• Home
  • »
  • News
  • »
  • state
  • »
  • Srujan-Arun: ಸೃಜನ್ ಲೋಕೇಶ್ ಹಾಗೂ ಸಚಿವರ ಪುತ್ರನ ನಡುವೆ ಫೈಟ್​ ನಡೆದಿದ್ದು ನಿಜನಾ? ಅರುಣ್ ಸೋಮಣ್ಣ ಹೇಳಿದ್ದೇನು?

Srujan-Arun: ಸೃಜನ್ ಲೋಕೇಶ್ ಹಾಗೂ ಸಚಿವರ ಪುತ್ರನ ನಡುವೆ ಫೈಟ್​ ನಡೆದಿದ್ದು ನಿಜನಾ? ಅರುಣ್ ಸೋಮಣ್ಣ ಹೇಳಿದ್ದೇನು?

ಅರುಣ್​ ಸೋಮಣ್ಣ,  ಸೃಜನ್​ ಲೋಕೇಶ್​

ಅರುಣ್​ ಸೋಮಣ್ಣ, ಸೃಜನ್​ ಲೋಕೇಶ್​

ಯಾವುದೇ ಗಲಾಟೆ ನಡೆದಿಲ್ಲ, ಅದೊಂದು ಸುಳ್ಳು ಸುದ್ದಿಯಾಗಿದೆ. ಯಾರೋ ವಿರೋಧಿಗಳು ಈ ತರಹದ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಸಚಿವ ವಿ.ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಟ್ವೀಟ್ ಮಾಡಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಬೆಂಗಳೂರು (ನ. 02): ನಟ ಸೃಜನ್​ ಲೋಕೇಶ್ (Srujan Lokesh) ಹಾಗೂ ವಸತಿ ಸಚಿವ ಸೋಮಣ್ಣ (V Somanna) ಪುತ್ರ  ಅರುಣ್​ ನಡುವೆ ಜಗಳವಾಗಿದ್ದು, ಗಲಾಟೆ ಹೊಡಿ-ಬಡಿ ಹಂತಕ್ಕೂ ತಲುಪಿತ್ತು ಎಂಬ ಸುದ್ದಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಹರಿದಾಡ್ತಿದೆ. ಇದಕ್ಕೆ ಸಚಿವ ಸೋಮಣ್ಣ ಅವರ ಪುತ್ರ ಅರುಣ್ (Arun)​ ಅವರೇ ಸ್ಪಷ್ಟನೆ ನೀಡಿದ್ದಾರೆ. ನನಗೂ ಸೃಜನ್​ ಲೋಕೇಶ್​ ಅವರ ನಡುವೆ ಜಗಳ, ಗಲಾಟೆಯಾಗಿದೆ ಎನ್ನುವ ಸುದ್ದಿ ಶುದ್ಧ ಸುಳ್ಳು ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ. 


    ಯಾವುದೇ ಗಲಾಟೆ ನಡೆದಿಲ್ಲ, ಎಲ್ಲಾ ಸುಳ್ಳು


    ಸಾಮಾಜಿಕ ಜಾಲತಾಣಗಳಲ್ಲಿ ನನಗೂ ಹಾಗೂ ನಟ ಸೃಜನ್ ಲೋಕೇಶ್ ಅವರ ನಡುವೆ ಜಗಳವಾಗಿದೆ ಎನ್ನುವ ಸುಳ್ಳು ಸುದ್ದಿಯೊಂದು ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆ ತರಹದ ಯಾವುದೇ ಘಟನೆ ನಡೆದಿಲ್ಲ, ಅದೊಂದು ಸುಳ್ಳು ಸುದ್ದಿಯಾಗಿರುತ್ತದೆ. ಯಾರೋ ವಿರೋಧಿಗಳು ಈ ತರಹದ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಸಚಿವ ವಿ.ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಬುಧವಾರ ಸಂಜೆ ಟ್ವೀಟ್ ಮಾಡಿದ್ದಾರೆ.




    ರಾಜಕೀಯ ವಿರೋಧಿಗಳ ಕುತಂತ್ರ


    ಚುನಾವಣೆ ಸಮೀಪಿಸುತ್ತಿದೆ. ನಮ್ಮ ತಂದೆಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ವಿರೋಧಿಗಳನ್ನು ಕಂಗೆಡಿಸಿವೆ. ಇದು ಹತಾಷೆಗೊಂಡಿರುವ ರಾಜಕೀಯ ವಿರೋಧಿಗಳ ಕುತಂತ್ರ, ಈ ಮೂಲಕ‌ ತಂದೆಯವರಿಗೆ ಕೆಟ್ಟ ಹೆಸರು ತರಲು ಯತ್ನ ನಡೆಯುತ್ತಿರಬಹುದು ಎಂದು ಅರುಣ್​ ಸೋಮಣ್ಣ ಹೇಳಿದ್ದಾರೆ.



    ನನಗೆ ಯಾವುದೇ ಮಾಹಿತಿ ಇಲ್ಲ ಎಂದ್ರು ಸೋಮಣ್ಣ


    ಈ ಕುರಿತು ಚಾಮರಾಜನಗರದಲ್ಲಿ ಮಾತನಾಡಿರುವ ಸಚಿವ ವಿ.ಸೋಮಣ್ಣ, ‘ನಾನು ರಾಜಕಾರಣಿ. ಯಾರೇ ತಪ್ಪು ಮಾಡಿದ್ದರೂ ತಪ್ಪೆ. ನನಗೆ ಯಾವುದೇ ಮಾಹಿತಿ ಇಲ್ಲ. 10 ರಿಂದ 12 ವರ್ಷದಿಂದ ನನ್ನ ಮಗ ಬೇರೆ ಮನೆಯಲ್ಲಿದ್ದಾನೆ. ಏನೇನೋ ಮಾತನಾಡುವುದರಲ್ಲಿ ಅರ್ಥ ಇಲ್ಲ. ಸತ್ಯ ಸಂಗತಿ ತಿಳಿದುಕೊಂಡು ಪರಾಮರ್ಶೆ ಮಾಡಿ ಮಾತನಾಡಿ. ನನಗೆ ಈ ಬಗ್ಗೆ ಸ್ವಲ್ಪವೂ ಮಾಹಿತಿ ಎಂದು ಸಚಿವ ಸೋಮಣ್ಣ ಹೇಳಿದ್ರು.


    ಯಾವುದೇ ದೂರು ದಾಖಲಾಗಿಲ್ಲ


    ಬೆಂಗಳೂರಿನ ಪಬ್ ಒಂದರಲ್ಲಿ ನಟ ಸೃಜನ್ ಲೋಕೇಶ್ ಹಾಗೂ ಅರುಣ್ ಸೋಮಣ್ಣ ನಡುವೆ ಹೊಡೆದಾಟ ಅಥವಾ ಗಲಾಟೆ ಸಂಭವಿಸಿದೆ ಎಂದು ಕೆಲ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು. ಆದರೆ, ಈ ಬಗ್ಗೆ ಸೃಜನ್ ಲೋಕೇಶ್ ಪ್ರತಿಕ್ರಿಯಿಸಿಲ್ಲ. ಗಲಾಟೆ ವಿಚಾರವಾಗಿ ಯಾವುದೇ ದೂರು ದಾಖಲಾಗಿಲ್ಲ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.


    ಇದನ್ನೂ ಓದಿ: Jahvi Kapoor: ಜೂನಿಯರ್ NTR ಜೊತೆ ಜಾನ್ವಿ! ಸೌತ್​ ಇಂಡಸ್ಟ್ರಿಗೆ ಶ್ರೀದೇವಿ ಮಗಳ ಎಂಟ್ರಿ


    ಗಲಾಟೆ ನಡೆದಿದೆ ಎನ್ನಲಾದ ವಿಡಿಯೋದಲ್ಲಿ ಏನಿದೆ


    ಬ್ಯಾಡ್ಮಿಂಟನ್ ಟೂರ್ನಮೆಂಟ್ ಗಾಗಿ ಸೃಜನ್ ಲೋಕೇಶ್ ಟೀಮ್ ಪ್ರಾಕ್ಟಿಸ್ ಮಾಡುತ್ತಿತ್ತು. ಪ್ರಾಕ್ಟಿಸ್ ಮುಗಿಸಿ ಕಿಂಗ್ಸ್ ಕ್ಲಬ್ ನಲ್ಲಿ ಪಾರ್ಟಿಗಾಗಿ ಎಲ್ಲರೂ ಸೇರಿಕೊಂಡಿದ್ದರು. ಈ ಟೀಮ್ ದೊಡ್ಡ ಧ್ವನಿಯಲ್ಲಿ ಕಿರುಚಾಡುತ್ತಿದ್ದರು ಎನ್ನಲಾಗಿದೆ. ಇದೇ ವೇಳೆಯೇ ಅದೇ ಕ್ಲಬ್ ನಲ್ಲಿದ್ದ ಅರುಣ್ ಸೋಮಣ್ಣ ಕಿರುಚಾಡುತ್ತಿದ್ದವರನ್ನು ಪ್ರಶ್ನೆ ಮಾಡಿದ್ದರು. ಮಾತಿಗೆ ಮಾತು ಬೆಳೆದು ಹೊಡೆದಾಡುವ ಹಂತಕ್ಕೆ ಬಂದಿತ್ತು ಎಂದು ಹೇಳಲಾಗುತ್ತಿದೆ.

    Published by:ಪಾವನ ಎಚ್ ಎಸ್
    First published: