• Home
  • »
  • News
  • »
  • state
  • »
  • Mysuru Dasara 2022: ದಸರಾ ದರ್ಶನಕ್ಕೆ ವಿಶೇಷ ಬಸ್​ಗಳ ವ್ಯವಸ್ಥೆ; 81 KSRTC ಬಸ್​​ಗಳಿಗೆ ಚಾಲನೆ

Mysuru Dasara 2022: ದಸರಾ ದರ್ಶನಕ್ಕೆ ವಿಶೇಷ ಬಸ್​ಗಳ ವ್ಯವಸ್ಥೆ; 81 KSRTC ಬಸ್​​ಗಳಿಗೆ ಚಾಲನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೈಸೂರಿನಲ್ಲಿ ದಸರಾ ದರ್ಶನ  KSRTC ಬಸ್​ಗಳಿಗೆ ಬಿಜೆಪಿ ಶಾಸಕ ಎಸ್​.ಎ.ರಾಮದಾಸ್​ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಚಾಲನೆ ನೀಡಿದರು. 3 ದಿನ ದಸರಾ ದರ್ಶನಕ್ಕೆ ಒಟ್ಟು 81 ವಿಶೇಷ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ.

  • Share this:

 ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara 2022) ಹಿನ್ನೆಲೆ ಅರಮನೆ ನಗರಿಯಲ್ಲಿ ಸಂಭ್ರಮ, ಸಡಗರ ಮನೆ ಮಾಡಿದೆ. ದಸರಾ ಮಹೋತ್ಸವ ಅದ್ಧೂರಿಯಾಗಿಸಲು ಸರ್ಕಾರ (Government) ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಸಾಂಸ್ಕೃತಿಕ ನಗರಿ  ಸಡಗರದಲ್ಲಿ ಮಿಂದೇಳುತ್ತಿದೆ. ಇನ್ನು ಮೈಸೂರು ದಸರಾ ವೈಭವ ನೋಡಲು ಹಲವೆಡೆಗಳಿಂದ ಜನ ಸಾಗರವೇ ಹರಿದು ಬರ್ತಿದೆ. ಜನ ಸಾಮಾನ್ಯರಿಗೆ ಅನುಕೂಲವಾಗಲೆಂದು 81 ಕೆಎಸ್​ಆರ್​ಟಿಸಿ (KSRTC) ಬಸ್​ಗಳನ್ನು​ ನಿಯೋಜನೆ ಮಾಡಲಾಗಿದೆ.

3 ದಿನ ದಸರಾ ದರ್ಶನಕ್ಕೆ 81 ಬಸ್​ಗಳ ನಿಯೋಜನೆ


ಮೈಸೂರಿನಲ್ಲಿ ದಸರಾ ದರ್ಶನ  KSRTC ಬಸ್​ಗಳಿಗೆ ಬಿಜೆಪಿ ಶಾಸಕ ಎಸ್​.ಎ.ರಾಮದಾಸ್​ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಚಾಲನೆ ನೀಡಿದರು. 3 ದಿನ ದಸರಾ ದರ್ಶನಕ್ಕೆ ಒಟ್ಟು 81 ವಿಶೇಷ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಮೈಸೂರಿನ 1 ತಾಲೂಕಿಗೆ ಮೂರು ಬಸ್​​ಗಳ ನಿಯೋಜನೆ ಮಾಡಿದ್ದು, 3 ದಿನಗಳಲ್ಲಿ 4,455 ಜನರಿಗೆ ದಸರಾ ತೋರಿಸುವ ನಿರ್ಧರಿಸಲಾಗಿದೆ.


ದಸರಾ ನೋಡಲು ಸಿಗುತ್ತೆ ಗೋಲ್ಡ್​ ಪಾಸ್​


ಐತಿಹಾಸಿಕ ದಸರಾ ಹಾಗೂ ಜಂಜೂ ಸವಾರಿ (Jambo Savari) ನೋಡಲು ಕಾಯುತ್ತಿರುವ ಜನರಿಗಾಗಿ ಸರ್ಕಾರ ದಸರಾ ಗೋಲ್ಡ್ ಪಾಸ್ (Gold Pass) ಜಾರಿ ಮಾಡಿದೆ. ಕಳೆದ ವರ್ಷ ಕೆಲ ಪಾಸ್​ ವಿಚಾರವಾಗಿ ಗೊಂದಲ ಉಂಟಾದ ಹಿನ್ನೆಲೆ ಈ ಭಾರೀ ಗೋಲ್ಡ್ ಪಾಸ್ ರದ್ದು ಮಾಡಿರುವುದಾಗಿ ಸಚಿವರೇ (Minister) ಘೋಷಣೆ ಮಾಡಿದ್ರು. ಇದೀಗ ಜನರ ಒತ್ತಾಯಕ್ಕೆ ಮಣಿದು ಮತ್ತೆ ಗೋಲ್ಡ್ ಪಾಸ್​ ಜಾರಿ ಮಾಡಲಾಗಿದೆ. ಗೋಲ್ಡ್ ಪಾಸ್ ಪಡೆದವರಿಗೆ ದಸರಾ ಜಂಬೂ ಸವಾರಿ, ಪಂಜಿನ ಕವಾಯತು ಹಾಗೂ ಮೈಸೂರಿನ ಇತರೆ ಪ್ರೇಕ್ಷಣೀಯ ಸ್ಥಳಗಳ (Sightseeing Places) ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.


ಆನ್​ಲೈನ್​ನಲ್ಲಿ ಗೋಲ್ಡ್​ ಪಾಸ್​ ಮಾರಾಟ

 ಗೋಲ್ಡ್​ ಪಾಸ್​ ರದ್ದು ಮಾಡಿದ್ದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ರು. ಜನಜಂಗುಳಿಯ ನಡುವೆ ಜಂಜೂ ಸವಾರಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನೋಡಲು ಸಾಧ್ಯವಾಗುವುದಿಲ್ಲ ಹೀಗಾಗಿ ಗೋಲ್ಡ್​ ಪಾಸ್​ ಜಾರಿ ಮಾಡುವಂತೆ ಒತ್ತಡ ಹೆಚ್ಚಾಗಿತ್ತು. ವಿಐಪಿ ಹಾಗೂ ವಿವಿಐಪಿಗಳೇ ಹೆಚ್ಚಾಗಿ ಈ ಪಾಸ್​ಗಳನ್ನು ಕೊಂಡುಕೊಳ್ತಾರೆ. ಈ ಬಾರಿ ಪಾಸ್​ನನ್ನು ಸಂಪೂರ್ಣವಾಗಿ ಆನ್​ಲೈನ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಒಬ್ಬರು ಒಂದು ಬಾರಿಗೆ ಎರಡು ಪಾಸ್ ಪಡೆದುಕೊಳ್ಳಬಹುದಾಗಿದೆ.




ಈ ವೆಬ್​ಸೈಟ್​ ಮೂಲಕ ಪಾಸ್​ ಬುಕ್​ ಮಾಡಿ


ಈ ಜನರು ಸರ್ಕಾರಿ ವೆಬ್​ಸೈಟ್​ ಮೂಲಕ ಗೋಲ್ಡ್​ ಪಾಸ್​ ಪಡೆಯಬಹುದಾಗಿದೆ. www.mysoredasara.gov.in ಮೂಲಕ ಪಾಸ್​ಗಳನ್ನು ಬುಕ್ ಮಾಡಲು ಅವಕಾಶ ನೀಡಲಾಗಿದೆ.


ಒಂದು ಗೋಲ್ಡ್​ ಪಾಸಿನ ಬೆಲೆ ಎಷ್ಟು?


ಗೋಲ್ಡ್​ ಪಾಸ್​ ಹೆಸರೇ ಹೇಳುವಂತೆ ಸಖತ್​ ಕಾಸ್ಟ್ಲಿ ಆಗಿದೆ. ಪ್ರತಿ ಪಾಸ್ ಗೆ 5999 ರೂಪಾಯಿ ನಿಗದಿ ಮಾಡಲಾಗಿದೆ. ಬುಕಿಂಗ್ ಮಾಡಿದ ಪಾಸ್ ಅನ್ನು ಸೆ.29 ರಂದು ಕೆ.ಎಸ್.ಡಿ‌.ಸಿಯಲ್ಲಿ ಪಡೆದುಕೊಳ್ಳಲು ಸೂಚನೆ ನೀಡಲಾಗಿದೆ. ಗೋಲ್ಡ್ ಪಾಸ್ ಪಡೆದವರಿಗೆ ದಸರಾ ಜಂಬೂ ಸವಾರಿ, ಪಂಜಿನ ಕವಾಯತು ಹಾಗೂ ಮೈಸೂರಿನ ಇತರೆ ಪ್ರೇಕ್ಷಣೀಯ ಸ್ಥಳಗಳ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.


ಇದನ್ನೂ ಓದಿ: Mysuru Dasara 2022: ಮೈಸೂರು ದಸರಾ ಎಷ್ಟೊಂದು ಸುಂದರ, ನೀವೂ ಹೋದ್ರೆ ಇವುಗಳನ್ನು ನೋಡಲು ಮರೆಯಬೇಡಿ


ಗ್ರಾಮೀಣ ದಸರಾಗೆ ಚಾಲನೆ:


ಇಂದು ಮೈಸೂರಿನಲ್ಲಿ ಬೆಳಗ್ಗೆ 9.00 ಗಂಟೆಗೆ ದಾರಿಪುರ ಗ್ರಾಮದ ದೇವಸ್ಥಾನದಲ್ಲಿ ಗ್ರಾಮೀಣ ದಸರಾವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್‌‌ ಉದ್ಘಾಟನೆ ಮಾಡಿದರು. ಸುಮಾರು 2 ಕಿ.ಮೀ. ಅದ್ಧೂರಿ ಮೆರವಣಿಗೆ ಜರುಗಲಿದೆ. ಬೃಹತ್‌ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ಜಾನುವಾರು ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿದೆ. ಮೆರವಣಿಗೆಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಸ್ಥಬ್ಧಚಿತ್ರ, ಸಾಂಸ್ಕೃತಿಕ ಕಲಾ ತಂಡಗಳು ಭಾಗಿಯಾಗಲಿವೆ. ಸಂಸದ ಪ್ರತಾಪ್‌ ಸಿಂಹ, ಶಾಸಕ ಜಿ.ಟಿ ದೇವೇಗೌಡ ಸೇರಿ ಹಲವರು ಭಾಗಿಯಾಗಲಿದ್ದಾರೆ.


Published by:ಪಾವನ ಎಚ್ ಎಸ್
First published: