Bengaluru: ಸಾಫ್ಟ್‌ವೇರ್ ವೃತ್ತಿಗೆ ಗುಡ್ Bye, ಅಥ್ಲೀಟ್​ಗೆ ಜೈ; ದೇಶವನ್ನು ಪ್ರತಿನಿಧಿಸಲು ಸಜ್ಜಾದ ಕನ್ನಡತಿ

24 ತಾಸು ಓಡುವ ದೀರ್ಘ ಮ್ಯಾರಥಾನ್ ಇದಾಗಿದ್ದು, ಈ‌ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲು ಅಶ್ವಿನಿ ಎದುರು ನೋಡುತ್ತಿದ್ದಾರೆ. ಇದೇ ಬರುವ ಜುಲೈ 2ಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ ಏಷ್ಯಾ ಅಲ್ಟ್ರಾ ಮ್ಯಾರಾಥನ್ ಚಾಂಪಿಯನ್​ ಶಿಪ್ ನಲ್ಲಿ ಭಾರತದ ಪರವಾಗಿ ಕಣಕ್ಕಿಳಿಯಲಿದ್ದಾರೆ.

ಅಶ್ವಿನಿ

ಅಶ್ವಿನಿ

  • Share this:
ಬೆಂಗಳೂರು: ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ (Software Engineer). ಕೈ ತುಂಬಾ ಸಂಬಳ. ಕೂತಲ್ಲೇ ಸುಂದರವಾದ ಬದುಕು ಕಟ್ಟಿ ಜೀವನ ಸಾಗಿಸಬಹುದಿತ್ತು. ಆದರೆ ಅಲ್ಲಿಗೆ ಸುಮ್ಮನಾಗದ ಅವರು ಗುರಿ ಬಲುದೂರ ದಾರಿ ನಿಗೂಢ ಎಂಬಂತೆ ದೊಡ್ದದೊಂದು ಕನಸು (Dream) ಕಂಡರು.  ಈಗ ಆ ಕನಸು ಅವರ ಕೈಗೆಟಕುವ ದೂರದಲ್ಲಿದೆ. ಹೌದು, ದೇಶವನ್ನು ಪ್ರತಿನಿಧಿಸಬೇಕು ಎನ್ನುವುದು ನಮ್ಮಲ್ಲಿರುವ ಎಲ್ಲರ ಆಸೆ. ಅದ್ಯಾವ ಕ್ಷೇತ್ರವೇ ಆಗಿರಲಿ ಎದೆಯಲ್ಲಿ ತ್ರಿವರ್ಣ ಧ್ವಜ ಇಟ್ಟು ದೇಶದ ಹೆಮ್ಮೆ (Proud Of The Country) ಎನಿಸಿಕೊಳ್ಳಬೇಕು ಎಂಬ ಛಲ ಅದು.‌ ಆದರೆ ಆ ಕನಸು ಸಕಾರ ಮಾಡುವುದು ಎಲ್ಲರಿಗೂ ಸಾಧ್ಯವಾಗಿಲ್ಲ.‌ ಆದರೆ ಇವರು ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ಈಗ ಭಾರತದ ಪ್ರತನಿಧಿಯಾಗಿ ಅಂತರಾಷ್ಟ್ರೀಯ ಅಂಗಳದಲ್ಲಿ ಮಿಂಚಲು ಸಜ್ಜಾಗಿದ್ದಾರೆ. 

ದೇಶದ ಕೀರ್ತಿ ಪತಾಕೆ ಹಾರಿಸೋಕೆ ಸಜ್ಜಾಗ್ತಿದ್ದಾರೆ ಕನ್ನಡತಿ ಕ್ರೀಡಾಪಟು!

ಇವರು ಅಶ್ವಿನಿ ಗಣಪತಿ ಭಟ್ (Ashwini Ganapathi Bhat)  ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಈಗ ಅಥ್ಲಿಟ್. ಇದೇ ಬರುವ ಏಷ್ಯಾ ಅಲ್ಟ್ರಾ ಮ್ಯಾರಾಥನ್ ಚಾಂಪಿಯನ್​ಶಿಪ್​ ನಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ.  24 ತಾಸು ಓಡುವ ದೀರ್ಘ ಮ್ಯಾರಥಾನ್ ಇದಾಗಿದ್ದು, ಈ‌ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲು ಅಶ್ವಿನಿ ಎದುರು ನೋಡುತ್ತಿದ್ದಾರೆ. ಇದೇ ಬರುವ ಜುಲೈ 2ಕ್ಕೆ ಕಂಠೀರವ ಸ್ಟೇಡಿಯಂ ನಲ್ಲಿ ನಡೆಯಲಿರುವ ಏಷ್ಯಾ ಅಲ್ಟ್ರಾ ಮ್ಯಾರಾಥನ್ ಚಾಂಪಿಯನ್​ ಶಿಪ್ ನಲ್ಲಿ ಭಾರತದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಈ ಮೊದಲು ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಕೈ ತುಂಬಾ ಸಂಬಳಕ್ಕೆ ಉದ್ಯೋಗದಕ್ಕಿದ್ದ ಅಶ್ವಿನಿ, ಈ ನಡುವೆ ಹವ್ಯಾಸಿ ಓಟಕ್ಕಿಳಿಯುತ್ತಾರೆ. ಅದರಿಗ ಅದೇ ವೃತ್ತಿಯಾಗಿ ಬದಲಾಗಿದೆ.

ಸಾಗರ ಮೂಲದ ಅಶ್ವಿನಿ

ಮೂಲತಃ ಸಾಗರದವರಾಗಿರುವ ಅಶ್ವಿನಿ, 9 ವರ್ಷಗಳ ಟೆಕ್ಕಿ ವೃತ್ತಿಗೆ ಗುಡ್ ಬೈ ಹೇಳಿ ಹವ್ಯಾಸವಾಗಿ ಆರಂಭಿಸಿದ ಓಟ ದೇಶಕ್ಕಾಗಿ ಓಡುವಂತೆ ಮಾಡಿದ ಕಥೆಯೇ ರೋಚಕ. 2016ರಲ್ಲಿ ಸಾಫ್ಟ್‌ವೇರ್ ಬದುಕಿಗೆ ಗುಡ್ ಬೈ ಹೇಳಿ ಅಲ್ಟ್ರಾ ಮ್ಯಾರಾಥನ್ ಎಂಬ ಅಥ್ಲಿಟ್ ಮಾದರಿಗೆ ಪಾದಾರ್ಪಣೆ ಮಾಡುತ್ತಾರೆ. ಸಾಮಾನ್ಯವಾಗಿ ಯಾರೂ ಆಯ್ದು ಕೊಳ್ಳದ ಅಥ್ಲಿಟ್ ಮಾದರಿ ಇದಾಗಿದ್ದು, ಇದರಲ್ಲಿ ದೇಶವನ್ನು ಪ್ರತಿನಿಧಿಸುವ ಸಾಧ್ಯತೆ ಕಂಡುಕೊಳ್ಳುತ್ತಾರೆ.

ಇದನ್ನೂ ಓದಿ: Text Book Row: ಕೊನೆಗೂ ಜನಾಕ್ರೋಶಕ್ಕೆ ಮಣಿದ ಸರ್ಕಾರ, 8 ಅಂಶಗಳ ಮರು ತಿದ್ದುಪಡಿಗೆ ಆದೇಶ

2020ರಲ್ಲಿ ನಡೆದ ದೇಶೀಯ ಮಟ್ಟದ ಅಲ್ಟ್ರಾ ಮ್ಯಾರಥಾನ್ ನಲ್ಲಿ 112 km ಕ್ರಮಿಸಿದ ಅಶ್ವಿನಿ ಭಟ್ ದಾಖಲೆ ಬರೆದಿದ್ದರು. ಅದಾಗಿ ಮುಂದಿನ ವರ್ಷವೇ 2021ರಲ್ಲಿ ಈ ಈವೆಂಟ್ ಗೆ ನಡೆದ ಅರ್ಹತಾ ಓಟದಲ್ಲಿ 175 km ಕ್ರಮಿಸಿ ದೇಶದ ತ್ರಿವರ್ಣ ಧ್ವಜವನ್ನು ಎದೆಯ ಮೇಲೆ ಹೊರುವ ಅರ್ಹತೆ ಪಡೆದುಕೊಳ್ಳುತ್ತಾರೆ.

ಅಶ್ವಿನಿಗೆ ಕುಟುಂಬದವರ ಸಾಥ್​

ತನ್ನ ಈ ಅಸಾಮಾನ್ಯ ಸಾಧನೆಗೆ ಮನಸ್ಥೈರ್ಯವೇ ಕಾರಣ ಎಂದು ಮುಖದಲ್ಲಿ ನಗು ಬೀರುತ್ತಾ ಅಲ್ಟ್ರಾ ಅಥ್ಲಿಟ್ ಅಶ್ವಿನಿ ಹೇಳುತ್ತಾರೆ.‌ ಕೌಟುಂಬಿಕ ಬದುಕು ಆರಂಭಿಸಿ 10 ವರ್ಷಗಳೇ ಕಳೆದಿದೆ. ನನ್ನೊಳಗಿನ ಈ ಆಸೆ ಪತಿ ಸಂದೀಪ್  ಸತ್ಯನಾರಾಯಣರಿಗೆ ಹೇಳಿದಾಗ ನನಗೆ ಮಾತ್ರವಲ್ಲದೆ ನನ್ನ ಕನಸಿಗೂ ಬೆನ್ನೆಲುಬಾಗಿ ನಿಂತರು. ಅವರಿಲ್ಲದೆ ಹೋಗಿದ್ದರೆ ನನ್ನ ಈ ಕನಸು  ನನಸಾಗುತ್ತಿರಲಿಲ್ಲವೇನೋ ಎಂದು ಹೇಳಿದರು.

ದೇಶದಿಂದ ಒಟ್ಟು 12 ಕ್ರೀಡಾಪಟುಗಳು ಭಾಗಿ

IAU Asia oscenia 24 hr Championshipನಲ್ಲಿ ದೇಶವನ್ನು ಒಟ್ಟು 12 ಕ್ರೀಡಾಪಟುಗಳು ಪ್ರತಿನಿಧಿಸಲಿದ್ದಾರೆ. ಈ ಪೈಕಿ 6 ಪುರುಷರು, 6 ಮಹಿಳೆಯರು ಇರಲಿದ್ದಾರೆ. ಇದರಲ್ಲಿ ಅಶ್ವಿನಿ ಒಬ್ಬರೇ ಕನ್ನಡತಿ. ದೇಶದಲ್ಲಿ ಹೆಚ್ಚು ಕ್ರೀಡಾಪಟುಗಳಿಲ್ಲದ ಅಲ್ಟ್ರಾ ಮ್ಯಾರಾಥನ್ ಗೆ ಅಸಾಮಾನ್ಯ ಕ್ಷೇತ್ರ ಇದು. ದಿನದ 24 ಗಂಟೆಗಳ ಕಾಲವೂ ಓಡುವ ಸ್ಪರ್ಧೆ ಇದಾಗಿದ್ದು ಎಲ್ಲರಿಂದಲೂ ಸಾಧ್ಯವಿಲ್ಲ ಎಂಬುವುದು ನಿಚ್ಚಳ.

ಹಾಗಾದರೆ ಅದೇ ಕ್ಷೇತ್ರ ಇರಲಿ, ನಾನು ಓಡುತ್ತೇನೆ ಎಂದು ಅಲ್ಟ್ರಾ ಮ್ಯಾರಾಥನ್ ಗೆ ಇಳಿದ ಅಶ್ವಿನಿ ಈಗ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲು ಸಜ್ಜಾಗಿದ್ದಾರೆ. ಈ ಬಗ್ಗೆ ಅಶ್ವಿನಿ ಪತಿ ಸಂದೀಪ್ ಸತ್ಯನಾರಾಯಣ ಅವರು ಹೇಳಿದ್ದು ಹೀಗೆ, ಅವಳು ವಿಚಾರ ಹೇಳಿದಲು ನಾನು ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ಕೊಟ್ಟೆ ಎಂದು ತನ್ನೆಲ್ಲಾ ಬೆಂಬಲವನ್ನು ಒಂದೇ ಮಾತಿನಲ್ಲಿ ನಿಲ್ಲಿಸಿದರು.

ಇದನ್ನೂ ಓದಿ: Belagavi: ನಮ್ಮೂರಿನ ಸ್ಮಶಾನಕ್ಕಿಲ್ಲ ದಾರಿ; ಡಿಸಿ ಕಚೇರಿಯಲ್ಲೇ ಮೃತದೇಹ ಅಂತ್ಯಕ್ರಿಯೆಗೆ ಯತ್ನ

ಸಾಫ್ಟ್‌ವೇರ್ ಟೆಕ್ಕಿಯಾದ ಅಶ್ವಿನಿ ಗಣಪತಿ ಭಟ್ ಈಗ ಫುಲ್ ಟೈಮ್ ಅಥ್ಲಿಟ್ ಆಗಿ ರೂಪುಗೊಂಡಿದ್ದಾರೆ. ಇದೇ ಬರುವ ಜುಲೈ 2ರಂದು ನಡೆಯುವ ಅಲ್ಟ್ರಾ ಮ್ಯಾರಾಥನ್ ಚಾಂಪಿಯನ್ಶಿಪ್ ನಲ್ಲಿ ಅವರು ದೇಶದ ಕೀರ್ತಿ ಪತಾಕೆ ಹಾರಿಸಲಿ ಎಂಬುವುದೇ ನಮ್ಮ‌ ಆಶಯ.
Published by:Pavana HS
First published: