ಬೆಂಗಳೂರು: ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ (BV Srinivas) ಅವರನ್ನು ಹುಡುಕಿಕೊಂಡು ಬೆಂಗಳೂರಿಗೆ (Bengaluru) ಅಸ್ಸಾಂ ಪೊಲೀಸರು (Assam Police) ಬಂದಿದ್ದಾರೆ. ಬಸವೇಶ್ವರ ನಗರ ನಿವಾಸಕ್ಕೆ ಅಸ್ಸಾಂ ಪೊಲೀಸರು ಆಗಮಿಸಿದ್ದು, ಮನೆಯಲ್ಲಿ ಬಿವಿ ಶ್ರೀನಿವಾಸ್ ಇಲ್ಲ. ಹೀಗಾಗಿ ಪೊಲೀಸರು ಮನೆಬಾಗಿಲಿಗೆ ನೋಟಿಸ್ ಅಂಟಿಸಿ ತೆರಳಿದ್ದಾರೆ. ಬೆಂಗಳೂರು ನಗರ ಪೊಲೀಸರ ಸಹಾಯದಿಂದ ಬಿವಿ ಶ್ರೀನಿವಾಸ್ ಬಂಧನಕ್ಕೆ ಗುವಾಹಟಿಯ ಜಾಯಿಂಟ್ ಕಮಿಷನರ್ ಆಫ್ ಪೊಲೀಸ್ ಪ್ರತೀಕ್ ಆಗಮಿಸಿದ್ದಾರೆ.
ಅಮಾನತುಗೊಂಡಿರುವ ಅಸ್ಸಾಂ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷೆ ಅಂಕಿತಾ ದತ್ತಾ ಎಂಬವರು ಬಿವಿ ಶ್ರೀನಿವಾಸ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದು, ಈ ಸಂಬಂಧ ಅಸ್ಸಾಂನಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಅಸ್ಸಾಂ ಪೊಲೀಸರು ಬಿವಿ ಶ್ರೀನಿವಾಸ್ ಬಂಧನಕ್ಕೆ ಬೆಂಗಳೂರಿಗೆ ಬಂದಿದ್ದಾರೆ.
ಅಸಮಾಧಾನ ಹೊರ ಹಾಕಿರುವ ಅಂಕಿತಾ ದತ್ತಾ!
ಬಿವಿ ಶ್ರೀನಿವಾಸ್ ನೀಡುತ್ತಿರುವ ಕಿರುಕುಳದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಂಕಿತಾ ದತ್ತಾ ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ: Dry Weather Alert: ರಾಜ್ಯದ ಈ ಜಿಲ್ಲೆಗಳಲ್ಲಿ ಈ ವಾರ ಒಣಹವೆ
ಮಾನಸಿಕ ಕಿರುಕುಳದ ಆರೋಪ
ಇನ್ನು ಈ ಬಗ್ಗೆ ಸಾಲು ಸಾಲು ಟ್ವೀಟ್ ಮಾಡಿರುವ ಅಂಕಿತಾ ದತ್ತಾ, ಹೆಣ್ಣು ಎಂಬ ಕಾರಣಕ್ಕೆ ಸತತವಾಗಿ ನನಗೆ ಕಿರುಕುಳ ಕೊಡಲಾಗಿತ್ತು. ಲಿಂಗ ತಾರತಮ್ಯ ಮಾಡುವ ಮಾನಸಿಕ ಕಿರುಕುಳ ನೀಡಿದ್ದಾರೆ. ನಿಮ್ಮ ಮದ್ಯ ಸೇವನೆ ಮಾಡ್ತೀರಾ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ಅಂಕಿತಾ ದತ್ತಾ ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ