HOME » NEWS » State » ARRANGE FOR A YEAR JOG FALLS VIEWING BIG PROJECT BY KARNATAKA GOVERNMENT HK

Jog Falls: ವರ್ಷಪೂರ್ತಿ ಜೋಗ ಜಲಪಾತ ವೀಕ್ಷಣೆಗೆ ವ್ಯವಸ್ಥೆ ; ರಾಜ್ಯ ಸರ್ಕಾರದಿಂದ ಬೃಹತ್ ಯೋಜನೆ

ಜೋಗ ಜಲಪಾತ: ಧುಮ್ಮಿಕ್ಕುವ ಜೋಗದ ಜಲಪಾತ ಹಾಗೂ ಸುತ್ತಮುತ್ತಲಿನ ಪ್ರಾಕೃತಿಕ ಪರಿಸರವನ್ನು ವೀಕ್ಷಿಸಿ ಸಂಭ್ರಮಿಸಲು ಸುಮಾರು 80 ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ವಿಶೇಷ ವಿನ್ಯಾಸದ ಜಿಪ್ ಲೈನ್ ಅಳವಡಿಸಲಾಗುತ್ತಿದೆ

news18-kannada
Updated:May 18, 2020, 2:15 PM IST
Jog Falls: ವರ್ಷಪೂರ್ತಿ ಜೋಗ ಜಲಪಾತ ವೀಕ್ಷಣೆಗೆ ವ್ಯವಸ್ಥೆ ; ರಾಜ್ಯ ಸರ್ಕಾರದಿಂದ ಬೃಹತ್ ಯೋಜನೆ
ಜೋಗ ಜಲಪಾತ
  • Share this:
ಶಿವಮೊಗ್ಗ(ಮೇ.17): ಜೋಗ ಜಲಪಾತದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಸಾರ್ವಜನಿಕರು ಜೋಗ ಜಲಪಾತ ಮತ್ತು ಅಲ್ಲಿನ ನಯನ ಮನೋಹರವಾದ ಪ್ರಕೃತಿಯ ಸುಂದರ ದೃಶ್ಯಗಳನ್ನು ಕಣ್ಣುತುಂಬಿಕೊಳ್ಳಲು ನೂತನ ಯೋಜನೆಗಳನ್ನು ಮಾಡಲಾಗುತ್ತಿದೆ. ಜೋಗದ ಸೌಂದರ್ಯವನ್ನು ಕೇವಲ ಮಳೆಗಾಲ ಮಾತ್ರ ಇಲ್ಲ, ವರ್ಷಪೂರ್ತಿ ವೀಕ್ಷಿಸಲು ಅನುಕೂಲವಾಗುವಂತೆ ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.

ಧುಮ್ಮಿಕ್ಕುವ ಜೋಗದ ಜಲಪಾತ ಹಾಗೂ ಸುತ್ತಮುತ್ತಲಿನ ಪ್ರಾಕೃತಿಕ ಪರಿಸರವನ್ನು ವೀಕ್ಷಿಸಿ ಸಂಭ್ರಮಿಸಲು ಸುಮಾರು 80 ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ವಿಶೇಷ ವಿನ್ಯಾಸದ ಜಿಪ್ ಲೈನ್ ಅಳವಡಿಸಲಾಗುತ್ತಿದೆ. ಈ ಕಾಮಗಾರಿಗೆ ಸರ್ಕಾರವು ಈಗಾಗಲೇ 40 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದೆ. ಸಾಹಸ ಮತ್ತು ಕ್ರೀಡಾ ಪ್ರಿಯರಿಗೆ ಮೆಚ್ಚುಗೆಯಾಗಬಹುದಾದ ದೇಶದ ಮಾದರಿ ಜಿಪ್ ಲೈನ್ ಇದಾಗಿದ್ದು, ಇಂತಹ ಭೌಗೋಳಿಕ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜ್ಯದ ಮೊದಲ ಪ್ರವಾಸಿ ತಾಣವಾಗಲಿದೆ.

ಈ ಜಿಪ್ ಲೈನ್ ನಲ್ಲಿ ಸುರಕ್ಷತೆಯ ದೃಷ್ಠಿಯಿಂದ 2 ಕೇಬಲ್ ಗಳನ್ನು ಅಳವಡಿಸುತ್ತಿದ್ದು, ಗುರುತ್ವಾಕರ್ಷಣೆಯ ಬಲದ ಮೇಲೆ ಇಬ್ಬರು ವ್ಯಕ್ತಿಗಳು ಏಕಕಾಲದಲ್ಲಿ ಒಂದು ಬದಿಯಿಂದ ಇನ್ನೊಂದು ಬದಿಗೆ ಸುಮಾರು 450 ಮೀ ದೂರದ ವರೆಗೆ ಸಾಗಬಹುದಾಗಿದೆ. ಜಿಪ್ ಲೈನ್ ನ ಒಂದು ಕಡೆಗೆ 48 ಅಡಿ ಹಾಗೂ ಇನ್ನೊಂದು ಕಡೆಗೆ 16 ಅಡಿ ಎತ್ತರದ ಎರಡು ಸ್ಥಾವರಗಳನ್ನು ನಿರ್ಮಿಸಿ ಸಾರ್ವಜನಿಕರ ವೀಕ್ಷಣೆ ಅನುಕೂಲ ಮಾಡಕೊಡಲಾಗುತ್ತಿದೆ. ರಾಜ, ರಾಣಿ, ರೋರರ್, ರಾಕೆಟ್ ಫಾಲ್ಸ್ ಗಳನ್ನು ಜಿಪ್ ಲೈನ್ ನಲ್ಲಿ  ನೋಡಿ ಪ್ರವಾಸಿಗರು ಇನ್ನು ಮುಂದೆ ಆನಂದಿಸಬಹುದಾಗಿದೆ.

ಇದನ್ನೂ ಓದಿ : ಕಲಬುರ್ಗಿಯ ಮೋಮಿನಪುರ ಕೊರೋನಾ ಹಾಟ್ ಸ್ಟಾಟ್ ; ಮನೆ ಮನೆ ಸ್ಕ್ರೀನಿಂಗ್ ಆರಂಭಿಸಿದ ಜಿಲ್ಲಾಡಳಿತ

ಸುಮಾರು 920 ಅಡಿ ಎತ್ತರದಿಂದ ದುಮ್ಮಿಕ್ಕುವ ಜೋಗ ಜಲಪಾತದಲ್ಲಿ ಜಿಪ್ ಲೈನ್ ವ್ಯವಸ್ಥೆ ಮಾಡುವುದರಿಂದ ಪ್ರವಾಸಿಗರ ಇನ್ನು ಸಹ ಹೆಚ್ಚಾಗಲಿದೆ. ಇದರ ಜೊತೆಗೆ ಜೋಗದಲ್ಲಿ ಕೈಗೊಳ್ಳಬಹುದಾದ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಈಗಾಗಲೇ 10 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಅರಣ್ಯ ಇಲಾಖೆಯ ಸಹಯೋಗದಲ್ಲಿ ಮೈಸೂರಿನ  ಬಟರ್ ಫ್ಲೈಪಾರ್ಕ್ ಮಾದರಿಯಲ್ಲಿ ಜೈವಿಕ ಉದ್ಯಾನವನ ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ.
First published: May 17, 2020, 4:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories