ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮುರುಘಾ ಸ್ವಾಮೀಜಿಗೆ (Murugha shri) ಸಂಕಷ್ಟ ತಪ್ಪುತ್ತಿಲ್ಲ. ಪೋಕ್ಸೋ ಕೇಸ್ನಲ್ಲಿ (Pocso Case) ಅರೆಸ್ಟ್ ಆಗಿರುವ ಮುರುಘಾ ಸ್ವಾಮೀಜಿಯನ್ನು ಕೋರ್ಟ್ (Chitradurga Court) ಈಗ 3 ದಿನ ಪೊಲೀಸ್ ಕಸ್ಟಡಿಗೆ (Police custody) ನೀಡಿ ಆದೇಶಿಸಿದೆ. ಇದರ ನಡುವೆ ಬೇರೆ ಕೇಸ್ ಕೂಡ ಸ್ವಾಮೀಜಿಯನ್ನು ಕಾಡಲಾರಂಭಿಸಿದೆ. ಹೌದು ಬೆಂಗಳೂರು (Bengaluru) ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ ಮುರುಘಾ ಸ್ವಾಮೀಜಿಗೆ ಅರೆಸ್ಟ್ ವಾರೆಂಟ್ (Arrest warrant) ಜಾರಿಯಾಗಿದೆ. ತಿಪ್ಪಶೆಟ್ಟಿ ಮಠದ ಆಸ್ತಿ ಮಾರಾಟ ವಿಚಾರದಲ್ಲಿ ವಂಚನೆ ಆರೋಪದ ಸಂಬಂಧ ಸ್ವಾಮೀಜಿಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. 2 ವರ್ಷದ ಹಿಂದೆ ಪಂಚಾಕ್ಷರಯ್ಯ ಎಂಬುವವರು ದೂರು ಸಲ್ಲಿಸಿದ್ದರು.
ಅತ್ಯಾಚಾರ ಕೇಸ್ ಬೆನ್ನಲ್ಲೇ ಮುರುಘಾ ಸ್ವಾಮೀಜಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮುರುಘಾ ಸ್ವಾಮೀಜಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಮುರುಘಾಮಠಕ್ಕೆ ಸೇರಿದ ತಿಪ್ಪಶೆಟ್ಟಿ ಮಠದ ಆಸ್ತಿ ಸಂಬಂಧ ಬಂಧನ ವಾರೆಂಟ್ ಜಾರಿಯಾಗಿದೆ.
ಕೋರ್ಟ್ ಗೆ ಹಾಜರಾಗದೆ ಮುರುಘಾ ಸ್ವಾಮೀಜಿ ನಿರ್ಲಕ್ಷ್ಯ
ಬೆಂಗಳೂರಿನಲ್ಲಿರುವ ತಿಪ್ಪಶೆಟ್ಟಿ ಮಠದ ಆಸ್ತಿ ಸಂಬಂಧ ಪಂಚಾಕ್ಷರಯ್ಯ ಎಂಬುವವರು ದೂರು ದಾಖಲಿಸಿದ್ದರು. ಪಂಚಾಕ್ಷರಯ್ಯ 2 ವರ್ಷದ ಹಿಂದೆ ಮುರುಘಾಶ್ರೀ ವಿರುದ್ಧ ಕೇಸ್ ದಾಖಲಿಸಿದ್ದರು. ಆದರೆ ಮುರುಘಾ ಸ್ವಾಮೀಜಿ ಕೋರ್ಟ್ ಗೆ ಹಾಜರಾಗದೆ ನಿರ್ಲಕ್ಷ್ಯ ತೋರಿದ್ದಾರೆ. ಈ ಸಂಬಂಧ ವಾರೆಂಟ್ ಜಾರಿಯಾಗಿದೆ.
ಇದನ್ನೂ ಓದಿ: ಮುರುಘಾ ಸ್ವಾಮೀಜಿ ಬೆಂಗಳೂರು ಪ್ಲಾನ್ ಕ್ಯಾನ್ಸಲ್, ಮೂರು ದಿನ ಪೊಲೀಸ್ ಕಸ್ಟಡಿಗೆ
ಮುರುಘಾ ಸ್ವಾಮೀಜಿಗೆ 3 ದಿನ ಪೊಲೀಸ್ ಕಸ್ಟಡಿ
ಸದ್ಯ ಅನಾರೋಗ್ಯದ ಕಾರಣದಿಂದ ಜಿಲ್ಲಾಸ್ಪತ್ರೆಗೆ ಸೇರಿ ಗಂಭೀರ ಸ್ಥಿತಿಯಲ್ಲಿದ್ದ ಸ್ವಾಮೀಜಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತೆರಳಲು ಸಜ್ಜಾಗಿದ್ದರು. ಏರ್ಲಿಫ್ಟ್ಗೂ ಸಿದ್ಧತೆ ನಡೆದಿತ್ತು. ಈ ನಡುವೆಯೇ ಚಿತ್ರದುರ್ಗ ಕೋರ್ಟ್ ಸ್ವಾಮೀಜಿಗೆ ಶಾಕ್ ಕೊಟ್ಟಿದೆ. ಅಲ್ಲದೇ ಅವರನ್ನು ಮೂರು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ತನಿಖಾಧಿಕಾರಿಗಳ ಅರ್ಜಿ ಪುರಸ್ಕರಿಸಿದ ಕೋರ್ಟ್
ಸಿಆರ್ಪಿಸಿ ಸೆಕ್ಷನ್ 41 D ಅಡಿಯಲ್ಲಿ ತನಿಖಾಧಿಕಾರಿಗಳು ಅರ್ಜಿ ಸಲ್ಲಿಸಿದ್ದರು. ತನಿಖಾಧಿಕಾರಿಗಳ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಸ್ವಾಮೀಜಿಯನ್ನು ಪೊಲೀಸ್ ಕಸ್ಟಡಿಗೆ ನೀಡಿತು. ಈ ಮೂಲಕ ನಿನ್ನೆ ರಾತ್ರಿಯಿಂದ ನಡೆದ ಮುರುಘಾ ಶರಣರ ಡ್ರಾಮಕ್ಕೆ ಕೋರ್ಟ್ ತೆರೆಎಳೆಯಿತು.
ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ದಾಖಲು
ಪೋಕ್ಸೋ ಕೇಸ್ನಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಸ್ವಾಮೀಜಿ ಗುರುವಾರ ತಡರಾತ್ರಿ ಜೈಲು ಸೇರಿದ್ದರು. ಆದರೆ ಏಕಾಏಕಿ ಆರೋಗ್ಯ ಹದಗೆಟ್ಟಿದೆ ಎಂದಿದ್ದ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ನೋಡ ನೋಡುತ್ತಿದ್ದಂತೆಯೇ ಸ್ವಾಮೀಜಿ ಆರೋಗ್ಯ ತೀವ್ರ ಹದಗೆಟ್ಟಿದೆ ಎಂದು ವೈದ್ಯರು ತಿಳಿಸಿದ್ದರು.
ಇದನ್ನೂ ಓದಿ: ಆಸ್ಪತ್ರೆ ಸೇರಿದ್ದ ಮುರುಘಾ ಸ್ವಾಮೀಜಿಗೆ ಬಿಗ್ ಶಾಕ್, ಕೋರ್ಟ್ಗೆ ಹಾಜರುಪಡಿಸಲು ಖಡಕ್ ಸೂಚನೆ
ಏರ್ಲಿಫ್ಟ್ ಮಾಡಲು ನಡೆದಿತ್ತು ಸಿದ್ಧತೆ
ಪೊಲೀಸರು ಸ್ವಾಮೀಜಿಯನ್ನು ಬೆಂಗಳೂರಿಗೆ ಏರ್ಲಿಫ್ಟ್ ಮಾಡಲು ಸಕಲ ಸಿದ್ಧತೆ ನಡೆಸಿದ್ದರು. ಅಲ್ಲದೇ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಯ ಆರನೇ ಮಹಡಿಯ 603 ಮತ್ತು 604 ಸ್ಪೆಷಲ್ ವಾರ್ಡನ್ನು ಸ್ವಾಮೀಜಿ ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಲಾಗಿತ್ತು. ಇದು ಹೈಟೆಕ್ ಚಿಕಿತ್ಸಾ ವ್ಯವಸ್ಥೆ ಇರುವ,ಇಬ್ಬರಿಗೆ ಸೀಮಿತದ ಸ್ಪೆಷಲ್ ವಾರ್ಡ್ ಆಗಿದ್ದು, ಹೃದಯಶಸ್ತ್ರಚಿಕಿತ್ಸಾ, ಸ್ಟಂಟ್ ಮತ್ತು ಹೃದಯ ಸಂಬಂಧಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇರುವ ವಾರ್ಡ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ