Murder: 'ನನ್ ಹಣ ವಾಪಸ್ ಕೊಡ್ರಪ್ಪಾ' ಎಂದಿದ್ದೇ ತಪ್ಪಾಯ್ತು! ಜೀಪ್ ಹತ್ತಿಸಿ ಮಹಿಳೆ ಕೊಂದ ಪಾಪಿಗಳು

ಆಕೆಯ ಗಂಡ ಊರಲ್ಲಿ ಇರದಿದ್ದ ಸಮಯ ನೋಡಿ, ಆರೋಪಿಗಳು ಅವರ ತೋಟಕ್ಕೆ ಹೋಗಿದ್ದಾರೆ. ಅಲ್ಲಿ ಮಾತಿಗೆ ಮಾತು ಬೆಳೆಸಿದ್ದಾರೆ. ಆಕೆ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದಾಗ ಬೊಲೇರೋ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ಮುಂದೇನಾಯ್ತು?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ವಿಜಯಪುರ: ಬಹುಶಃ ಈಗ ನೀವು ಓದುವ ಈ ಸ್ಟೋರಿ (Story) ಕೇವಲ ಸಿನಿಮಾದಲ್ಲಷ್ಟೇ (Cinema) ನೋಡಿರುತ್ತೀರಿ. ಸಿನಿಮಾದಲ್ಲಿ ರೌಡಿಗಳು (Rowdy) ಈ ರೀತಿ ಮಾಡ್ತಾರೆ. ಅಮಾಯಕರನ್ನೆಲ್ಲ ಕರೆ ತಂದು, ದೌರ್ಜನ್ಯ ಮಾಡ್ತಾರೆ. ಅವರು ತಮ್ಮ ಮಾತು ಕೇಳದಿದ್ದಾಗ ಹಿಂದೆ ಮುಂದೆ ನೋಡದೇ ಕೊಲೆ (Murder) ಮಾಡಿ ಬಿಡ್ತಾರೆ. ಕೆಲವೊಮ್ಮೆ ಬೇರೆ ಬೇರೆ ರಾಜ್ಯಗಳಲ್ಲೂ ಇಂತ ನೈಜ ಘಟನೆ (Real Incident) ನಡೆದಿದ್ದೂ ಇದೆ. ಆದ್ರೆ ನಮ್ಮ ರಾಜ್ಯದಲ್ಲೇ ಇಂಥದ್ದೊಂದು ಭೀಕರ ಹಾಗೂ ಹೇಯ ಕೃತ್ಯ ನಡೆದು ಹೋಗಿದೆ. ಸಿನಿಮಾ ಸ್ಟೈಲ್‌ನಲ್ಲಿಯೇ (Filmy Style) ಪಾಪಿಗಳು ಮಹಿಳೆಯನ್ನು ಕೊಂದು ಮುಗಿಸಿದ್ದಾರೆ. ಹಾಗಿದ್ರೆ ಏನಿದು ಕೊಲೆಯ ಕಥೆ? ಇಲ್ಲಿ ಕೊಲೆಯಾಗಿದ್ದು ಯಾರು? ಫಿಲ್ಮಿ ಸ್ಟೈಲ್‌ನಲ್ಲಿ ಕೊಂದ ಹಂತಕರು ಯಾರು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ…

ವಿಜಯಪುರದಲ್ಲಿ ನಡೆಯಿತು ಬರ್ಬರ ಹತ್ಯೆ

ಈ ಘಟನೆ ನಡೆದಿದ್ದು ವಿಜಯಪುರ ಜಿಲ್ಲೆಯಲ್ಲಿ. ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ 55 ವರ್ಷದ ಮಹಿಳೆ ಶೋಭಾ ಸೋಮನಿಂಗ ಮೊಗದರೆ ಎಂಬಾಕೆಯೇ ಬರ್ಬರವಾಗಿ ಕೊಲೆಯಾಗಿದ್ದಾರೆ. ಆಕೆಯ ಪರಿಚಯಸ್ಥರೇ ಆಗಿರುವ ಸಾಗರ ಖತಾರ ಹಾಗೂ ಮಾರುತಿ ಥೋರತ ಎಂಬ ಹಂತಕರೇ ಮಹಿಳೆಯನ್ನು ಕೊಂದು ಮುಗಿಸಿದ್ದಾರೆ.

ಸಿನಿಮಾ ಸ್ಟೈಲ್‌ನಲ್ಲಿ ಜೀಪ್ ಹತ್ತಿಸಿ ಕೊಲೆ

ಸಾಗರ್ ಹಾಗೂ ಮಾರುತಿ ಇಬ್ಬರೂ ಸೇರಿ ಸಿನಿಮೀಯ ರೀತಿಯಲ್ಲಿ ಶೋಭಾ ಹತ್ಯೆ ಮಾಡಿದ್ದಾರೆ. ಶೋಭಾ ಪತಿ ಸೋಮನಿಂಗ ಎಂಬುವರು ಊರಲ್ಲಿ ಇರದಿದ್ದ ಸಮಯ ನೋಡಿ, ಆರೋಪಿಗಳು ಅವರ ತೋಟಕ್ಕೆ ಹೋಗಿದ್ದಾರೆ. ಅಲ್ಲಿ ಶೋಭಾ ಜೊತೆ ಮಾತಿಗೆ ಮಾತು ಬೆಳೆಸಿದ್ದಾರೆ. ಗಲಾಟೆ ವಿಪರೀತಕ್ಕೆ ಹೋದ ಬಳಿಕ ಕೊಲೆಗೆ ಯತ್ನಿಸಿದ್ದಾರೆ. ಅಲ್ಲಿಂದ ಶೋಭಾ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದಾಗ ಬೊಲೇರೋ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ.

ಮುಂದೆ ಓಡುತ್ತಿದ್ದ ಶೋಭಾ ಮೇಲೆ ಜೀಪ್ ಹತ್ತಿಸುವ ಯತ್ನ ಮಾಡಿದ್ದಾರೆ. ಆಕೆ ಮತ್ತೆ ಅವರಿಂದ ತಪ್ಪಿಸಿಕೊಂಡು ಓಡಲು ಯತ್ನಿಸಿದ್ದಾಳೆ. ಆದರೆ ಅಷ್ಟಕ್ಕೇ ಬಿಡದ ಹಂತಕರು ಆಕೆಯನ್ನು ಅಟ್ಟಾಡಿಸಿದ್ದಾರೆ. ಕೊನೆಗೆ ಆಕೆ ಮೇಲೆ ಜೀಪ್ ಹತ್ತಿಸಿ ಕೊಲೆ ಮಾಡಿ ಬಿಟ್ಟಿದ್ದಾರೆ.

ಇದನ್ನೂ ಓದಿ: Crime News: ಬೆಂಗಳೂರಲ್ಲಿ ನಡೆಯುತ್ತಾ ಇಂಥಾ ದಂಧೆ? ಕೇಳಿದರೆ ನೀವು ಛೀ, ಥೂ ಅಂತೀರಿ! 

ಕೊಟ್ಟ ಹಣ ವಾಪಸ್ ಕೊಡಿ ಅಂತ ಕೇಳಿದ್ದಕ್ಕೆ ಹತ್ಯೆ

ಕೊಲೆಯಾದ ಶೋಭಾ ಹಾಗೂ ಆಕೆಯ ಪತಿ ಸೋಮನಿಂಗ ಇಬ್ಬರೂ ಬೇಸಾಯಗಾರರು. ತಮ್ಮ ಹೊಲದಲ್ಲಿ ಕಬ್ಬು ಬೆಳೆಯುತ್ತಾ ಇದ್ದರು. ಅವರ ಹೊಲದಲ್ಲಿ ಬೆಳೆದಿದ್ದ ಕಬ್ಬು ಕಟಾವಿಗೂ ಬಂದಿತ್ತು. ಈ ವೇಳೆ ಕಬ್ಬು ಕಟಾವಿಗೆ ಕಾರ್ಮಿಕರನ್ನು ಕರೆ ತರುತ್ತೇವೆ ಅಂತ ಆರೋಪಿಗಳು ಮಾತು ಕೊಟ್ಟಿದ್ದರು. ಅದಕ್ಕಾಗಿ ಶೋಭಾ ಪತಿ ಸೋಮನಿಂಗನಿಂದ ಲಕ್ಷ ಲಕ್ಷ ಹಣವನ್ನೂ ಪಡೆದಿದ್ದರು.

ಕಾರ್ಮಿಕರೂ ಬರಲಿಲ್ಲ, ಹಣವನ್ನೂ ಕೊಡಲಿಲ್ಲ

ಎಷ್ಟು ದಿನವಾದರೂ ಕಾರ್ಮಿಕರನ್ನು ಕರೆದುಕೊಂಡು ಬರಲೇ ಇಲ್ಲ. ಸಾಲದ್ದಕ್ಕೆ ತೆಗೆದುಕೊಂಡಿದ್ದ ಹಣವನ್ನೂ ವಾಪಸ್ ಕೊಡಲಿಲ್ಲ. ಇದರಿಂದ ಸಿಟ್ಟಾಗಿದ್ದ ಶೋಭಾ ಪತಿ ಸೋಮನಿಂಗ ಸಾಗರ್ ಹಾಗೂ ಮಾರುತಿ ಜೊತೆ ಗಲಾಟೆ ಮಾಡಿದ್ದರು. ಹಣ ವಾಪಸ್ ನೀಡುವಂತೆ ಶೋಭಾ ಕೂಡ ತಾಕೀತು ಮಾಡಿದ್ದರು. ಇದೇ ಕಾರಣಕ್ಕೆ ಹೊಂಚು ಹಾಕಿ ಆರೋಪಿಗಳು ಆಕೆಯನ್ನು ಹತ್ಯೆಗೈದಿದ್ದಾರೆ.

ಇದನ್ನೂ ಓದಿ: Bengaluru: ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಮನೆಯಲ್ಲಿ ಕಾಣಿಸಿಕೊಂಡ ಬೆಳಕು; ಬ್ಯಾಡರಹಳ್ಳಿ ನಿವಾಸದಲ್ಲಿ ದೆವ್ವ ಇದ್ಯಾ?

ಪೊಲೀಸರಿಂದ ಆರೋಪಿಗಳ ಕೈಗೆ ಕೋಳ

ಶೋಭಾ ಸಾವನ್ನಪ್ಪುತ್ತಿದ್ದಂತೆ ಆರೋಪಿಗಳಾದ ಸಾಗರ ಖತಾರ ಹಾಗೂ ಮಾರುತಿ ಥೋರತ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಬಳಿಕ ಈ ಬಗ್ಗೆ ತಿಕೋಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿದ್ದ ಪೊಲೀಸರು, ಇದೀಗ ಆರೋಪಿಗಳ ಕೈಗೆ ಕೋಳ ತೊಡಿಸಿದ್ದಾರೆ.
Published by:Annappa Achari
First published: