HOME » NEWS » State » ASADUDDIN OWAISI COMING TO BANGLORE TO PARTICIPATE CAA PROTEST IN FREEDOM PARK SESR KGM

ನಾಳೆ ಬೆಂಗಳೂರಿಗೆ ಅಸಾದುದ್ದೀನ್ ಓವೈಸಿ; ಸಿಎಎ ಪ್ರತಿಭಟನೆಯಲ್ಲಿ ಭಾಗಿ

ಸಿಎಎ ಮತ್ತು ಎನ್​ಆರ್​ಸಿ ವಿರೋಧಿಸಿ ನಾಳೆ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು,  ಐದು ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೈದ್ರಾಬಾದ್​ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಓವೈಸಿ ಹಾಗೂ ಎಚ್​ಡಿ ದೇವೇಗೌಡ ಅವರು ಕೂಡ ಭಾಗಿಯಾಗಲಿದ್ದಾರೆ.

news18-kannada
Updated:February 19, 2020, 6:00 PM IST
ನಾಳೆ ಬೆಂಗಳೂರಿಗೆ ಅಸಾದುದ್ದೀನ್ ಓವೈಸಿ; ಸಿಎಎ ಪ್ರತಿಭಟನೆಯಲ್ಲಿ ಭಾಗಿ
ಅಸಾದುದ್ದೀನ್ ಓವೈಸಿ.
  • Share this:
ಬೆಂಗಳೂರು(ಫೆ. 19): ಕೇಂದ್ರ ಸರ್ಕಾರದ ಪೌರತ್ವ ತಿದ್ಧಪಡಿ ಕಾಯ್ದೆಗೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಸಿಎಎ ಮತ್ತು ಎನ್​ಆರ್​ಸಿ ವಿರೋಧಿಸಿ ಗುರುವಾರ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು,  ಐದು ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೈದ್ರಾಬಾದ್​ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಓವೈಸಿ ಹಾಗೂ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಅವರು ಕೂಡ ಭಾಗಿಯಾಗಲಿದ್ದಾರೆ.

ಬಿಬಿಎಂಪಿ ಕಾರ್ಪೊರೇಟರ್​ ಇಮ್ರಾನ್​ ಪಾಷಾ ನೇತೃತ್ವದಲ್ಲಿ ಹಾಗೂ  ಎಚ್​ಎಂಎಸ್​ಐ ಸಂಸ್ಥೆಯಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಾಳೆ ಸಂಜೆ ಐದು ಗಂಟೆಗೆ ಈ ಸಾರ್ವಜನಿಕ ಪ್ರತಿಭಟನೆ ನಡೆಯಲಿದೆ.

ಇನ್ನು ಓವೈಸಿ ಆಗಮನದ ಹಿನ್ನೆಲೆ ಅವರಿಗೆ ಉಪ್ಪಾರಪೇಟೆ ಪೊಲೀಸರು ಷರತ್ತು ಬದ್ಧ ಅನುಮತಿ ನೀಡಿದ್ದು, ಇದಕ್ಕಾಗಿ ಹತ್ತು ಲಕ್ಷ ಬಾಂಡ್​ ಬರೆಸಿಕೊಂಡಿದ್ದಾರೆ.

ಇದನ್ನು ಓದಿ: ನಾಳೆ ಸಾರಿಗೆ ಮುಷ್ಕರ: 10 ಸಾವಿರ ನೌಕರರಿಂದ ಈಗಾಗಲೇ ರಜೆ ಅರ್ಜಿ

ಅಸಾದುದ್ದೀನ್ ಒವೈಸಿ ಅವರು ಸಿಎಎ-ಎನ್ಆರ್‌ಸಿ ವಿರೋಧಿಸಿ ಬೀದರ್​ನ ಶಾಲೆಯಲ್ಲಿ ನಾಟಕ  ಪ್ರದರ್ಶಿಸಿ ಬಂಧನಕ್ಕೆ ಒಳಗಾಗಿದ್ದ ವಿದ್ಯಾರ್ಥಿಗಳು ಹಾಗೂ ಇತರರನ್ನು ಜೈಲಿನಲ್ಲಿ ಖುದ್ದು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಪ್ರಖರ ಭಾಷಣಗಳಿಗೆ ಹೆಸರಾದ ಒವೈಸಿ ಅವರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗೋಹತ್ಯಾ ನಿಷೇಧ, ತ್ರಿವಳಿ ತಲಾಖ್ ನಿಷೇಧ  ಮೊದಲಾದ ಕ್ರಮಗಳನ್ನು ವಿರೋಧಿಸಿಕೊಂಡು ಬಂದವರು. ಅಯೋಧ್ಯೆ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪಿನ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
First published: February 19, 2020, 6:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories