ಕೆಜಿಎಫ್​​ನಲ್ಲಿ ಮತ್ತೆ ಝಳಪಿಸಿದ ಲಾಂಗ್​; ಯುವತಿ ಚುಡಾಯಿಸಿದ್ದಕ್ಕೆ ಕೈ ಕಟ್​

ಇವರು ಪ್ರತಿದಿನ ಯುವತಿಯನ್ನು ರೇಗಿಸುತ್ತಾ, ಚುಡಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ಯುವತಿಯ ಸಂಬಂಧಿಕರಾದ ಕುಮಾರ್ ಮತ್ತು ಸ್ನೇಹಿತರು ಲಾಂಗು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

news18-kannada
Updated:November 14, 2019, 8:51 PM IST
ಕೆಜಿಎಫ್​​ನಲ್ಲಿ ಮತ್ತೆ ಝಳಪಿಸಿದ ಲಾಂಗ್​; ಯುವತಿ ಚುಡಾಯಿಸಿದ್ದಕ್ಕೆ ಕೈ ಕಟ್​
ಪ್ರಾತಿನಿಧಿಕ ಚಿತ್ರ
  • Share this:
ಕೋಲಾರ,(ನ.14): ಕೆಜಿಎಫ್​​ ನಗರದಲ್ಲಿ ಮತ್ತೆ ಲಾಂಗ್​ ಮಚ್ಚು ಝಳಪಿಸಿವೆ. ಯುವತಿಯನ್ನು ಚುಡಾಯಿಸಿದರೆಂದು ಮೂವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಕೆಜಿಎಫ್​​ನ ಸಲ್ದಾನಾ ಸರ್ಕಲ್​ ಬಳಿ ನಡೆದಿದೆ. 

ಘಟನೆಯಲ್ಲಿ ಓರ್ವನ ಕೈ ಕಟ್​​ ಆಗಿದ್ದರೆ, ಮತ್ತೋರ್ವನ ಮುಖಕ್ಕೆ ಲಾಂಗ್​ನಿಂದ ಹಲ್ಲೆ ಮಾಡಲಾಗಿದೆ. ಮುರುಗ ಎಡಗೈ ಕಳೆದುಕೊಂಡ ವ್ಯಕ್ತಿ. ರಜಿನಿ ಎಂಬಾತನ ಮುಖದ ಮೇಲೆ ಲಾಂಗ್​ನಿಂದ ಹಲ್ಲೆ ಮಾಡಲಾಗಿದೆ. ಮತ್ತೋರ್ವ ಕಮಲ್​​ ಎಂಬಾತನಿಗೆ ಗಾಯಗಳಾಗಿವೆ. ಹಲ್ಲೆಗೊಳಗಾದ ಮೂವರನ್ನು ಕೆಜಿಎಫ್​ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಸ್ತೆಯಲ್ಲಿ ಸೈಡ್​​ ಕೊಡದಿದ್ದಕ್ಕೆ ಲಾಂಗ್​ ತೋರಿಸಿದ ದುಷ್ಕರ್ಮಿಗಳು; ಸಿಲಿಕಾನ್​ ಸಿಟಿಯಲ್ಲಿ ಘಟನೆ

ಇವರು ಪ್ರತಿದಿನ ಯುವತಿಯನ್ನು ರೇಗಿಸುತ್ತಾ, ಚುಡಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ಯುವತಿಯ ಸಂಬಂಧಿಕರಾದ ಕುಮಾರ್ ಮತ್ತು ಸ್ನೇಹಿತರು ಲಾಂಗು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕೆಜಿಎಫ್​​ ನಗರದ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

First published:November 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ