ಅಶೋಕ ನಗರ ಠಾಣೆ‌ ಸಿಪಿಐ ಬಸವರಾಜ ತೇಲಿ ಎಸಿಬಿ ಬಲೆಗೆ

news18
Updated:March 19, 2018, 8:48 PM IST
ಅಶೋಕ ನಗರ ಠಾಣೆ‌ ಸಿಪಿಐ ಬಸವರಾಜ ತೇಲಿ ಎಸಿಬಿ ಬಲೆಗೆ
news18
Updated: March 19, 2018, 8:48 PM IST
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ.

ಕಲಬುರ್ಗಿ ( ಮಾ.19) : ಕಲಬುರ್ಗಿ ನಗರದ ಅಶೋಕ ನಗರ ಠಾಣೆ‌ CPI ಎಸಿಬಿ ಬಲೆಗೆ ಬಿದ್ದಿದ್ದಾರೆ. ಅಶೋಕನಗರ ಠಾಣೆ ಸರ್ಕಲ್ ಇನ್ಸಪೇಕ್ಟರ್ ಬಸವರಾಜ ತೇಲಿ ಎಸಿಬಿ ಬಲೆಗೆ ಬಿದ್ದ ಪೊಲೀಸ್ ಅಧಿಕಾರಿ. ಸೀಜ್ ಮಾಡಿದ್ದ ಕಾರು ಬಿಡುಗಡೆಗೆ ಲಂಚ ಪಡೆಯುತ್ತಿದ್ದ ವೇಳೆ ಬಲೆಗೆ ಬಿದ್ದರುವ ಅಧಿಕಾರಿ.

ಮಲ್ಲಿಕಾರ್ಜುನ್ ಎಂಬುವರ ಕಾರ್ ಸಿಜ್ ಮಾಡಲಾಗಿತ್ತು. ಕಾರು ಬಿಡುಗಡೆಗಾಗಿ ಮೂರು ಲಕ್ಷ ರೂಪಾಯಿ ಹಣ ನೀಡುವಂತೆ ಸಿಪಿಐ ತೇಲಿ ಹಣದ ಬೇಡಿಕೆಯಿಟ್ಟಿದ್ದರು. ಹಣಕ್ಕಾಗಿ ಕಿರುಕುಳ‌ ನೀಡುವುದರ ಜೊತೆಗೆ ಬ್ಲಾಕ್‌ಮೇಲ್ ಸಹ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ.

ಸಿಪಿಐ ಕಿರುಕುಳಕ್ಕೆ ಬೇಸತ್ತ ಮಲ್ಲಿಕಾರ್ಜುನ್ ಹಣ ನೀಡಲು ಒಪ್ಪಿಕೊಂಡಿದ್ದಾನೆ. ಮುಂಗಡವಾಗಿ 1 ಲಕ್ಷ ರೂಪಾಯಿ ಕೊಡುವುದಾಗಿ ತಿಳಿಸಿದ್ದಾನೆ. ಅದರಂತೆವ ಪೊಲೀಸ್ ಠಾಣೆ ಆವರಣದಲ್ಲಿ ಹಣ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಎಸಿಬಿ ಡಿವೈಎಸ್ಪಿ ಕಲ್ಲದೇವರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

ಸಿಪಿಐ ಬಸವರಾಜ್ ತೇಲಿ ಅವರನ್ನು ವಶಕ್ಕೆ ಪಡೆದು ಎಸಿಬಿ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ
First published:March 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ