• Home
  • »
  • News
  • »
  • state
  • »
  • Cabinet Expansion: ಸಚಿವ ಸಂಪುಟ ವಿಸ್ತರಣೆ ಆಗುತ್ತಾ? ಅರುಣ್ ಸಿಂಗ್ ಜೊತೆ ಸವದಿ, ರಮೇಶ್ ಜಾರಕಿಹೊಳಿ ರಹಸ್ಯ ಸಭೆ

Cabinet Expansion: ಸಚಿವ ಸಂಪುಟ ವಿಸ್ತರಣೆ ಆಗುತ್ತಾ? ಅರುಣ್ ಸಿಂಗ್ ಜೊತೆ ಸವದಿ, ರಮೇಶ್ ಜಾರಕಿಹೊಳಿ ರಹಸ್ಯ ಸಭೆ

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪ್ರತ್ಯೇಕವಾಗಿ ಸಿಂಗ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಹಿಡಿತ ಸಾಧಿಸಲು ಇಬ್ಬರು ನಾಯಕರು ತಮ್ಮದೇ ರೀತಿಯಲ್ಲಿ ಸ್ಟ್ರ್ಯಾಟಜಿ ಮಾಡುತ್ತಿದ್ದಾರೆ ಎನ್ನಲಾಗಿದೆ.

  • News18 Kannada
  • Last Updated :
  • Karnataka, India
  • Share this:

ಬೆಳಗಾವಿ: ರಾಜ್ಯದಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ (Assembly Election 2023) ಇನ್ನೂ ಕೆಲವೇ ತಿಂಗಳಗಳು ಬಾಕಿ ಉಳಿದಿದೆ. ಈ ನಡುವೆ ಮತ್ತೆ ಸಂಪುಟ ವಿಸ್ತರಣೆಯ (Cabinet Expansion) ಮಾತುಗಳು ಕೇಳಿ ಬಂದಿವೆ. ಸಂಪುಟದಲ್ಲಿ ಸೇರ್ಪಡೆಯಾಗಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Former Minister Ramesh Jarkiholi), ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Former DCM Laxman Savadi) ತೆರೆ ಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ನಿನ್ನೆ ರಾತ್ರಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ (BJP Leader Arun Singh) ಜತೆಗೆ ಇಬ್ಬರು ನಾಯಕರು ಪ್ರತ್ಯೇಕವಾಗಿ ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ. ಇಬ್ಬರ ಭೇಟಿ ಬಳಿಕ ಮಾತನಾಡಿದ ಅರುಣ್ ಸಿಂಗ್ ರಾಜ್ಯದಲ್ಲಿ ಶೀಘ್ರದಲ್ಲಿಯೇ ಸಂಪುಟ ವಿಸ್ತರಣೆ ಆಗೋ ಬಗ್ಗೆ ಸಿಎಂ ಹೇಳಿದ್ದಾರೆ ಎಂದು ಹೇಳಿದರು.


ಬೆಳಗಾವಿಯ ನ್ಯೂ ಸರ್ಕ್ಯುಟ್ ಹೌಸ್​​ನಲ್ಲಿ ಬಿಜೆಪಿ ನಾಯಕರ ಮಹತ್ವದ ಸಭೆ ನಡೆದಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಹಲವು ನಾಯಕರು ಪಾಲ್ಗೊಂಡಿದ್ದರು. ಜಿಲ್ಲೆಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ಸಿಂಗ್ ನಾಯಕರ ಜತೆಗೆ ಚರ್ಚೆ ನಡೆಸಿದ್ದಾರೆ.


ಬೆಳಗಾವಿಯಲ್ಲಿ ಗೆಲ್ಲಲು ಇಬ್ಬರ ಪ್ಲ್ಯಾನ್


ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪ್ರತ್ಯೇಕವಾಗಿ ಸಿಂಗ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಹಿಡಿತ ಸಾಧಿಸಲು ಇಬ್ಬರು ನಾಯಕರು ತಮ್ಮದೇ ರೀತಿಯಲ್ಲಿ ಸ್ಟ್ರ್ಯಾಟಜಿ ಮಾಡುತ್ತಿದ್ದಾರೆ ಎನ್ನಲಾಗಿದೆ.


Arun singh hints karnataka cabinet expansion
ಅರಣ್ ಸಿಂಗ್


ಇನ್ನೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ನಾಲ್ವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿತ್ತು. ಸಿಡಿ ಪ್ರಕರಣ ಹಿನ್ನೆಲೆಯಲ್ಲಿ ರಮೇಶ್​ ಜಾರಕಿಹೊಳಿ ರಾಜೀನಾಮೆ ನೀಡಿದ್ದರು.


ಇಬ್ಬರಿಗೂ ಸಿಗುತ್ತಾ ಸಂಪುಟದಲ್ಲಿ ಸ್ಥಾನ?


ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಉಮೇಶ ಕತ್ತಿ ಹಾಗೂ ಶಶಿಕಲಾ ಜೊಲ್ಲೆಗೆ ಅವಕಾಶ ನೀಡಲಾಗಿತ್ತು. ಆದರೆ ಉಮೇಶ ಕತ್ತಿ ಅವರ ಅಕಾಲಿಕ ನಿಧನದ ಬಳಿಕ ಈಗ ಜಿಲ್ಲೆಯ ಶಶಿಕಲಾ ಜೊಲ್ಲೆ ಒಬ್ಬರೇ ಸಚಿವರಾಗಿದ್ದಾರೆ. ಶಶಿಕಲಾ ಜೊಲ್ಲೆ ಸಹ ಕೇವಲ ನಿಪ್ಪಾಣಿ ಕ್ಷೇತ್ರಕ್ಕೆ ಸಿಮೀತರಾಗಿದ್ದಾರೆ. ಇದರಿಂದ ಸಂಘಟನೆ, ಮುಂದಿನ ಚುನಾವಣೆಗೆ ಹೆಚ್ಚು ಸ್ಥಾನ ಗೆಲ್ಲಲ್ಲು ಕಷ್ಟವಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ.


Arun singh hints karnataka cabinet expansion
ಅರಣ್ ಸಿಂಗ್


ಇದನ್ನೂ ಓದಿ:  Sri Ramulu Tweet: ಕಾಂಗ್ರೆಸ್ ಸಮಾವೇಶದ ಕಸ ಕ್ಲೀನ್ ಮಾಡಿದ ಶ್ರೀರಾಮುಲು! ಕೈ ನಾಯಕರಿಗೆ ಸಚಿವರು ಕೊಟ್ರು ಟಾಂಗ್


ಅರುಣ್ ಸಿಂಗ್ ಜೊತೆ ಚರ್ಚೆ


ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಸ್ಥಾನ ನೀಡಬೇಕು ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಇಬ್ಬರು ನಾಯಕರು ಸಂಪುಟದಲ್ಲಿ ಸ್ಥಾನಮಾನ ಪಡೆಯಲು ಕಸರತ್ತು ಆರಂಭಿಸಿದ್ದಾರೆ. ಅರುಣ್ ಸಿಂಗ್ ಭೇಟಿ ಸಂದರ್ಭದಲ್ಲಿ ಈ ಬಗ್ಗೆ ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.


ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣೆ


ಸಭೆಯ ಬಳಿಕ ಮಾತನಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯದಲ್ಲಿ ಆದಷ್ಟು ಬೇಗ ಸಂಪುಟದ ವಿಸ್ತರಣೆ ಆಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ನಮ್ಮ ಸ್ನೇಹಿತರಾಗಿದ್ದಾರೆ. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಅವರೊಂದಿಗೆ ಚರ್ಚೆ ಆಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವಿನಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ಪ್ರಮುಖವಾಗಿ ಇರಲಿದೆ ಎಂದರು.


Arun singh hints karnataka cabinet expansion
ಅರಣ್ ಸಿಂಗ್


ಇದನ್ನೂ ಓದಿ:  BJP Leaders: ಯತ್ನಾಳ್ ನಮ್ಮ ಪಕ್ಷದ ನಾಯಕರಲ್ಲ, ಆದ್ರೂ ಬಿಜೆಪಿಗೆ ಡ್ಯಾಮೇಜ್ ತಪ್ಪಿಲ್ಲಎಂದ್ರು ಅರುಣ್ ಸಿಂಗ್


ಜಗದೀಶ್​ ಶೆಟ್ಟರ್​ರನ್ನು ಸೈಡ್​ ಲೈನ್ ಮಾಡಿಲ್ಲ


ಯತ್ನಾಳ್ ಹೇಳಿಕೆಯಿಂದ ಬಿಜೆಪಿಗೆ ಡ್ಯಾಮೇಜ್ ಆಗೋದು ಖಚಿತ ಎಂದು ಅರುಣ್​ ಸಿಂಗ್ ಹೇಳಿದ್ದಾರೆ. ಅಲ್ಪಸಂಖ್ಯಾತ ಮೀಸಲಾತಿ ಕೊಡಬಾರದೆಂದು ಶಾಸಕ ಅರವಿಂದ ಬೆಲ್ಲದ್ ಮತ್ತು ಯತ್ನಾಳ್ ಹೇಳಿದ್ದು ಅವರ ವೈಯಕ್ತಿಕ ಅಭಿಪ್ರಾಯ. ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರನ್ನು ಪಕ್ಷ ಸೈಡ್‌ಲೈನ್ ಮಾಡಿಲ್ಲ, ಅವರು ಕೋರ್ ಕಮಿಟಿಯಲ್ಲಿದ್ದಾರೆ. ಅವರಿಗೂ ಟಿಕೆಟ್ ಸಿಗಲಿದೆ. ನಮ್ಮ ಪಕ್ಷದ ನಾಯಕರಲ್ಲಿ ಯಾವುದೇ ಕಿತ್ತಾಟಗಳಿಲ್ಲ ಎಂದು ಅರುಣ್ ಸಿಂಗ್ ಸಮಜಾಯಿಷಿ ನೀಡಿದರು.

Published by:Mahmadrafik K
First published: