• Home
  • »
  • News
  • »
  • state
  • »
  • Siddaramaiah: ಕೋಲಾರದಲ್ಲಿ ಮಾಜಿ ಸಿಎಂ ಸ್ಪರ್ಧೆ ಫಿಕ್ಸ್​! ಮತ್ತೆ ನಾಮಿನೇಷನ್​ ಮಾಡಲು ಬರ್ತಾರಂತೆ ಸಿದ್ದರಾಮಯ್ಯ

Siddaramaiah: ಕೋಲಾರದಲ್ಲಿ ಮಾಜಿ ಸಿಎಂ ಸ್ಪರ್ಧೆ ಫಿಕ್ಸ್​! ಮತ್ತೆ ನಾಮಿನೇಷನ್​ ಮಾಡಲು ಬರ್ತಾರಂತೆ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

ನಾನು ನಾಮಿನೇಷನ್ ಹಾಕಬೇಕು ಎಂದಾಗ ಮತ್ತೆ ಚರ್ಚ್​ಗೆ ಬರ್ತೀನಿ. ಸ್ಪರ್ಧೆ ಮಾಡಲೇಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ ಎಂದು ಕೋಲಾರ ನಗರದ ಮೆಥೋಡಿಸ್ಟ್ ಚರ್ಚ್ ನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಕೋಲಾರ (ನ.11): ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಇದೇ ನನ್ನ ಕೊನೆಯ ಚುನಾವಣೆ (Election) ಸ್ಪರ್ಧೆ  ಎಂದು ಸಿದ್ದರಾಮಯ್ಯ ಘೋಷಿಸಿದ್ದು, ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಸಿದ್ದರಾಮಯ್ಯ ಬಾದಾಮಿ (Badami) ಬಿಟ್ಟು ಬೇರೆ ಕ್ಷೇತ್ರದಿಂದ (Constituency) ಸ್ಪರ್ಧಿಸೋದು ಫಿಕ್ಸ್  ಆಗಿದೆ. ಆದ್ರೆ 2023ರ ವಿಧಾನಸಭೆ ಚುನಾವಣೆಯಲ್ಲಿ (Assembly Election) ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋದು ಮಾತ್ರ ಇನ್ನು ಅಧಿಕೃತಗೊಂಡಿಲ್ಲ. ಕೋಲಾರದಿಂದ ಸಿದ್ದರಾಮಯ್ಯ ಅಖಾಡಕ್ಕಿಳಿಯೋದು ಬಹುತೇಕ ಖಚಿತ ಎನ್ನಲಾಗಿದೆ.


ಕೋಲಾರದಲ್ಲಿ ಸಿದ್ದು ಸ್ಪರ್ಧೆಗೆ ರೆಡಿಯಾಗ್ತಿದೆ ಅಖಾಡ!


ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಕೋಲಾರವೇ ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಸೇಫ್ ಆಗಿರೋ ಕ್ಷೇತ್ರ ಎನ್ನುವ  ಮಾತುಗಳು ಸಹ ಪಕ್ಷದ ವಲಯದಲ್ಲಿ ಕೇಳಿಬರ್ತಿದೆ. ​ಇದಕ್ಕೆ ಸಂಬಂಧಿಸಿದಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸ್ಥಳೀಯ ನಾಯಕ ಅಭಿಪ್ರಾಯಗಳನ್ನ ಸಂಗ್ರಹಿಸಿದ್ದು ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ.


siddaramaiah visits kolar today mrq
ಸಿದ್ದರಾಮಯ್ಯ, ಮಾಜಿ ಸಿಎಂ


ಕೋಲಾರದಲ್ಲಿ ಸಿದ್ದರಾಮಯ್ಯ ಶಕ್ತಿಪ್ರದರ್ಶನ


ಕ್ಷೇತ್ರದ ಹುಡುಕಾಟದಲ್ಲಿರುವ  ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರಕ್ಕೆ ಬರ್ತಿದ್ದಂತೆ ಭರ್ಜರಿ ಸ್ವಾಗತ ಸಿಕ್ಕಿದೆ. ಕೋಲಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಿದ್ದರಾಮಯ್ಯ ಮೆಥೋಡಿಸ್ಟ್ ಚರ್ಚ್​ಗೆ ಸಿದ್ದರಾಮಯ್ಯ ಭೇಟಿ ನೀಡಿದ್ರು. ಚಿನ್ನದ ಗಣಿ ನಾಡಿಗೆ ಬಂದ ಬಂದ ಸಿದ್ದರಾಮಯ್ಯರಿಗೆ ಕಾಂಗ್ರೆಸ್​ ಮುಖಂಡರು ಹಾಗೂ ಕಾರ್ಯಕರ್ತರು ಕ್ರೇನ್ ಮೂಲಕ 300 ಕೆಜಿ ತೂಕದ ಸೇಬಿನ ಹಾರ ಹಾಕಿದ್ರು. ಅಭಿಮಾನಿಗಳು ಜೈಕಾರ ಹಾಕಿ ಸಂಭ್ರಮಿಸಿದ್ರು.

 ಕೋಲಾರದಿಂದ ಸ್ಪರ್ಧಿಸುವಂತೆ ಒತ್ತಡವಿದೆ
ಕೋಲಾರಕ್ಕೆ ಬರುವಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಜಿಲ್ಲೆಯ ಶಾಸಕರು ಸ್ವಾಗತಿಸಿದ್ದಾರೆ. ಇಂದು ಕೋಲಾರದ ಭೇಟಿ ವೇಳೆ ಅದ್ದೂರಿ ಸ್ವಾಗತ ಸಿಕ್ಕಿದೆ. ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುವೆ ಕೋಲಾರದಲ್ಲಿ ಸ್ಪರ್ಧೆ ಮಾಡುವಂತೆ ನನ್ನ ಮೇಲೆ ಒತ್ತಡ ಇದೆ. ನಾನೂ ಈಗ ಬಾದಾಮಿ ಕ್ಷೇತ್ರದ ಶಾಸಕನಾಗಿದ್ದೇನೆ. ವರುಣಾ, ಬಾದಾಮಿಯಿಂದಲೂ ಸ್ಪರ್ಧೆಗೆ ಒತ್ತಾಯಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ರು.


ಕೋಲಾರದ ಜನತೆಗೆ ಆಭಾರಿ


ನಾನು ಕೋಲಾರದ ಜನತೆಗೆ ಆಭಾರಿಯಾಗಿದ್ದೇನೆ. ನಾನು 5 ವರ್ಷ ಮುಖ್ಯ ಮಂತ್ರಿ ಆಗಿದ್ದೆ. ಎಲ್ಲಾ ಜನತೆಯನ್ನ ಸಮಾನವಾಗಿ ಕಂಡಿದ್ದೆ, ಬಡವರ ಪರವಾಗಿದ್ದೆ. ನಾನು ಧರ್ಮದ ಆಧಾರದಲ್ಲಿ ಕೆಲಸ ಮಾಡಿಲ್ಲ. ಈ ದೇಶ ಬಹುತ್ವದ ದೇಶ, ಮನುಷ್ಯರ ಮತ್ತೊಬ್ಬ ಮನುಷ್ಯರನ್ನ ಪ್ರೀತಿಸಬೇಕು. ಬಿಜೆಪಿ ಧರ್ಮದ ಆಧಾರದಲ್ಲಿ ರಾಜಕೀಯ ಮಾಡ್ತಿದೆ. ಕಾಂಗ್ರೆಸ್ ಪಕ್ಷ ಭಾರತದಲ್ಲಿ ಸರ್ವಧರ್ಮ ಸಮಾನತೆ ಕಾಣುತ್ತಿದೆ. ನನ್ನ ಸರ್ಕಾರದಲ್ಲಿ ನಾನು ಎಂದೂ ಭೇದಭಾವ ಮಾಡಿಲ್ಲ, ಮುಂದೆಯೂ ಮಾಡಲ್ಲ ಎಂದ್ರು.


ನಾನು ನಾಮಿನೇಷನ್ ಹಾಕಲು ಬರ್ತೀನಿ- ಸಿದ್ದರಾಮಯ್ಯ


ನನ್ನ 5 ವರ್ಷ ಆಡಳಿತ ನೋಡಿದ್ದೀರಿ, ಸಂವಿಧಾನದ ಅಡಿ ನಾವೆಲ್ಲ ಕೆಲಸ ಮಾಡಬೇಕು. ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಪರವಾಗಿ ನಾವಿರುತ್ತೇನೆ. ನಾನು ನಾಮಿನೇಷನ್ ಹಾಕಬೇಕು ಅಂದಾಗ ಮತ್ತೆ ಚರ್ಚ್ ಗೆ ಬರ್ತೀನಿ. ಸ್ಪರ್ಧೆ ಮಾಡಲೇಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ ಎಂದು ಕೋಲಾರ ನಗರದ ಮೆಥೋಡಿಸ್ಟ್ ಚರ್ಚ್ ನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.


ಇದನ್ನೂ ಓದಿ: Karnataka Politics: ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿ ನೆರಳು ಬಿದ್ದಿದೆ; ಪ್ರಹ್ಲಾದ್ ಜೋಶಿ


ದರ್ಗಾಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

ಕೋಲಾರದ ಕ್ಲಾಕ್ ಟವರ್ ಹಾಗೂ ಹಜರತ್ ಸಯ್ಯದ್ ಕುತುಬ್ ದರ್ಗಾಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ರು. ದರ್ಗಾದಲ್ಲಿ ಟೋಪಿ ಧರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು. ಸಿದ್ದರಾಮಯ್ಯ ರಿಗೆ ನಸೀರ್ ಅಹಮದ್, ಕೈ ಶಾಸಕರು ಮುಖಂಡರು ಸಾಥ್ ನೀಡಿದ್ದಾರೆ.


Published by:ಪಾವನ ಎಚ್ ಎಸ್
First published: