• Home
  • »
  • News
  • »
  • state
  • »
  • Assembly Election: ಚುನಾವಣೆ ಟಿಕೆಟ್​ ಘೋಷಣೆಗೂ ಮುನ್ನವೇ ಕುಕ್ಕರ್ ಸೀಟಿ ಸದ್ದು; ಛಬ್ಬಿ ಬೆಂಬಲಿಗರಿಂದ ಭರಪೂರ ಗಿಫ್ಟ್!

Assembly Election: ಚುನಾವಣೆ ಟಿಕೆಟ್​ ಘೋಷಣೆಗೂ ಮುನ್ನವೇ ಕುಕ್ಕರ್ ಸೀಟಿ ಸದ್ದು; ಛಬ್ಬಿ ಬೆಂಬಲಿಗರಿಂದ ಭರಪೂರ ಗಿಫ್ಟ್!

ಕುಕ್ಕರ್ ಗಿಫ್ಟ್​

ಕುಕ್ಕರ್ ಗಿಫ್ಟ್​

ವಿಧಾನಸಭೆ ಚುನಾವಣೆ ಘೋಷಣೆಯಾಗಿಲ್ಲ, ಟಿಕೆಟ್ ಸಹ ಅಂತಿಮಗೊಂಡಿಲ್ಲ. ಆದ್ರೆ ಕಲಘಟಗಿ ಕ್ಷೇತ್ರದಲ್ಲಿ ಮಾತ್ರ ಚುನಾವಣೆಗೂ ಮುನ್ನವೇ ಕುಕ್ಕರ್ ಸೀಟಿ ಹೊಡೆಯಲಾರಂಭಿಸಿದೆ. ನಾಗರಾಜ್ ಛಬ್ಬಿ ಬೆಂಬಲಿಗರೂ ಮನೆ ಮನೆಗೆ ತೆರಳಿ ಕುಕ್ಕರ್ ಹಂಚುತ್ತಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಹುಬ್ಬಳ್ಳಿ (ನ.12): ರಾಜ್ಯ ವಿಧಾನಸಭೆ ಚುನಾವಣೆಗೆ (Assembly Election) ಇನ್ನೂ ಐದಾರು ತಿಂಗಳು ಬಾಕಿ ಇದೆ. ಮೊದಲ ಹಂತದ (First Stage) ಅಭ್ಯರ್ಥಿಗಳ ಪಟ್ಟಿ (Candidates List) ಪ್ರಕಟಿಸೋದಾಗಿ ಹೇಳಿದ್ದ ಕಾಂಗ್ರೆಸ್ ಇನ್ನೂ ಯಾವುದೇ ಪಟ್ಟಿ ಬಿಡುಗಡೆ ಮಾಡಿಲ್ಲ. ಆದರೆ ಕೆಲ ಕಾಂಗ್ರೆಸ್ ಮುಖಂಡರಲ್ಲಿ ಮಾತ್ರ ಇನ್ನಿಲ್ಲದ ಹುಮ್ಮಸ್ಸು ಹೊರಹೊಮ್ಮಿದೆ. ಚುನಾವಣೆಗೂ (Election) ಮುನ್ನವೇ ಕುಕ್ಕರ್ ಸೀಟಿ ಹೊಡೆಯಲಾರಂಭಿಸಿದೆ. ಧಾರವಾಡ ಜಿಲ್ಲೆ ಕಲಘಟಗಿಯಲ್ಲಿ ಗಿಫ್ಟ್ ರಾಜಕಾರಣ ಜೋರಾಗಿದೆ. 


ವಿಧಾನಸಭಾ ಕ್ಷೇತ್ರದಲ್ಲಿ ಗಿಫ್ಟ್ ರಾಜಕಾರಣ


ಟಿಕೆಟ್ ಘೋಷಣೆಗೂ ಮುನ್ನವೇ ಧಾರವಾಡ ಜಿಲ್ಲೆ ಕಲಘಟಗಿ ಕ್ಷೇತ್ರದಲ್ಲಿ ಕುಕ್ಕರ್ ಗಳು ಸೀಟಿ ಊದಲಾರಂಭಿಸಿವೆ. ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಗಿಫ್ಟ್ ರಾಜಕಾರಣ ಜೋರಾಗಿದೆ. ಕಾಂಗ್ರೆಸ್ ಮುಖಂಡ, ಪರಿಷತ್ ಮಾಜಿ ಸದಸ್ಯ ನಾಗರಾಜ್ ಛಬ್ಬಿ ಅವರಿಂದ ಗಿಫ್ಟ್ ಹಂಚಿಕೆ ನಡೆದಿದೆ. ಟಿಕೆಟ್ ಘೋಷಣೆಗೂ ಮುನ್ನವೇ ಮನೆ ಮನೆಗೆ ಕುಕ್ಕರ್ ಹಂಚಿಕೆ ಮಾಡಲಾಗಿದೆ. ಛಬ್ಬಿ ಬೆಂಬಲಿಗರು ಕ್ಷೇತ್ರದ ವಿವಿಧೆಡೆ 5 ಲೀಟರ್ ಕುಕ್ಕರ್ ವಿತರಿಸಿದ್ದಾರೆ. ಮಾಜಿ ಸಚಿವ ಸಂತೋಷ್ ಲಾಡ್ ಮತ್ತು ನಾಗರಾಜ ಛಬ್ಬಿ ನಡುವೆ ಟಿಕೆಟ್ ಗಾಗಿ ಪೈಪೋಟಿ ನಡೆದಿದೆ.
ಟಿಕೆಟ್ ಗಿಟ್ಟಿಸಿಕೊಳ್ಳಲು ತೀವ್ರ ಲಾಬಿ


ಸಂತೋಷ್ ಲಾಡ್ ಈ ಕ್ಷೇತ್ರವನ್ನು 2 ಬಾರಿ ಪ್ರತಿನಿಧಿಸಿದ್ದಾರೆ. ನಾಗರಾಜ್ ಛಬ್ಬಿ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಇಬ್ಬರು ಇದೇ ಕ್ಷೇತ್ರದಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ತೀವ್ರ ಲಾಬಿ ನಡೆಸಿದ್ದಾರೆ. ಇಬ್ಬರ ಹಿಂದೆಯೂ ಘಟಾನುಘಟಿ ನಾಯಕರು ಬೆಂಬಲಕ್ಕೆ ನಿಂತಿದ್ದಾರೆ. ಕಾಂಗ್ರೆಸ್ ಟಿಕೆಟ್ ಯಾರಿಗೆ ಅಂತ ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿಲ್ಲ.


140 ಗ್ರಾಮಗಳಿಗೆ ಕುಕ್ಕರ್ ಗಿಫ್ಟ್


ಇದರ ಮಧ್ಯೆಯೇ ಕಲಘಟಗಿ ಟಿಕೆಟ್​ಗೆ ಅರ್ಜಿ ಸಲ್ಲಿಸಿರೋ ನಾಗರಾಜ್ ಛಬ್ಬಿ, ಬೆಂಬಲಿಗರ ಮೂಲಕ ಕುಕ್ಕರ್ ವಿತರಣೆ ಆರಂಭಿಸಿದ್ದಾರೆ. ಧಾರವಾಡ ಜಿಲ್ಲೆ ಕಲಘಡಗಿ ತಾಲೂಕಿನ ಹಿರೇಹೊನ್ನಹಳ್ಳಿ ಗ್ರಾಮದಲ್ಲಿ ಕುಕ್ಕರ್ ವಿತರಣೆಗೆ ಚಾಲನೆ ನೀಡಲಾಗಿದೆ. ನಾಗರಾಜ ಛಬ್ಬಿ ಪತ್ನಿ ಜ್ಯೋತಿ ಛಬ್ಬಿ ಮತ್ತು ಪುತ್ರಿ ಅಶ್ವಿನಿ ಚಾಲನೆ ನೀಡಿದ್ದಾರೆ. ಕಲಘಟಗಿ – ಅಳ್ನಾವರದ 140 ಗ್ರಾಮಗಳಿಗೆ ಕುಕ್ಕರ್ ಗಿಫ್ಟ್ ಕೊಡಲು ತೀರ್ಮಾನಿಸಲಾಗಿದೆ. ಕ್ಷೇತ್ರದಾದ್ಯಂತ 60 ಸಾವಿರ ಮನೆಗಳಿಗೆ ಕುಕ್ಕರ್ ವಿತರಿಸೋ ಗುರಿ ಹೊಂದಲಾಗಿದೆ.


ದೀಪಾವಳಿ ಸಂದರ್ಭದಲ್ಲಿ ಜನರಿಗೆ ಗಿಫ್ಟ್


ದೀಪಾವಳಿ ಸಂದರ್ಭದಲ್ಲಿ ಜನರಿಗೆ ಗಿಫ್ಟ್ ಕೊಡೋಕೆ ಆಗಿರಲಿಲ್ಲ. ಹೀಗಾಗಿ ಈಗ ಕೊಡ್ತಿದ್ದೇವೆ ಎಂದು ಬೆಂಬಲಿಗರು ತಿಳಿಸಿದ್ದಾರೆ. ಇದೇನು ಚುನಾವಣಾ ಆಮಿಷವಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಕೋವಿಡ್ ವೇಳೆಯೂ ಬಡವರಿಗೆ, ನಿರ್ಗತಿಕರಿಗೆ ಅಕ್ಕಿ ವಿತರಣೆ ಮಾಡಿದ್ದೆವು. ಛಬ್ಬಿ ಅವರ ಮಗಳ ಮದುವೆ ವೇಳೆ ಮಹಿಳೆಯರಿಗೆ ಸೀರೆ ಹಂಚಿಕೆ ಮಾಡಿದ್ದುದಾಗಿ ಬೆಂಬಲಿಗರು ತಿಳಿಸಿದ್ದಾರೆ.


ಇದನ್ನೂ ಓದಿ: Karnataka Politics: ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿ ನೆರಳು ಬಿದ್ದಿದೆ; ಪ್ರಹ್ಲಾದ್ ಜೋಶಿ


ಮನೆ ಮನೆಗೆ ತೆರಳಿ ಕುಕ್ಕರ್ ವಿತರಣೆ


2013 ರಲ್ಲಿ ಸ್ವಲ್ಪದರಲ್ಲಿಯೇ ಟಿಕೆಟ್ ಮಿಸ್ ಆಗಿತ್ತು. ಕಳೆದ ಚುನಾವಣೆಯಲ್ಲಿಯೂ ಟಿಕೆಟ್ ಸಿಕ್ಕಿರಲಿಲ್ಲ. ಆದರೆ ಈ ಬಾರಿ ನಾಗರಾಜ್ ಛಬ್ಬಿ ಟಿಕೆಟ್ ಪಡೆದೇ ಪಡೀತಾರೆ. ಕಲಘಟಗಿ ಕ್ಷೇತ್ರದಿಂದ ಗೆದ್ದು ಬರ್ತಾರೆ ಅಂತ ಛಬ್ಬಿ ಬೆಂಬಲಿಗರಾದ ಮದನ್ ಕುಲಕರ್ಣಿ ಹಾಗೂ ಕಿರಣ್ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮನೆ ಮನೆಗೆ ತೆರಳಿ ಕುಕ್ಕರ್ ವಿತರಿಸುತ್ತಿದ್ದಾರೆ.


ಸದ್ಯ ಬಿಜೆಪಿ ಶಾಸಕ ಸಿ.ಎಂ ನಿಂಬೆಣ್ಣನವರ ಕಲಘಟಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮಾಜಿ ಸಚಿವ ಸಂತೋಷ್ ಲಾಡ್ ಸಹ ಇದೇ ಕ್ಷೇತ್ರದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆಸಿದ್ದಾರೆ. ಇದರ ನಡುವೆ ನಾಗರಾಜ್ ಛಬ್ಬಿ ಗಿಫ್ಟ್ ರಾಜಕಾರಣವೂ ಜೋರಾಗಿದ್ದು, ಯಾರಿಗೆ ಟಿಕೆಟ್, ಯಾರಿಗೆ ಗೆಲುವು ಅನ್ನೋದನ್ನ ಮುಂದಿನ ದಿನಗಳೇ ನಿರ್ಧರಿಸಲಿವೆ.

Published by:ಪಾವನ ಎಚ್ ಎಸ್
First published: