• Home
  • »
  • News
  • »
  • state
  • »
  • Karnataka Politics: ಗದಗದಲ್ಲಿ ರಂಗೇರಿದ ರಾಜಕೀಯ; ಜೋರಾಗಿದೆ ಕಾಂಗ್ರೆಸ್-ಬಿಜೆಪಿ ಟಿಕೆಟ್ ಫೈಟ್! ​

Karnataka Politics: ಗದಗದಲ್ಲಿ ರಂಗೇರಿದ ರಾಜಕೀಯ; ಜೋರಾಗಿದೆ ಕಾಂಗ್ರೆಸ್-ಬಿಜೆಪಿ ಟಿಕೆಟ್ ಫೈಟ್! ​

ಕಾಂಗ್ರೆಸ್ ಬಿಜೆಪಿ

ಕಾಂಗ್ರೆಸ್ ಬಿಜೆಪಿ

ಗದಗನಲ್ಲಿ ಸ್ಪರ್ಧಿಸಲು ಬಿಜೆಪಿಯಲ್ಲಿ ಟಿಕೆಟ್ ಪೈಟ್ ಜೋರಾಗಿದ್ದು ಪ್ರಬಲ ಲಿಂಗಾಯತ ಸಮುದಾಯದ 4 ಜನ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ. ಕಾಂಗ್ರೆಸ್​ನಲ್ಲೂ ಟಿಕೆಟ್​ ಫೈಟ್ ಜೋರಾಗಿದೆ.

  • News18 Kannada
  • Last Updated :
  • Karnataka, India
  • Share this:

ಗದಗ (ಡಿ.12): ರಾಜ್ಯದ ಗಮನ ಸೆಳೆಯಲಿರುವ ಗದಗ ವಿಧಾನಸಭಾ ಚುನಾವಣೆಗೆ (Assembly Election) ತಿಂಗಳುಗಳು ಬಾಕಿ ಇದೆ. ಈಗಾಗಲೇ ಟಿಕೆಟ್ ಫೈಟ್ ಜೋರಾಗಿ ನಡೆಯುತ್ತಿದೆ‌‌. ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಸ್ಪರ್ಧೆಯ ಆಕಾಂಕ್ಷೆಯನ್ನು ಹೊಂದಿರುವವರು ತಮ್ಮದೇ ಆದ ರೀತಿಯಲ್ಲಿ ಚುನಾವಣೆಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್ (Congress Ticket) ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಗದಗ (Gadaga) ಕ್ಷೇತ್ರಕ್ಕೆ ಒಟ್ಟು 3 ಅರ್ಜಿಗಳು ಸಲ್ಲಿಕೆಯಾಗಿದ್ದವು ಆದರೆ ಈಚೆಗೆ ಗದಗ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀಶೈಲಪ್ಪ ಬಿದರೂರ ಅಕಾಲಿಕವಾಗಿ ನಿಧನರಾದ ಹಿನ್ನೆಲೆಯಲ್ಲಿ ಇಬ್ಬರು ಶಾಸಕ ಎಚ್ ಕೆ ಪಾಟೀಲ್ ಹಾಗೂ ಬಲರಾಂ ಬಸವ ಮಾತ್ರ ಆಕಾಂಕ್ಷಿಯಾಗಿ ಉಳಿದಿದ್ದಾರೆ.


ಕಾಂಗ್ರೆಸ್ ಭದ್ರ ಕೋಟೆ ಇದು


ಗದಗ ಕ್ಷೇತ್ರವೆಂದರೆ ಅದು ಕಾಂಗ್ರೆಸ್‌ನ ಭದ್ರ ಕೋಟೆ, ಇದುವರೆಗಿನ ಒಟ್ಟೂ ಚುನಾವಣೆಗಳಲ್ಲಿ ಕಾಂಗ್ರೆಸ್ಸೇತರ ಪಕ್ಷಗಳು ಜಯಗಳಿಸಿದ್ದು, ಕೇವಲ 2 ಬಾರಿ ಮಾತ್ರ, ಇನ್ನುಳಿದ ಎಲ್ಲಾ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಗೆದ್ದಿದೆ, ಆದರೆ 2008 ರಲ್ಲಿ ಮೊದಲ ಬಾರಿಗೆ ಬಿಜೆಪಿ ಇಲ್ಲಿ ಗೆಲುವು ಸಾಧಿಸಿತ್ತು, ಇದಾದ ನಂತರ ಬಿಜೆಪಿ ಪ್ರಬಲ ವಿರೋಧ ಪಕ್ಷವಾಗಿ ನೆಲೆಯೂರಿದ್ದು, 2018 ರ ಚುನಾವಣೆಯಲ್ಲಂತೂ ಬಿಜೆಪಿ ಗೆಲುವಿನ ಹತ್ತಿರಕ್ಕೆ ಬಂದು ಕೇವಲ 1800 ಮತಗಳ ಅಂತರದಿಂದ ಸೋಲು ಕಂಡಿದ್ದು, 2023 ಕ್ಕೆ ಹೊಸ ಹುಮ್ಮಸ್ಸಿನೊಂದಿಗೆ ಚುನಾವಣೆಗೆ ಸನ್ನದ್ಧವಾಗಿದೆ




ಬಿಜೆಪಿಯಲ್ಲಿಯೂ ಟಿಕೆಟ್ ಗಾಗಿ ಭಾರೀ ಕಸರತ್ತು


ಗದಗನಲ್ಲಿ ಸ್ಪರ್ಧಿಸಲು ಬಿಜೆಪಿಯಲ್ಲಿ ಟಿಕೆಟ್ ಪೈಟ್ ಜೋರಾಗಿದ್ದು ಪ್ರಬಲ ಲಿಂಗಾಯತ ಸಮುದಾಯದ 4 ಜನ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ. ಬಿಜೆಪಿ ಆಕಾಂಕ್ಷಿಗಳಲ್ಲಿ ಮೂವರು ಪಂಚಮಸಾಲಿಗಳು ಇಬ್ಬರು ಬಣಜಿಗರು ಹಾಗಾಗಿ ಲಿಂಗಾಯತ ಒಳ ಪಂಗಡದಲ್ಲಿಯೇ ಟಿಕೆಟ್ ಹಂಚಿಕೆಯಾಗಲಿರುವುದು ಪಕ್ಕಾ ಆಗಿದೆ .2004 ರಲ್ಲಿ ಬಿಎಸ್‌ಆರ್‌ನಿಂದ, 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಪ್ರಭಾವಿ ನಾಯಕ ಎಚ್.ಕೆ.ಪಾಟೀಲರಿಗೆ  ಟಕ್ಕರ್ ನೀಡಿದ್ದ ಅನಿಲ ಮೆಣಸಿನಕಾಯಿ ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.


ಟಿಕೆಟ್ ಫೈಟ್


ಇನ್ನು ಗೋವಾ ವಿಧಾನಸಭಾ ಚುನಾವಣೆಯಲ್ಲಿ 45 ದಿನ, ರೋಣ ವಿಧಾನಸಭಾ ಚುನಾವಣೆ ಉಸ್ತುವಾರಿ, ಬೀದರ ಬೀಜ ನಿಗಮದ ಚುನಾವಣೆ, ೨೦೦೯, ೨೦೧೪, ೨೦೧೯ ಹಾವೇರಿ-ಗದಗ ಲೋಕಸಭಾ ಚುನಾವಣೆ,  ಬಿಜೆಪಿ ರಾಜ್ಯಕಾರಿ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ರಾಜು ಕುರುಡಗಿ ನಡುವೆ ಟಿಕೆಟ್ ಫೈಟ್ ಜೋರಾಗಿದೆ.


ಇನ್ನು ಪಂಚಮಸಾಲಿ ಸಮುದಾಯದ ವಿಜಯಕುಮಾರ ಗಡ್ಡಿ ಆಕಾಂಕ್ಷಿಯಾಗಿದ್ದು ಅವರ ಪತ್ನಿಯನ್ನು ಈಗಾಗಲೇ ನಗರಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟರ್ ಕೂಡಾ ಆಕಾಂಕ್ಷಿಯಾಗಿದ್ದಾರೆ.   ಇನ್ನು ಗದಗ ಮತ ಕ್ಷೇತ್ರಕ್ಕೆ ಹೊಸ ಮುಖವಾಗಿ ಶರಣ ಪಾಟೀಲ ಕೂಡಾ ನಾನು ಗದಗ ಟಿಕೆಟ್‌ನ ಪ್ರಬಲ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ.


ಗದಗ ಜಿಲ್ಲೆಯಲ್ಲಿ ಜೆಡಿಎಸ್ ಇನ್ನು ಗಟ್ಟಿಗೊಳ್ಳಬೇಕಾಗಿದೆ ಹಾಗಾಗಿ ಆ ಪಕ್ಷದಿಂದ ಗದಗ ಕ್ಷೇತ್ರದಲ್ಲಿ ಯಾರೇ ಟಿಕೆಟ್ ತಂದರೂ ಆಶ್ಚರ್ಯ ಪಡುವಂತಿಲ್ಲ, ಆದರೆ ಪ್ರಬಲ ಸಮುದಾಯಗಳ ಮುಖಂಡರನ್ನು ಈ ಪಕ್ಷದಿಂದ ಚುನಾವಣೆಗೆ ನಿಲ್ಲಿಸಿ, ಅವರಿಗೆ ಎಲ್ಲಾ ನೆರವು ನೀಡಿ, ರಾಷ್ಟ್ರೀಯ ಪಕ್ಷಗಳ ಜಾತಿ ಸಮೀಕರಣವನ್ನು ಛಿದ್ರಗೊಳಿಸಲು ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಳಕೆಯಾಗುತ್ತಿರುವುದನ್ನು ಆ ಪಕ್ಷದ ವರಿಷ್ಠರು ಗಮನಿಸುತ್ತಿಲ್ಲ.


ಟಕ್ಕರ್‌ ಕೊಡಲು ಸಕಲ ಸಿದ್ಧತೆ


ಕಾಂಗ್ರೆಸ್‌ನ ಪ್ರಭಾವಿ ನಾಯಕ, ಮಹಾರಾಷ್ಟ್ರ ಉಸ್ತುವಾರಿಯಾಗಿದ್ದ ಎಚ್.ಕೆ.ಪಾಟೀಲರ ಜತೆಗೆ ಇರುವ ಬಲರಾಮ ಬಸವಾ ಕೂಡಾ ಅರ್ಜಿ ಸಲ್ಲಿಸಿದ್ದರೂ ಟಿಕೆಟ್ ಎಚ್.ಕೆ.ಪಾಟೀಲರಿಗೆ ಅಂತಿಮವಾಗುವ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಎಚ್.ಕೆ.ಪಾಟೀಲ ಟಕ್ಕರ್ ಕೊಡಲು ಬಿಜೆಪಿ ಕೂಡಾ ದೊಡ್ಡ ಪ್ರಮಾಣದ ರಣ ತಂತ್ರ ರೂಪಿಸಿದ್ದು, ಅದರ ಮೊದಲ ಬಾರಿಗೆ ಇದುವರೆಗೂ ಎಚ್ಕೆ ಅವರ ಪ್ರತಿಸ್ಪರ್ಧಿಯಾಗಿ ಯಾರನ್ನು ಕಣಕ್ಕಿಳಿಸಲಾಗುತ್ತದೆ ಎನ್ನುವುದರ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ, ಆದರೆ ಸದ್ಯ ಬಿಜೆಪಿ ಹಿರಿಯ ನಾಯಕರ ಒಲವು, ಎರಡು ಬಾರಿ ಸ್ಪರ್ಧಿಸಿ ಸೋತಿರುವ ಅನಿಲ ಕಡೆಗೆ ಹೆಚ್ಚಿನ ಒಲವಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.


ಬದಲಾವಣೆ ಹೆಸರಲ್ಲಿ ಚುನಾವಣೆ.ಕಾಂಗ್ರೆಸ್ ಭದ್ರ ಕೋಟೆಯಾಗಿರುವ ಗದಗ ಕ್ಷೇತ್ರವನ್ನು ಗೆಲ್ಲುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ಈಗಾಗಲೇ ಬದಲಾವಣೆ ಹೆಸರಿನಲ್ಲಿ ಚುನಾವಣೆಯ ಅಭಿಯಾನವನ್ನು ನಡೆಸಿದ್ದು, ಗದಗ, ಬೆಟಗೇರಿ ಅವಳಿ ನಗರಕ್ಕೆ ಕಾಂಗ್ರೆಸ್‌ನಿಂದ ಆಗಿರುವ ಅನ್ಯಾಯಗಳ ಪಟ್ಟಿಯನ್ನೇ ಹಿಡಿದು ಮನೆ ಮನೆಗೆ ತಲುಪಿಸಿದ್ದಾರೆ. ಹೊಸ ಬದಲಾವಣೆ ಯುವಕರ ಕೈಗೆ ಅಧಿಕಾರ ಹೆಸರಿನಲ್ಲಿ ಒಂದು ವಿಶೇಷ ಅಭಿಯಾನವನ್ನು ನಡೆಸಿ ಭಾಗಶಃ ಪೂರ್ಣಗೊಳಿಸಿದ್ದು, ಜನರಿಂದ ಉತ್ತಮ ಸ್ಪಂದನೆ ಕೂಡಾ ವ್ಯಕ್ತವಾಗಿದೆ ಎನ್ನುತ್ತಿದ್ದಾರೆ.


ಇದನ್ನೂ ಓದಿ: Accident: ರಾಜ್ಯದಲ್ಲಿ ಪ್ರತ್ಯೇಕ ಅಪಘಾತ ಪ್ರಕರಣ, 10 ಮಂದಿ ದುರ್ಮರಣ


ಗದಗ ವಿಧಾನ ಸಭಾ ಮತಕ್ಷೇತ್ರ ಜಾತಿವಾರು ಲೆಕ್ಕಾಚಾರ:


*ವಿಧಾನಸಭಾ ಕ್ಷೇತ್ರ- (66-ಗದಗ)*ಒಟ್ಟು ಮತದಾರರ ಸಂಖ್ಯೆ- 2,17,833ಪುರುಷರು- 1,08,215ಮಹಿಳೆಯರು-1,09,603ಇತ್ತರೆ-15
*ಜಾತಿವಾರು ಮಾಹಿತಿ** ಲಿಂಗಾಯತರು-85.000*ಕುರುಬ-25.000* ಮುಸ್ಲೀಂ -25.000*ಎಸ್ ಸಿ- 40.000*ಎಸ್ ಟಿ- 16.000*ಇತರೆ-26.833
ಗದಗ ಮತ ಕ್ಷೇತ್ರದಲ್ಲಿ ಲಿಂಗಾಯತ ಸಮಾಜದ ಮತದಾರರು ನಿರ್ಣಾಯಕ ಮತದಾರರು ಆಗಿದ್ದಾರೆ. ಲಿಂಗಾಯತ ಸಮುದಾಯದಲ್ಲಿ ಅಂದಾಜು 85 ಸಾವಿರಕ್ಕೂ ಹೆಚ್ಚು ಮತದಾರರು ಇದ್ದಾರೆ ಎನ್ನಲಾಗುತ್ತಿದೆ.

Published by:ಪಾವನ ಎಚ್ ಎಸ್
First published: