HOME » NEWS » State » AS ELECTRIC VEHICLES TRENDING IN BENGALURU SEE THE PROS AND CONS SHTV SNVS

Electric Vehicles - ಬೆಂಗಳೂರಿನಲ್ಲಿ ಶುರುವಾಗಿದೆ ಎಲೆಕ್ಟ್ರಿಕ್ ವಾಹನಗಳ ಟ್ರೆಂಡ್; ಸಾಧಕ, ಬಾಧಕ ತಿಳಿದಿರಿ

ಬೆಂಗಳೂರಿನಂಥ ನಗರದಲ್ಲಿ ಸ್ವಂತ ವಾಹನದಲ್ಲಿ ಅಡ್ಡಾಡುವುದು ಬಹಳ ಮಂದಿಗೆ ಅನಿವಾರ್ಯ. ಆದರೆ, ಪೆಟ್ರೋಲ್ ಡೀಸೆಲ್ ಬೆಲೆ ತುಟ್ಟಿಯಾಗುತ್ತಿರುವಾಗ ಹೇಗಪ್ಪಾ ವಾಹನ ಓಡಿಸೋದು ಎಂದು ಯೋಚಿಸಬೇಕಾದ ಹೊತ್ತಿನಲ್ಲಿ ಪರಿಹಾರ ರೂಪದಲ್ಲಿ ಕಾಣುವುದು ಎಲೆಕ್ಟ್ರಿಕ್ ವಾಹನಗಳು.

news18-kannada
Updated:January 14, 2021, 1:27 PM IST
Electric Vehicles - ಬೆಂಗಳೂರಿನಲ್ಲಿ ಶುರುವಾಗಿದೆ ಎಲೆಕ್ಟ್ರಿಕ್ ವಾಹನಗಳ ಟ್ರೆಂಡ್; ಸಾಧಕ, ಬಾಧಕ ತಿಳಿದಿರಿ
ಎಲೆಕ್ಟ್ರಿಕ್​ ಸ್ಕೂಟರ್
  • Share this:
ಬೆಂಗಳೂರು: ಸರ್ಕಾರ ಎಲೆಕ್ಟ್ರಿಕ್ ವೆಹಿಕಲ್ ಖರೀದಿಸಿದ್ರೆ ಭಾರೀ ರಿಯಾಯಿತಿ ನೀಡುತ್ತಿದೆ. ರೋಡ್ ಟ್ಯಾಕ್ಸ್ ಕಟ್ಟುವಂತಿಲ್ಲ, ರಿಜಿಸ್ಟರೇಷನ್ ಚಾರ್ಚ್ ಇಲ್ಲ. ಆದಾಯ ತೆರಿಗೆ ಕಟ್ಟುವವರಿಗೆ ಅನುಕೂಲವಿದೆ. ಇಂಥ ಎಲೆಕ್ಟ್ರಿಕ್ ಬೈಕ್ ಒಂದು ಲಕ್ಷದೊಳಗೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ‌. ಇನ್ನೂ ಆಯಿಲ್ ಬೇಸ್ಡ್ ಬೈಕ್ ಗಳು ಸಹ ಇದೇ ದರದಲ್ಲಿರುವುದರಿಂದ ಎಲೆಕ್ಟ್ರಿಕ್ ಬೈಕ್ ಖರೀದಿಸೋದು ಬೆಸ್ಟ್. ಅದೇ ರೀತಿ 8 ಲಕ್ಷದಿಂದ 40 ಲಕ್ಷದವರೆಗೆ ವಿವಿಧ ಕಂಪನಿಗಳ ಎಲೆಕ್ಟ್ರಿಕ್ ಕಾರುಗಳು ಸಿಗುತ್ತಿವೆ‌. ಒಮ್ಮೆ ಚಾರ್ಚ್ ಮಾಡಿದರೆ, ಬೈಕ್​ಗಳಾದ್ರೆ 30 ಕಿ.ಮೀ, ಕಾರುಗಳಾದ್ರೆ 400 ಕಿ.ಮೀವರೆಗೆ ರೈಡ್ ಮಾಡಬಹುದು. ಈ ಕಾರಣಕ್ಕೆ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಬಳಕೆ ಹೆಚ್ಚಾಗ್ತಿದೆ.

ರಾಜ್ಯಾದ್ಯಂತ 25 ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳಿವೆ. ಬೆಂಗಳೂರು ನಗರವೊಂದರಲ್ಲೇ 17 ಸಾವಿರ ಎಲೆಕ್ಟ್ರಿಕ್ ವೆಹಿಕಲ್ ಇವೆ. ಪ್ರತಿ ತಿಂಗಳು ಸಿಲಿಕಾನ್‌ ಸಿಟಿಯಲ್ಲಿ ನೂರಕ್ಕೂ ಹೆಚ್ಚು ವಿದ್ಯುತ್ ಚಾಲಿತ ಬೈಕ್, ಕಾರು ಖರೀದಿಯಾಗ್ತಿದೆ. ಕಳೆದೆರಡು ವರುಷದಿಂದ ನಾನು ಎಲೆಕ್ಟ್ರಿಕ್ ಕಾರು ಬಳಸುತ್ತಿದ್ದೇನೆ. ಸರ್ಕಾರ ಬೆಂಗಳೂರು ಮಾತ್ರವಲ್ಲದೆ, ರಾಜ್ಯದಾದ್ಯಂತ ಚಾರ್ಚಿಂಗ್ ಸ್ಟೇಷನ್ ಮಾಡಬೇಕು ಎಂದು ಟೆಕ್ಕಿ ಕೃಷ್ಣಕುಮಾರ್ ಅಭಿಪ್ರಾಯಪಡುತ್ತಾರೆ‌.

ಇದನ್ನೂ ಓದಿ: Tesla: ದೇಶದ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯಲ್ಲಿ ಹೊಸ ಅಲೆ; ಬೆಂಗಳೂರಿನಲ್ಲಿ ಬಂಡವಾಳ ಹೂಡಲು ಮುಂದಾದ ಟೆಸ್ಲಾ!

ಎಲೆಕ್ಟ್ರಿಕ್ ವಾಹನ ಖರೀದಿಯಿಂದ ಉಪಯೋಗಗಳು:
* ದುಬಾರಿ ಬೆಲೆ ತೆತ್ತು ಪೆಟ್ರೋಲ್, ಡೀಸೆಲ್ ಖರೀದಿಸುವಂತಿಲ್ಲ
* ಕಾರಿನ ಬಹುತೇಕ ಭಾಗಗಳು ಇರುವುದಿಲ್ಲ
* ಮೇಂಟೇನ್ಸ್ ಚಾರ್ಚ್ ಶೇ. 70 ಕಡಿಮೆ* ಒಂದು ಕಿ ಮೀ ಗೆ ಒಂದು ರೂಪಾಯಿ ಮಾತ್ರ ಖರ್ಚು
* ಮಾಮೂಲಿ ವಾಹನಗಳಾದ್ರೆ ಒಂದು ಕಿ.ಮೀ. ಗೆ ಏಳು ರೂ. ತೆರಬೇಕು
* ಪೆಟ್ರೋಲ್ ಹೋಲಿಸಿದಲ್ಲಿ ಕರೆಂಟ್ ದರ ಭಾರೀ ಕಡಿಮೆ
* ಮನೆಯಲ್ಲಿಯೇ ವಾಹನಗಳನ್ನ ಚಾರ್ಚ್ ಮಾಡಿಕೊಳ್ಳಬಹುದು
* ಮಹಾನಗರಗಳಲ್ಲಿ ಫಾಸ್ಟ್ ಚಾರ್ಚಿಂಗ್ ಸ್ಟೇಷನ್ ವ್ಯವಸ್ಥೆ

ಅನಾನುಕೂಲಗಳು:
* ಮಾಮೂಲಿ ವಾಹನಗಳಿಗಿಂತ ಶೇ.30ರಷ್ಟು ದರ ಹೆಚ್ಚಳ
* ಬ್ಯಾಟರಿ ಖಾಲಿಯಾದ್ರೆ ಚಾರ್ಚ್ ಮಾಡಲು ಸಮಯ ತೆಗೆದುಕೊಳ್ಳುತ್ತೆ
* ಮಹಾನಗರಗಳಲ್ಲಿ ಮಾತ್ರ ಎಲೆಕ್ಟ್ರಿಕ್ ವೆಹಿಕಲ್ ಬಳಕೆಗೆ ಸಮರ್ಪಕ ವ್ಯವಸ್ಥೆ
* ಗ್ರಾಮೀಣ ಭಾಗದಲ್ಲಿ ಬಳಕೆ ಕಷ್ಟ
* ಪದೇ ಪದೇ ಚಾರ್ಚಿಂಗ್ ಮಾಡಬೇಕು
* ಚಾರ್ಚಿಂಗ್ ಮುಗಿದರೆ ವಾಹನ ನಿಲ್ಲುತ್ತದೆ

ಇದನ್ನೂ ಓದಿ: Odysse E2Go ಸ್ಕೂಟರ್​ ಮಾರುಕಟ್ಟೆಗೆ; ಒಂದು ಬಾರಿ ಚಾರ್ಜ್​ ಮಾಡಿದರೆ ಎಷ್ಟು ಕಿ.ಮೀ ಕ್ರಮಿಸುತ್ತೆ ಗೊತ್ತಾ?

ಬೆಂಗಳೂರಿನಲ್ಲಿ ಬರೋಬ್ಬರಿ 85 ಲಕ್ಷ ವೆಹಿಕಲ್ ಇದ್ದು, ಇದರಲ್ಲಿ 60 ಲಕ್ಷ ಬೈಕ್​ಗಳಿವೆ, 19 ಲಕ್ಷ ಕಾರುಗಳಿವೆ.‌ ಪ್ರತಿ ತಿಂಗಳು 8 ಸಾವಿರ ವಾಹನ ಖರೀದಿಯಾಗುತ್ತದೆ. 2023ಕ್ಕೆ ಒಂದು ಕೋಟಿ ವಾಹನ ತಲುಪುವ ನಿರೀಕ್ಷೆಯಿದೆ. ದೆಹಲಿ‌ ಬಿಟ್ಟರೆ ಅತಿ ದೊಡ್ಡ ವಾಹನಗಳ ನಗರಿ ಬೆಂಗಳೂರು ಆಗಿದೆ. ಇಂಥ ಮಹಾನಗರದಲ್ಲಿ ಪರಿಸರ‌ ಮಾಲಿನ್ಯ ನಿಯಂತ್ರಣಕ್ಕೆ ತರಲು ಇಕೋ ಫ್ರೆಂಡ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಸುವವರಿಗೆ ಸರ್ಕಾರ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಎಲೆಕ್ಟ್ರಿಕ್ ವೆಹಿಕಲ್ ಚಾರ್ಚಿಂಗ್​ಗೆ ಬೆಸ್ಕಾಂ ವ್ಯವಸ್ಥೆ ಮಾಡುತ್ತಿದೆ. ಬೆಂಗಳೂರಿನಲ್ಲಿ ಒಟ್ಟು 132 ಕಡೆ ಚಾರ್ಚಿಂಗ್ ಸ್ಟೇಷನ್ ಇದ್ದು, ಇದರಲ್ಲಿ 12 ಕಡೆ ಸ್ಪೀಡ್ ಚಾರ್ಚಿಂಗ್ ಸ್ಟೇಷನ್ ಕೂಡ ಇದೆ. ಇದರಿಂದ ಕಾರುಗಳು ಇಡೀ ರಾತ್ರಿ ಚಾರ್ಚಿಂಗ್ ಮಾಡುವ ಬದಲು ಒಂದು ಗಂಟೆಯೊಳಗೆ 400 ಕಿ.ಮೀ ಓಡುವ ಸ್ಪೀಡ್ ಚಾರ್ಚಿಂಗ್ ವ್ಯವಸ್ಥೆ ಮಾಡಲಾಗಿದೆ.

ಇಕೊ ಫ್ರೆಂಡ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಸರ್ಕಾರ ಸಾಕಷ್ಟು ರಿಯಾಯಿತಿ ನೀಡಿದೆ. ಬೆಸ್ಕಾಂ ವತಿಯಿಂದ. ಬೆಂಗಳೂರಿನಲ್ಲಿ 132 ಚಾರ್ಜಿಂಗ್ ಸ್ಟೇಷನ್ ವ್ಯವಸ್ಥೆ ಮಾಡಿದ್ದು, ಇದರಲ್ಲಿ 12 ಕಡೆ ಫಾಸ್ಟ್ ಚಾರ್ಚಿಂಗ್ ವ್ಯವಸ್ಥಯೂ ಇದೆ. ಬೇಡಿಕೆ ಆಧಾರದ ಮೇಲೆ ಇನ್ನಷ್ಟು ಚಾರ್ಚಿಂಗ್ ಸ್ಟೇಷನ್ ವಿಸ್ತರಣೆ ಮಾಡಲಿದ್ದೇವೆ ಎಂದು ಬೆಸ್ಕಾಂ ಉಪ ಪ್ರಧಾನ ವ್ಯವಸ್ಥಾಪಕರಾದ ಶ್ರೀನಾಥ್ ತಿಳಿಸುತ್ತಾರೆ.

ಇದನ್ನೂ ಓದಿ: January 2021 car discounts: ಟಾಟಾ ಕಾರುಗಳ ಮೇಲೆ ಭರ್ಜರಿ ಆಫರ್​; ಕಡಿಮೆ ಬೆಲೆಗೆ ನೆಕ್ಸಾನ್​, ಹ್ಯಾರಿಯರ್​!

ಪೆಟ್ರೋಲ್, ಡೀಸೆಲ್ ಬೆಲೆ ಸೆಂಚುರಿ ಬಾರಿಸಲು ಮುಂದಾಗ್ತಿದೆ. ಆದರೆ ಜನಸಾಮಾನ್ಯರು ಕೊರೊನಾ ಸಂಕಷ್ಟದಲ್ಲಿ ಇನ್ನಷ್ಟು ತೊಂದರೆಗೊಳಗಾಗಿದ್ದಾರೆ. ಹೊರಗಡೆ ತಮ್ಮ‌ ಬೈಕ್, ಕಾರು ತೆಗೆಯಬೇಕೆಂದರೆ ಜೇಬು ಭರ್ತಿ ಇದೆಯೋ ಎಂದು ನೋಡಿಕೊಳ್ಳಬೇಕಾಗಿದೆ. ಇಂಥ ಸ್ಥಿತಿಯಲ್ಲಿ ಅಯಿಲ್ ವೆಹಿಕಲ್ ಬಿಟ್ಟು, ಎಲೆಕ್ಟ್ರಿಕಲ್ ವೆಹಿಕಲ್ ಬಳಸಲು ಶುರು ಮಾಡಿದ್ರೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ವರದಿ: ಶರಣು ಹಂಪಿ
Published by: Vijayasarthy SN
First published: January 14, 2021, 1:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories