ಬೆನ್ನಿಗೆ ಚೂರಿ ಹಾಕಿದ ಲಖನ್ ಜಾರಕಿಹೊಳಿ ನನ್ನ ತಮ್ಮನೇ ಅಲ್ಲ; ರಮೇಶ್ ಜಾರಕಿಹೊಳಿ ಆಕ್ರೋಶ

ರಮೇಶ್ ಜಾರಕಿಹೊಳಿ ನನ್ನ ಶಿಷ್ಯ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯ ಹೇಳಿರುವುದರಲ್ಲಿ ಸತ್ಯವಿದೆ. ಅವರು ನನ್ನ ಗುರುಗಳಲ್ಲ, ಹೆಚ್. ವಿಶ್ವನಾಥ್ ನನ್ನ ಗುರು. ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ನಮ್ಮ ಜೂನಿಯರ್ ಎಂದಿದ್ದಾರೆ.

news18-kannada
Updated:November 15, 2019, 2:21 PM IST
ಬೆನ್ನಿಗೆ ಚೂರಿ ಹಾಕಿದ ಲಖನ್ ಜಾರಕಿಹೊಳಿ ನನ್ನ ತಮ್ಮನೇ ಅಲ್ಲ; ರಮೇಶ್ ಜಾರಕಿಹೊಳಿ ಆಕ್ರೋಶ
ಲಖನ್ ಜಾರಕಿಹೊಳಿ- ರಮೇಶ್ ಜಾರಕಿಹೊಳಿ
  • Share this:
ಬೆಳಗಾವಿ (ನ. 15): ಗೋಕಾಕ್​ನಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಲಖನ್ ಜಾರಕಿಹೊಳಿ ಇಂದಿನಿಂದ ಲಖನ್ ಜಾರಕಿಹೊಳಿ ನನ್ನ ತಮ್ಮನೇ ಅಲ್ಲ. ಡಿಸೆಂಬರ್ 5ರವರೆಗೂ ಆತ ನನ್ನ ವಿರೋಧಿ. ಲಖನ್​ಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ. ಒಬ್ಬ ಸಹೋದರ ಮೋಸ ಹೋಗಿದ್ದು ನೋಡಿ ಲಖನ್ ಜಾರಕಿಹೊಳಿ ಕೂಡ ಮೋಸ ಹೋಗಿದ್ದಾನೆ ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಇಂದು ರಮೇಶ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ಇಬ್ಬರೂ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಗೋಕಾಕ್​ನಲ್ಲಿ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಇಬ್ಬರೂ ಒಂದೇ ಹೆಲಿಕಾಪ್ಟರ್​​ನಲ್ಲಿ ಬಂದಿಳಿದಿದ್ದಾರೆ. ಒಂದೇ ಹೆಲಿಕಾಪ್ಟರ್​ನಲ್ಲಿ ಬಂದರೂ ಒಬ್ಬರ ಬಳಿ ಮತ್ತೊಬ್ಬರು ಮಾತನಾಡಿಲ್ಲ.

15 ದಿನಗಳ ಹಿಂದೆ ನಾನು ಬಿಜೆಪಿಗೆ ಹೋಗುವ ಬಗ್ಗೆ ಹೇಳಿರಲಿಲ್ಲ. ನನ್ನನ್ನು ಕಾನೂನಿನಲ್ಲಿ ಸಿಕ್ಕಿಸಬೇಕೆಂಬ ಉದ್ದೇಶದಿಂದಲೇ ಷಡ್ಯಂತ್ರ ರೂಪಿಸಲಾಗಿದೆ. 1 ಮತ ಆಗಲಿ ಅಥವಾ ಲಕ್ಷ ಮತಗಳೇ ಆಗಲಿ ನನ್ನ ಗೆಲುವು ಖಚಿತ ಎಂದು ರಮೇಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ನನ್ನ ಜೂನಿಯರ್:

ರಮೇಶ್ ಜಾರಕಿಹೊಳಿ ನನ್ನ ಶಿಷ್ಯ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯ ಹೇಳಿರುವುದರಲ್ಲಿ ಸತ್ಯವಿದೆ. ಅವರು ನನ್ನ ಗುರುಗಳಲ್ಲ, ಹೆಚ್. ವಿಶ್ವನಾಥ್ ನನ್ನ ಗುರು. ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ನಮ್ಮ ಜೂನಿಯರ್. ಬ್ರಿಟಿಷರು ಕುತಂತ್ರ ಮಾಡಿದಂತೆ ಕುತಂತ್ರ ಮಾಡಿ ಸಿದ್ದರಾಮಯ್ಯ ಕಾಂಗ್ರೆಸ್ ಚುಕ್ಕಾಣಿಯನ್ನು ಹಿಡಿದಿದ್ದಾರೆ ಎಂದು ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ಗೋಕಾಕ್​ನಲ್ಲಿ ರಮೇಶ್ ವಿರುದ್ಧ ಕಾಂಗ್ರೆಸ್​ನಿಂದ ಲಖನ್​ ಜಾರಕಿಹೊಳಿ ಸ್ಪರ್ಧೆ ಖಚಿತ; ಸತೀಶ್ ಜಾರಕಿಹೊಳಿ ಘೋಷಣೆ

ನನ್ನ ವಿರುದ್ಧ ಸತೀಶ್ ಜಾರಕಿಹೊಳಿ ಕುತಂತ್ರ ಮಾಡಿದ್ದಾನೆ. ಲಖನ್ ಜಾರಕಿಹೊಳಿ ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ. ಆರ್. ಶಂಕರ್ ಸಿಎಂ ಯಡಿಯೂರಪ್ಪನವರ ಬಳಿ ಎರಡೆರಡು ಮಾತಾಡಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್ ತಪ್ಪಿದೆ. ಆದರೆ, ಖಂಡಿತ ಅವರ ಕೈ ಬಿಡುವುದಿಲ್ಲ. ಆರ್. ಶಂಕರ್ ಅವರನ್ನು ಎಂಎಲ್​ಸಿ ಮಾಡುವ ಜವಾಬ್ದಾರಿ ನನ್ನದು ಎಂದು ರಮೇಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ.(ವರದಿ: ಚಂದ್ರಕಾಂತ್ ಸುಗಂಧಿ)

First published: November 15, 2019, 2:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading