ಡಿಜೆ ಹಳ್ಳಿ ಗಲಭೆ ಪೊಲೀಸ್ ಠಾಣೆ ಧ್ವಂಸಗೊಳಿಸಿ ಸಿಬ್ಬಂದಿ ಮುಗಿಸಲು ನಡೆದ ವ್ಯವಸ್ಥಿತ ಕೃತ್ಯ; ಅಶ್ವತ್ಥ್‌ ನಾರಾಯಣ್

ಈ ನಡುವೆ ಡಿಜಿ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್‌ ಠಾಣೆಗೂ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳನ್ನು ಹಾನಿ ಮಾಡಿದ್ದಾರೆ. ಇದಿರಿಂದಾಗಿ ಪೊಲೀಸ್‌ ಅಧಿಕಾರಿಗಳು ಗೋಲಿಬಾರ್‌ ನಡೆಸಿದ್ದು ಮೂವರು ಮೃತಪಟ್ಟಿದ್ದಾರೆ.

news18-kannada
Updated:August 12, 2020, 6:36 PM IST
ಡಿಜೆ ಹಳ್ಳಿ ಗಲಭೆ ಪೊಲೀಸ್ ಠಾಣೆ ಧ್ವಂಸಗೊಳಿಸಿ ಸಿಬ್ಬಂದಿ ಮುಗಿಸಲು ನಡೆದ ವ್ಯವಸ್ಥಿತ ಕೃತ್ಯ; ಅಶ್ವತ್ಥ್‌ ನಾರಾಯಣ್
ಅಶ್ವತ್ಥ್‌ ನಾರಾಯಣ್.
  • Share this:
ಬೆಂಗಳೂರು (ಆಗಸ್ಟ್‌ 12); ಪೊಲೀಸ್‌ ಠಾಣೆಯನ್ನು ಧ್ವಂಸಗೊಳಿಸಿ, ಸಿಬ್ಬಂದಿಗಳನ್ನು ಮುಗಿಸಲು ಡಿಜೆ ಹಳ್ಳಿ ಗಲಭೆ ಮೂಲಕ ವ್ಯವಸ್ಥಿತ ಸಂಚನ್ನು ರೂಪಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ| ಅಶ್ವತ್ಥ್‌ ನಾರಾಯಣ್ ಆರೋಪಿಸಿದ್ದಾರೆ.

ಶಾಸಕ ಅಖಂಡ ಶ್ರೀನಿವಾಸ ಅವರ ಸಂಬಂಧಿ ನವೀನ್ ಎಂಬಾತ ಇಸ್ಲಾಂ ವಿರೋಧಿ ಪೋಸ್ಟ್‌ ಒಂದನ್ನು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿಕೊಂಡಿದ್ದರು. ಇದರಿಂದ ಉದ್ರೇಕಗೊಂಡಿದ್ದ ಗುಂಪೊಂದು ಕಾನೂನು ಕೈಗೆ ತೆಗೆದುಕೊಂಡು ಅಖಂಡ ಶ್ರೀನಿವಾಸ್ ಅವರ ಮನೆ ಮತ್ತು ಕಚೇರಿಗೆ ಕಲ್ಲು ತೂರಾಟ ನಡೆಸಿದ್ದರು. ಅವರ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದರು. ನಿನ್ನೆ ರಾತ್ರಿ ಅಖಂಡ ಶ್ರೀನಿವಾಸ್ ಮನೆ ಎದುರು ಯುದ್ಧದ ವಾತಾವರಣವೇ ನಿರ್ಮಾಣವಾಗಿತ್ತು.

ಈ ನಡುವೆ ಡಿಜಿ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್‌ ಠಾಣೆಗೂ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳನ್ನು ಹಾನಿ ಮಾಡಿದ್ದಾರೆ. ಇದಿರಿಂದಾಗಿ ಪೊಲೀಸ್‌ ಅಧಿಕಾರಿಗಳು ಗೋಲಿಬಾರ್‌ ನಡೆಸಿದ್ದು ಮೂವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ : DJ Halli Violence: ಡಿಜೆ ಹಳ್ಳಿ ತನಿಖೆ ಸಿಬಿಐಗೆ ವಹಿಸಲ್ಲ, ನಷ್ಟವನ್ನು ಗಲಭೆಕೋರರಿಂದಲೇ ಭರಿಸಲಾಗುತ್ತದೆ; ಬೊಮ್ಮಾಯಿ ಸ್ಪಷ್ಟನೆ

ಈ ಕುರಿತು ಮಾತನಾಡಿರುವ ಉಪ ಮುಖ್ಯಮಂತ್ರಿ ಅಶ್ವತ್ಥ್‌ ನಾರಾಯಣ್, "ಪೊಲೀಸ್ ಠಾಣೆ ಧ್ವಂಸಗೊಳಿಸಿ ಸಿಬ್ಬಂದಿ ಮುಗಿಸಲು ನಡೆದ ವ್ಯವಸ್ಥಿತ ಕೃತ್ಯ ನಡೆಸಲಾಗಿದ್ದು, ಇದರ ಭಾಗವಾಗಿ ಡಿಜಿ ಹಳ್ಳಿ ಗಲಭೆಯನ್ನು ಆರಂಭಿಸಲಾಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು" ಎಂದು ತಿಳಿಸಿದ್ದಾರೆ.

"ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಲಿಕ್ಕೆ ಬಿಜೆಪಿ ಸರ್ಕಾರ ಅವಕಾಶ ನೀಡುವುದಿಲ್ಲ. ಇಂತಹ ಗಲಭೆಗಳು ಖಂಡನೀಯ. ಬೆಂಗಳೂರಿನಲ್ಲಿ ಇನ್ಮುಂದೆ ಇಂತಹ ಕೃತ್ಯಗಳು ಅಗದಂತೆ ಕ್ರಮ ಜರುಗಿಸುತ್ತೇವೆ. ಯಾರು ಇಂತಹ ಕಾರ್ಯಗಳಿಗೆ ಕೈ ಹಾಕಬಾರದು. ಒಂದು ವೇಳೆ ಗಲಭೆಗೆ ಮುಂದಾದರೆ ಸೂಕ್ತ ರೀತಿ ಕ್ರಮ ಜರುಗಿಸಲಾಗುತ್ತದೆ. ಬಂಧಿತ ವ್ಯಕ್ತಿಗಳು ಯಾರು ಎಲ್ಲಿಯವರು ಅನ್ನೋದು ಪರಿಶೀಲನೆಯಾಗುತ್ತಿದ್ದು, ಎಲ್ಲರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುತ್ತದೆ" ಎಂದು ಅಶ್ವತ್ಥ್‌ ನಾರಾಯಣ್ ಆಶ್ವಾಸನೆ ನೀಡಿದ್ದಾರೆ.
Published by: MAshok Kumar
First published: August 12, 2020, 6:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading