• Home
 • »
 • News
 • »
 • state
 • »
 • Karnataka Politics: ಅಣ್ಣ-ತಮ್ಮ, ಅಪ್ಪ-ಮಗನಿಗೆ ಸಿಗಲ್ಲ ಟಿಕೆಟ್​! ಬಿಜೆಪಿಯಲ್ಲಿ ಕುಟುಂಬ ರಾಜಕೀಯಕ್ಕೆ ಬ್ರೇಕ್​- ಯತ್ನಾಳ್​

Karnataka Politics: ಅಣ್ಣ-ತಮ್ಮ, ಅಪ್ಪ-ಮಗನಿಗೆ ಸಿಗಲ್ಲ ಟಿಕೆಟ್​! ಬಿಜೆಪಿಯಲ್ಲಿ ಕುಟುಂಬ ರಾಜಕೀಯಕ್ಕೆ ಬ್ರೇಕ್​- ಯತ್ನಾಳ್​

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​

ಒಂದೇ ಕುಟುಂಬಕ್ಕೆ ಎರಡು-ಮೂರು ಟಿಕೆಟ್ ಸಿಗುವುದಿಲ್ಲ. ಒಂದೇ ಕುಟುಂಬದಲ್ಲಿ ಬಹಳ ಜನ ಜಾಕೆಟ್ ಹೊಲಿಸಿಕೊಂಡು ಕುಳಿತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

 • News18 Kannada
 • 2-MIN READ
 • Last Updated :
 • Karnataka, India
 • Share this:

ಬೆಳಗಾವಿ (ಡಿ.12): ವಿಧಾನಸಭೆ ಚುನಾವಣೆ (Assembly Election) ಹತ್ತಿರವಾಗ್ತಿದ್ದಂತೆ ಎಲ್ಲಾ ಪಕ್ಷಗಳು ಫುಲ್​ ಆ್ಯಕ್ಟಿವ್ (Full Active)​ ಆಗಿವೆ. ಟಿಕೆಟ್​ ಹಂಚಿಕೆ (Tickets) ವಿಚಾರದಲ್ಲಿ ರಣತಂತ್ರ ರೂಪಿಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್​ ಟಿಕೆಟ್​ ಪಡೆಯಲು ಅರ್ಜಿಗೆ ಆಹ್ವಾನಿಸಿದ್ದು ಗೊತ್ತೇ ಇದೆ. ಇತ್ತ ಬಿಜೆಪಿ ಪಕ್ಷ ಗುಜರಾತ್​  ಮಾದರಿಯಲ್ಲಿ (Gujarat Model) ಟಿಕೆಟ್ ಹಂಚಿಕೆ ಮಾಡುವ ಪ್ಲಾನ್​ನಲ್ಲಿದ್ದು, ಹಿರಿಯರಿಗೆ ಗೇಟ್​ ಪಾಸ್ (Gate Pass)​ ನೀಡುವ ಸಾಧ್ಯತೆ ಹೆಚ್ಚಾಗಿದ್ದು,  ಒಂದೇ ಕುಟುಂಬದಿಂದ ಅಣ್ಣ-ತಮ್ಮ, ಅಪ್ಪ-ಮಗನಿಗೂ ಟಿಕೆಟ್​ ಕೂಡ ಸಿಗಲ್ವಂತೆ. ಒಂದೇ ಕುಟುಂಬಕ್ಕೆ ಎರಡು- ಮೂರು ಟಿಕೆಟ್ ಸಿಗುವುದಿಲ್ಲ. ಒಂದೇ ಕುಟುಂಬದಲ್ಲಿ ಬಹಳ ಜನ ಜಾಕೆಟ್ ಹೊಲಿಸಿಕೊಂಡು ಕುಳಿತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.


ಈ ಬಾರಿ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಭಾರೀ ಬದಲಾವಣೆ 


ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಬಿಜೆಪಿ ಟಿಕೆಟ್ ಹಂಚಿಕೆ ಮಾಡ್ತಾರೆ ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮಾತಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​, ಗುಜರಾತ್ ಮಾದರಿಯಲ್ಲೇ ಮಾಡಬೇಕು ಹೊಸ ಹೊಸ ಜನರಿಗೆ ಅವಕಾಶ ನೀಡಬೇಕು.
ಈ ಬಾರಿ ಗುಜರಾತ್ ಮಾದರಿಯಲ್ಲೇ ಮಾಡ್ತಾರೆ ಬಹಳಷ್ಟು ಬದಲಾವಣೆ ಮಾಡ್ತಾರೆ ಎಂದು ಹೇಳಿದ್ದಾರೆ.


mla basanagowda patil yatnal statements, karnataka politics, siddarammaih lokayukta complaint, kannada news, karnataka news, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳು, ಸಿದ್ದರಾಮಯ್ಯ ವಿರುದ್ಧ ದೂರು
ಶಾಸಕ ಯತ್ನಾಳ್


ಒಂದೇ ಕುಟುಂಬದವರಿಗೆ ಸಿಗಲ್ಲ ಟಿಕೆಟ್​


ಯಾರ ಮೇಲೆ ಆರೋಪ ಇದೆ ಅಂತವರನ್ನ ಪಕ್ಷದಿಂದ ತೆಗೆದು ಹಾಕ್ತಾರೆ. ಒಂದೇ ಕುಟುಂಬದಲ್ಲಿ 2 ಮೂರು ಟಿಕೆಟ್ ಸಿಗುವುದಿಲ್ಲ. ಒಂದೇ ಕುಟುಂಬದಲ್ಲಿ ಬಹಳ ಜನ ಜಾಕೆಟ್ ಹೊಲಿಸಿಕೊಂಡು ಕುಳಿತಿದ್ದಾರೆ. ಅಪ್ಪ, ‌ಮಕ್ಕಳು, ಅಣ್ಣ ತಮ್ಮ ಅವರಿಗೆ ಟಿಕೆಟ್ ಸಿಗುವುದಿಲ್ಲ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಸಿಗುತ್ತದೆ. ಕರ್ನಾಟಕದ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಬೀಳಲಿದೆ ಎಂದು  ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.


ಸಚಿವ ಸ್ಥಾನವನ್ನು ಬೊಮ್ಮಾಯಿ ಅವರೇ ಇಟ್ಟುಕೊಂಡು ಕೂಡಲಿ


ಸಂಪುಟ ವಿಸ್ತರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಸನಗೌಡ ಪಾಟೀಲ ಯತ್ನಾಳ್​, ಸಚಿವ ಸ್ಥಾನ ಯಾರಿಗೆ ಬೇಕು ಎಲ್ಲವನ್ನೂ ಬೊಮ್ಮಾಯಿ ಅವರೇ ಇಟ್ಟುಕೊಂಡು ಕೂಡಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಿಡಿಕಾರಿದ್ದಾರೆ. ಇನ್ನು ಮೂರ್ನಾಲ್ಕು ತಿಂಗಳು ಉಳಿದಿದೆ ಅಷ್ಟರಲ್ಲಿ ಏನೂ ಅಭಿವೃದ್ಧಿ ಮಾಡೋಕೆ ಆಗುತ್ತೆ. ಮುಂದಿನ‌ ಚುನಾವಣೆಯಲ್ಲಿ ಎಲ್ಲರೂ ಮಂತ್ರಿ ಆಗಬೇಕು ಅಂತ ಸುಮ್ಮನಿದ್ದಾರೆ ಎಂದು ಬಸನಗೌಡ ಪಾಟೀಲ ಯತ್ನಾಳ್​ ಹೇಳಿದ್ದಾರೆ.


ಬಿಜೆಪಿಗೆ ಹಿನ್ನೆಡೆ ಆಗಿಲ್ಲ


ಸಮೀಕ್ಷೆಯಲ್ಲಿ ಬಿಜೆಪಿ ಹಿನ್ನೆಡೆ ಆಗ್ತಿದೆಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ ಯತ್ನಾಳ್​, ಗುಜರಾತ್ ನಲ್ಲಿ, ಉತ್ತರ ಪ್ರದೇಶದಲ್ಲಿ ಹಾಗೇ ಹೇಳಿದ್ರೂ ಬಿಜೆಪಿ ಬಂತು, ಕರ್ನಾಟಕದಲ್ಲಿ ನರೇಂದ್ರ ಮೋದಿ ಪ್ರವಾಸ ಮಾಡುತ್ತಾರೆ. ಯಡಿಯೂರಪ್ಪ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರನ್ನಾಗಿ ಮಾಡಿದ್ದಾರೆ.


ಇದನ್ನೂ ಓದಿ: Mysuru: ಬಿಲ್ಡಿಂಗ್​ ಬಾಡಿಗೆ ಕೇಳಿದ್ದಕ್ಕೆ ರಂಪಾಟ; KSRTC ಡಿಪೋ ಅಧಿಕಾರಿಗೆ ಮಚ್ಚು ತೋರಿಸಿ ಧಮ್ಕಿ


ಯಡಿಯೂರಪ್ಪ ಬಗ್ಗೆ ಸಾಫ್ಟ್​ ಕಾರ್ನರ್


ಯಡಿಯೂರಪ್ಪ ವಿಚಾರದಲ್ಲಿ ಸಾಫ್ಟ್​ ಕಾರ್ನರ್ ತೋರಿಸಿದ ಯತ್ನಾಳ್, ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರು ಕ್ಷೇತ್ರ ಸಂಚಾರ ಮಾಡಬೇಕು. ಎಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸಂಚಾರ ಮಾಡ್ತಾರೆ.
ನಾನು ಕ್ಷೇತ್ರದಲ್ಲಿ ಸಂಚಾರ ಮಾಡುವ ಅಗತ್ಯವಿಲ್ಲ ರಾಜ್ಯಾದ್ಯಂತ ಸಂಚಾರ ಮಾಡ್ತೇನಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: