ಸೇನೆ ಅಂದ್ರೆ (Army) ಎಲ್ಲರಿಗೂ ವಿಶೇಷ ಗೌರವ. ಸೇನೆ ಸಮವಸ್ತ್ರ (Uniform), ಸೇನೆಯ ವಾಹನ ಕಂಡರೂ ಮನಸ್ಸಲ್ಲಿ ಗೌರವ ಭಾವ ಮೂಡುತ್ತೆ. ಸೈನಿಕರಿಗೂ (Soldier) ವಿಶೇಷ ಜಾಗ ಕೊಟ್ಟಿರುತ್ತೇವೆ. ಯಾಕೆಂದರೆ ಅವರು ನಮ್ಮನ್ನೆಲ್ಲಾ ಕಾಯುತ್ತಾರೆ. ವೈರಿ ದೇಶಗಳಿಂದ ರಕ್ಷಿಸ್ತಾರೆ ಅಂತಾ. ಆದರೆ ದೇಶ ಕಾಯುವ ಸೈನಿಕರೇ ಪುಂಡಾಟಿಕೆ ನಡೆಸಿದರೆ ಆಕ್ರೋಶ ಹೊರಹೊಮ್ಮುತ್ತೆ. ಉತ್ತರ ಕನ್ನಡದಲ್ಲಿ ನೌಕಾದಳದ (Navy) ಸಿಬ್ಬಂದಿಯೇ ನಡುರಸ್ತೆಯಲ್ಲಿ ಪುಂಡಾಟಿಕೆ ಮೆರೆದಿದ್ದಾರೆ. ಕುಡಿದ ಅಮಲಿನಲ್ಲಿ ಹತ್ತಾರು ಜನರ ಎದುರೇ ನೌಕಾದಳದ ಸೇನಾ ಸಿಬ್ಬಂದಿ ಬಸ್ ಡ್ರೈವರ್ನ್ನು (Driver) ಎಳೆದಾಡಿ ಕಿರಿಕ್ ಮಾಡಿದ್ದಾರೆ. ಕೊನೆಗೆ ಟೋಲ್ ಸಿಬ್ಬಂದಿ (Toll) ಅಲ್ಲಿಂದ ಓಡಿಸಿದ್ದಾರೆ.
ಸೇನೆ ಅಂದ್ರೆ ಶಿಸ್ತು. ಸೇನೆಯ ಉಡುಪು ಧರಿಸಿದಾಗ ಶಿಸ್ತು ಅನ್ನೋದು ಬರುತ್ತೆ. ಆದರೆ ಶಿಸ್ತು ಕಾಪಾಡಬೇಕಾದ ಸೇನಾ ಸಿಬ್ಬಂದಿಯೇ ಪುಂಡಾಟಿಕೆ ಮೆರೆದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಉತ್ತರ ಕನ್ನಡದ ಅಂಕೋಲಾದಲ್ಲಿ ಈ ಘಟನೆ ನಡೆದಿದೆ.
ಬಸ್ ಕೀ ಕಸಿದು ಎಳೆದಾಟ!
ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ಸರ್ಕಾರಿ ಬಸ್ ಬಂದಿದೆ. ಈ ವೇಳೆ ಅಲ್ಲಿಗೆ ನೌಕಾದಳದ ಸಿಬ್ಬಂದಿಯೊಬ್ಬರು ಕುಡಿದ ಮತ್ತಿನಲ್ಲಿ ಬಂದಿದ್ದಾರೆ. ಸರ್ಕಾರಿ ಬಸ್ ಡ್ರೈವರ್ನ್ನು ನೋಡುತ್ತಲೇ ನೌಕಾದಳದ ಸಿಬ್ಬಂದಿ ಪುಂಡಾಟಿಕೆ ನಡೆಸಿದ್ದಾರೆ. ಸಾರಿಗೆ ಸಂಸ್ಥೆ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.
ನೌಕಾ ಸಿಬ್ಬಂದಿಯನ್ನು ಓಡಿಸಿದ ಜನ!
ಕುಡಿದ ಅಮಲಲ್ಲಿದ್ದ ನೌಕಾದಳದ ಸಿಬ್ಬಂದಿ ಮೊದಲು ಏಕಾಏಕಿ ಸಾರಿಗೆ ಬಸ್ನ್ನು ಅಡ್ಡಗಟ್ಟಿದ್ದಾರೆ. ನಂತರ ಡ್ರೈವರ್ ಸೀಟ್ ಬಳಿ ಕೈಹಾಕಿ ಬಸ್ ಕೀ ಕಸಿದು ಚಾಲಕನನ್ನ ಎಳೆದಾಡಿದ್ದಾರೆ. ಪುಂಡಾಟಿಕೆ ಜೋರಾಗ್ತಿದ್ದಂತೆ ಜನ ಎಲ್ಲಾ ಸ್ಥಳದಲ್ಲಿ ಜಮಾಯಿಸಿದ್ದಾರೆ. ಕೊನೆಗೆ ಟೋಲ್ ಸಿಬ್ಬಂದಿಯೇ ಪುಂಡಾಟಿಕೆ ನಡೆಸುತ್ತಿದ್ದ ನೌಕಾ ಸೇನೆಯ ನೌಕರನನ್ನ ಸ್ಥಳದಿಂದ ಓಡಿಸಿದ್ದಾರೆ.
ಇದನ್ನೂ ಓದಿ: ಆನ್ಲೈನ್ ಗೇಮ್ನಲ್ಲಿ 11 ಕೋಟಿ ಗೆದ್ದ ವಿದ್ಯಾರ್ಥಿ, ಸ್ನೇಹಿತರಿಂದಲೇ ಕಿಡ್ನ್ಯಾಪ್!
ಪೊಲೀಸ್ ಠಾಣೆಯ ಬಳಿಯೇ ಸರಣಿ ಕಳ್ಳತನ!
ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಬಳಿಯೇ ಕಳ್ಳರು ಕೈಚಳಕ ತೋರಿದ್ದಾರೆ. ಇಲ್ಲಿನ ಶಹರ ಪೊಲೀಸ್ ಠಾಣೆಯ ಬಳಿಯೇ ಸರಣಿ ಕಳ್ಳತನವಾಗಿದೆ. ಕಳ್ಳರು ಶಟರ್ಸ್ ಮುರಿದು ಒಳನುಗ್ಗಿ ಲಕ್ಷಾಂತರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಮರಾಠಾ ಗಲ್ಲಿ, ಮ್ಯಾದಾರ ಓಣಿ, ಕಲಾದಗಿ ಓಣಿ, ಸ್ಟೇಷನ್ ರೋಡ್ನ 8 ಅಂಗಡಿಗಳಲ್ಲಿ ಕಳ್ಳತನವಾಗಿದೆ.
8 ಅಂಗಡಿಗಳಲ್ಲಿ ಕಳ್ಳತನ!
ಶಹರ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿರೋ ರೇಣುಕಾ ಸ್ವೀಟ್ ಮಾರ್ಟ್ನಲ್ಲಿ ಕಳ್ಳತನವಾಗಿದ್ದು ಕಳ್ಳರು ನಗದು ಮತ್ತು ಮೊಬೈಲ್ ಕದ್ದಿದ್ದಾರೆ. ನಂತರ ಮಿಶ್ರಾ ಪೇಡಾ ಅಂಗಡಿಯ ಶಟರ್ಸ್ ಮುರಿದು 30 ಸಾವಿರ ರೂಪಾಯಿ ಕದ್ದು ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: ಪ್ರವೀಣ್ ಅಗಲಿಕೆ ಬಳಿಕ ಆಹಾರ ತ್ಯಜಿಸಿದ್ಗ ಮುದ್ದು ನಾಯಿಮರಿ ಜಾನಿ ಸಾವು
ಎರಡು ಬಟ್ಟೆ ಅಂಗಡಿಗಳಲ್ಲಿ 40 ಸಾವಿರ ರೂಪಾಯಿ ನಗದನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಮೂವರು ಕಳ್ಳರ ಕೃತ್ಯ ಇದಾಗಿದ್ದು ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕತ್ತಿ ಹಿಡಿದು ಊರು ಸುತ್ತಿದ ಕುಡುಕ!
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಬೆಚ್ಚಿ ಬೀಳುವ ಘಟನೆ ನಡೆದಿದೆ. ಯುವಕನೊಬ್ಬ ಕೈಯಲ್ಲಿ ಕತ್ತಿ ಹಿಡಿದುಕೊಂಡು ವಾಕಿಂಗ್ ಮಾಡಿದ್ದಾನೆ. ಸಂದೀಪ್ ಎಂಬಾತನೇ ಕತ್ತಿ ಹಿಡಿದು ಊರಿಡೀ ಸುತ್ತಿದ ಯುವಕ. ಸಂದೀಪ್ ಮದ್ಯಪಾನ ಮಾಡಿ ಈ ರೀತಿ ಕತ್ತಿ ಹಿಡಿದುಕೊಂಡು ಸಿಟಿ ಇಡೀ ಓಡಾಡಿದ್ದಾನೆ. ಸುಳ್ಯದ ಕನಕಮಜಲು ಎಂಬಲ್ಲಿ ಘಟನೆ ನಡೆದಿದ್ದು ವಿಡಿಯೋ ವೈರಲ್ ಆಗಿದೆ. ಸುಳ್ಯ ಪೋಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಕೇಸು ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ