HOME » NEWS » State » ASHAYE TEAM GIVE FREE FOOD TO COVID PATIENTS AT BANGALORE HTV LG

ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರಿಗೆ ಉಚಿತವಾಗಿ ಊಟ ನೀಡುತ್ತಿದೆ ಆಶಾಯೇ ತಂಡ...!

ಆಶಾಯೇ ತಂಡದ ಎಂಟೂ ಮಂದಿ ಸೇರಿಕೊಂಡು ಐದು ಥೇಪ್ಲಾಗಳ ಒಂದು ಪ್ಯಾಕ್ ಎಂಬಂತೆ ಮಾಡಿ ಅದನ್ನು ಎನ್‌ಜಿಓಗಳ ಜತೆ ಸೇರಿ ಕೊರೊನಾ ಸೋಂಕಿತರಿಗೆ ಉಚಿತವಾಗಿ ಊಟ ಸರಬರಾಜು ಮಾಡುತ್ತಿದ್ದಾರೆ. ಪ್ರತಿದಿನ ಬರೋಬ್ಬರಿ 1200ರಿಂದ 1500 ಥೇಪ್ಲಾಗಳನ್ನು ಮಾಡಿ, ಬೆಂಗಳೂರಿನ ಸುಮಾರು 300 ರಿಂದ 400 ಮಂದಿ ಕೊರೊನಾ ಸೋಂಕಿತರಿಗೆ ಉಚಿತವಾಗಿ ಊಟ ನೀಡುತ್ತಿದೆ ಈ ತಂಡ..

news18-kannada
Updated:May 17, 2021, 4:10 PM IST
ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರಿಗೆ ಉಚಿತವಾಗಿ ಊಟ ನೀಡುತ್ತಿದೆ ಆಶಾಯೇ ತಂಡ...!
ಆಶಾಯೇ ತಂಡದ ಸದಸ್ಯರು
  • Share this:
ಆಶಾಯೇ. ಕೊರೊನಾ ಸೋಂಕಿತರಿಗಾಗಿಯೇ ಪ್ರಾರಂಭವಾಗಿರುವ ತಂಡ. ಕಳೆದ ಒಂದು ವಾರದ ಹಿಂದಷ್ಟೇ ಪ್ರಾರಂಭವಾದ ಈ ತಂಡ, ಈಗ ಪ್ರತಿದಿನ ಬೆಂಗಳೂರಿನಲ್ಲಿ 300ರಿಂದ 400 ಮಂದಿ ಕೊರೊನಾ ಸೋಂಕಿತರ ಹೊಟ್ಟೆ ತುಂಬಿಸುತ್ತಿದೆ. ಅದೂ ಅಂತಿಂಥ ಹೋಟೆಲ್ ತಿಂಡಿ ಅಲ್ಲ. ಬದಲಾಗಿ ನೂರಕ್ಕೂ ಹೆಚ್ಚು ಗೃಹಿಣಿಯರು ತಮ್ಮ ಮನೆಯಲ್ಲೇ ತಯಾರಿಸಿದ ಆರೋಗ್ಯಕರ, ರುಚಿಕರವಾದ ಗುಜರಾತಿ ಮೂಲದ ಥೇಪ್ಲಾದಿಂದ.

ಆಶಾಯೇ ತಂಡದ ರೂವಾರಿಗಳು ಮೂವರು ಮಹಿಳೆಯರು. ಮನಿಷಾ ಶಾ, ರೂಪಾ ಬಾಫ್ನಾ ಹಾಗೂ ಮಾಲಾ ವೋರಾ. ಈ ಮೂವರೂ ಪ್ರಾರಂಭಿಸಿದ ಆಶಾಯೇ ತಂಡದ ಜೊತೆಗೆ ಕ್ರಮೇಣವಾಗಿ ಅವರ ಮಕ್ಕಳು ಕೈಜೋಡಿಸಿದರು. ಮೈತ್ರಿ ಶಾ, ಮೇಹಾ, ಸಲೋನಿ ಶಾ, ಹಾರ್ದಿಕ್ ವೋರಾ ಹಾಗೂ ಉಮಂಗ್ ವೋರಾ, ಹೀಗೆ ಎಂಟು ಜನರೂ ಸೇರಿ ಥೇಪ್ಲಾ ತಯಾರಿಸಿ, ಅವುಗಳನ್ನು ಕೊರೋನಾ ಸೋಂಕಿತರಿಗೆ ತಲುಪಿಸತೊಡಗಿದರು. ಪ್ರಾರಂಭದಲ್ಲಿ ಇವರೆಲ್ಲರೂ ಸೇರಿ ತಮ್ಮ ಮನೆಯಲ್ಲೇ 100ರಿಂದ 150 ಥೇಪ್ಲಾ ಮಾಡತೊಡಗಿದರು. ತಮ್ಮ ಸುತ್ತಮುತ್ತಲಿನ, ಪರಿಚಯಸ್ಥರು, ಸಂಬಂಧಿಕರಿಗೆ ಕೊರೊನಾ ಸೋಂಕು ತಗುಲಿದ್ದರೆ, ಅವರಿಗೆ ಥೇಪ್ಲಾ ನೀಡತೊಡಗಿದರು.

ಆಶಾಯೇ ತಂಡಕ್ಕೆ ಕ್ರಮೇಣ ಮಿಷನ್ ಛಾಯ್, ಬೆಂಗಳೂರು ರೈಡರ್ಸ್, ಬೆಂಗಳೂರು ವುಮೆನ್ ಸೇರಿದಂತೆ ಹಲವು ಸಂಘಟನೆಗಳು ಬೆಂಬಲವಾಗಿ ನಿಂತರು. ಜೊತೆಗೆ ಇವರ ಕೆಲಸದ ಬಗ್ಗೆ ತಿಳಿದ ನೂರಕ್ಕೂ ಹೆಚ್ಚು ಗೆಳೆಯರು, ಸಂಬಂಧಿಕರೂ ಸಹ ತಮ್ಮ ಮನೆಗಳಲ್ಲಿ ಅಡುಗೆ ಮಾಡುವಾಗಲೇ 10ರಿಂದ 50ಕ್ಕೂ ಹೆಚ್ಚು ಥೇಪ್ಲಾಗಳನ್ನು ಮಾಡಿ, ಕಳುಹಿಸತೊಡಗಿದರು. ಅದನ್ನು ಆಶಾಯೇ ತಂಡದ ಎಂಟೂ ಮಂದಿ ಸೇರಿಕೊಂಡು ಐದು ಥೇಪ್ಲಾಗಳ ಒಂದು ಪ್ಯಾಕ್ ಎಂಬಂತೆ ಮಾಡಿ ಅದನ್ನು ಎನ್‌ಜಿಓಗಳ ಜತೆ ಸೇರಿ ಕೊರೊನಾ ಸೋಂಕಿತರಿಗೆ ಉಚಿತವಾಗಿ ಊಟ ಸರಬರಾಜು ಮಾಡುತ್ತಿದ್ದಾರೆ. ಪ್ರತಿದಿನ ಬರೋಬ್ಬರಿ 1200ರಿಂದ 1500 ಥೇಪ್ಲಾಗಳನ್ನು ಮಾಡಿ, ಬೆಂಗಳೂರಿನ ಸುಮಾರು 300 ರಿಂದ 400 ಮಂದಿ ಕೊರೊನಾ ಸೋಂಕಿತರಿಗೆ ಉಚಿತವಾಗಿ ಊಟ ನೀಡುತ್ತಿದೆ ಈ ತಂಡ..

Lunar Eclipse 2021: ಮೇ 26ರಂದು ಸಂಭವಿಸಲಿದೆ ಈ ವರ್ಷದ ಮೊದಲ ರಕ್ತ ಚಂದ್ರ ಗ್ರಹಣ

ಇನ್ನೂ ಹೆಚ್ಚೆಚ್ಚು ಜನರಿಗೆ ಸಹಾಯ ಮಾಡಲು ನಾವ್ ರೆಡಿ ಎನ್ನುತ್ತಿದೆ ಆಶಾಯೇ ಟೀಮ್. ಹೀಗೆ ಮೂವರಿಂದ ಪ್ರಾರಂಭವಾದ ಆಶಾಯೇ ತಂಡದಲ್ಲಿ ಇಂದು ನೂರಕ್ಕೂ ಹೆಚ್ಚು ಮಂದಿ ಸದಸ್ಯರಿದ್ದಾರೆ. ಸಾವಿರಾರು ಥೇಪ್ಲಾಗಳನ್ನು ಪ್ರೀತಿಯಿಂದ ತಯಾರಿಸಿ ನೂರಾರು ಕೊರೋನಾ ಸೋಂಕಿತರಿಗೆ ನೀಡುವ ಮೂಲಕ, ನಿಮ್ಮ ಜೊತೆ ನಾವಿದ್ದೇವೆ ಗೆಟ್ ವೆಲ್ ಸೂನ್ ಎಂದು ಧೈರ್ಯ ತುಂಬುತ್ತಿದ್ದಾರೆ.....

ಥೇಪ್ಲಾ ಅಂದರೇನು?
ಥೇಪ್ಲಾ ಗುಜರಾತಿ ಮೂಲದ ಆಹಾರ. ಮಸಾಲೆ ಪರೋಟ ಅಥವಾ ಮಸಾಲೆ ಚಪಾತಿ ಎನ್ನಬಹುದು. ಗೋಧಿ ಹಿಟ್ಟು, ಮೆಂಥ್ಯ ಎಲೆ, ಅರಿಶಿಣ, ಜೀರಿಗೆ, ಮೊಸರಿನ ಜೊತೆ ಕಲಸಿಕೊಳ್ಳಬೇಕು. ಕೆಲವರು ಇನ್ನೂ ರುಚಿ ಬರಲಿ ಎಂದು ಕೊತ್ತಮರಿ ಸೊಪ್ಪು, ಶುಂಠಿ, ಧನಿಯಾ ಪುಡಿ ಸೇರಿದಂತೆ ನಾನಾ ಬಗೆಯ ಮಸಾಲಗಳನ್ನು ಸಹ ಬೆರೆಸುತ್ತಾರೆ. ನಂತರ ಚಪಾತಿಯಂತೆಯೇ ಹೆಂಚಿನ ಮೇಲೆ ಎಣ್ಣೆ ಸವರಿ ಸುಡುವುದು.
ಥೇಪ್ಲಾ


ಬೇಸಿಗೆಯಲ್ಲಿ ಮೂರು, ನಾಲ್ಕು ದಿನಗಳ ಕಾಲ ಥೇಪ್ಲಾಗಳನ್ನು ಇಟ್ಟು ತಿನ್ನಬಹುದು. ಹಾಗೇ ಚಳಿಗಾಲ ಹಾಗೂ ಮಳೆಗಾಲದಲ್ಲಿ ಒಂದು ವಾರವಾದರೂ ಥೇಪ್ಲಾಗಳು ಕೆಡುವುದಿಲ್ಲ. ವಿಶೇಷ ಅಂದರೆ ಈ ಥೇಪ್ಲಾಗಳನ್ನು ಮೊಸರು, ಉಪ್ಪಿನಕಾಯಿ, ಪಲ್ಯ, ಗೊಜ್ಜು, ತುಪ್ಪದ ಜೊತೆಯಲ್ಲೂ ಸವಿಯಬಹುದು. ಈಗ ಇಂತಹ ಹೋಮ್ ಮೇಡ್ ಥೇಪ್ಲಾಗಳನ್ನೇ ಕೊರೊನಾ ಸೋಂಕಿತರಿಗೆ ಆಶಾಯೇ ತಂಡ ತಲುಪಿಸುತ್ತಿದೆ.
Youtube Video

ಆಶಾಯೇ ತಂಡವನ್ನು ಸಂಪರ್ಕಿಸಲು ಬಯಸುವವರು, ಈ ನಂಬರ್‌ಗಳಿಗೆ ಕರೆ ಮಾಡಬಹುದು.
ಉಮಂಗ್ ವೋರಾ - 94806 74919
ಹಾರ್ದಿಕ್ ವೋರಾ - 74119 68363
Published by: Latha CG
First published: May 17, 2021, 3:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories