• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shivalinge Gowda: ನೀವೂ ಸುಮ್ಮನಿರಿ, ನಾನೂ ಸುಮ್ಮನಿರ್ತೀನಿ: 'ದಳ'ಪತಿಗಳಿಗೆ ಶಿವಲಿಂಗೇಗೌಡ ವಾರ್ನಿಂಗ್!

Shivalinge Gowda: ನೀವೂ ಸುಮ್ಮನಿರಿ, ನಾನೂ ಸುಮ್ಮನಿರ್ತೀನಿ: 'ದಳ'ಪತಿಗಳಿಗೆ ಶಿವಲಿಂಗೇಗೌಡ ವಾರ್ನಿಂಗ್!

ಶಾಸಕ ಶಿವಲಿಂಗೇಗೌಡ

ಶಾಸಕ ಶಿವಲಿಂಗೇಗೌಡ

ಜೆಡಿಎಸ್ ನಾಯಕರ ವಿರುದ್ಧ ಶಾಸಕ ಶಿವಲಿಂಗೇಗೌಡ ಗುಡುಗಿದ್ದಾರೆ. "ಈ ಭಾರಿ ಒಂದು ವಿಧಾನಸಭಾ ಕ್ಷೇತ್ರ ಹೋಗುತ್ತೆ ಅಂತ ಪಾಪದವನು ಸಿಕ್ಕಿದ್ದೀನಿ ಅಂತ ಆರೋಪ ಮಾಡ್ತವ್ರೆ. ನನ್ನ ಪಾಡಿಗೆ ನಾನಿರ್ತಿನಿ, ನಿಮ್ಮ ಪಾಡಿಗೆ ನೀವಿರಿ ಅಷ್ಟೇ. ನಾನು ಏನು ಮಾತನಾಡಲ್ಲ, ನೀವು ಏನು ಮಾತಾಡಬೇಡಿ ಅಷ್ಟೇ" ಅಂತ ವಾರ್ನಿಂಗ್ ಕೊಟ್ಟಿದ್ದಾರೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Hassan, India
  • Share this:

ಅರಸೀಕೆರೆ, ಹಾಸನ: ಜೆಡಿಎಸ್‌ನಲ್ಲಿ ಟಿಕೆಟ್ (JDS Ticket) ಹಂಚಿಕೆ ಕುರಿತಂತೆ ಭಿನ್ನಮತ ಭುಗಿಲೆದ್ದಿದೆ. ಅದರಲ್ಲೂ ದೇವೇಗೌಡರ (HD Deve Gowda) ತವರೂರು ಹಾಸನದಲ್ಲೇ (Hassan) ಬಂಡಾಯ ಜೋರಾಗುತ್ತಿದೆ. ಹಾಸನ ಟಿಕೆಟ್ ಮೇಲೆ ಗೌಡರ ಸೊಸೆ, ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna) ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ಕಣ್ಣಿಟ್ಟಿದ್ದರೆ, ಖುದ್ದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರೇ ಅಡ್ಡಗಾಲು ಹಾಕುತ್ತಿದ್ದಾರೆ. ಮತ್ತೊಂದೆಡೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ (Arsikere MLA Shivalinge Gowda) ವಿರುದ್ಧ ದಳಪತಿಗಳು ತಿರುಗಿ ಬಿದ್ದಿದ್ದಾರೆ. ಎಚ್‌ಡಿಕೆ ಅವರೇ ಶಿವಲಿಂಗೇಗೌಡ ವಿರುದ್ಧ ಆರೋಪಿಸಿದ್ದಾರೆ. ಈ ಆರೋಪಗಳಿಗೆ ಇದೀಗ ಶಿವಲಿಂಗೇಗೌಡರೇ ಪ್ರತಿಕ್ರಿಯೆ ನೀಡಿದ್ದಾರೆ.


“ಕ್ಷೇತ್ರದ ಜನರ ಅಭಿಪ್ರಾಯ ಕೇಳ್ತೀನಿ”


ಹಾಸನದ ಅರಸೀಕೆರೆಯಲ್ಲಿ ಮಾತನಾಡಿದ ಶಾಸಕ ಕೆ.ಎಂ. ಶಿವಲಿಂಗೇಗೌಡ, ಸ್ವಾಭಿಮಾನಿ ಕಾರ್ಯಕರ್ತರ ಸಮಾವೇಶಕ್ಕೆ ನಾನು ಗೈರು ಹಾಜರಾಗಿದ್ದ ಬಗ್ಗೆ ಕುಮಾರಣ್ಣ, ಇಬ್ರಾಹಿಂ ಟೀಕಾ ಪ್ರಹಾರ ಮಾಡಿದ್ದಾರೆ. ಕಾಂಗ್ರೆಸ್ ಸೇರ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಹೇಳಿರಬಹುದು ನಂಗೆ ಗೊತ್ತಿಲ್ಲ. ಇಷ್ಟೆಲ್ಲಾ ಆದ್ಮೇಲೆ ಪಕ್ಷ ಬಿಡಬಹುದು ಅಂತ ಸ್ವಾಗತ ಮಾಡಿರಬಹುದು. ಯಾರು ಏನೇ ಹೇಳಿದ್ರು ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜನರ ಸಭೆ ಕರೀತಿನಿ. ಅವರು ಏನು ಹೇಳ್ತಾರೆ ಅದೇ ನನ್ನ ನಿರ್ಧಾರ ಅಂತ ಹೇಳಿದ್ದಾರೆ.




“ದೇವೇಗೌಡರನ್ನು ಭೇಟಿಯಾಗಲು ಆಗಲಿಲ್ಲ”


ದೇವೇಗೌಡರನ್ನು ಎರಡು ದಿನ ನೋಡಲು ಹೋಗಿದ್ದೆ. ಆದ್ರೆ ಅವರು ಫಿಜಿಯೋಥೆರಪಿಯಲ್ಲಿ ಇದ್ರು ಸಿಗಲಿಲ್ಲ. ಫೋನ್‌ನಲ್ಲಿ ಮಾತಾಡಿದ್ರು, ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ್ದು ಬೇಜಾರ್ ಆಯ್ತು ಅಷ್ಟೇ ಅಂದೆ. ಎರಡು ಮೂರು ಸಾರಿ ಪ್ರಯತ್ನಿಸಿದ್ರೂ ನೇರವಾಗಿ ಮಾತನಾಡಲು‌ ಆಗಲಿಲ್ಲ ಅಂತ ಬೇಸರಿಸಿದರು.


ಇದನ್ನೂ ಓದಿ:  Nikhil Kumaraswamy: ನಿನ್ನೆ ಸಿದ್ದರಾಮಯ್ಯಗೆ ದೇಣಿಗೆ, ಇಂದು ನಿಖಿಲ್‌ ಕುಮಾರಸ್ವಾಮಿಗೆ ದೇಣಿಗೆ! ಕೋಲಾರದಲ್ಲಿ 5 ಸಾವಿರ ರೂಪಾಯಿ ಕೊಟ್ಟ ಪುಟ್ಟ ಬಾಲಕಿಯರು


“ನಾನೂ ಜಾತಿ  ಲೆಕ್ಕಾಚಾರದಲ್ಲೇ ರಾಜಕಾರಣ ಮಾಡ್ತೀನಿ”


ರಾಜ್ಯಸಭೆ ಚುನಾವಣೆಯಲ್ಲಿ ಕುಪೆಂದ್ರ ರೆಡ್ಡಿಗೆ ತೋರಿಸಿ ವೋಟು ಹಾಕಲಿಲ್ವಾ?  ದುಡ್ಡು ಇಸ್ಕಂಡು ಮೋಸ ಮಾಡಿದ್ನಾ? ಎಲ್ಲರೂ ಜಾತಿ ಲೆಕ್ಕಚಾರ ಹಾಕ್ತಾರೆ, ಈಗ ಬೇಡ ಅದು. ನಾನು ಜಾತಿ ಲೆಕ್ಕಾಚಾರದಲ್ಲೇ ರಾಜಕಾರಣ ಮಾಡೋದು. ಯಾರಾದರೂ ರೇವಣ್ಣನವರ ಕಿವಿಗೆ ಹೂವು ಇಡೋಕಾಗುತ್ತಾ, ಕುಮಾರಸ್ವಾಮಿನಾದ್ರು ಹೂವು ಇಡಲು ಆಗುತ್ತಾ? ದಿನಾ‌ ಹೂವು ಹಾಕಿಸ್ಕೊಂಡು ಬರ್ತಾರೆ. ಯಾವ ಸಾಮ್ರಾಜ್ಯಕ್ಕೋಸ್ಕರ ರೇವಣ್ಣಗೆ ಹೂವು ಮುಡಿಸಬೇಕು? ಏನು ಕೇಳೋದಕ್ಕೆ ರೇವಣ್ಣಗೆ ಹೂವು ಮುಡಿಸಬೇಕು? ಅಂತ ಪ್ರಶ್ನಿಸಿದ್ರು.


“ನಾನು ಸುಮ್ಮನಿರ್ತೀನಿ, ನೀವೂ ಸುಮ್ಮನಿರಿ”


ನಿರಸಾದಾಯವಾಗಿ ಮೂರು ಭಾರಿ ಗೆದ್ದಿದ್ದೀನಿ. ಈ ಭಾರಿ ಒಂದು ವಿಧಾನಸಭಾ ಕ್ಷೇತ್ರ ಹೋಗುತ್ತೆ ಅಂತ ಪಾಪದವನು ಸಿಕ್ಕಿದ್ದೀನಿ ಅಂತ ಆರೋಪ ಮಾಡ್ತವ್ರೆ. ನನ್ನ ಪಾಡಿಗೆ ನಾನಿರ್ತಿನಿ, ನಿಮ್ಮ ಪಾಡಿಗೆ ನೀವಿರಿ ಅಷ್ಟೇ. ನಾನು ಏನು ಮಾತನಾಡಲ್ಲ, ನೀವು ಏನು ಮಾತಾಡಬೇಡಿ ಅಷ್ಟೇ.


“ಕುಣಿಲಾರದವಳು ನೆಲಡೊಂಕು ಅಂದ್ಲಂತೆ”


ಕುಣಿಲಾರದವಳು ನೆಲಡೊಂಕು ಅಂದ್ಲಂತೆ ಅಂತ ಕುಟುಕಿದ ಶಿವಲಿಂಗೇಗೌಡ, ಅವರೇನಾದ್ರು ಬಿಚ್ಚಿದ್ರೆ, ನಾವು ಬಿಚ್ಬೇಕಾಗುತ್ತೆ ಅಂತ ಎಚ್ಚರಿಸಿದ್ದಾರೆ. ಹಾಲು ಉತ್ಪಾದಕರ ‌ಸಂಘದವರನ್ನು ಇಂದಿನ ಸಭೆಗೆ ಕರೆದುಕೊಂಡು ಬರಲು ಯಾರು ಹೇಳಿದ್ದು? ಡಿಸಿಸಿ ಬ್ಯಾಂಕ್ ಸುಪ್ರವೈಸರ್ ದುಡ್ಡು ಹಂಚೋದಕ್ಕಾ ಇರೋದು? ಹೆಂಗ್ ಕರೆದುಕೊಂಡು ಬಂದ್ರು ಹೇಳ್ಲಾ, ಅವೆಲ್ಲಾ ಬೇಡ ಅಂತ ದಳಪತಿಗಳ ವಿರುದ್ಧ ಶಾಸಕ ಕೆ.ಎಂ. ಶಿವಲಿಂಗೇಗೌಡ ಆಕ್ರೋಶದ ಮಾತನ್ನಾಡಿದ್ದಾರೆ.




ಸಿಎಂ ಇಬ್ರಾಹಿಂ ಬಗ್ಗೆ ಆಕ್ರೋಶ


ಸಿ.ಎಂ.ಇಬ್ರಾಹಿಂ ಅವರೇ ತಾನೇ ಸಿದ್ರಾಮಣ್ಣರನ ಹೊರಗೆ ಕರ್ಕಂಡು ಬಂದು ಅಹಿಂದಾ ಕಟ್ಟಿದವರು. ಆಗ ದೇವೇಗೌಡರ ಬಗ್ಗೆ ಏನೇನ್ ಭಾಷಣ ಮಾಡಿದ್ರು ಅಂತ ಟೇಪ್ ಬೇಕಾ, ರೆಕಾರ್ಡ್ ಬೇಕಾ? ಅವರು ದೇವೇಗೌಡರಿಗೆ ಒಂದು ಮಾತು ಮಾತಾಲಿಲ್ವಂತೆ ಇವತ್ತಿನವರೆಗೆ ಟೇಪ್ ಕೊಡಬೇಕಾ ಹೇಳಿ, ಸುಮ್ನೆ ಏಕೆ‌ ಇಬ್ರಾಹಿಂ ಅಣ್ಣಾ ಮಾತಾಡಬೇಕು? ಅವರು ವಚನ ಸಾಹಿತ್ಯ ಓದಿದವರು, ನಾವೆಲ್ಲ ಮುಗ್ದರು ನಮಗೇನು ಗೊತ್ತಿಲ್ಲ. ಆಗ ದೇವೇಗೌಡರಿಗೆ ವಿಷ ಇಟ್ಟು ಇಬ್ರಾಹಿಂ, ಸಿದ್ದರಾಮಯ್ಯ ಅವರೆಲ್ಲಾ ಬಿಟ್ಟು ಹೋದ್ರಲಾ ಅವರು ಆಗ ವಿಷ ಕೊಟ್ಟು ಹೋಗಲಿಲ್ವಾ? ಹಿಂದೆ ಅಹಿಂದ ಕಟ್ಟಿದವರೇ ಇವರಲ್ವಾ, ಇವರೇ ಜೆಡಿಎಸ್‌ನ ವೀಕ್ ಮಾಡ್ದವ್ರಲ್ವಾ? ಅವಾಗ ವಿಷ ಕೊಟ್ಟು ಹೋಗಲಿಲ್ವಾ? ಅಂತ ಖಾರವಾಗಿ ಪ್ರಶ್ನಿಸಿದ್ರು.

Published by:Annappa Achari
First published: