Belagavi: ಜಿಪಂ, ತಾಪಂ ಚುನಾವಣೆ ದಿನಾಂಕ, ಮೀಸಲಾತಿ ಘೋಷಣೆ ಮುನ್ನವೇ ಆಕಾಂಕ್ಷಿಗಳಿಂದ ಟಿಕೆಟ್ ಫೈಟ್ ಶುರು

ಈ ನಡುವೆ ಹಾಲಿ ಜಿಪಂ ಸದಸ್ಯರು ಎರಡನೇ ಬಾರಿ ಸ್ಫರ್ಧೆ ನಡೆಸಲು ಸಚಿವ, ಶಾಸಕರ ಮನವೊಲಿಸುವ ಕೆಲಸ ಆರಂಭಿಸಿದ್ದಾರೆ. ಒಟ್ಟಿನಲ್ಲಿ ಪಕ್ಷದ ನಾಯಕರು ಕೈಗೊಳ್ಳುವ ನಿರ್ಧಾರದ ಮೇಲೆ ಆಕಾಂಕ್ಷಿಗಳಿಗೆ ಟಿಕೆಟ್ ಖಾತ್ರಿ ಯಾಗಲಿದೆ ಎಂದು ಹೇಳಲಾಗುತ್ತಿದೆ.

ಬೆಳಗಾವಿ

ಬೆಳಗಾವಿ

  • Share this:
ಬೆಳಗಾವಿ: ರಾಜ್ಯ ಚುನಾವಣಾ ಆಯೋಗ (Karnataka Election Commission) ಜಿಲ್ಲಾ ಪಂಚಾಯತ್ (Zilla Panchayat) ಹಾಗೂ ತಾಲೂಕು ಪಂಚಾಯತ್ (Taluku Panchayat0 ಸದಸ್ಯ ಸ್ಥಾನದ ಕ್ಷೇತ್ರಗಳ ಪುನರ್ ರಚನೆಗೆ ಮುಂದಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 121 ಮತ್ತು 160ರ ತಿದ್ದುಪಡಿಗಳ ಅನ್ವಯ ಜಿ ಪಂ ಮತ್ತು ತಾ ಪಂ ಕ್ಷೇತ್ರ ವ್ಯಾಪ್ತಿಯ ಜನಸಂಖ್ಯೆ, ಗ್ರಾಮಗಳು ಹಾಗೂ ನಕ್ಷೆ ಸಮೇತ ಫೆ.22ರ ಒಳಗೆ ಮಾಹಿತಿ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ. ಬೆಳಗಾವಿ ಜಿಲ್ಲಾ ಪಂಚಾಯತ್ (Belagavi Zilla Panchayat) ಸದಸ್ಯ ಸ್ಥಾನಗಳ ಸಂಖ್ಯೆಯನ್ನು 90 ರಿಂದ 101ಕ್ಕೆ ಏರಿಸಿದೆ. ತಾ.ಪಂ ಸದಸ್ಯ ಸ್ಥಾನಗಳ ಸಂಖ್ಯೆಯನ್ನು 345ರಿಂದ 278ಕ್ಕೆ ಇಳಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ರಚನೆಯಾಗುತ್ತಿರುವ ಜಿಪಂ, ತಾಪಂ ಕ್ಷೇತ್ರಗಳಲ್ಲಿ ಹಾಗೂ ಹಾಲಿ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳು ಓಡಾಡುತ್ತಿದ್ದಾರೆ.

ಕಳೆದ ಅವಧಿಯಲ್ಲಿ 90 ಸದಸ್ಯ ಬಲಾಬಲ ಹೊಂದಿರುವ ಬೆಳಗಾವಿ ಜಿಲ್ಲಾ ಪಂಚಾಯತ್ ನಲ್ಲಿ ಕಾಂಗ್ರೆಸ್ 29, ಬಿಜೆಪಿ 54, ಜೆಡಿಎಸ್ 1, ಪಕ್ಷೇತರ 6 ಸ್ಥಾನ ಹಾಗೂ ತಾಲೂಕು ಪಂಚಾಯತ್ ನ 345 ಸದಸ್ಯರ ಪೈಕಿ ಬಿಜೆಪಿ 165, ಕಾಂಗ್ರೆಸ್ 120, ಇತರೆ 60 ಸ್ಥಾನವನ್ನು ಹೊಂದಿದ್ದಾರೆ.

ಕೊರೊನಾ ನೆಪವೊಡ್ಡಿ ಚುನಾವಣೆ ಮುಂದೂಡಿಕೆ

2016ರ ಫೆಬ್ರವರಿಯಲ್ಲಿ ನಡೆದ ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಆಯ್ಕೆಗೊಂಡಿರುವ ಸದಸ್ಯರ ಅಧಿಕಾರದ ಅವಧಿ 2021ನೇ ಮೇನಲ್ಲಿ ಪೂರ್ಣಗೊಂಡಿದೆ. ಒಂದು ವರ್ಷ ಕಳೆದರೂ ಇನ್ನೂ ಚುನಾವಣೆ ನಡೆದಿಲ್ಲ.

ಕೋವಿಡ್ ನೆಪವೊಡ್ಡಿ ಚುನಾವಣೆ ‌ಮುಂದುಡಲಾಗಿತ್ತು. ಕೆಲ ತಿಂಗಳಲ್ಲಿ ಚುನಾವಣೆ ನಡೆಯುವ‌ ಸಾಧ್ಯತೆ‌ ಇದೆ. ಆದ್ದರಿಂದ ಆಕಾಂಕ್ಷಿ ಅಭ್ಯರ್ಥಿಗಳು ಪಕ್ಷದ ಮುಖಂಡರ ಮನವೊಲಿಕೆಯ ಕಸರತ್ತು ನಡೆಸಿದ್ದಾರೆ.

ಇದನ್ನೂ ಓದಿ:  BBMP ಜಾಗದಲ್ಲಿ ನಿರ್ಮಾಣವಾದ ಮಸೀದಿ ತೆರವಿಗೆ ನೋಟಿಸ್

ಆಕಾಂಕ್ಷಿ ಅಭ್ಯರ್ಥಿಗಳ ಪಟ್ಟಿ ಸಂಗ್ರಹ

ಬಿಜೆಪಿ ಮತ್ತು ಕಾಂಗ್ರೆಸ್ ಹೈಕಮಾಂಡ್, ಪಕ್ಷ ಸಂಘಟನೆಗಾಗಿ ದಶಕಗಳಿಂದ ಶ್ರಮಿಸುತ್ತಿರುವ ಕಾರ್ಯಕರ್ತರಿಗೆ ಜಿಪಂ, ತಾಪಂ ಟಿಕೆಟ್ ನೀಡಲು ಅರ್ಹರನ್ನು ಗುರತಿಸುತ್ತಿವೆ.

ಹಾಲಿ, ಮಾಜಿ ಶಾಸಕರು, ವಾರ್ಡ್, ತಾಲೂಕಾ, ಜಿಲ್ಲಾ ಮಟ್ಟದ ಮುಖಂಡರಿಂದ ಪ್ರತ್ಯೆಕವಾಗಿ ಆಕಾಂಕ್ಷಿಗಳ ಪಟ್ಟಿ ಪಡೆದುಕೊಳ್ಳುತ್ತಿದೆ. ಹಾಲಿ ಜಿಪಂ, ತಾಪಂ ಸದಸ್ಯರಿಗೆ ಎರಡನೇ ಬಾರಿ ಸ್ಪರ್ಧಿಸಲು ಅವಕಾಶ ನೀಡುವ ಮಾಹಿತಿ ಪಡೆಯುತ್ತಿದೆ. ಚುನಾವಣಾ ಆಯೋಗ ಜಿಪಂ, ತಾಪಂ ಕ್ಷೇತ್ರಗಳ ಮೀಸಲಾತಿ ಅಂತಿಮಗೊಳಿಸಿದ ಬಳಿಕ ಆಕಾಂಕ್ಷಿ ಪಟ್ಟಿಯನ್ನು ಅಂತಿಮಗೊಳಿಸಲು ಪ್ರಮುಖ ಪಕ್ಷಗಳು ಸಿದ್ಧತೆ ನಡೆಸಿವೆ.

ಕ್ಷೇತ್ರಗಳ ಮೇಲೆ ಬಲಿಷ್ಠರ ಕಣ್ಣು ?

ಜಿಲ್ಲೆಯಲ್ಲಿ ಜಿಪಂ ಕ್ಷೇತ್ರಗಳ ಸಂಖ್ಯೆ 90 ರಿಂದ 101 ಏರಿಕೆ ಕಂಡಿರುವ ಬೆನ್ನಲ್ಲೇ ಆಕಾಂಕ್ಷಿಗಳ ಸಂಖ್ಯೆ ಏರಿಕೆ ಕಂಡಿದೆ. ಕ್ಷೇತ್ರಗಳ ಮೇಲೆ ಆರ್ಥಿಕವಾಗಿ ಬಲಿಷ್ಠರು ಮತ್ತು ಶಾಸಕರ ಬೆಂಬಲಿತರು ಕಣ್ಣಿಟ್ಟಿದ್ದಾರೆ.

ಈ ನಡುವೆ ಹಾಲಿ ಜಿಪಂ ಸದಸ್ಯರು ಎರಡನೇ ಬಾರಿ ಸ್ಫರ್ದೆ ನಡೆಸಲು ಸಚಿವ, ಶಾಸಕರ ಮನವೊಲಿಸುವ ಕೆಲಸ ಆರಂಭಿಸಿದ್ದಾರೆ. ಒಟ್ಟಿನಲ್ಲಿ ಪಕ್ಷದ ನಾಯಕರು ಕೈಗೊಳ್ಳುವ ನಿರ್ಧಾರದ ಮೇಲೆ ಆಕಾಂಕ್ಷಿಗಳಿಗೆ ಟಿಕೆಟ್ ಖಾತ್ರಿ ಯಾಗಲಿದೆ ಎಂದು ಹೇಳಲಾಗುತ್ತಿದೆ.

Belagavi ನಗರದ ಜೀವನಾಡಿ ರಕ್ಕಸಕೊಪ್ಪ ಡ್ಯಾಂ ಭರ್ತಿ

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ (Maharashtra Western hills) ಧಾರಾಕಾರ ಮಳೆ (Rainfall) ಮುಂದುವರಿದಿದ್ದು, ಬೆಳಗಾವಿ ಜಿಲ್ಲೆಯ ನದಿಗಳು (Belagavi Rivers) ಮೈದುಂಬಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯ ಮಲಪ್ರಭಾ (Malaprabha), ಘಟಪ್ರಭಾ (Ghataprabha), ಮಾರ್ಕಂಡೇಯ (Markandeya) ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ‌.‌

ಇದನ್ನೂ ಓದಿ:  Hubballi: ಖಾದಿ ಬದಲು ಪಾಲಿಸ್ಟರ್ ಬಟ್ಟೆಯಲ್ಲಿ ಧ್ವಜ ತಯಾರಿ; ರಾಷ್ಟ್ರೀಯ ಧ್ವಜ ತಯಾರಿಕಾ ಘಟಕಕ್ಕೆ ಬೀಗ ಬೀಳೋ ಭೀತಿ

ಇದೇ ರೀತಿ ಇನ್ನೂ ಹದಿನೈದು ದಿನಗಳ ಕಾಲ ಮಳೆ ಮುಂದುವರಿದರೆ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಲಿದೆ.ಸದ್ಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಬೆಳಗಾವಿ ತಾಲೂಕಿನ ರಕ್ಕಸಕೊಪ್ಪ ಜಲಾಶಯ (Rakkasakoppa Dam) ಭರ್ತಿಯಾಗಿದೆ‌.
Published by:Mahmadrafik K
First published: