ಯಲಹಕದಲ್ಲಿ ಏಕಾಏಕಿ 50ಕ್ಕೂ ಹೆಚ್ಚು ಮರಗಳನ್ನು ಕಡಿದ ದುರುಳರು; ಪರಿಸರ ಪ್ರೇಮಿಗಳಿಂದ ಪ್ರಕರಣ ದಾಖಲು

ಸ್ಥಳೀಯ ಪ್ರಸಿದ್ಧಿ ಲೇಔಟ್ ನ ಅಧ್ಯಕ್ಷರಾದ ಜಾರ್ಜ್ ಎಂಬುವವರು ಈ ಕೃತ್ಯವನ್ನು ಎಸಗಿದ್ದು, ಪ್ರಶ್ನಿಸಲು ಹೋದರೆ ಯಾರಿಗೆ ಬೇಕಾದರೂ ದೂರು ನೀಡಿ ಎಂದು ಸವಾಲು ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಯಲಹಂಕದಲ್ಲಿ ಕಡಿಯಲಾಗಿರುವ ಮರಗಳು.

ಯಲಹಂಕದಲ್ಲಿ ಕಡಿಯಲಾಗಿರುವ ಮರಗಳು.

  • Share this:
ಯಲಹಂಕ (ಜೂನ್‌ 04): ಯಾವುದೇ ಅನುಮತಿ ಪಡೆಯದೆ 50ಕ್ಕೂ ಹೆಚ್ಚು ಮರಗಳ ಮಾರಣಹೋಮ ನಡೆಸಿರುವ ಘಟನೆ ಯಲಹಂಕ ತಾಲೂಕಿನ ಚಿಕ್ಕಜಾಲ ಹೋಬಳಿಯ ಬಿಲ್ಲಮಾರನಹಳ್ಳಿಯಲ್ಲಿ ನಡೆದಿದ್ದು, ಇದನ್ನು ವಿರೋಧಿಸಿದ ಪರಿಸರ ಪ್ರೇಮಿಗಳು ಹಾಗೂ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಅರಣ್ಯಾಧಿಕಾರಿಗಳು  ಹಾಗೂ ಗ್ರಾಮ ಪಂಚಾಯಿತಿ ಸೇರಿದಂತೆ ಯಾವುದೇ ಅಧಿಕಾರಿಗಳಿಂದ ಅನುಮತಿ ಪಡೆಯದೆ ಮರಗಳನ್ನು ಕಡಿದಿರೋದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು, ಟ್ರಾಕ್ಟರ್ ಸಮೇತ ಹೊಂಗೆ ತುಂಡುಗಳನ್ನು ಜಪ್ತಿ ಮಾಡಿದ್ದಾರೆ.

ಸ್ಥಳೀಯ ಪ್ರಸಿದ್ಧಿ ಲೇಔಟ್ ನ ಅಧ್ಯಕ್ಷರಾದ ಜಾರ್ಜ್ ಎಂಬುವವರು ಈ ಕೃತ್ಯವನ್ನು ಎಸಗಿದ್ದು, ಪ್ರಶ್ನಿಸಲು ಹೋದರೆ ಯಾರಿಗೆ ಬೇಕಾದರೂ ದೂರು ನೀಡಿ ಎಂದು ಸವಾಲು ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮರಗಳನ್ನು ಉಳಿಸಿ,  ಬೆಳೆಸುವಂತೆ ನ್ಯಾಯಾಲಯದ ಆದೇಶವಿದ್ದು, ಸರ್ಕಾರವೂ ಸಹ ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ನೂರಾರು ಕೋಟಿ ವೆಚ್ಚ ಮಾಡುತ್ತಿದೆ. ಆದರೆ, ಕೆಲ ಕಿಡಿಗೇಡಿಗಳು ಸರ್ಕಾರದ ಆದೇಶವನ್ನು ಧಿಕ್ಕರಿಸಿ ಮರಗಳ ಮಾರಣ ಹೋಮವನ್ನು ನಡೆಸುತ್ತಿದ್ದಾರೆ, ಈ ರೀತಿ ಮರಗಳ ಮಾರಣಹೋಮ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಬಿಲ್ಲಮಾರನಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : Vijay Mallya: ಭಾರತಕ್ಕೆ ಉದ್ಯಮಿ ವಿಜಯ ಮಲ್ಯ ಹಸ್ತಾಂತರ ಮತ್ತಷ್ಟು ವಿಳಂಬ; ಕಾರಣವೇನು ಗೊತ್ತಾ? 
First published: