• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Election 2023: ‘ಕೈ’ ಹಿಡಿದ ಶಿವಲಿಂಗೇಗೌಡ; JDSನಲ್ಲಿ ಗೌಡರ ಕುಟುಂಬ ಹೇಳಿದ್ದನ್ನ ಕೇಳಿಕೊಂಡು ಬಿದ್ದಿರಬೇಕು ಎಂದ ಸಿದ್ದು!

Karnataka Election 2023: ‘ಕೈ’ ಹಿಡಿದ ಶಿವಲಿಂಗೇಗೌಡ; JDSನಲ್ಲಿ ಗೌಡರ ಕುಟುಂಬ ಹೇಳಿದ್ದನ್ನ ಕೇಳಿಕೊಂಡು ಬಿದ್ದಿರಬೇಕು ಎಂದ ಸಿದ್ದು!

ಕಾಂಗ್ರೆಸ್​​ಗೆ ಸೇರ್ಪಡೆಯಾದ ಶಿವಲಿಂಗೇಗೌಡ

ಕಾಂಗ್ರೆಸ್​​ಗೆ ಸೇರ್ಪಡೆಯಾದ ಶಿವಲಿಂಗೇಗೌಡ

ಜೆಡಿಎಸ್ ನಲ್ಲಿ ದೇವೇಗೌಡರ ಕುಟುಂಬದವರು ಹೇಳಿದ್ದನ್ನು ಕೇಳಿಕೊಂಡು ಬಿದ್ದಿರಬೇಕು. ಕೇಳದಿದ್ದರೆ ಯಾರೂ ಪಕ್ಷದಲ್ಲಿ ಇರಲು ಸಾಧ್ಯವಿಲ್ಲ. ನಾನೂ ಕೂಡ ಪ್ರಶ್ನೆ ಮಾಡಿದೆ ನನ್ನನ್ನೂ ಆಚೆಗೆ ತಳ್ಳಿದರು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

 • News18 Kannada
 • 2-MIN READ
 • Last Updated :
 • Hassan, India
 • Share this:

ಹಾಸನ: ಜೆಡಿಎಸ್​ (JDS) ತೊರೆದಿದ್ದ ಜಿಲ್ಲೆಯ ಅರಸೀಕೆರೆ (Arsikere) ವಿಧಾನಸಭಾ ಕ್ಷೇತ್ರದ ಶಾಸಕ ಶಿವಲಿಂಗೇಗೌಡ (Shivalinge Gowda) ಅವರು ಇಂದು ಅಧಿಕೃತವಾಗಿ ಭಾರೀ ಜನಸ್ತೋಮದ ಎದುರು ಕಾಂಗ್ರೆಸ್ ಪಕ್ಷಕ್ಕೆ (Congress Party) ಸೇರ್ಪಡೆಯಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಶಿವಲಿಂಗೇಗೌಡರಿಗೆ ಕಾಂಗ್ರೆಸ್ ಬಾವುಟ ಕೊಟ್ಟು ಪಕ್ಷಕ್ಕೆ ಆಹ್ವಾನ ಮಾಡಿದ್ದಾರೆ. ಜೆಡಿಎಸ್​​ ಪಕ್ಷದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಶಿವಲಿಂಗೇಗೌಡ ಅವರು ಕಳೆದ ಕೆಲ ತಿಂಗಳ ಹಿಂದಷ್ಟೇ ಪಕ್ಷದ ಕಾರ್ಯಕ್ರಮಗಳಿಂದ ದೂರ ಆಗಿದ್ದರು. ಇಂದು ಅಧಿಕೃತವಾಗಿ ಕಾಂಗ್ರೆಸ್​ ಸೇರ್ಪಡೆಯಾಗಿದ್ದು, ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ಹಲವು ನಾಯಕರು ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.


ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಲು ಬಿಜೆಪಿ ಕಾರಣ


ಶಿವಲಿಂಗೇಗೌಡರು ಕಾಂಗ್ರೆಸ್​ ಸೇರ್ಪಡೆಯಾದ ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಶಿವಲಿಂಗೇಗೌಡ ಅವರು ಯಾವುದೇ ಸರ್ಕಾರ ಇದ್ದರೂ ಮಂತ್ರಿಗಳ ಬಳಿ, ಅಧಿಕಾರಿಗಳ ಬಳಿ ಕೆಲಸ‌ ಮಾಡಿಸುತ್ತಾನೆ.


ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಲು ಕುಮಾರಸ್ವಾಮಿ ಮತ್ತು ಬಿಜೆಪಿ ಕಾರಣ. ಕುಮಾರಸ್ವಾಮಿಗೆ ಇಂದು ಕೂಡ ಯೋಜನೆ ಬಗ್ಗೆ ನಂಬಿಕೆ ಇಲ್ಲ. ಈ ಯೋಜನೆಯಿಂದ ಬಯಲು ಸೀಮೆ ಜಿಲ್ಲೆಗಳು ಮತ್ತು ಹಾಸನ ಜಿಲ್ಲೆಗೂ ಅನುಕೂಲ ಆಗುತ್ತೆ. ಈ ಯೋಜನೆ ಹಾಸನಕ್ಕೆ ಬರಲು ಶಿವಲಿಂಗೇಗೌಡ ಕಾರಣ ಎಂದು ಹೊಗಳಿದರು.


ಇದನ್ನೂ ಓದಿ: PM Modi: ಪ್ರಧಾನಿ ಮೋದಿ ಫೋಟೋ ಹಂಚಿಕೊಂಡು ‘ಹೀರೋ’ ಎಂದ RCB ಮಾಜಿ ಆಟಗಾರ ಕೆವಿನ್ ಪೀಟರ್ಸನ್


ಜೆಡಿಎಸ್ ನಲ್ಲಿ ದೇವೇಗೌಡರ ಕುಟುಂಬದವರು ಹೇಳಿದ್ದನ್ನು ಕೇಳಿಕೊಂಡು ಬಿದ್ದಿರಬೇಕು. ಕೇಳದಿದ್ದರೆ ಯಾರೂ ಪಕ್ಷದಲ್ಲಿ ಇರಲು ಸಾಧ್ಯವಿಲ್ಲ. ನಾನೂ ಕೂಡ ಪ್ರಶ್ನೆ ಮಾಡಿದೆ ನನ್ನನ್ನೂ ಆಚೆಗೆ ತಳ್ಳಿದರು. ನಾನು ಪಕ್ಷ ಬಿಟ್ಟಿರಲಿಲ್ಲ, ಅವರೇ ಆಚೆಗೆ ಎಸೆದರು. ನನಗೂ ಶಿವಲಿಂಗೇಗೌಡ ಅವರಿಗೂ ಸಾಮ್ಯತೆ ಇದೆ. ಕಾಂಗ್ರೆಸ್ ಅವರು ನನ್ನನ್ನು ನಮ್ಮ ಊರಿನಲ್ಲಿ ಸೇರಿಸಿಕೊಂಡರು.


ನಿನ್ನನ್ನು ನಿಮ್ಮೂರಿಗೆ ಬಂದು ಸೇರಿಸಿಕೊಂಡಿದ್ದೇವೆ. ನಿಮ್ಮನ್ನು ನಂಬಿದ್ದೇವೆ, ನೀರಿಗಾದರೂ ಹಾಕಲಿ ಹಾಲಿಗಾದರೂ ಹಾಕಲಿ ಎಂದು ಶಿವಲಿಂಗೇಗೌಡ ಅವರು ಹೇಳಿದ್ದರು. ನಾವು ಯಾವತ್ತೂ ನೀರಿಗೆ ಹಾಕೋದಿಲ್ಲ, ಹಾಲಿಗೆ ಹಾಕೋದು. ನಿನ್ನ, ಕ್ಷೇತ್ರದ ಯೋಗಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ತೀವಿ. ಇಲ್ಲಿ ಎಲ್ಲರನ್ನೂ ಒಂದೇ ರೀತಿ ನೋಡುತ್ತೇವೆ.
ನಮ್ಮ‌ಅಧ್ಯಕ್ಷರು ಹೇಳದ ಒಂದು ಮಾತು ಹೇಳುತ್ತೇನೆ. ನಾನು ಮತ್ತು ಡಿ‌ಕೆ ಶಿವಕುಮಾರ್ ಇಬ್ಬರೂ ಹೈಕಮಾಂಡ್​​ಗೆ ಹೇಳಿ ಟಿಕೆಟ್ ಕೊಡಿಸುವೆ. ಶಿವಲಿಂಗೇಗೌಡರನ್ನು ಗೆಲ್ಲಿಸುವ ಕೆಲಸ ನೀವು ಮಾಡಬೇಕು. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೆ. ಬಿಜೆಪಿಯ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ನಾವು ಕೊಟ್ಟಿರುವ ಆಶ್ವಾನೆಗಳನ್ನ ಸುಳ್ಳು ಎಂದು ಬಿಂಬಿಸಲು ಹೊರಟಿದ್ದಾರೆ.


ನಾವು ನೀಡಿದ ಎಲ್ಲಾ ಬೇಡಿಕೆಯನ್ನ ಈಡೇರಿಸಿದ್ದೇವೆ. ನಾನು ಈ ರಾಜ್ಯದಲ್ಲಿ 13 ಬಾರಿ ಬಜೆಟ್ ಮಂಡಿಸಿದ್ದೇನೆ. ನಮ್ಮ ಯೋಜನೆ ಬಗ್ಗೆ ಹಣಕಾಸು ಹೊಂದಿಸುವ ಭರವಸೆ ಇದೆ. ನಾವು ನಮ್ಮ ಆಶ್ವಾಸನೆ ಈಡೇರಿಸಲು ಸಾಧ್ಯವಾಗದಿದ್ದರೆ ಒಂದೇ ಸೆಕೆಂಡ್ ಕೂಡ ಅಧಿಕಾರದಲ್ಲಿ ಇರುವುದಿಲ್ಲ. ಒಂದು ವೇಳೆ ಆಗದಿದ್ದರೆ ನಿಮಗೆ ನಮಸ್ಕಾರ ಮಾಡಿ ರಾಜಕೀಯ ನಿವೃತ್ತರಾಗುತ್ತೇವೆ. ನಮ್ಮ ಭರವಸೆ ನಂಬಿ ಮತ್ತೊಮ್ಮೆ ಶಿವಲಿಂಗೇಗೌಡರನ್ನ ಶಾಸಕರನ್ನಾಗಿ ಮಾಡಿ ಎಂದು ಮನವಿ ಮಾಡಿದರು.

First published: