ಬೀದರ್: ಇಂದು ಬೆಳಗಿನ ಜಾವ ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ (Congress Candidate Ashok Kheny) ಸಹೋದರ ಸಂಜಯ್ ಖೇಣಿ (Sanjay Kheny) ಅವರ ಕಾರ್ ಅಪಘಾತಕ್ಕೊಳಗಾಗಿದೆ. ಬೀದರ್ ಜಿಲ್ಲೆಯ ಹಳ್ಳಿಖೇಡ್ (Hallikhed, Bidar) ಬಳಿ ಕಾರ್ ಪಲ್ಟಿಯಾಗಿದ್ದು, ಗಾಯಾಳು ಸಂಜಯ್ ಖೇಣಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂಜಯ್ ಖೇಣಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಜಯ್ ಖೇಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ನಾಗರಭಾವಿಯ ರೇಣುಕಾ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಮಹಿಳಾ ಮತದಾರರು ವೋಟರ್ ಲಿಸ್ಟ್ನಲ್ಲಿ ನಮ್ಮ ಹೆಸರಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಮತದಾರರ ಪಟ್ಟಿಯಲ್ಲಿ ನನ್ನ ಪತಿಯ ಹೆಸರು ಇದೆ, ಆದರೆ ನನ್ನ ಹೆಸರು ಇಲ್ಲ ಎಂದು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಮಹಿಳೆ ಆಕ್ರೋಶ ವ್ಯಕ್ತಪಡಿಸಿದರು.
ವೋಟ್ ಹಾಕಿದ ಮದುಮಗ!
ತಾಳಿ ಕಟ್ಟುವ ಮುನ್ನ ಮದುಮಗ ಮತ ಚಲಾಯಿಸಿ ಜವಾಬ್ದಾರಿ ಮೆರೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದ ಶಿವಪ್ಪನಗರ ಬಡಾವಣೆಯ ನಾರಾಯಣ್ ಅವರ ಪುತ್ರ ವಿನೋದ್ ಕುಮಾರ್ ಅವರು ಮತ ಚಲಾಯಿಸಿದ ಮದುಮಗ.
ಮದುವೆಗೆ ಹೊರಡುವ ಮುನ್ನ ಮತ ಚಲಾಯಿಸಿ ಮದುಮಗ ಅವರ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ವಿನೋದ್ ಅವರ ವಿವಾಹ ರಿಪ್ಪನ್ ಪೇಟೆಯಲ್ಲಿ ಪಲ್ಲವಿ ಎಂಬವರೊಂದಿಗೆ ಇಂದು ನಿಶ್ಚಯವಾಗಿತ್ತು.
ಚುನಾವಣೆಯ ದಿನಾಂಕ ನಿಗದಿಗೂ ಮುನ್ನವೇ ವಿವಾಹದ ದಿನಾಂಕ ನಿಶ್ಚಯವಾಗಿತ್ತು. ಹೀಗಾಗಿ ಕುಟುಂಬದ ಎಲ್ಲಾ ಸದಸ್ಯರು ಬೆಳಗ್ಗೆ ಮತ ಚಲಾವಣೆ ಮಾಡಿ ಮದುವೆಗೆ ಹೊರಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ