• Home
  • »
  • News
  • »
  • state
  • »
  • Assembly Election: ಬೆಳಗಾವಿ ಉತ್ತರದಲ್ಲಿ ಕೈ ಕಿತ್ತಾಟ; ಸೇಠ್ ಕುಟುಂಬದ 3 ಜನರಿಂದ ಅರ್ಜಿ, ಜಾರಕಿಹೊಳಿ ಬೆಂಬಲಿಗರ ಪೈಪೋಟಿ

Assembly Election: ಬೆಳಗಾವಿ ಉತ್ತರದಲ್ಲಿ ಕೈ ಕಿತ್ತಾಟ; ಸೇಠ್ ಕುಟುಂಬದ 3 ಜನರಿಂದ ಅರ್ಜಿ, ಜಾರಕಿಹೊಳಿ ಬೆಂಬಲಿಗರ ಪೈಪೋಟಿ

ಬೆಳಗಾವಿಯಲ್ಲಿ ಟಿಕೆಟ್ ಫೈಟ್​

ಬೆಳಗಾವಿಯಲ್ಲಿ ಟಿಕೆಟ್ ಫೈಟ್​

ಬೆಳಗಾವಿ ಉತ್ತರ ಕ್ಷೇತ್ರದಿಂದ 2 ಸಲ ಆಯ್ಕೆಯಾಗಿರೋ ಫಿರೋಜ್ ಸೇಠ್, ಸಹೋದರ ರಾಜು ಸೇಠ್, ಫಿರೋಜ್ ಪುತ್ರ ಫೈಜಾನ್ ಸೇಠ್ ಅರ್ಜಿ ಹಾಕಿದ್ದಾರೆ. ರಾಜು ಸೇಠ್ ಕಳೆದ 10 ವರ್ಷಗಳಿಂದ ನಗರ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

  • Share this:

ಬೆಳಗಾವಿ (ನ.18): ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ (Assembly Election) ಕೆಲವೇ ತಿಂಗಳು ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ರಾಜಕೀಯ ಚಟುವಟಿಕೆ (Political Activity) ಆರಂಭ ಆಗಿವೆ. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ನಲ್ಲಿ (Congress) ಗುಂಪುಗಾರಿಕೆ ಇದೆ. ಸತೀಶ ಜಾಕಿಹೊಳಿ ಹಾಗೂ ಫಿರೋಜ್ ಸೇಠ್ ನಡುವೆ ಮನಸ್ಥಾಪ ಇದೆ. ಇಬ್ಬರ ಜಗಳದಲ್ಲಿ ಪಾಲಿಕೆ ಚುನಾವಣೆಯಲ್ಲಿ ಹಲವು ಕ್ಷೇತ್ರದಲ್ಲಿ ಹಿನ್ನಡೆ ಆಗಿತ್ತು.  ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ (Ticket) ಪಡೆಯಲು ಯತ್ನಮಾಜಿ ಶಾಸಕ ಫಿರೋಜ್ ಸೇಠ್ ತೀವ್ರ ಕಸರತ್ತು ಆರಂಭ ಮಾಡಿದ್ದಾರೆ. ಸೇಠ್​ಗೆ ಟಿಕೆಟ್ ತಪ್ಪಿಸಲು ಸತೀಶ್​ ಜಾರಕಿಹೊಳಿ (Satish Jarkiholi) ವ್ಯೂಹ ರಚನೆ ಮಾಡಿದ್ದಾರೆ. ಎ, ಬಿ ಪ್ಲ್ಯಾನ್ ಸಿದ್ಧ ಮಾಡಿಕೊಂಡಿರೋ ಮಾಜಿ ಶಾಸಕ ಸೇಠ್, ಸಹೋದರ ಹಾಗೂ ಪುತ್ರ‌ನಿಂದ ಅರ್ಜಿ ಸಲ್ಲಿಸಿದ್ದಾರೆ. ಒಬ್ಬರಿಗೆ ತಪ್ಪಿದ್ರು ಇನ್ನೊಬ್ಬರಿಗೆ ಟಿಕೆಟ್ ಸಿಗಲಿ ಎಂದು ಅರ್ಜಿ ಮಾಡಿದ್ದಾರೆ.


ಫಿರೋಜ್ ಸೇಠ್​ಗೆ ತಪ್ಪಿದ್ರು ಸಹೋದರನಿಗೆ ಟಿಕೆಟ್


ಬೆಳಗಾವಿ ಉತ್ತರ ಕ್ಷೇತ್ರದಿಂದ 2 ಸಲ ಆಯ್ಕೆಯಾಗಿರೋ ಫಿರೋಜ್ ಸೇಠ್,  ಸಹೋದರ ರಾಜು ಸೇಠ್, ಫಿರೋಜ್ ಪುತ್ರ ಫೈಜಾನ್ ಸೇಠ್ ಅರ್ಜಿ ಹಾಕಿದ್ದಾರೆ. ರಾಜು ಸೇಠ್ ಕಳೆದ 10 ವರ್ಷಗಳಿಂದ ನಗರ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಫಿರೋಜ್ ಸೇಠ್​ಗೆ ತಪ್ಪಿದ್ರು ಸಹೋದರನಿಗೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಇದೆ.
ಕೆಪಿಸಿಸಿಯಲ್ಲಿ 8 ಜನ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ


ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಸೇಠ್ ಕುಟುಂಬ ಸೇರಿ 8 ಜನರಿಂದ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಪಡೆಯಲು ಕೆಪಿಸಿಸಿಯಲ್ಲಿ 8 ಜನ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ ಆಗಿದ್ದು, ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಅಲ್ಪಸಂಖ್ಯಾತರು, ಲಿಂಗಾಯತರು ಹಾಗೂ ಮರಾಠ ಸಮುದಾಯ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.  ಜಿಲ್ಲೆಯಲ್ಲಿ ಒಂದು ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಲು ಕಾಂಗ್ರೆಸ್ ಚಿಂತನೆ ಮಾಡಿದೆ.


ಅಲ್ಪಸಂಖ್ಯಾತರಿಗೆ ಒಂದು ಟಿಕೆಟ್ ಕೊಟ್ಟರೇ ಇನ್ನುಳಿದ ಕ್ಷೇತ್ರದಲ್ಲಿ ಅನುಕೂಲ ಆಗೋ ನಿರೀಕ್ಷೆ ಇದೆ. ಸೇಠ್ ಪರ್ಯಾಯವಾಗಿ ಇಬ್ಬರು ಮುಸ್ಲಿಂದ ಮುಖಂಡರಿಂದ ಅರ್ಜಿ ಸಲ್ಲಿಕೆ ಮಾಡಿದ್ದಾರೆ.‌ಪಾಲಿಕೆ ಸದಸ್ಯ ಅಜಿಂ ಪಟವೇಗಾರ್, ಅಶೀಂ ಬಾವಿಕಟ್ಟಿ ಅರ್ಜಿ ಸಲ್ಲಿಸಿದಾರೆ. ಹಲವು ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರಾಗಿ ಕೆಲಸ ಮಾಡಿರೋ ಅಶೀಂ, ಸತೀಶ ಜಾರಕಿಹೊಳಿ ಬೆಂಬಲಿಗ ಆಗಿರೋ ಅಜಿಂ ಪಟವೇಗಾರ ಅರ್ಜಿ. ಜಾರಕಿಹೊಳಿ, ಸೇಠ್ ನಡುವೆ ಸಂಧಾನ ಮಾಡಿರೋ ಕಾಂಗ್ರೆಸ್ ನಾಯಕರುಡಿಕೆಶಿ, ಸಿದ್ದರಾಮಯ್ಯ, ಸುರ್ಜೇವಾಲರಿಂದ ಸಂಧಾನ  ಮಾಡಿದ್ದಾರೆ. ಚುನಾವಣೆ ವೇಳೆಯಲ್ಲಿ ಇಬ್ಬರು ಪ್ರತಿಷ್ಠೆಯನ್ನು ಬಿಡ್ತಾರಾ ಎಂಬುದೇ ಕುತೂಹಲ ಮೂಡಿದೆ.


ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಾಜು ಸೇಠ್


ಬೆಳಗಾವಿಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಾಜು ಸೇಠ್ ಹೇಳಿಕೆ. ಪಕ್ಷದ ಅಧ್ಯಕ್ಷನಾಗಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನಾನು ಸಹ ಈ ಸಲ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದೇನೆ. ನಮ್ಮದು ಪ್ರಜಾಪ್ರಭುತ್ವದ ಆಧಾರದ ಮೇಲೆ ಇರೋ ಪಕ್ಷ. ನಮ್ಮ ಸಹೋದರ ಫಿರೋಜ್ ಸೇಠ್ ಹಾಗೂ ನಾನು ಅರ್ಜಿ ಸಲ್ಲಿಕೆ ಮಾಡಿದ್ದೇವೆ. ನಮ್ಮ ಕುಟುಂಬದ ಮೂರು ಜನರಿಂದ ಅರ್ಜಿ ಸಲ್ಲಿಕೆಯಾಗಿದೆ. ಫಿರೋಜ್ ಸೇಠ್ 10 ವರ್ಷಗಳ ಅಭಿವೃದ್ಧಿ ಕಾರ್ಯ ಜನ ಮರೆತಿಲ್ಲಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆ ಎಂಬುದು ಕಾದು ನೋಡಬೇಕು.


ಇದನ್ನೂ ಓದಿ: Tushar Girinath: ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ, 48 ಗಂಟೆಯೊಳಗೆ ಮಾಹಿತಿ ನೀಡಲು ಸೂಚನೆ- ತುಷಾರ್ ಗಿರಿನಾಥ್


ಹಾಲಿ ಬಿಜೆಪಿ ಶಾಸಕರ ಕೆಲಸವನ್ನು ಜನ ಗಮನಿಸಿದ್ರೆ. ಸೇಠ್ ಮಾಡಿರೋ ಅಭಿವೃದ್ಧಿ ಕಾರ್ಯಗಳು ಇನ್ನೂ ಉದ್ಘಾಟನೆಗೊಂಡಿಲ್ಲ. ಈಜುಕೋಳ, ಉದ್ಯಾನ ಸೇರಿ ಕೆಲಸಗಳು ನೆನೆಗುದಿಗೆ ಬಿದ್ದಿವೆ. ದೇಶದ 2ನೇ ಅತಿ ಎತ್ತರದ ಧ್ವಜವನ್ನು ಹಾರಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಕೋವಿಡ್ ನಲ್ಲಿ ರಾಜಕೀಯಕ್ಕಾಗಿ ಅಲ್ಲ ಮಾನವೀತೆ ದೃಷ್ಠಿಯಿಂದ ಕೆಲಸ. ಕಾಂಗ್ರೆಸ್ ಪಕ್ಷದ ಆದೇಶದ ಅನ್ವಯ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: