ವಿಧಾನಸಭಾ ಚುನಾವಣೆ; ಮಾರುಕಟ್ಟೆಯಲ್ಲಿ ಹೂವಿಗೆ ಹೆಚ್ಚಿದ ಬೇಡಿಕೆ

news18
Updated:May 4, 2018, 7:05 PM IST
ವಿಧಾನಸಭಾ ಚುನಾವಣೆ; ಮಾರುಕಟ್ಟೆಯಲ್ಲಿ ಹೂವಿಗೆ ಹೆಚ್ಚಿದ ಬೇಡಿಕೆ
news18
Updated: May 4, 2018, 7:05 PM IST
ಶಾಲಿನಿ ಈಶ್ವರ್ , ನ್ಯೂಸ್18 ಕನ್ನಡ 

ಬೆಂಗಳೂರು (ಮೇ.04) :  ದಿನ ಕಳೆದಂತೆ ಚುನಾವಣಾ ಕಾವು  ರಂಗೇರಿದೆ. ನಾಯಕರು ಗದ್ದುಗೆ ಏರುವುದಕ್ಕೆ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರದಲ್ಲಿ ತೊಡಗಿರುವ ನಾಯಕರಿಗೆ ತರಹೇವಾರಿ ಹೂವು ಗುಚ್ಚ ನೀಡಿ ಎಲ್ಲೆಡೆ ಸ್ವಾಗತ ಮಾಡಲಾಗ್ತಿದೆ. ಈ ಸಲುವಾಗಿ ಬೆಂಗಳೂರಿನಲ್ಲಿ ಹೂವು ಗುಚ್ಛ ಹಾಗೂ ತರಹೇವಾರಿ ಹಾರಗಳಿಗೆ  ಬೇಡಿಕೆ ಹೆ್ಚ್ಚಾಗಿದೆ.

ಚುನಾವಣೆ  ಸಲುವಾಗಿ ನಗರದ ಕೆ ಆರ್. ಮಾರುಕಟ್ಟೆ, ರಸ್ತೆ ಬದಿಯಲ್ಲಿ ಹೂವು ಗುಚ್ಛ ಹಾಗೂ ಹಾರಗಳಿಗೆ ಬಾರಿ ಬೇಡಿಕೆ ಬಂದಿದೆ. ಎಲ್ಲೆಡೆ ಚುನಾವಣಾ ಪ್ರಚಾರ, ಸಾರ್ವಜನಿಕ ಕಾರ್ಯಕ್ರಮಗಳು ಜಾಸ್ತಿಯಾಗುತ್ತಿವೆ.

ಈ ಸಲುವಾಗಿ ಲೋಕಲ್ ಲೀಡರ್ ಗಳು, ಅಭ್ಯರ್ಥಿಗಳಿಗೆ ಹಾಗೂ ಪಕ್ಷದ ಹಿರಿಯ ನಾಯಕರಿಗೆ ತರಹೇವಾರಿ ಹೂವು ಗುಚ್ಛ ಹಾಗೂ ಹಾರ ಹಾಕಿ ಸ್ವಾಗತ ಮಾಡುವುದು ವಾಡಿಕೆ. ಈ ಸಲುವಾಗಿ ಎಲ್ಲೆಡೆ ದೊಡ್ಡ ದೊಡ್ಡ ಹಾರ ಹಾಗೂ ಬೃಹತ್ ಹೂವು ಗುಚ್ಛ ಗಳಿಗೆ ಬೇಡಿಕೆ ಬಂದಿದೆ.  

ಇನ್ನು ಇದನ್ನೇ ಗಮನಿಸಿದ ವ್ಯಾಪಾರಿಗೆಳು ಸಣ್ಣ ಗುಚ್ಛದಿಂದ ಹಿಡಿದು ದೊಡ್ಡ ದೊಡ್ಡ ಗುಚ್ಛಗಳನ್ನ ತಯಾರು ಮಾಡುತ್ತಿದ್ದು,  ಬೆಳಗ್ಗಿ ಯಿಂದ ಸಂಜೆ ವರೆಗೂ ತರಹೇವಾರಿ ಹೂವುಗಳ ಬೊಕ್ಕೆ ಸಿದ್ಧಪಡಿಸುವುದರಲ್ಲ ನಿರತವಾಗಿದ್ದಾರೆ.

50 ರೂಪಾಯಿ ಯಿಂದ ಹಿಡಿದು 1500 ರೂ ವರೆಗೂ ಬೊಕ್ಕೆಗಳು ಲಭ್ಯವಿದ್ದು, ಒಂದು ಸಾರಿ 15- 20 ಹೂವು ಗುಚ್ಛಗಳಿಗೆ ಆರ್ಡರ್ ಬರುತ್ತವೆ ಎಂದು ಅಲ್ಲಿನ ಹೂವು ವ್ಯಾಪಾರಿಗಳು  ಸಂತಸ ವ್ಯಕ್ತಪಡಿಸ್ತಾರೆ.

ಒಟ್ಟಿನಲ್ಲಿ ಚುನಾವಣೆ ಹೆಸರಿನಲ್ಲಿ ಹೂವು ವ್ಯಾಪಾರಿಗಳು ಭರ್ಜರಿ ವ್ಯಾಪಾರ ಮಾಡಿಕೊಳ್ಳುತ್ತಿದ್ದಾರೆ.  ಎಲೆಕ್ಷನ್ ನಂತರ ಕೂಡ ಜಯಗಳಿಸಿದ ಪಕ್ಷದಿಂದ ಮತ್ತಷ್ಟು ವ್ಯಾಪಾರವಾಗುವ ನಿರೀಕ್ಷೆಯಲ್ಲಿದ್ದಾರೆ.
Loading...

 
First published:May 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...