ಬೆಂಗಳೂರು; ಸಚಿವ ಸಂಪುಟದಲ್ಲಿ ಹಲವು ನಿರ್ಧಾರ ತೆಗೆದುಕೊಂಡಿದ್ದೇವೆ. ಪೊಲೀಸ್ ವಸತಿ ಗೃಹ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ ನೀಡಿದೆ. 2000 ಕೋಟಿ ರೂ. ಅನುದಾನದಲ್ಲಿ 10 ಸಾವಿರ ಮನೆ ನಿರ್ಮಾಣ ಮಾಡಲಾಗುವುದು. 5 ವರ್ಷದಲ್ಲಿ ಈ ಯೋಜನೆ ಮುಕ್ತಾಯವಾಗಲಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೋವಿಡ್ ವೇಳೆ ರೇಷ್ಮೆ ಗೂಡಿಗೆ ಧಾರಣೆ ಕುಸಿದಿತ್ತು. ಅದಕ್ಕಾಗಿ 15 ಕೋಟಿ ರೂ. ಅನುದಾನ ನೀಡಲು ಸಮ್ಮತಿಸಲಾಗಿದೆ. ಚಿತ್ರದುರ್ಗದ ಮುರುಗಾ ಮಠದಲ್ಲಿ 15 ಕೋಟಿ ವೆಚ್ಚದಲ್ಲಿ 325 ಅಡಿ ಎತ್ತರದ ಬಸವೇಶ್ವರ ಪುತ್ಥಳಿ ನಿರ್ಮಾಣ ಮಾಡಲಾಗುವುದು. ಅಕ್ಕೆ ಈಗಾಗಲೇ 10 ಕೋಟಿ ಅನುದಾನ ನೀಡಲಾಗಿತ್ತು. ಉಳಿದ 5 ಕೋಟಿ ಹಣ ಬಿಡುಗಡೆಗೆ ಒಪ್ಪಿಗೆ ಸಿಕ್ಕಿದೆ. ತಿಪಟೂರಿನ 96 ಕೆರೆಗೆ ನೀರು ತುಂಬಲು ಒಪ್ಪಿಗೆ ನೀಡಲಾಗಿದೆ. ದಾವಣಗೆರೆ ಜಿಲ್ಲೆಯ ಅನಗೋಡಿನಲ್ಲಿ ಕ್ರಶರ್ ಘಟಕ ನಿರ್ಮಾಣಕ್ಕೆ ಖಾಸಗಿ ಸಂಸ್ಥೆಗೆ 12 ಎಕರೆ ಭೂಮಿಯನ್ನು 30 ವರ್ಷ ಲೀಸ್ಗೆ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.
ಕೌಶಲ್ಯಾಭಿವೃದ್ಧಿ ಯೋಜನೆಗೆ ಅಪ್ ಗ್ರೇಡ್ ಮಾಡಲಾಗುವುದು. ಶೇ.88 ಶೇರು ಟಾಟಾ ಟೆಕ್ನಾಲಜಿಗೆ ನೀಡಲು ಒಪ್ಪಿಗೆ ನೀಡಲಾಗಿದೆ. 150 ಕೋಟಿ ರೂ. ನ್ಯಾಷನಲ್ ಬ್ಯಾಂಕ್ ನೀಡಲಿವೆ. ಒಟ್ಟು 220 ಕೋಟಿ ಯೋಜನೆ ಇದಾಗಿದೆ. ಮುನ್ಸಿಪಲ್ ಆ್ಯಕ್ಟ್ ಗೆ ಅಮೆಂಡ್ ಮೆಂಟ್ ತಂದಿದ್ದೇವೆ. ಪುರಸಭೆ, ನಗರಸಭೆಗಳಲ್ಲಿ ಪ್ರಾಪರ್ಟಿ ಮೊದಲಿನ ತೆರಿಗೆ ಮರುಪರಿಶೀಲಿಸಲು ಸಮ್ಮತಿಸಲಾಗಿದೆ. ಇದರಿಂದ ಶೇ.25 ಜಿಎಸ್ ಟಿಪಿ ಆದಾಯ ಸರ್ಕಾರಕ್ಕೆ ಸಿಗಲಿದೆ. ಬಿಬಿಎಂಪಿ ಹೊರತುಪಡಿಸಿ ಉಳಿದೆಲ್ಲ ಕಡೆ ಇದು ಅನ್ವಯ ಆಗಲಿದೆ. ಪುರಸಭೆ, ನಗರಸಭೆ, ನಗರಪಾಲಿಕೆಗಳಿಗೂ ಅನ್ವಯವಾಗಲಿದೆ. ನಿವೇಶನ, ಮನೆಗಳಿಗೆ . ಶೇ.3, ಶೇ.2 ರಷ್ಟು ತೆರಿಗೆ ಹೆಚ್ಚಳವಾಗಲಿದೆ ಎಂದು ಮಾಹಿತಿ ನೀಡಿದರು.
ಇದನ್ನು ಓದಿ: ನಮ್ಮ ಭಿಕ್ಷೆಯಿಂದಲೇ ಅಧಿಕಾರಕ್ಕೆ ಬಂದು ಕೈ ಬಿಟ್ಟಿರಿ; ಯಡಿಯೂರಪ್ಪ ವಿರುದ್ಧ ಹೆಚ್. ವಿಶ್ವನಾಥ್ ಆಕ್ರೋಶ
ಸಮಗ್ರ ಜಲಸಂಪನ್ಮೂಲ ಉನ್ನತ ಕೇಂದ್ರದ ಕಮಿಟಿ ರಚನೆಗೆ ಒಪ್ಪಿಗೆ ನೀಡಲಾಗಿದೆ. ವಿಕಲಚೇತನ, ಹಿರಿಯ ನಾಗರಿಕ ಸಬಲೀಕರಣ ಕಾಯ್ದೆಗೆ ತಿದ್ದುಪಡಿ ತಂದು ನೇರ ನೇಮಕಾತಿಗೆ ಅವಕಾಶ ಕಲ್ಪಿಸಲಾಗುತ್ತದೆ. ಲೋ ಲೆವೆಲ್ ನಿಂದ ಫಸ್ಟ್ ಡಿವಿಜನ್ ಗೆ ಬರಲು ಅವಕಾಶ ನೀಡಲಾಗುತ್ತದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ