Election: ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ, ಮರಳಿ ಫೀಲ್ಡ್ ಗಿಳಿದ ಹಾಲಿ, ಮಾಜಿ ಶಾಸಕರು

ಇದೇ ಜೂನ್ 1 ರಂದು‌ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ, ಕೆಜಿಎಫ್ ಮಾಜಿ ಶಾಸಕ ವೈ ಸಂಪಂಗಿ ತಮ್ಮ ಹುಟ್ಟು ಹಬ್ಬವನ್ನು ಭರ್ಜರಿಯಾಗಿ  ಆಚರಿಸಿಕೊಂಡಿದ್ದು, ಜೂನ್ 8 ರಂದು ಮಾಲೂರು ಶಾಸಕ ನಂಜೇಗೌಡ  ಭರ್ಜರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡು  ಭರ್ಜರಿ ಬಾಡೂಟ ಆಯೋಜಿಸಿದ್ದಾರೆ.

ರೋಡ್ ಶೋ

ರೋಡ್ ಶೋ

  • Share this:
ರಾಜ್ಯ ವಿಧಾನಸಭೆ ಚುನಾವಣೆಗೆ (Assembly Election) ಇನ್ನೊಂದು ವರ್ಷ ಮಾತ್ರ ಬಾಕಿಯಿದೆ, ಕಳೆದ ಚುನಾವಣೆಯಲ್ಲಿ ಸೋತು ಮುಖಭಂಗ ಎದುರಿಸಿದ್ದ ಮಾಜಿ ಶಾಸಕರುಗಳು (Former MLA) ಈಗಾಗಲೇ  ಕ್ಷೇತ್ರಗಳಲ್ಲಿ ಕಾಣಿಸಿಕೊಂಡು ಸಮಾಜಸೇವೆ ಆರಂಭಿಸಿದ್ದು, ಇತ್ತ ಹಾಲಿ ಶಾಸಕರು (Sitting MLA) ಮತ್ತೊಮ್ಮೆ ಮತದಾರರ ಮನಗೆಲ್ಲಲು ಸರ್ಕಸ್ ಆರಂಭಿಸಿದ್ದಾರೆ, ಇದಕ್ಕೆ ತಮ್ಮ ಹುಟ್ಟು ಹಬ್ಬದ ದಿನವನ್ನೆ ಬಂಡವಾಳವಾಗಿ ಮಾಡಿಕೊಂಡ ಶಾಸಕರು ಹಾಗು ಮಾಜಿ ಶಾಸಕರು, ಸಾವಿರಾರು ಜನರನ್ನ ಸೇರಿಸಿ ಭರ್ಜರಿಯಾಗಿ ಹುಟ್ಟು ಹಬ್ಬ (Birthday) ಆಚರಿಸಿಕೊಂಡು, ಸಾರ್ವಜನಿಕರಿಗೆ ಉಡುಗೊರೆ ನೀಡಿ, ಭರ್ಜರಿ ಬಾಡೂಟ (Lunch) ಆಯೋಜಿಸಿ ಮತ್ತೊಮ್ಮೆ ಚುನಾವಣೆಗೆ ಸಿದ್ದತೆ ಆರಂಭಿಸಿದ್ದಾರೆ.

ಮಾಲೂರು, ಕೆಜಿಎಫ್, ಬಂಗಾರಪೇಟೆ ಕ್ಷೇತ್ರದಲ್ಲಿ ಭರ್ಜರಿ ಬಾಡೂಟದ ವ್ಯವಸ್ತೆ

ಜೂನ್ 1 ರಂದು ಕೆಜಿಎಫ್ ಮಾಜಿ ಬಿಜೆಪಿ ಶಾಸಕ ವೈ ಸಂಪಂಗಿ, ನಾಗಶೆಟ್ಟಹಳ್ಳಿ ಬಳಿಯ ತಮ್ಮ ಫಾರ್ಮ್ ಹೌಸ್ ಬಳಿ, ಸಾವಿರಾರು ಜನರನ್ನ ಸೇರಿಸಿ ಭರ್ಜರಿ ಬಾಡೂಟ ಆಯೋಜಿಸಿದ್ದರು, ತಮ್ಮ ಹುಟ್ಟು ಹಬ್ಬ ಆಯೋಜಿಸಿದ್ದ ಸಂಪಂಗಿ, ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ , ವಿವಿಧ ಕ್ಷೇತ್ರಗಳ ಮಾಜಿ ಶಾಸಕರನ್ನ ಕರೆಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರು.

ಭರ್ಜರಿ ಬಾಡೂಟ

ಜೂನ್ 1 ರಂದು ಬಂಗಾರಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್ ಎನ್ ನಾರಾಯಣಸ್ವಾಮಿ ತಮ್ಮ ಹುಟ್ಟು ಹಬ್ಬ ಆಯೋಜಿಸಿದ್ದು, ಆ ದಿನ ಬಂಗಾರಪೇಟೆ ನಗರದಲ್ಲಿ ಜನಜಾತ್ರೆ ಸೇರಿತ್ತು, ಸಾವಿರಾರು ಜನರು ವಿವಿದ ಗ್ರಾಮಗಳಿಂದ ಆಗಮಿಸಿ, ಶಾಸಕರಿಗೆ ಹೂವಿನ ಸುರಿಮಳೆಗೈದರು, ಜನರಿಗೆಂದು ಶಾಸಕರು ಭರ್ಜರಿ ಬಾಡೂಟ ಆಯೋಜಿಸಿದ್ದರು.

ಮಾಲೂರು ನಗರದಲ್ಲಿ ಶಕ್ತಿ ಪ್ರದರ್ಶನ, ರೋಡ್ ಶೋ

ಇವರನ್ನೆ ಅನುಸರಿಸಿದಂತೆ, ಜೂನ್ 8 ರಂದು ಹುಟ್ಟು ಹಬ್ಬ ಆಚರಿಸಿಕೊಂಡ ಕಾಂಗ್ರೆಸ್ ಶಾಸಕ ನಂಜೇಗೌಡ, ಮಾಲೂರು ನಗರದಲ್ಲಿ ಮತ್ತೊಮ್ಮೆ ತಮ್ಮ ಸಮಾಜಸೇವೆ ಆರಂಭಿಸಿದ್ದಾರೆ, ಹುಟ್ಟು ಹಬ್ಬದ ಪ್ರಯುಕ್ತ ಮಾಲೂರು ನಗರದಲ್ಲಿ ಶಕ್ತಿ ಪ್ರದರ್ಶನ ಮಾಡಿದ ಶಾಸಕರು, ಗಂಟೆಗಟ್ಟಲೆ ರಸ್ತೆಯಲ್ಲಿ ರೋಡ್ ಶೋ ಮಾಡಿ ಸಂಭ್ರಮಿಸಿದರು.

ಇದನ್ನೂ ಓದಿ: Rajya Sabha Election: ರಾಜ್ಯಸಭಾ ಚುನಾವಣೆಗೆ ಅಂತಿಮ ಹಂತದ ತಯಾರಿ, ಮೂರೂ ಪಕ್ಷಗಳಿಗೆ ಟೆನ್ಶನ್ ಟೆನ್ಶನ್!

ಹುಟ್ಟು ಹಬ್ಬದ ಪ್ರಯುಕ್ತ ವೇದಿಕೆ ಕಾರ್ಯಕ್ರಮ ಆಯೋಜಿಸಿ, ನೂರಾರು ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸೀರೆ, ಉಡುಗೊರೆಯಾಗಿ ನೀಡಿ, ಸಾವಿರಾರು ಜನರಿಗೆ  ಬಿರಿಯಾನಿ ಊಟದ ವ್ಯವಸ್ತೆ ಮಾಡಿದ್ದರು, ಹೆಲ್ತ್ ಕ್ಯಾಂಪ್, ಬ್ಲಡ್ ಕ್ಯಾಂಪ್ ಆಯೋಜಿಸಿ ಸಮಾಜಸೇವೆಯನ್ನ ಮತ್ತೆ ಆರಂಭಿಸಿದ್ದಾರೆ.

ಕ್ಷೇತ್ರದಲ್ಲಿ ಮಾಜಿ ಶಾಸಕರುಗಳು ಪ್ರತ್ಯಕ್ಷ್ಯ

ಇನ್ನು ಮಾಜಿ ಶಾಸಕರುಗಳು ಹಾಗು ವಿಧಾನಸಭಾ ಟಿಕೆಟ್ ಆಕಾಂಕ್ಷಿಗಳು  ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ನಿಯಮಿತವಾಗಿ ಸಮಾಜಸೇವೆ ಮಾಡುವ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ, ಮಾಲೂರಿನಲ್ಲಿ ಮಾಜಿ ಶಾಸಕ ಮಂಜುನಾಥ್ ಗೌಡ, ಕೋಲಾರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್, ಕೆಜಿಎಫ್ ಮಾಜಿ ಶಾಸಕ ವೈ ಸಂಪಂಗಿ, ಬಂಗಾರಪೇಟೆ ಕ್ಷೇತ್ರದ ಮಾಜಿ ಶಾಸಕ ಎಂ ನಾರಾಯಣಸ್ವಾಮಿ, ಮುಳಬಾಗಿಲು ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸಮೃದ್ದಿ ಮಂಜುನಾಥ್, ಶ್ರೀನಿವಾಸಪುರ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಸೇರಿದಂತೆ ಇನ್ನು ಕೆಲ ಹೊಸ ಆಕಾಂಕ್ಷಿಗಳು ರಾಜಕೀಯವಾಗಿ ಗುರ್ತಿಸಿಕೊಳ್ಳಲು ಸಮಾಜಸೇವೆ ಆರಂಭಿಸಿದ್ದಾರೆ.

ಇದನ್ನೂ ಓದಿ: Bommasandra To Hosur: ಬೆಂಗಳೂರಿನಿಂದ ತಮಿಳುನಾಡಿಗೆ ಮೆಟ್ರೋದಲ್ಲಿ ಪ್ರಯಾಣಿಸಿ!

ಆದರೆ ಈ ಅಬ್ಬರ, ಬಾಡೂಟ ಕಾರ್ಯಕ್ರಮ, ಉಡುಗೊರೆ ಕಾರ್ಯಕ್ರಮ ಮುಂದಿನ 2023 ರ ವಿಧಾನಸಭೆ ಚುನಾವಣೆಗೆ ಪ್ರಚಾರ ಪಡೆಯಲು ಮಾಡುತ್ತಿರುವ ಪ್ರಯತ್ನ ಎಂಬುದು ಎಲ್ಲರಿಗು ತಿಳಿದಿರುವ ವಿಚಾರ. ಆದರೆ ಚುನಾವಣೆ ನಂತರ ಹಾಲಿ, ಮಾಜಿ ಶಾಸಕರು ಜನರಿಂದ ದೂರವಿರದೆ ನೀಡಿದ ಆಶ್ವಾಸನೆ ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂಬುದು ಎಲ್ಲರ ಆಶಯವಾಗಿದೆ.
Published by:Divya D
First published: