HOME » NEWS » State » ASHA WORKERS PROTESTING IN BENGALURU

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಬಿಸಿಯೂಟ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ

ನೂರಾರು ಬಿಸಿಯೂಟ ಕಾರ್ಯರ್ತೆಯರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಹತ್ತಾರು ಬೇಡಿಕೆಗಳೊಂದಿಗೆ ಫ್ರೀಡಮ್ ಪಾರ್ಕ್ ಬಳಿ ಬಿಸಿಯೂಟ ಕಾರ್ಯರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.

Rajesh Duggumane | news18
Updated:December 3, 2018, 10:03 AM IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಬಿಸಿಯೂಟ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ
ಸಾಂದರ್ಭಿಕ ಚಿತ್ರ
  • News18
  • Last Updated: December 3, 2018, 10:03 AM IST
  • Share this:
ಬೆಂಗಳೂರು (ಡಿ.3): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಂಡ ಪಾರ್ಕ್​ನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಕಾರ್ಯಕರ್ತೆಯರು ಪರದಾಡುವಂಥ ಸ್ಥಿತಿ ಎದುರಾಗಿದೆ.

ನೂರಾರು ಬಿಸಿಯೂಟ ಕಾರ್ಯರ್ತೆಯರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. 2,500 ರೂ. ಸಂಬಳ ಹೆಚ್ಚಿಸಬೇಕು. ಬಿಸಿಯೂಟ ಕಾರ್ಯಕರ್ತೆಯರ ಕೆಲಸ ಖಾಯಂಗೊಳಿಸಬೇಕು. ವಿಮೆ, ಇ.ಎಸ್.ಐ, ಪಿ.ಎಫ್ ನೀಡಬೇಕು. ತಮಿಳುನಾಡು ರೀತಿಯಲ್ಲಿ ಕರ್ನಾಟಕ ರಾಜ್ಯದ ಬಿಸಿಯೂಟ ಕಾರ್ಯಕರ್ತರಿಗೂ ಸಂಬಳ ನೀಡಬೇಕು. ಬಿಸಿಯೂಟ ವ್ಯವಸ್ಥೆಯನ್ನು ಖಾಸಗೀಕರಣ ಗೊಳಿಸಬಾರದು. ಇಸ್ಕಾನ್​​ಗೆ ನೀಡಬೇಕೆಂದಿರುವ ಗುತ್ತಿಗೆಯನ್ನು ರದ್ದುಗೊಳಿಸಬೇಕು. ಹೀಗೆ ಹತ್ತಾರು ಬೇಡಿಕೆಗಳೊಂದಿಗೆ ಫ್ರೀಡಮ್ ಪಾರ್ಕ್ ಬಳಿ ಬಿಸಿಯೂಟ ಕಾರ್ಯರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮಂಡ್ಯ ಜನರ ವಿರೋಧಕ್ಕೆ ರಮ್ಯಾ ಪಲಾಯನ?; ರಾತ್ರೋರಾತ್ರಿ ಬಾಡಿಗೆ ಮನೆ ಖಾಲಿ ಮಾಡಿದ ಮಾಜಿ ಸಂಸದೆ!

‘ಕಳೆದ ಬಾರಿ ನಮ್ಮ‌ ಬೇಡಿಕೆಗಳನ್ನು ಮಾಜಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಸೇರಿ ವಿವಿಧ ನಾಯಕರು ಈಡೇರಿಸಿರಲಿಲ್ಲ. ಆಶ್ವಾಸನೆಕೊಟ್ಟು ಮೋಸ ಮಾಡಿರುವ ಎಲ್ಲಾ ಸರ್ಕಾರಗಳಿಗೆ ನಮ್ಮ‌ ಧಿಕ್ಕಾರವಿದೆ. ಬೇಡಿಕೆಗಳು ಈಡೇರದಿದ್ದರೆ ಪ್ರತಿಭಟನಾ ಧರಣಿ ಮುಂದುವರೆಯುವುದು’ ಎಂದು ಬಿಸಿಯೂಟ ಕಾರ್ಯಕರ್ತೆಯರ ರಾಜ್ಯ ಸಂಘಟನೆಯ ನಾಯಕಿ‌ ರುದ್ರಮ್ಮ‌ ಬೆಳಲ್ಗೆರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಸೂಕ್ತ ಬೆಡ್ ಶೀಟ್, ಚಾಪೆ ಇಲ್ಲದ ಕಾರಣ ಕಾರ್ಯಕರ್ತೆಯರು ಟಾರ್ಪಲ್ ಮೇಲೆ ನಿದ್ರಿಸಿ ರಾತ್ರಿ ಕಳೆದರು. ಬೆಳಗ್ಗೆ ಶೌಚಾಲಯದ ವ್ಯವಸ್ಥೆ ಇಲ್ಲದೇ ಮಹಿಳೆಯರು ಪರದಾಡಿದ್ದಾರೆ. ಕುಡಿಯಲು ಟ್ಯಾಂಕರ್ ನಲ್ಲಿ ನೀರು ತರಿಸಲಾಯಿತಾದರೂ, ಆ ನೀರನ್ನು ಕುಡಿಯಲು ಆಗುತ್ತಿಲ್ಲ ಎಂದು ಬಿಸಿಯೂಟ ಕಾರ್ಯಕರ್ತೆಯರು ಆರೋಪಿಸಿದ್ದಾರೆ.

ಇದನ್ನೂ ಓದಿ: ರಾಮ ಮಂದಿರಕ್ಕಾಗಿ ಜನಾಗ್ರಹ ಸಭೆ: ಸಿದ್ದರಾಮಯ್ಯ ವಿರುದ್ಧ ಕಲ್ಲಡ್ಕ ಪ್ರಭಾಕರ್​​ ಭಟ್​ ವಾಗ್ದಾಳಿ

First published: December 3, 2018, 8:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories