ವಿಧಾನಸಭೆ ಉಪ ಚುನಾವಣೆ; ಬಹಿರಂಗ ಪ್ರಚಾರಕ್ಕೆ ಇಂದು ತೆರೆ; ಹೊರಗಿನವರನ್ನು ಕ್ಷೇತ್ರದಿಂದ ಕಳಿಸಲು ಬಿಜೆಪಿ ಒತ್ತಾಯ

ವಿಧಾನಸಭೆ ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 6 ಗಂಟೆಯ ವರೆಗೆ ಮಾತ್ರ ಅವಕಾಶವಿದೆ. ನಂತರ ಯಾವ ನಾಯಕರೂ ಸಹ ಬಹಿರಂಗ ಪ್ರಚಾರ ನಡೆಸುವಂತಿಲ್ಲ. ನಾಳೆ ಮನೆ ಮನೆ ಪ್ರಚಾರಕ್ಕೆ ಅವಕಾಶವಿದೆ. ಆದರೆ, ಇಂದು ಸಂಜೆ 6 ಗಂಟೆಯ ನಂತರ ಮತಕ್ಷೇತ್ರದ ಹೊರಗಿನ ನಾಯಕರು ಈ ಕ್ಷೇತ್ರದಲ್ಲಿ ಉಳಿದುಕೊಳ್ಳುವಂತಿಲ್ಲ.

MAshok Kumar | news18
Updated:May 17, 2019, 7:36 PM IST
ವಿಧಾನಸಭೆ ಉಪ ಚುನಾವಣೆ; ಬಹಿರಂಗ ಪ್ರಚಾರಕ್ಕೆ ಇಂದು ತೆರೆ; ಹೊರಗಿನವರನ್ನು ಕ್ಷೇತ್ರದಿಂದ ಕಳಿಸಲು ಬಿಜೆಪಿ ಒತ್ತಾಯ
ವಿ ಸೋಮಣ್ಣ
MAshok Kumar | news18
Updated: May 17, 2019, 7:36 PM IST
ಕಲಬುರಗಿ (ಮೇ.17) ; ಮೈತ್ರಿ ಸರ್ಕಾರ ಹಾಗೂ ಬಿಜೆಪಿ ಪಾಲಿಗೆ ಪ್ರತಿಷ್ಠಿಯ ಕಣವಾಗಿರುವ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದ್ದು, ಮತಕ್ಷೇತ್ರದ ಹೊರಗಿನವರನ್ನು ಜಿಲ್ಲೆಯಿಂದ ಹೊರಗೆ ಕಳುಹಿಸುವಂತೆ ಬಿಜೆಪಿ ನಾಯಕರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

ಶುಕ್ರವಾರ ಚಿಂಚೋಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ವಿ. ಸೋಮಣ್ಣ, “ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಹಣ ಖರ್ಚು ಮಾಡಿದೆ. ತೆಲಂಗಾಣದಿಂದ ಹಣ ಕೊಟ್ಟು ಗೂಂಡಾಗಳನ್ನು ಕ್ಷೇತ್ರಕ್ಕೆ ಕರೆಸಿದೆ.  ಅಲ್ಲದೆ ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ್ ಹಾಗೂ ಪ್ರಿಯಾಂಕ್ ಖರ್ಗೆ ತಿಂಗಳಿಂದ ಇಲ್ಲೆ ಠಿಕಾಣಿ ಹೂಡಿದ್ದಾರೆ. ಹೀಗಾಗಿ ಇವರನ್ನು ಕಾನೂನಿನಂತೆ ಇಂದು ಸಂಜೆ 6 ಗಂಟೆಯ ಒಳಗಾಗಿ ಕ್ಷೇತ್ರದಿಂದ ಹೊರಹಾಕಬೇಕು” ಎಂದು ಜಿಲ್ಲಾಧಿಕಾರಿಗಳಿಗೆ ಅವರು ಮನವಿ ಮಾಡಿದ್ದಾರೆ.

ಕಾಂಗ್ರೆಸ್ ವಿರುದ್ಧ ಹರಿಹಾಯ್ದ ವಿ. ಸೋಮಣ್ಣ, “ಸರಕಾರ ಬದುಕಿದೆಯಾ? ಸತ್ತಿದೆಯಾ? ಗೊತ್ತಿಲ್ಲ. ಈ ಭಾಗದ ಶೇ.30 ರಷ್ಟು ಜನ ಗುಳೆ ಹೋಗಿದ್ದಾರೆ. ಕ್ಷೇತ್ರದಲ್ಲಿ ನಾನಾ ಸಮಸ್ಯೆಗಳಿವೆ. ಆದರೆ, ಈ ಯಾವ ಸಮಸ್ಯೆಗಳಿಗೂ ಸ್ಪಂದಿಸದ ಸರ್ಕಾರ ಹಾಗೂ ಸಚಿವರು ಉಪ ಚುನಾವಣೆ ಘೋಷಣೆಯಾದ ನಂತರ ಇಲ್ಲೇ ಠಿಕಾಣಿ ಹೂಡಿದ್ದಾರೆ” ಎಂದು ಕಿಡಿಕಾರಿದರು ಅಲ್ಲದೆ ಚಿಂಚೋಳಿ ಬಿಜೆಪಿ ಅಭ್ಯರ್ಥಿ ಕನಿಷ್ಠ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವುದು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ : ಚಿಂಚೋಳಿ-ಕುಂದಗೋಳ ಉಪಚುನಾವಣೆ; ಕಾಂಗ್ರೆಸ್​​ ಅಭ್ಯರ್ಥಿಗಳ ಗೆಲುವು ಖಚಿತ ಎಂದ ಕೆ.ಸಿ ವೇಣುಗೋಪಾಲ್‌

ಪ್ರಚಾರಕ್ಕೆ ಇಂದು ತೆರೆ : ವಿಧಾನಸಭೆ ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 6 ಗಂಟೆಯ ವರೆಗೆ ಮಾತ್ರ ಅವಕಾಶವಿದೆ. ನಂತರ ಯಾವ ನಾಯಕರೂ ಸಹ ಬಹಿರಂಗ ಪ್ರಚಾರ ನಡೆಸುವಂತಿಲ್ಲ. ನಾಳೆ ಮನೆ ಮನೆ ಪ್ರಚಾರಕ್ಕೆ ಅವಕಾಶವಿದೆ. ಆದರೆ, ಇಂದು ಸಂಜೆ 6 ಗಂಟೆಯ ನಂತರ ಮತಕ್ಷೇತ್ರದ ಹೊರಗಿನ ನಾಯಕರು ಈ ಕ್ಷೇತ್ರದಲ್ಲಿ ಉಳಿದುಕೊಳ್ಳುವಂತಿಲ್ಲ.

ಆದರೆ, ಕಳೆದ ಒಂದು ತಿಂಗಳಿನಿಂದ ಸಚಿವರುಗಳಾದ ಡಿ.ಕೆ. ಶಿವಕುಮಾರ್  ಹಾಗೂ ಪ್ರಿಯಾಂಕ್​ ಖರ್ಗೆ ಹುಬ್ಬಳ್ಳಿ ಹಾಗೂ ಕಲಬುರ್ಗಿಯಲ್ಲೇ ಠಿಕಾಣಿ ಹೂಡಿದ್ದಾರೆ. ಹೀಗಾಗಿ ಈ ನಾಯಕರು ಇಂದು ಸಂಜೆಯ ಒಳಗಾಗಿ ತಮ್ಮ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಜಿಲ್ಲೆಯಿಂದ ಹೊರಗಡೆ ತೆರಳುವುದು ಅನಿರ್ವಾಯವಾಗಿದೆ.'ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್ ನಲ್ಲೂ ಹಿಂಬಾಲಿಸಿ'

 

First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ