Officers Arrest: ರಾಜ್ಯದಲ್ಲಿ ಒಂದೇ ದಿನ IAS, IPS ಅಧಿಕಾರಿಗಳು ಅರೆಸ್ಟ್; CCTV ಆಫ್ ಮಾಡಿಸಿ ಆನ್ಸರ್​ ಶೀಟ್​ ತಿದ್ದಿದ್ರು

ಅಮೃತ್ ಪೌಲ್ ರಿಕ್ರ್ಯೂಟ್ ಮೆಂಟ್ ಹೆಡ್ ಆಗಿದ್ರು, ಬೆಳಗಿನ ಜಾವ ಇಡೀ ಬಿಲ್ಡಿಂಗ್ ಸಿಸಿ ಕ್ಯಾಮರಾ ಆಪ್ ಆಗಿದೆ. ಅಫ್ ಮಾಡಿಸಿ ಉತ್ತರ ಪತ್ರಿಕೆ ತಿದ್ದಿದ್ದಾರೆ ಎಂದು ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ

ಗೃಹ ಸಚಿವ ಅರಗ ಜ್ಞಾನೇಂದ್ರ

ಗೃಹ ಸಚಿವ ಅರಗ ಜ್ಞಾನೇಂದ್ರ

  • Share this:
ರಾಜ್ಯದಲ್ಲಿ ಹಿಂದೆಂದೂ ನಡೆಯದಿರದ ಘಟನೆಯೊಂದು ನಡೆದಿದೆ. ಒಂದೇ ದಿನ ಭ್ರಷ್ಟಾಚಾರದ (Corruption) ಆರೋಪ ಮೇಲೆ  IAS, IPS ಅಧಿಕಾರಿಗಳನ್ನು ಬಂಧಿಸಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅರಗ ಜ್ಞಾನೇಂದ್ರ, IPS ಅಧಿಕಾರಿ ಅಮೃತ್ ಪೌಲ್ (Amrit Paul) ಅವರನ್ನು ಬಂಧಿಸಲಾಗಿದೆ. ಅಕ್ರಮದ ಆರೋಪ ಹಿನ್ನೆಲೆ ತನಿಖೆ ನಡೆಸಿದ್ದೇವೆ. ಸಿಐಡಿ ತಂಡ 2 ಗಂಟೆಯಲ್ಲಿ ಒಬ್ಬರನ್ನು ಅರೆಸ್ಟ್ (Arrest) ಮಾಡಿತ್ತು. ಕಲಬುರಗಿಗೆ ತೆರಳಿ ಬಂಧಿಸಿತ್ತು ಬ್ರೋಕರ್ ಹಾಗೂ ಹಣ ಕೊಟ್ಟವರನ್ನ ಬಂಧಿಸಲಾಗಿದೆ. ಪ್ರಕರಣದ ಬಗ್ಗೆ ಪಾರದರ್ಶಕವಾಗಿ ವಿಚಾರಣೆ ನಡೆದಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿರಲಿಲ್ಲ ಎಂದು ಅರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.

ಸಿಸಿ ಕ್ಯಾಮರಾ ಆಪ್ ಮಾಡಿ ಉತ್ತರ ಪತ್ರಿಕೆ ತಿದ್ದಿದ್ದಾರೆ

ಅಮೃತ್ ಪೌಲ್ ರಿಕ್ರ್ಯೂಟ್ ಮೆಂಟ್ ಹೆಡ್ ಆಗಿದ್ರು, ಬೆಳಗಿನ ಜಾವ ಇಡೀ ಬಿಲ್ಡಿಂಗ್ ಸಿಸಿ ಕ್ಯಾಮರಾ ಆಪ್ ಆಗಿದೆ. ಅಫ್ ಮಾಡಿಸಿ ಆನ್ಸರ್ ಶೀಟ್ ತಿದ್ದಿದ್ದಾರೆ. ಅದಕ್ಕೆಲ್ಲಾ ಜವಾಬ್ದಾರಿ ಮುಖ್ಯಸ್ಥರೆ  ಇವರೇ ಅಲ್ವೇ? ಹಾಗಾಗಿ ಡಿವೈಎಸ್ ಪಿ, ದಪೇದಾರ ಹಾಗೂ ಸಿಬ್ಬಂದಿಯನ್ನು ಅರೆಸ್ಟ್ ಮಾಡಲಾಗಿತ್ತು. ಅವರ ಕೊಟ್ಟ ಮಾಹಿತಿ ಮೇಲೆ ಇವರನ್ನ ವಿಚಾರಣೆ ನಡೆಸಲಾಗಿದೆ. 18 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಪ್ರಕರಣದಲ್ಲಿ ಅಮೃತ್​ ಪೌಲ್​ ಭಾಗಿಯಾಗಿರೋ ವಿಚಾರ ತಿಳಿದ ಬಳಿಕ ಇವ್ರನ್ನು ಅರೆಸ್ಟ್ ಮಾಡಲಾಗಿದೆ ಎಂದು ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ನಾವು ಯಾರನ್ನೂ ರಕ್ಷಿಸುವ ಕೆಲಸ ಮಾಡಲ್ಲ

ಇತ್ತ ಡಿಸಿ ಜೆ ಮಂಜುನಾಥ್​ ಅವರನ್ನು ಸಹ ಬಂಧಿಸಿ  ವಿಚಾರಣೆಯನ್ನ ನಡೆಸಲಾಗ್ತಿದೆ. ನಾವು ಯಾರನ್ನೂ ರಕ್ಷಿಸುವ ಕೆಲಸ ಮಾಡಲ್ಲ. ಎಲ್ಲಾ ಅಧಿಕಾರಿಗಳು ಸರಿಯಾಗಿ ‌ಕೆಲಸ ಮಾಡಬೇಕು. ಇಲ್ಲವಾದರೆ ಅವರನ್ನು ಅರೆಸ್ಟ್ ಮಾಡ್ತೇವೆ ಎಂದು ಸಚಿವ ಅರಗ ಜ್ಞಾನೇಂದ್ರ ಖಡಕ್ ಆಗಿಯೇ ನುಡಿದಿದ್ದಾರೆ. ನಾನು ಸದನದಲ್ಲಿ ತಪ್ಪು ಉತ್ತರ ಕೊಟ್ಟಿಲ್ಲ. ಯಾಕೆಂದ್ರೆ ಆಗ ನನಗೆ ಮಾಹಿತಿ ಇರಲಿಲ್ಲ. ಮಾಹಿತಿ ಇಲ್ಲದೆ ಹೇಗೆ ಹೇಳೋಕೆ ಸಾಧ್ಯ. ಹಾಗಾಗಿ ಅಂದು ನಾನು ಏನೂ ಇಲ್ಲ ಎಂದಿದ್ದೆ.

ಇದನ್ನೂ ಓದಿ:PSI ನೇಮಕಾತಿ ಅಕ್ರಮ ಪ್ರಕರಣ; IPS ಅಧಿಕಾರಿ ಅಮೃತ್ ಪೌಲ್ ಬಂಧನ

ಈಗ ಆಧಾರ ಸಿಕ್ಕಿದ ಮೇಲೆ ಕ್ರಮ ಜರುಗಿಸಿದ್ದೇವೆ. ಅನ್ಸರ್ ಶೀಟ್ ತಿದ್ದಿರುವುದು ಬೆಳಕಿಗೆ ಬಂದಿದೆ. ತಪ್ಪು ಮಾಡಿದ್ದ, ಡಿವೈಎಸ್ ಪಿ, ದಪೇದಾರ್ ಎಲ್ಲರನ್ನ ವಶಕ್ಕೆ ಪಡೆದಿದ್ದೆವು. ನಾವು ಯಾರನ್ನೂ‌ ರಕ್ಷಿಸುವ ಕೆಲಸ ಮಾಡ್ತಿಲ್ಲ ಎಂದು ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಡಿಕೆಶಿಗೆ ಅರಗ ಜ್ಞಾನೇಂದ್ರ ತಿರುಗೇಟು

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ರಾಜೀನಾಮೆಗೆ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ ಅರಗ ಜ್ಞಾನೇಂದ್ರ, ನಾವು ತನಿಖೆ ಮಾಡಿಸಿದ್ದೇವೆ. ಪಾರದರ್ಶಕ ತನಿಖೆಯನ್ನು appreciate ಮಾಡಿದೆ. ಹೈಕೋರ್ಟ್ ಹೇಳಿದ ಮೇಲೆ ಬಂಧಿಸಿಲ್ಲ.ಬಹಳ ವರ್ಷಗಳಿಂದ ಹೀಗೆ ನಡೆದಿದೆ. ಈ ರೀತಿ ನೇಮಕಾತಿ ಹಿಂದಿನಿಂದ ಆಗಿವೆ. ನಮ್ಮ ಕಾಲದಲ್ಲಿ ಹಣ ಕೊಟ್ಟರೆ ಬಂಧನವಾಗುತ್ತದೆ ಎಂಬುದು ಗೊತ್ತಾಗಿದೆ ಎಂದು ಡಿಕೆಶಿಗೆ ಅರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.

ಇಡೀ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸರ್ಕಾರ ಬದ್ಧ- ಸಿಎಂ

ನಿಷ್ಪಕ್ಷಪಾತವಾದ ಹಾಗೂ ನಿರ್ದಾಕ್ಷಿಣ್ಯವಾದ ತನಿಖೆಯನ್ನು ಮಾಡುವ ಮೂಲಕ ಇಡೀ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಪಿಎಸ್ ಐ ನೇಮಕಾತಿ ಹಗರಣದ ತನಿಖೆ ನಡೆಸಲು ಸಿಐಡಿಯವರಿಗೆ ಮುಕ್ತವಾದ ಅವಕಾಶವನ್ನು ನೀಡಲಾಗಿದೆ.

ಇದನ್ನೂ ಓದಿ: Breaking News: ಲಂಚ ಸ್ವೀಕರಿಸಿದ ಆರೋಪ; ಡಿಸಿ ಜೆ. ಮಂಜುನಾಥ್​ ಅರೆಸ್ಟ್​

ಸಾಕ್ಷ್ಯ ಆಧಾರಗಳ ಮೇಲೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಎಷ್ಟೇ ದೊಡ್ಡ ಅಧಿಕಾರಿಗಳಾಗಿದ್ದರೂ ನಮ್ಮ ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹಗರಣದ ಕೂಗು ಕೇಳಿ ಬಂದಿದ್ದರೂ , ಯಾವುದೇ ತನಿಖೆ ನಡೆದಿರಲಿಲ್ಲ ಎಂದು ತಿಳಿಸಿದರು.
Published by:Pavana HS
First published: