Kolar: ಗ್ರಾಮ ಪಂಚಾಯಿತಿ ಕಚೇರಿ ಎದುರೇ ಹಿರಿಯ ಪಿಡಿಒಗೆ ಥಳಿತ!

ಹಿರಿಯರಿಗೆ ಗೌರವ ಕೊಡೋದು ನಮ್ಮ ಕರ್ತವ್ಯ. ಆದರೆ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಅಧಿಕಾರದ ದರ್ಪದಿಂದ ಹಿರಿಯ ಪಿಡಿಒಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.

ಪಿಡಿಒ ನರಸಿಂಹಮೂರ್ತಿ ಮೇಲೆ ಹಲ್ಲೆ

ಪಿಡಿಒ ನರಸಿಂಹಮೂರ್ತಿ ಮೇಲೆ ಹಲ್ಲೆ

  • Share this:
ಹಿರಿಯರಿಗೆ ಗೌರವ ಕೊಡೋದು ನಮ್ಮ ಕರ್ತವ್ಯ. ಹಿರಿಯರನ್ನು ಆದರನೀಯವಾಗಿ ಕಾಣ್ಬೇಕು. ಆದರೆ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಅಧಿಕಾರದ (Power) ದರ್ಪದಿಂದ ಪಿಡಿಒಗೆ (PDO) ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕೋಲಾರದಲ್ಲಿ (Kolar) ನಡೆದಿದೆ. ತನಗಿಂತ ಹಿರಿಯ ಅಂತಾನೂ ನೋಡದೇ ಗ್ರಾಮ ಪಂಚಾಯ್ತಿ ಸದಸ್ಯ ಪಿಡಿಒಗೆ ಹಿಗ್ಗಾಮುಗ್ಗಾ (Attack) ಥಳಿಸಿದ್ದಾನೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ರಾಜೇಂದ್ರಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿ (Office) ಎದುರು ಘಟನೆ ನಡೆದಿದೆ. ಕೇಶವ ರೆಡ್ಡಿಯೇ ಮನಸೋ ಇಚ್ಛೆ ಥಳಿಸಿದ ಗ್ರಾಮ ಪಂಚಾಯ್ತಿ ಸದಸ್ಯ. ನರಸಿಂಹಮೂರ್ತಿ ಥಳಿತಕ್ಕೊಳಗಾದ ಪಿಡಿಒ. ಪಿಡಿಒ ನರಸಿಂಹಮೂರ್ತಿಗೆ ಸದಸ್ಯ ಥಳಿಸಿದ ದೃಶ್ಯಗಳು ಗ್ರಾಮಪಂಚಾಯ್ತಿ ಕಚೇರಿಯ ಸಿಸಿ ಟಿವಿಯಲ್ಲಿ (CCTV) ಸೆರೆಯಾಗಿದೆ. ಎಲ್ಲೆಡೆ ಆಕ್ರೋಶ ಕೂಡ ವ್ಯಕ್ತವಾಗಿದೆ.

ಅಂಗನವಾಡಿ ಕಟ್ಟಡದ ಬಿಲ್ ಮಂಜೂರು ಮಾಡುವ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದವಾಗಿದೆ. ಕೊನೆಗೆ ಮಾತಿಗೆ ಮಾತು ಬೆಳೆದು ಹಲ್ಲೆ ತನಕ ಬಂದಿದೆ. ಸಿಟ್ಟಿಗೆದ್ದ ಗ್ರಾಮ ಪಂಚಾಯ್ತಿ ಸದಸ್ಯ ಕೇಶವರೆಡ್ಡಿ ಪಿಡಿಒ ನರಸಿಂಹಮೂರ್ತಿಗೆ ಥಳಿಸಿದ್ದಾನೆ.

58 ವರ್ಷದ ಪಿಡಿಒಗೆ ಥಳಿತ

ರಾಜೇಂದ್ರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಕೇಶವರೆಡ್ಡಿ ಎಂಬುವವರೇ ಪಿಡಿಒಗೆ ಮನಸೋ ಇಚ್ಛೆ ಥಳಿಸಿದ್ದಾರೆ. ನರಸಿಂಹಮೂರ್ತಿ ಹಲ್ಲೆಗೊಳಗಾದ ಅಧಿಕಾರಿ.  58 ವರ್ಷ ವಯಸ್ಸಿನ ಪಿಡಿಒ ನರಸಿಂಹಮೂರ್ತಿ ಮೇಲೆ ಗ್ರಾಮ ಪಂಚಾಯ್ತಿ ಸದಸ್ಯನ ದೌರ್ಜನ್ಯ, ದಬ್ಬಾಳಿಕೆ ದೃಶ್ಯಗಳು ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Assault on PDO by gram panchayat member in kolar
ಹಲ್ಲೆಗೊಳಗಾದ ಪಿಡಿಒ ನರಸಿಂಹಮೂರ್ತಿ


ಬಿಲ್ ವಿಚಾರಕ್ಕೆ ಕಿರಿಕ್, ಥಳಿತ!

ಅಂಗನವಾಡಿ ಕಟ್ಟಡದ ಬಿಲ್ ಮಂಜೂರು ಮಾಡುವ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಕೆಲಸ ಮಾಡಿದ್ದರು ಕೂಡ ವಿನಾಕಾರಣ ಬಿಲ್ ತಡ ಮಾಡ್ತಿದ್ದೀರಾ ಎಂದು ಕೇಶವ ರೆಡ್ಡಿ ಸಿಟ್ಟಿಗೆದ್ದಿದ್ದಾರೆ. ಆಗ ಬಿಲ್ ಮಂಜೂರು ಮಾಡಲು ಚೆಕ್ ಬುಕ್ ಇಲ್ಲವೆಂದು ಪಿಡಿಒ ನರಸಿಂಹಮೂರ್ತಿ ಹೇಳಿದ್ದಾರೆ.

Assault on PDO by gram panchayat member in kolar
ಪಿಡಿಒ ಮೇಲೆ ಹಲ್ಲೆಗೈದ ಕೇಶವ ರೆಡ್ಡಿ


ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೊಲೆಗೆ ಹೇಗಿತ್ತು ಪ್ಲಾನ್- ಆರೋಪಿಗಳು ಬಾಯ್ಬಿಟ್ಟಿದ್ದೇನು?

ಅಷ್ಟಕ್ಕೆ ಸಿಟ್ಟಿಗೆದ್ದ ಕೇಶವರೆಡ್ಡಿ ಜಗಳಕ್ಕೆ ಬಂದು ಹಲ್ಲೆ ನಡೆಸಿದ್ದಾರೆ. ನಾಲ್ಕೈದು ಮಂದಿ ಜೊತೆಗಿದ್ದರೂ ಕೂಡ ಬಿಡದೇ ಥಳಿಸಿದ್ದಾರೆ. ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೋಲಾರದಲ್ಲಿ ಯುವಕ- ಯುವತಿಯಿಂದ ಆತ್ಮಹತ್ಯೆ ಯತ್ನ

ಕೋಲಾರದಲ್ಲಿ ವಿಷಸೇವಿಸಿ ಯುವಕ- ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು, ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬಿ.ಕೊತ್ತಕೋಟ ಬಳಿ ಘಟನೆ ನಡೆದಿದೆ. ಕೋಲಾರದ ತುರಾಂಡಹಳ್ಳಿ ಗ್ರಾಮದ ರಮ್ಯಾ (25) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ನೋಡನೋಡ್ತಿದ್ದಂತೆ ಬಸ್ ಬ್ರೇಕ್​​ಫೇಲ್, 30 ಪ್ರಯಾಣಿಕರು ಗ್ರೇಟ್​ ಎಸ್ಕೇಪ್!

ವಿಷ ಸೇವಿಸಿದ್ದ ಕೋಲಾರದ ಜನ್ನಘಟ್ಟ ಗ್ರಾಮದ ಯುವಕ ಅಶೋಕ್​ ಎಂಬಾತನನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಪ್ರೀತಿಗೆ ಎರಡು ಕಡೆಯ ಮನೆಯವರು ಒಪ್ಪದ ಕಾರಣ ಆತ್ಮಹತ್ಯೆಗೆ ಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಶಿವಮೊಗ್ಗದಲ್ಲಿ ಗ್ರಾ.ಪಂ.ಕಚೇರಿಯಲ್ಲೇ ಅಂತ್ಯಕ್ರಿಯೆಗೆ ಯತ್ನ!

ಶಿವಮೊಗ್ಗದಲ್ಲಿ ಸ್ಮಶಾನ ಒತ್ತುವರಿ ಆರೋಪ ಕೇಳಿಬಂದಿದ್ದು, ಸಿಟ್ಟಿಗೆದ್ದ ಜನ ಗ್ರಾಮ ಪಂಚಾಯ್ತಿ ಆವರಣದಲ್ಲೇ ಅಂತ್ಯಕ್ರಿಯೆಗೆ ಮುಂದಾದ ಘಟನೆ ನಡೆದಿದೆ. ಶಿವಮೊಗ್ಗದ ಸಂತೆಕಡೂರು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮಸ್ಥರು ಪ್ರತಿಭಟನೆ ಕೂಡ ನಡೆಸಿದರು.

ಒತ್ತುವರಿ ತೆರವುಗೊಳಿಸುವಂತೆ ಗ್ರಾಮಸ್ಥರು ಹಲವು ದಿನಗಳಿಂದ ಒತ್ತಾಯಿಸಿದ್ದರು. ಆದರೆ ಇದರ ನಡುವೆ ಇಂದು ಗ್ರಾಮದಲ್ಲಿ ರಂಗಮ್ಮ ಎಂಬ ವೃದ್ಧೆ ಸಾವನ್ನಪ್ಪಿದ್ದರು. ವೃದ್ಧೆಯ ಅಂತ್ಯಕ್ರಿಯೆಗೆ ಸ್ಮಶಾನದ ಸಮಸ್ಯೆ ಎದುರಾಗಿದೆ. ಸ್ಮಶಾನ ಸಮಸ್ಯೆ ಖಂಡಿಸಿ ಗ್ರಾಮಸ್ಥರು ಪಂಚಾಯ್ತಿ ಆವರಣದಲ್ಲೇ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದರು.

ಪೊಲೀಸರಿಂದ ಮನವೊಲಿಕೆ

ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದರು. ಬಳಿಕ ಜನ ಗ್ರಾಮ ಪಂಚಾಯ್ತಿ ಕಚೇರಿ ಆವರಣದಿಂದ ಮೃತದೇಹ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೆರವೇರಿಸಿದರು.
Published by:Thara Kemmara
First published: