ಚಿತ್ರದುರ್ಗ: ಡಾ. ಪುನೀತ್ ರಾಜ್ಕುಮಾರ್ ಅವರಿಗೆ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ (Basavashree Award) ಪ್ರದಾನ ಮಾಡಲಾಗಿದೆ. ಪುನೀತ್ ರಾಜ್ಕುಮಾರ್ (Dr. Puneeth Rajkumar) ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಅವರು ಡಾ.ಶಿವಮೂರ್ತಿ ಮುರುಘಾ ಶರಣರಿಂದ ಮರಣೋತ್ತರ ಬಸವಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮುರುಘಾ ಶ್ರೀಗಳ ಕೋರಿಕೆಯಂತೆ ಪ್ರಶಸ್ತಿ ಸ್ವೀಕರಿಸಿದ ನಂತರ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಾತನಾಡಿದ ಅಶ್ವಿನಿ ಪುನೀತ್ ರಾಜ್ಕುಮಾರ್ ಧನ್ಯವಾದ ಅರ್ಪಿಸಿದ್ದಾರೆ. ಈ ವೇಳೆ ಅವರು ಭಾವುಕರಾಗಿದ್ದಾರೆ. ಮುರುಘಾಮಠ ಕೊಡಮಾಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಚಿತ್ರದುರ್ಗದ ಮುರುಘಾಮಠದ ಅನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಜೊತೆ ಆಗಮಿಸಿರುವ ರಾಘವೇಂದ್ರ ರಾಜ್ಕುಮಾರ್ ಅವರ ಪತ್ನಿ ಮಂಗಳ, ಮಾವ ಚಿನ್ನೇಗೌಡ ಮುರುಘಾಮಠಕ್ಕೆ ಆಗಮಿಸಿದ್ದರು. ಜೊತೆಗೆ ಪುನೀತ್ ರಾಜ್ಕುಮಾರ್ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಸಹ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದುವರೆಗೆ ಬಸವಶ್ರೀ ಪ್ರಶಸ್ತಿ ಪುರಸ್ಕೃತರಾದವರು ಇವರು ಪಿಟಿ ಉಷಾ (2009), ಮಲಾಲಾ ಯೂಸುಫ್ಜಾಯ್ (2014), ಪಿ ಸಾಯಿನಾಥ್ (2016), ಡಾ ಕೆ ಕಸ್ತೂರಿರಂಗನ್ (2020) ಅವರು ಇತ್ತೀಚಿನ ದಿನಗಳಲ್ಲಿ ಮುರುಘಾ ಮಠ ಘೋಷಿಸುವ ಬಸವಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಮಾರಂಭದಲ್ಲಿ ಯಾರೆಲ್ಲ ಇದ್ದರು? ಐದು ಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕ ನೀಡಿ ಗೌರವವನ್ನು ಪ್ರಶಸ್ತಿಯ ರೂಪದಲ್ಲಿ ಪ್ರದಾನಿಸಲಾಗಿದೆ. ಶಿವಶರಣ ಮಾದಾರ ಚನ್ನಯ್ಯ ಮಠದ ಬಸವಮೂರ್ತಿ ಮಾದಾರ ಚನ್ನಯ್ಯಶ್ರೀ, ಕೃಷಿ ಸಚಿವ ಬಿ.ಸಿ.ಪಾಟೀಲ್, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಎಂಎಲ್ ಸಿ ಕೆ.ಎಸ್.ನವೀನ್ ಸೇರಿ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬಸವ ಜಯಂತಿಯಂದೇ ಕಾರ್ಯಕ್ರಮ ಹಿಂದೂ ಪಂಚಾಂಗದ ಪ್ರಕಾರ ಶುಕ್ಲ ಪಕ್ಷದಲ್ಲಿ ವೈಶಾಖ ಮಾಸದ 3 ನೇ ದಿನದಂದು , ಬಸವಣ್ಣ ಜನಿಸಿದ್ದಾರೆ. ಬಸವಣ್ಣನವರು ಕಾಯಕವನ್ನು ಪ್ರತಿಪಾದಿಸಿದ ಮಹಾನ್ ಸಾಧಕರು. ಕಾಯಕವೇ ಕೈಲಾಸ ಎಂಬ ಅವರ ಸಂದೇಶ ಎಂದೆಂದಿಗೂ ನೆನಪಲ್ಲಿ ಇಡುವಂತದ್ದು.
ಆಂಧ್ರ ಪ್ರದೇಶದಲ್ಲೂ ಬಸವ ಜಯಂತಿ ಆಚರಣೆ; ಅಧಿಕೃತ ಆದೇಶ ಅಲ್ಲದೇ ಈ ವರ್ಷದ ಬಸವ ಜಯಂತಿ ಆಚರಣೆಯ ವಿಶೇಷವೆಂದರೆ ಸರ್ಕಾರದ ವತಿಯಿಂದ ಬಸವ ಜಯಂತಿ ಆಚರಿಸಲು ಆಂದ್ರ ಪ್ರದೇಶ ಸರ್ಕಾರದ ಆದೇಶ ಪ್ರಕಟಿಸಿದೆ. ಪ್ರತಿ ವರ್ಷ ಮೇ 3 ರಂದು ರಾಜ್ಯಾದ್ಯಂತ ಬಸವ ಜಯಂತಿ ಆಚರಣೆ ಮಾಡುವಂತೆ ಆಂಧ್ರ ಪ್ರದೇಶ ಸರ್ಕಾರದ ಆದೇಶ ಪ್ರಕಟಿಸಿದೆ.
ಸೋನಿ ಲೈವ್ನಲ್ಲಿ ಜೇಮ್ಸ್ ಸಿನಿಮಾ! ಜೇಮ್ಸ್ ಕನ್ನಡದ ದಿವಂಗತ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ. ಅಪ್ಪು ಹುಟ್ಟಿದ ದಿನವಾದ ಮಾರ್ಚ್ 17ರಂದು ಅದ್ಧೂರಿಯಾಗಿ ತೆರೆ ಕಂಡಿತ್ತು. ಕನ್ನಡ ಪ್ರೇಕ್ಷಕರು ತಮ್ಮ ನೆಚ್ಚಿನ ಸೂಪರ್ಸ್ಟಾರ್ಗೆ ಗೌರವ ಸಲ್ಲಿಸುವ ಮೂಲಕ ಚಿತ್ರವನ್ನು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಿಸಿದ್ದಾರೆ. ಚಿತ್ರದಲ್ಲಿ ಪ್ರಿಯಾ ಆನಂದ್, ಪುನೀತ್ ರಾಜ್ ಕುಮಾರ್ಗೆ ನಾಯಕಿಯಾಗಿ ನಟಿಸಿದ್ದಾರೆ. ಸೇನೆ, ಸ್ನೇಹಿತರನ್ನು ಒಳಗೊಂಡ ಫ್ಯಾಮಿಲಿ ಕುಳಿತು ನೋಡಬಹುದಾದ ಆ್ಯಕ್ಷನ್ ಥ್ರಿಲ್ಲರ್ ಜೇಮ್ಸ್ ಸಿನಿಮಾ ಏಪ್ರಿಲ್ 15 ರಿಂದ ಸೋನಿ ಲೈವ್ನಲ್ಲಿ ಸ್ಟ್ರೀಮ್ ಆಗುತ್ತಿದೆ. ಅಭಿಮಾನಿಗಳು ಜೇಮ್ಸ್ ಸಿನಿಮಾವನ್ನು ಒಟಿಟಿಯಲ್ಲೂ ನೋಡಿ ತಮ್ಮ ನೆಚ್ಚಿನ ನಟನನ್ನು ನೆನೆಯುತ್ತಿದ್ದಾರೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ