ಮಂಡ್ಯ: ಜೆಡಿಎಸ್ ಕಾರ್ಯಕರ್ತನಿಗೆ (JDS Activist) ಅರಸೀಕೆರೆ ಶಾಸಕ (Arsikere MLA) ಶಿವಲಿಂಗೇಗೌಡ ಧಮ್ಕಿ (K. L. Shivalinge Gowda) ಹಾಕಿದ್ದಾರೆ ಎನ್ನುವಆಡಿಯೋ ಒಂದು ಸಖತ್ ವೈರಲ್ ಆಗಿತ್ತು. ತಾನು ಕೊಟ್ಟ ಹಣವನ್ನ ವಾಪಸ್ ಕೊಡಿ ಅನ್ನುವ ಆಡಿಯೋ ವೈರಲ್ ಆಗಿತ್ತು. ಆ ಬಳಿಕ ಶಾಸಕರು ಒಂದು ವೋಟ್ಗೆ (Vote) 50 ಸಾವಿರ ಹಣವನ್ನ ನೀಡಿದ್ರಾ ಅನ್ನೋ ಮಾತು ಕೇಳಿಬಂದಿತ್ತು. ಸದ್ಯ ಘಟನೆ ಕುರಿತಂತೆ ಸ್ವತಃ ಶಾಸಕರೇ ಸ್ಪಷ್ಟನೆ ಕೊಟ್ಟಿದ್ದು, ಫೋನ್ನಲ್ಲಿ ಏನೆಲ್ಲಾ ಮಾತನಾಡಿದ್ದೀರಿ? ಯಾಕೆ ಮಾತನಾಡಿದ್ದೀನಿ? ವೈರಲ್ ಆಡಿಯೋ (Viral Audio) ಹಿಂದಿನ ಅಸಲಿ ಕಥೆ ಏನು ಎಂದು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ನಿನ್ನೆ ಭವಾನಿ ರೇವಣ್ಣ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾತಿನಿಂದ ಹಾಸನ ಜೆಡಿಎಸ್ನಲ್ಲಿ ಸಂಚಲನ ಮೂಡಿಸಿದರೆ, ಇತ್ತ ಶಿವಲಿಂಗೇಗೌಡರ ಆಡಿಯೋ ವೈರಲ್ ಆಗಿ ಪಕ್ಷಕ್ಕೆ ಮುಜುಗರ ತರಿಸಿತ್ತು. ಸದ್ಯ ಈ ಕುರಿತಂತೆ ಜೆಡಿಎಸ್ ಶಾಸಕರು, ಅರಸೀಕೆರೆ ತಾಲೂಕಿನ ಗಂಡಸಿ ಹ್ಯಾಂಡ್ ಪೋಸ್ಟ್ನಲ್ಲಿ ಲಾಳನಕೆರೆ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವೇಳೆ ಮಾತನಾಡಿ ಆಡಿಯೋ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ನೀನು ಸಹಕಾರ ಮಾಡಬೇಕಪ್ಪ ಅಂತ ಮಾತನಾಡಲು ಫೋನ್ ಮಾಡಿದ್ದೆ
ಮುಂದಿನ ಚುನಾವಣೆಯಲ್ಲಿ ನೀನು ಸಹಕಾರ ಮಾಡಬೇಕಪ್ಪ ಅಂತ ಮಾತನಾಡಲು ಫೋನ್ ಮಾಡಿದ್ದೆ. ಫೋನ್ ಮಾಡಿದಾಗ ಒಂಥರಾ ಮಾತನಾಡಿದ್ದ. ಬಹಳ ಬುದ್ದಿವಂತಿಕೆ ಅವನ್ದು, ನನಗೆ ಅವನು ಫೋನ್ ರೆಕಾರ್ಡ್ ಮಾಡ್ತಾನೆ ಅಂತ ಗೊತ್ತಿಲ್ಲ. ಮೊದಲು ಮಾತಾಡಿರೋದು ಬಿಟ್ಬಿಟ್ಟಿದ್ದಾನೆ, ಆ ಬಳಿಕ 2ನೇ ಸಾರಿ ನನ್ನ ದುಡ್ಡು ಕೇಳಿದ್ದರು ಅದು ಇದು ಅಂತ ಬಿಟ್ಟ.
ಇದನ್ನೂ ಓದಿ: Bhavani Revanna: ಹಾಸನದಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ; ವೇದಿಕೆಯಲ್ಲಿ ಸ್ವಯಂ ಘೋಷಿಸಿಕೊಂಡ ಭವಾನಿ ರೇವಣ್ಣ
ನಡೆದ ಕಥೆ ಹೇಳ್ತಿನಿ ಕೇಳಿ, ರಾಮಚಂದ್ರು ಇಲ್ಲೇ ಇದ್ದಾರೆ
ಅವನು ಮೂರು ದಿವಸ ಬಂದು ನಮ್ಮ ತೋಟದಲ್ಲಿ ಕೂತ. ರಾಮಚಂದ್ರು ಇವರೆಲ್ಲಾ ಹೇಳಿ ಇವನಿಗೆ ಉಪಾಧ್ಯಕ್ಷ ತಪ್ಪಿದೆ, ಏನೋ ಸ್ವಲ್ಪ ಕಷ್ಟದಲ್ಲಿ ಇದ್ದಾನೆ ಸಹಾಯ ಮಾಡಿ ಎಂದಿದ್ದರು. ನಾನು ಮೂರು ದಿವಸ ಏನ್ ಗಮನಕ್ಕೆ ತೆಗೆದುಕೊಂಡಿರಲಿಲ್ಲ. ಆಮೇಲೆ ಕರೆದು ಕಷ್ಟ, ಸುಖ ಇರುತ್ತೆ ಅಂತ ಹೇಳಿ ತಗಳಪ್ಪಾ, ಎಲ್ಲಾ ಹೇಳ್ತಾ ಇದ್ದಾರೆ ಅಂತ ಹೇಳಿ ನಾನೇ ಅವನಿಗೆ ಐವತ್ತು ಸಾವಿರ ದುಡ್ಡು ಕೊಟ್ಟೆ.
ಆ ಬಳಿಕ ಅಣ್ಣ ಎಂಎಲ್ಎ ಚುನಾವಣೆಯಲ್ಲಿ ನಿನಗೆ ವೋಟ್ ಹಾಕುತ್ತೀವಿ, ಎಂಪಿಗೆ ಚುನಾವಣೆಗೆ ಮಾತ್ರ ಬೇರೆ ಕಡೆ ಹಾಕ್ತಿವಿ ಎಂದಿದ್ದ. ಆಗ ನಾನು ಹಂಗೆಲ್ಲ ಪಾರ್ಟಿ ದ್ರೋಹ ಮಾಡಬಾರದು ಕಣಯ್ಯ! ಒಂದು ಪಾರ್ಟಿ ಅಂದ ಮೇಲೆ ಒಂದೆ ಕಡೆ ಇರ್ಬೇಕು. ಈಗ ಯಾಕೆ ಮೊದಲು ಎಂಎಲ್ಎ ಚುನಾವಣೆ ಮುಗಿಸೋಣಾ ನಡಿ ಆಮೇಲೆ ಇವು ನೋಡೋಣ ಅಂತ ಹೇಳಿದ್ದೆ.
ನಿಮ್ಮ ಮನೆಗೆ ಬಂದಿದ್ನಾ? ದುಡ್ಡು ಕೇಳಿದ್ನಾ? ಕೊಲೆ ಮಾಡ್ತೀಯಾ?
ಇದೆಲ್ಲಾ ಆದ ಮೇಲೆ ಮನೆಗೆ ಕರೆದುಕೊಂಡು ಹೋಗಿ ಊಟ ಕೂಡ ಹಾಕಿದ್ದ. ಎಲ್ಲಾ ಚೆನ್ನಾಗಿತ್ತು, ಈಗ್ಲೂ ಏನು ಆಗಿಲ್ಲ. ಆದರೆ ಅವನು ಅವನಿಗೆ ಬೇಕಾಗಿರೋದನ್ನ ಮಾತ್ರ ಇಟ್ಟುಕೊಂಡು ಉಳಿದದ್ದನ್ನು ಎಡಿಟ್ ಮಾಡಿದ್ದಾನೆ. ಏನಾದ್ರು ಮಾಡಿ ನನ್ನ ಹತ್ರ ಬಾಯ್ಬಿಡಿಸಬೇಕು ಮಾತನಾಡಿದ್ದಾನೆ. ಅವನೇ ನಿಮ್ಮ ಮನೆಗೆ ಬಂದಿದ್ನಾ? ದುಡ್ಡು ಕೇಳಿದ್ನಾ? ಕೊಲೆ ಮಾಡ್ತೀಯಾ ಅಂತ ಕೇಳ್ತಿದ್ದನಾನೆ. ಅವನಿಗೆ ಪಕ್ಕದಲ್ಲಿ ಕುಳಿತುಕೊಂಡು ಯಾರೋ ಹೇಳಿ ಕೊಡ್ತಿದ್ರು ಅಷ್ಟೇ ಎಂದಿದ್ದಾರೆ.
ಇದನ್ನೂ ಓದಿ: Bengaluru: ಲೇಡೀಸ್ ಟಾಯ್ಲೆಟ್ ಒಳಗೆ ನುಗ್ಗಿದ್ದವನನ್ನು ಹಿಡಿಯೋಕೆ 3 ದಿನ- 300 ಸಿಸಿಟಿವಿ ಬೇಕಾಯ್ತು! ಇವ್ನ ಕತೆ ಕೇಳಿ
ಇದೆಲ್ಲಾ ಬೇಡವಾಗಿತ್ತು. ಏನೋ ಅಣ್ಣ ನಮ್ಮ ಊರಿನ ರಾಜಕೀಯ. ನಾನು ಆ ಕಡೆನೇ ಇರ್ತಿನಿ ಅಂತ ಒಂದು ಮಾತು ಹೇಳಿದ್ರು ಮುಗಿದು ಹೋಗ್ತಿತ್ತು. ಅದು ಬಿಟ್ಟು ನೀನು, ಓಹೋಹೋ ಏನ್ ಇಂಟರ್ನ್ಯಾಷನಲ್ ಫಿಗರ್, ಏನ್ ಕರ್ನಾಟಕದಲ್ಲೆಲ್ಲಾ ಇದ್ನಾ ನೋಡ್ತಾರೆ ಅಂತ ಆಡಿಯೋ ಮಾಡಿ ಟಿವಿ ಹಾಕಿದ್ದಾನೆ. ಅದನ್ನು ಇವತ್ತು ನಾಳೆ ನೋಡ್ತಾರೆ, ನಾಳೆ ಬಿಡ್ತರೆ ಅಷ್ಟೇ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ