಿವ ಡಿ ಬಿ ಇನಾಮದಾರ್ ಹಾಗೂ ಬಾಬಾಸಾಹೇಬ್ ಪಾಟೀಲ್ ನಡುವೆ 2018ರ ಚುನಾವಣೆಗು ಮೊದಲೇ ಒಂದು ಒಪ್ಪಂದ ಆಗಿತ್ತು ಎನ್ನಲಾಗಿದೆ. 2018ರ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ ನೀವು ಮಾಡಿ ಎಂದು ಅಳಿಯ ಬಾಬಾಸಾಹೇಬ್ ಪಾಟೀಲ್ ಭರವಸೆ ನೀಡಿದ್ದರು. ಆದರೇ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಲ್ಲ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಡಿ ಬಿ ಪಟ್ಟು ಹಿಡಿದಿದ್ದರು. ಹೀಗಾಗಿ ಅಳಿಯ, ಮಾವನ ಸಂಬಂಧ ಹಳಸಿತ್ತು.

ಇದನ್ನೂ ಓದಿ:  Praveen Murder: ಮಧ್ಯರಾತ್ರಿ 12.15ಕ್ಕೆ ಸಿಎಂ ಸುದ್ದಿಗೋಷ್ಠಿ; PFI ಬ್ಯಾನ್ ಆಗುತ್ತಾ?

27 ಸಾವಿರ ಮತ ಪಡೆದಿದ್ದ ಬಾಬಾಸಾಹೇಬ್

ಡಿಬಿಇ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದರು, ಮಾವನ ವಿರುದ್ದ ಸಿಡಿದು ಎದಿದ್ದ ಬಾಬಾಸಾಹೇಬ್ ಪಾಟೀಲ್ ಮೊದಲು ಬಿಜೆಪಿಯ ಬಾಗಿಲು ತಟ್ಟಿದ್ದರು. ಬಳಿಕ ಜೆಡಿಎಸ್ ಟಿಕೆಟ್ ತಂದು ಸ್ಪರ್ಧೆ ಸಹ ಮಾಡಿದ್ದರು. ಆದರೇ ಜೆಡಿಎಸ್ ಸಿ ಫಾರಂ ನೀಡುವ ಮೂಲಕ ಬಾಬಾಸಾಹೇಬ್ ಪಾಟೀಲ್ ಗೆ ಶಾಕ್ ಕೊಟ್ಟಿತ್ತು. ಅನಿವಾರ್ಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ 27 ಸಾವಿರ ಮತಗಳನ್ನು ಬಾಬಾಸಾಹೇಬ್ ಪಡೆದಿದ್ದರು.
Published by:Mahmadrafik K
First published: