ಹುಬ್ಬಳ್ಳಿ(ಮೇ.03): ಬಿಜೆಪಿ ಶಾಸಕ (BJP MLA) ಮಾತೆತ್ತಿದರೆ ಎನ್ಕೌಂಟರ್ ಮಾಡ್ತೀವಿ ಅಂತ ಹೇಳ್ತಾರೆ. ನಾವು ಬಂದೂಕಿಗೆ ಹೆದರಲ್ಲ, ಸಾಯಲೂ ಸಿದ್ಧ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಆಯೋಜಿಸಿದ್ದ ಪ್ರಚಾರಸಭೆಯಲ್ಲಿ ಎಂಐಎಂ ಅಭ್ಯರ್ಥಿ ದುರ್ಗಪ್ಪ ಬಿಜವಾಡ ಪರ ಮತಯಾಚನೆ ಮಾಡಿದ ಅವರು, ಕಾಂಗ್ರೆಸ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ನವರು ತಮಗೆ ತಾವೇ ಜಾತ್ಯತೀತವಾದಿಗಳು ಅಂತ ಹೇಳಿಕೊಳ್ಳುತ್ತಾರೆ. ಜಾತ್ಯತೀತತೆ ಹೆಸರಲ್ಲಿ ಬರೀ ನಾಟಕ ಮಾಡ್ತಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಹಿಜಾಬ್ ವಾಪಸ್ ಪಡೆಯುವುದಾಗಿ ಹೇಳುತ್ತಾರೆ. ಭಜರಂಗದಳ ಬ್ಯಾನ್ ಮಾಡ್ತೀವಿ ಅಂತಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದಾರೆ. ಅವರು RSSನಲ್ಲಿದ್ದರು, ಅಲ್ಲಿ ಚಡ್ಡಿ ಹಾಕಿಕೊಂಡಿದ್ರು, ಮುಖ್ಯಮಂತ್ರಿಯೂ ಆದ್ರು. ಇವ್ರು ಕಾಂಗ್ರೆಸ್ ಗೆ ಬರ್ತಿದ್ದಂತೆಯೇ ಜಾತ್ಯತೀತವಾದಿಗಳಾದ್ರಾ? ಬಾಬ್ರಿ ಮಸೀದಿ ಮರು ನಿರ್ಮಾಣ ಮಾಡ್ತೇವೆ ಅಂದ್ರು. ಆದ್ರೆ ಇದುವರೆಗೂ ಆಗಲಿಲ್ಲ. ಮುಸ್ಲಿಮರ ಈ ಸ್ಥಿತಿಗೆ ಹೇಗೆ RSS ಮತ್ತು ಬಿಜೆಪಿ ಕಾರಣವೋ, ಹಾಗೆಯೇ ಕಾಂಗ್ರೆಸ್ ಸಹ ಕಾರಣ ಎಂದು ಕಿಡಿಕಾರಿದರು.
ಹುಬ್ಬಳ್ಳಿ ಪೂರ್ವದ ಜನ ಒಂದು ಒಳ್ಳೆಯ ನಿರ್ಧಾರ ಕೈಗೊಳ್ಳಬೇಕು. ಇಲ್ಲಿ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷದ ಅಭ್ಯರ್ಥಿಗಳಿದ್ದಾರೆ. ಬಿಜೆಪಿ ಅಭ್ಯರ್ಥಿ ವಿರುದ್ಧ ನಿಲ್ಲಲು ಕಾಂಗ್ರೆಸ್ ಅಭ್ಯರ್ಥಿಗೆ ಶಕ್ತಿ ಇಲ್ಲ. ಒಳ ಒಪ್ಪಂದದ ಮೂಲಕ ಶಾಸಕರಾಗ್ತಿದ್ದಾರೆ. ಬಿಜೆಪಿ ವಿರುದ್ಧ ಗೆದ್ದು ಬರಲು ದುರ್ಗಪ್ಪ ಬಿಜವಾಡರಿಂದ ಮಾತ್ರ ಸಾಧ್ಯ. ಹಳೆ ಹುಬ್ಬಳ್ಳಿ ಗಲಭೆಯಲ್ಲಿ ನೂರಾರು ಜನ ಜೈಲು ಪಾಲಾಗಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಅವರ ಹೆಸರು ತೆಗೆಯೋ ಯೋಗ್ಯತೆಯೂ ಇಲ್ಲ. ಬೈರಿದೇವರಕೊಪ್ಪ ದರ್ಗಾ ಕೆಡವಿದಾಗ ಕಾಂಗ್ರೆಸ್ ಶಾಸಕ ಟಾನಿಕ್ ಕುಡಿದು ಮನೆಯಲ್ಲಿ ಮಲಗಿದ್ದರು. ಕಾಂಗ್ರೆಸ್ನವರು ನಮ್ಮನ್ನು ಬಿಜೆಪಿಯ ಬಿ ಟೀಂ ಅಂತಾರೆ. ಅದ್ರೆ ಅಮೇಥಿಯಲ್ಲಿ ನಮ್ಮ ಪಕ್ಷ. ಬಿ ಟೀಂ ಬದಲಿಗೆ ಡಿ, ಇ, ಎಫ್ ಟೀಂ ಅಂತಾ ಕರೆಯಲಿ ನನಗೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: Narendra Modi: ಮಕ್ಕಳೊಂದಿಗೆ ಮಗುವಾದ ನರೇಂದ್ರ ಮೋದಿ! ಪ್ರಧಾನಿ ಜೊತೆ ಚಿಣ್ಣರ ಆಟ!
ಕಾಂಗ್ರೆಸ್ನಿಂದ, ಬಿಜೆಪಿಯಿಂದ ನನ್ನನ್ನು ತಡೆಯಲು ಸಾಧ್ಯವಿಲ್ಲ. ಓಟ್ ಹಾಕಿ, ಗುಲಾಮರಾಗಿರಿ ಅಂತಾರೆ. ಎಲ್ಲರೂ ಒಂದಾಗಿ ದುರ್ಗಪ್ಪನನ್ನು ಬೆಂಬಲಿಸಿ. ಕಾಂಗ್ರೆಸ್ ಮತ್ತು ಅಮಿತ್ ಶಾ ಸೇರಿ ಯುಎಪಿ ಕಾಯ್ದೆ ಮಾಡಿದರು. ಅದರ ಪರಿಣಾಮ ಹುಬ್ಬಳ್ಳಿಯಲ್ಲಿ 150 ಕ್ಕೂ ಹೆಚ್ಚು ಯುವಕರು ಜೈಲು ಪಾಲಾಗಿದ್ದಾರೆ. ಹುಬ್ಬಳ್ಳಿ ಪೂರ್ವದಲ್ಲಿ ರೆಕಾರ್ಡ್ ಮಾಡೋ ನಿರ್ಧಾರ ಮಾಡಿದ್ದೇವೆ. ದುರ್ಗಪ್ಪ ಇಷ್ಟು ಸೈಲೆಂಟ್ ಆಗಿರಬೇಡಿ. ಬಿಜೆಪಿ, ಕಾಂಗ್ರೆಸ್ ಗೆ 330 ವ್ಯಾಟ್ ವಿದ್ಯುತ್ ಪ್ರವಹಿಸಿದಂತೆ ಆಗಬೇಕು. ಬಿಜೆಪಿಯವರು ಐದು ವರ್ಷದಲ್ಲಿ ಹಗಲು ದರೋಡೆ ಮಾಡಿದರು.
ಇದನ್ನೂ ಓದಿ: Bajrang Dal: ಬಜರಂಗದಳ ನಿಷೇಧ ಪ್ರಸ್ತಾಪಿಸಿದ್ದ 'ಕೈ' ವಿರುದ್ಧ ಕಿಡಿಕಿಡಿ! ಬಿಜೆಪಿ-ಹಿಂದೂ ನಾಯಕರಿಂದ 'ನಾನೂ ಬಜರಂಗಿ' ಅಭಿಯಾನ
ಎನ್ಕೌಂಟರ್ ಮಾಡ್ತೀವಿ ಅಂತ ಬಿಜೆಪಿ ಶಾಸಕ ಹೇಳ್ತಾರೆ ಎಂದು ಯತ್ನಾಳ ವಿರುದ್ದ ಓವೈಸಿ ವಾಗ್ದಾಳಿ ಮಾಡಿದರು. ನಾವು ಗೋಲಿಗೆ ಹೆದರಲ್ಲ. ನಾವು ಸಾಯಲೂ ಸಿದ್ಧರಿದ್ದೇವೆ. ಚುನಾವಣೆ ಬಂದಾಗ ಎನ್ಕೌಂಟರ್ ಮಾತುಗಳು ಹೊರಬರುತ್ತೆ. ಮೋದಿ ನೋಡಿದ್ರೆ ನಮಗೆ ಬೆದರಿಕೆ ಹಾಕ್ತಾರೆ ಅಂತ ಹೇಳ್ತಾರೆ. ಆದ್ರೆ ಯತ್ನಾಳ ಏನೇ ಬೆದರಿಕೆ ಹಾಕಿದ್ರೂ ಸುಮ್ಮನಿರ್ತಾರೆ. ಬಿಜೆಪಿ ಕರ್ನಾಟಕವನ್ನು ಬರ್ಬಾದ್ ಮಾಡಿದೆ ಎಂದು ಓವೈಸಿ ಆಕ್ರೋಶ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ