ಹಲವು ವರ್ಷಗಳಿಂದ ನಾಪತ್ತೆಯಾಗಿದ್ದ ಬ್ಲೇಡ್ ಬಾಬಾ ಅಸ್ಲಂ ಈಗ ಸಿಎಎ ಹೋರಾಟದಲ್ಲಿ ಪ್ರತ್ಯಕ್ಷ

ಪೌರತ್ವ ಕಾಯ್ದೆ ವಿರೋಧಿಸಿ ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ನಡೆದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ವಿವಾದಿತ ಅಸ್ಲಂ ಬಾಬಾ ಭಾಗಿಯಾಗಿರೋದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಸಿಎಎ ಪ್ರತಿಭಟನಾಕಾರರ ಜೊತೆ ಅಸ್ಲಂ ಬಾಬಾ

ಸಿಎಎ ಪ್ರತಿಭಟನಾಕಾರರ ಜೊತೆ ಅಸ್ಲಂ ಬಾಬಾ

 • Share this:
  ಬಾಗಲಕೋಟೆ(ಫೆ. 10): ಇಲ್ಲಿಯ ಜಿಲ್ಲಾಡಳಿತ ಭವನದ ಎದುರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಿಎಎ ಹಾಗೂ ಎನ್ ಆರ್ ಸಿ ವಿರೋಧಿಸಿ ಇಂದಿನಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ‌. ಹದಿನೈದು ವರ್ಷಗಳ ಹಿಂದೆ  ಬಾಗಲಕೋಟೆಯಲ್ಲಿ ಅಸ್ಲಂ ಬಾಬಾ  ಅಮಾಯಕ ಜನರಿಗೆ ಖಾಯಿಲೆ ವಾಸಿ ಮಾಡುತ್ತೇನೆಂದು ಬ್ಲೇಡ್​ನಿಂದ ಶಸ್ತ್ರ ಚಿಕಿತ್ಸೆ ಜೊತೆಗೆ ವಿಚಿತ್ರ ವರ್ತನೆಯಿಂದ ಖ್ಯಾತಿ ಪಡೆದಿದ್ದನು. ವಿಶೇಷ ಅಂದ್ರೆ ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹ ತನ್ನ ತಾಯಿಯ ಜೊತೆ ಆಗಮಿಸಿ ಸತತ ಮೂರು ಗಂಟೆಗಳ ಕಾಲ ಅಸ್ಲಂ ಬಾಬಾನ ಜೊತೆ ಚರ್ಚಿಸಿ ತೆರಳಿದ್ದರು.

  ಜನರಿಗೆ ತನ್ನ ಬ್ಲೇಡ್ ಚಿಕಿತ್ಸೆ ಮೂಲಕ ಬ್ಲೇಡ್ ಬಾಬಾ ಎಂದೇ ಹೆಸರಾಗಿದ್ದ ಈತನ ವಿರುದ್ಧ ವಂಚನೆ, ಮೋಸ ಪ್ರಕರಣಗಳೂ ದಾಖಲಾಗಿ ಜೈಲುಪಾಲಾಗಿದ್ದನು‌‌. ಇನ್ನು ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ ಎನ್ನಲಾಗುತ್ತಿದೆ.

  ಇದನ್ನೂ ಓದಿ: ಎಸ್‌ಸಿ/ಎಸ್‌ಟಿ ತಿದ್ದುಪಡಿ ಕಾಯ್ದೆ ಸಂಬಂಧ ಸುಪ್ರೀಂಕೋರ್ಟ್ ತೀರ್ಪಿಗೆ ಸಿದ್ದರಾಮಯ್ಯ ಅಸಮಾಧಾನ

  ಆದ್ರೆ ಸಿಎಎ ಹಾಗೂ ಎನ್​ಆರ್​ಸಿ ವಿರೋಧಿಸಿ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಕ್ರಿಮಿನಲ್ ಪ್ರಕರಣ ಹಿನ್ನೆಲೆಯುಳ್ಳ ಅಸ್ಲಂ ಬಾಬಾ ಭಾಗಿಯಾಗಿರೋದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದ್ರೆ ಅಸ್ಲಂ ಬಾಬಾ ದೇಶದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಹಿಂದು ಮುಸ್ಲಿಮರು ಒಂದಾಗಬೇಕು. ಸಿಎಎ ಹಾಗೂ ಎನ್​ಆರ್​ಸಿಯಿಂದ ಮುಸ್ಲಿಮರಿಗೆ ತೊಂದರೆಯಾಗುತ್ತೆ ಎಂದು ಹೇಳುತ್ತಿದ್ದಾರೆ.

  ಹಲವು ವರ್ಷಗಳಿಂದ ಬಾಗಲಕೋಟೆಯಿಂದ ನಾಪತ್ತೆಯಾಗಿದ್ದ ಅಸ್ಲಂ ಬಾಬಾ ಸಿಎಎ ವಿರೋಧಿಸಿ ನಡೆದ ಸತ್ಯಾಗ್ರಹದಲ್ಲಿ ಪ್ರತ್ಯಕ್ಷವಾಗಿರೋದು ಅಚ್ಚರಿಗೆ ಕಾರಣವಾಗಿದೆ.

  (ವರದಿ: ರಾಚಪ್ಪ ಬನ್ನಿದಿನ್ನಿ)

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: