ನಡು ರಸ್ತೆಯಲ್ಲಿ ಮಹಿಳೆ ಮೇಲೆ ಪ್ರತಾಪ ತೋರಿದ ಮಾಜಿ ಶಾಸಕ ಅಶೋಕ್​ ಖೇಣಿ

news18
Updated:September 7, 2018, 6:16 PM IST
ನಡು ರಸ್ತೆಯಲ್ಲಿ ಮಹಿಳೆ ಮೇಲೆ ಪ್ರತಾಪ ತೋರಿದ ಮಾಜಿ ಶಾಸಕ ಅಶೋಕ್​ ಖೇಣಿ
news18
Updated: September 7, 2018, 6:16 PM IST
ಶ್ರೀನಿವಾಸ್​ ಹಳಕಟ್ಟಿ, ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.07): ಕಾರು ಹಿಂತೆಗೆಯಲು ಮಹಿಳೆ ಪರದಾಟ ನಡೆಸುತ್ತಿದ್ದರೆ. ಇದರಿಂದ ಟ್ರಾಫಿಕ್​ ಜಾಮ್​ ಉಂಟಾಯಿತು ಎಂದು ಮಾಜಿ ಶಾಸಕ ಅಶೋಕ್​ ಖೇಣಿ ಮಹಿಳೆಯನ್ನೇ ನಡುರಸ್ತೆಯಲ್ಲಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಕ್ರೆಸೆಂಟ್ ರಸ್ತೆಯಲ್ಲಿ ವಾಹನಗಳ ನಿಲುಗಡೆಯಿಂದ ಟ್ರಾಫಿಕ್ ಜಾಮ್​ ಉಂಟಾಗಿದೆ.  ಈ ವೇಳೆ ಕಾರು ಚಲಾಯಿಸುತ್ತಿದ್ದ ಮಹಿಳೆ ಕಾರು ಹಿಂತೆಗೆಯಲು ಪರದಾಟ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಟ್ರಾಫಿಕ್​​ನಲ್ಲಿ ಸಿಲುಕಿದ ಅಶೋಕ್ ಖೇಣಿ ಕಾರಿನಿಂದ ಇಳಿದು ಮಹಿಳೆಗೆ ಆವಾಜ್ ಹಾಕಿದ್ದಾರೆ.

ಕಾರು ಚಲಾಯಿಸಲು ಪರದಾಡುತ್ತಿದ್ದ ಮಹಿಳೆಗೆ ‘ಸ್ಟುಪಿಡ್’ ಎಂದ ಖೇಣಿ ಬೈಯ್ದಿದ್ದಾರೆ ಕೂಡ. ಅಲ್ಲದೇ ಅಶೋಕ್ ಖೇಣಿ ಗನ್​​ಮ್ಯಾನ್​ಗಳಿಂದಲೂ ಮಹಿಳೆಗೆ ಅವಾಜ್ ಹಾಕಿ  ಕಾರ್ ಗ್ಲಾಸ್​ಗೆ ಕೈಯಿಂದ ಬಡಿದು ಗಲಾಟೆ  ಮಾಡಿದ್ದಾರೆ.

ಗಾಬರಿಗೊಂಡ ಮಹಿಳೆ ಕಾರನ್ನು ತೆಗೆದಯಲು ಹರಸಾಹಸ ನಡೆಸುತ್ತಿರುವುದು ವಿಡಿಯೋನಲ್ಲಿ ಕಾಣಬಹುದಾಗಿದೆ. ಈ ಎಲ್ಲಾ ಘಟನೆಗಳು ಸಚಿವ ಡಿಕೆ ಶಿವಕುಮಾರ್​ ನಿವಾಸದ ಬಳಿ ನಡೆದಿದೆ.

First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ