• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • JDS MLA: ಕಾಂಗ್ರೆಸ್‌ ಕದ ತಟ್ಟಿದ ಶಾಸಕ ಶಿವಲಿಂಗೇಗೌಡ! ಜೆಡಿಎಸ್‌ನಲ್ಲಿ ಸೈಲೆಂಟ್‌, ಪಕ್ಷದ ಕಾರ್ಯಕ್ರಮದಿಂದಲೂ ದೂರ!

JDS MLA: ಕಾಂಗ್ರೆಸ್‌ ಕದ ತಟ್ಟಿದ ಶಾಸಕ ಶಿವಲಿಂಗೇಗೌಡ! ಜೆಡಿಎಸ್‌ನಲ್ಲಿ ಸೈಲೆಂಟ್‌, ಪಕ್ಷದ ಕಾರ್ಯಕ್ರಮದಿಂದಲೂ ದೂರ!

ಜೆಡಿಎಸ್ ಶಾಸಕ ಕೆಎಂ ಶಿವಲಿಂಗೇಗೌಡ

ಜೆಡಿಎಸ್ ಶಾಸಕ ಕೆಎಂ ಶಿವಲಿಂಗೇಗೌಡ

ಕೆಎಂ ಶಿವಲಿಂಗೇಗೌಡ ಅವರ ಆಪ್ತ ಮೂಲಗಳ ಪ್ರಕಾರ ಅವರು ಕಾಂಗ್ರೆಸ್‌ ಸೇರುವುದು ಖಚಿತ ಎನ್ನಲಾಗಿದ್ದು, ಇದೇ ಕಾರಣಕ್ಕಾಗಿ ಶಿವಲಿಂಗೇಗೌಡ ಅವರು ಕಾಂಗ್ರೆಸ್‌ಗೆ ಸೇರಿದರೆ ಅರಸೀಕೆರೆಯಲ್ಲಿ ಜೆಡಿಎಸ್‌ಗೆ ಪರ್ಯಾಯ ಅಭ್ಯರ್ಥಿ ಹುಡುಕಾಟಕ್ಕೆ ಎಚ್‌ಡಿ ರೇವಣ್ಣ ಕುಟುಂಬ ಈಗಾಗಲೇ ಪ್ಲಾನ್ ಹಾಕಿಕೊಂಡಿದೆ. ಈ ಹಿನ್ನೆಲೆ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಎಚ್‌ಡಿ ರೇವಣ್ಣ ಕುಟುಂಬ ಪದೇ ಪದೇ ಸಭೆ ನಡೆಸುತ್ತಿದೆ.

ಮುಂದೆ ಓದಿ ...
  • Share this:

ಹಾಸನ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ (Karnataka Assembly Election) ಆಖಾಡ ಈಗಾಗಲೇ ಶುರುವಾಗಿದೆ. ಇನ್ನೇನು ಕೆಲ ವಾರಗಳು ಕಳೆದ್ರೆ ಕರ್ನಾಟಕದಲ್ಲಿ ಚುನಾವಣೆ (Karnataka Election) ಘೋಷಣೆ ಆಗುತ್ತದೆ. ಚುನಾವಣಾ ಸಮಯದಲ್ಲಿ ರಾಜಕಾರಣಿಗಳು ರಾಜಕೀಯ ಲಾಭದ ಲೆಕ್ಕಾಚಾರಗಳೊಂದಿಗೆ ಪಕ್ಷದಿಂದ ಪಕ್ಷಕ್ಕೆ ಜಿಗಿಯೋದು ಸಾಮಾನ್ಯ ವಿಷಯ. ಕರ್ನಾಟಕದ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಲ್ಲೂ ಪಕ್ಷಾಂತರದ ಸುದ್ದಿಗಳು ಕಿವಿಯಿಂದ ಕಿವಿಗೆ ಹಾರುತ್ತಿದ್ದು, ಅನೇಕ ಪ್ರಮುಖ ನಾಯಕರು ತಾವಿರುವ ಪಕ್ಷ ಬಿಡುವ ಸೂಚನೆ ದೊರೆತಿದೆ. ಆ ಪೈಕಿ ಹಾಸನದ ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ (KM Shivalingegowda) ಅವರು ಕೂಡ ಮುಂಚೂಣಿಯಲ್ಲಿದ್ದಾರೆ.


ಕಳೆದ ಕೆಲ ಸಮಯಗಳಿಂದ ಜೆಡಿಎಸ್ ಶಾಸಕ ಕೆಎಂ ಶಿವಲಿಂಗೇಗೌಡ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಗುಸುಗುಸು ಅರಸೀಕೆರೆ ಮಾತ್ರವಲ್ಲದೇ ರಾಜ್ಯದಲ್ಲಿ ಹರಿದಾಡ್ತಿದೆ. ಈ ಹಿಂದೊಮ್ಮೆ ಕೆಎಂ ಶಿವಲಿಂಗೇಗೌಡ ಅವರೇ ಕಾಂಗ್ರೆಸ್ ಸೇರುವ ಬಗ್ಗೆ ಸಣ್ಣ ಸುಳಿವು ಬಿಟ್ಟುಕೊಟ್ಟಿದ್ದರಾದರೂ ಬಹಿರಂಗವಾಗಿ ಇನ್ನೂ ಹೇಳಿಕೊಂಡಿಲ್ಲ. ಈ ಮಧ್ಯೆ ಶಿವಲಿಂಗೇ ಗೌಡ ಅವರು ಜೆಡಿಎಸ್ ಪಕ್ಷದ ಕಾರ್ಯಕ್ರಮಗಳಲ್ಲೂ ಕೂಡ ಅಷ್ಟೇನೂ ಕಾಣಿಸಿಕೊಳ್ಳುತ್ತಿಲ್ಲ. ಕಳೆದ ಹಲವು ತಿಂಗಳುಗಳಿಂದ ಜೆಡಿಎಸ್ ಪಕ್ಷದ ಕಾರ್ಯಕ್ರಮಗಳಿಂದ ಅಂತರ ಕಾಯ್ದಕೊಂಡಿರುವ ಅವರು ಕಾಂಗ್ರೆಸ್‌ ಪಕ್ಷ ಸೇರುತ್ತಾರೆ ಎಂಬ ವದಂತಿ ದಟ್ಟವಾಗಿ ಹರಡಿದೆ.


ಇದನ್ನೂ ಓದಿ: JDS Ticket Fight: ಭವಾನಿ ರೇವಣ್ಣ ಬಿಟ್ಟು ಬೇರೆಯವ್ರನ್ನು ನಿಲ್ಲಿಸ್ತೀವಿ ಅಂತಾ ಹೇಳ್ಬೇಡಿ: ಎಚ್‌ಡಿಕೆಗೆ ರೇವಣ್ಣ ಪುತ್ರ ಟಾಂಗ್‌!


ಸೈಲೆಂಟ್ ಆದ ಶಿವಲಿಂಗೇಗೌಡ!


ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿ ಘೋಷಣೆಗೂ ಜೆಡಿಎಸ್ ಪಕ್ಷ ಚಿಂತನೆ ನಡೆಸುತ್ತಿದ್ದು, ಶಾಸಕ ಕೆಎಂ ಶಿವಲಿಂಗೇಗೌಡ ಅವರು ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ವದಂತಿ ದಟ್ಟವಾಗಿರುವುದರಿಂದ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಘೋಷಣೆ ವಿಚಾರದಲ್ಲೂ ಕೂಡ ಜೆಡಿಎಸ್‌ ಗೊಂದಲದಲ್ಲಿದ್ದು, ಒಂದು ವೇಳೆ ಕೆಎಂ ಶಿವಲಿಂಗೇಗೌಡ ಅವರಿಗೆ ಟಿಕೆಟ್ ಘೋಷಣೆ ಮಾಡಿದರೂ ಕೂಡ ಅವರು ಕಾಂಗ್ರೆಸ್‌ಗೆ ಹೋಗುವ ಕುರಿತು ಈಗಾಗಲೇ ನಿರ್ಧಾರ ಮಾಡಿದ್ದರೆ ಟಿಕೆಟ್‌ ಘೋಷಣೆ ಮಾಡಿ ಪಕ್ಷಕ್ಕೆ ಮುಜುಗರ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಜೆಡಿಎಸ್ ಪಕ್ಷ ಮತ್ತು ಶಾಸಕ ಕೆಎಂ ಶಿವಲಿಂಗೇಗೌಡ ಅವರ ನಡೆ ಭಾರೀ ಕುತೂಹಲ ಮೂಡಿಸಿದೆ.


ಕೆಎಂ ಶಿವಲಿಂಗೇಗೌಡ ಅವರ ಆಪ್ತ ಮೂಲಗಳ ಪ್ರಕಾರ ಅವರು ಕಾಂಗ್ರೆಸ್‌ ಸೇರುವುದು ಖಚಿತ ಎನ್ನಲಾಗಿದ್ದು, ಇದೇ ಕಾರಣಕ್ಕಾಗಿ ಶಿವಲಿಂಗೇಗೌಡ ಅವರು ಕಾಂಗ್ರೆಸ್‌ಗೆ ಸೇರಿದರೆ ಅರಸೀಕೆರೆಯಲ್ಲಿ ಜೆಡಿಎಸ್‌ಗೆ ಪರ್ಯಾಯ ಅಭ್ಯರ್ಥಿ ಹುಡುಕಾಟಕ್ಕೆ ಎಚ್‌ಡಿ ರೇವಣ್ಣ ಕುಟುಂಬ ಈಗಾಗಲೇ ಪ್ಲಾನ್ ಹಾಕಿಕೊಂಡಿದೆ. ಈ ಹಿನ್ನೆಲೆ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಎಚ್‌ಡಿ ರೇವಣ್ಣ ಕುಟುಂಬ ಪದೇ ಪದೇ ಸಭೆ ನಡೆಸುತ್ತಿದ್ದು, ಎಚ್.ಡಿ ರೇವಣ್ಣ, ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಎಂಎಲ್‌ಸಿ ಸೂರಜ್‌ ರೇವಣ್ಣ ನಿರಂತರವಾಗಿ ಅರಸೀಕೆರೆಗೆ ಭೇಟಿ ನೀಡಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸುತ್ತಿದ್ದಾರೆ.


'ಜೆಡಿಎಸ್‌ನಲ್ಲೇ ಇದ್ದರೆ ಸುಲಭವಾಗಿ ಗೆಲ್ಲುತ್ತಾರೆ'


ಇದೇ ವಿಚಾರವಾಗಿ ಅರಸೀಕೆರೆಯಲ್ಲಿ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ, ನಮಗೆ ವಿಶ್ವಾಸವಿದೆ, ಕೆಎಂ ಶಿವಲಿಂಗೇಗೌಡ ಇಲ್ಲೇ ಉಳಿದುಕೊಂಡರೆ ಸುಲಭವಾಗಿ ಗೆಲ್ಲುತ್ತಾರೆ. ಕಾಂಗ್ರೆಸ್‌ ಹೋದರೆ ಅವರ ಇಷ್ಟ. ನಮ್ಮ ಪಕ್ಷದ ಕಾರ್ಯಕ್ರಮ, ನಮ್ಮ ಹೋರಾಟ ನಾವು ಮಾಡಬೇಕಾಗುತ್ತದೆ. ಸಾಕಷ್ಟು ಬಾರಿ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ನಾವು ಎಲ್ಲೇ ಹೋದರೂ, ಯಾವುದೇ ಸಾರ್ವಜನಿಕ ಕಾರ್ಯಕ್ರಮಕ್ಕೆ ಹೋದರೂ ನಾವು ತಟಸ್ಥವಾಗಿಯೇ ಮಾತನಾಡಿದ್ದೇವೆ. ಎಲ್ಲೂ ಕೂಡ ಶಾಸಕರ ಬಗ್ಗೆ ಯಾವುದೇ ರೀತಿಯಾದ ಹೇಳಿಕೆಗಳನ್ನು ಕೊಟ್ಟಿಲ್ಲ ಎಂದು ಹೇಳಿದರು.


ಇದನ್ನೂ ಓದಿ: CT Ravi: ಭವಾನಿ ರೇವಣ್ಣಗೆ ಬಿಜೆಪಿ ಟಿಕೆಟ್ ಆಫರ್ ನೀಡಿದ ಸಿ.ಟಿ.ರವಿ, ಗೌಡ್ರ ಮನೆ ಒಡೆಯೋದು ದೇಶ ಒಡೆದಷ್ಟು ಸುಲಭ ಅಲ್ಲ ಎಂದ HDK


ಅಲ್ಲದೇ,  ಯಾವುದೇ ರೀತಿ ಕೆಎಂ ಶಿವಲಿಂಗೇಗೌಡ ಅವರಿಗೆ ತೊಂದರೆ ಆಗುವ ಹಾಗೆ ನಡೆದುಕೊಂಡಿಲ್ಲ, ಮುಂದೆಯೂ ಅದೇ ರೀತಿ ನಡೆದುಕೊಳ್ಳುತ್ತೇವೆ ಎಂದ ಸೂರಜ್‌ ರೇವಣ್ಣ, ಚುನಾವಣೆ ಬಂದರೂ ಅಷ್ಟೇ, ಚುನಾವಣೆ ನಂತರವೂ ಅಷ್ಟೇ, ಶಾಸಕರ ಬಗ್ಗೆ ನಾವೆಲ್ಲೂ ಪ್ರತಿಕ್ರಿಯೆ ಮಾಡಲ್ಲ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷದಿಂದಲೇ ಶಕ್ತಿ ಪಡೆದುಕೊಂಡು, ಪಕ್ಷದಿಂದನೇ ಮೂರು ಬಾರಿ ಶಾಸಕರಾಗಿ ಕಾರ್ಯಕರ್ತರು ಹಾಗೂ ನಗರಸಭೆ ಸದಸ್ಯರ ವಿಶ್ವಾಸ ಉಳಿಸಿಕೊಂಡಿದ್ದಾರೆ. ಅವರಿಗೆ ಪಕ್ಷದ ಮೇಲೆ ವಿಶ್ವಾಸವಿದೆ, ಪಕ್ಷದಲ್ಲೇ ಇರ್ತಾರೆ, ಇರಲು ಬಯಸುತ್ತಿದ್ದಾರೆ. ಅವರು ಪಕ್ಷದಲ್ಲೇ ಉಳಿದು ಪಕ್ಷಕ್ಕಾಗಿ ದುಡಿಯುತ್ತಾರೆ, ಆ ನಂಬಿಕೆ ನಮಗಿದೆ. ಹಾಸನ ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.




ಹಾಸನದಲ್ಲಿ ಕುಮಾರಸ್ವಾಮಿ ಕಾರ್ಯಕ್ರಮ ಮುಂದೂಡಿಕೆ!


ಇನ್ನು, ಅರಸೀಕೆರೆಯಲ್ಲಿ ಫೆ.3 ರಂದು ಕಾರ್ಯಕರ್ತರ ಸಭೆ ಹಾಗೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಕಾರ್ಯಕ್ರಮ ಮುಂದೂಡಿಕೆ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸೂರಜ್ ರೇವಣ್ಣ, ಕುಮಾರಣ್ಣ ಅವರು ಬೀದರ್, ಬಿಜಾಪುರ, ಉತ್ತರ ಕರ್ನಾಟಕ ಭಾಗದಲ್ಲಿ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. ಒಂದು ವಾರ ಅವರು ಸ್ವಲ್ಪ ರೆಸ್ಟ್ ತೆಗೆದುಕೊಳ್ಳಲಿ. ಆನಂತರ ಮಂಡ್ಯ, ಮೈಸೂರು, ಚಿಕ್ಕಮಗಳೂರು, ನಮ್ಮ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಕಾರ್ಯಕ್ರಮ ನಡೆಯಬೇಕಿದೆ. ಅದನ್ನು ಎರಡನೇ ಹಂತದಲ್ಲಿ ಶುರು ಮಾಡುತ್ತಾರೆ ಎಂದರು.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು