ಮದುವೆಯಾಗೋಣ ಬಾ ಎಂದು ಪ್ರೀತಿಸಿದ ಹುಡುಗಿಯ ಪ್ರಾಣವನ್ನೇ ತೆಗೆದ ದೇಶ ಕಾಯೋ ಸೈನಿಕ

ಗಡಿಯಲ್ಲಿ ನಿಂತು ಶತ್ರುಗಳ ಸದೆಬಡಿಯುವಾತ, ಮನೆಯವ ಮುಂದೆ ನಿಂತು ತಾನು ಇದೇ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದು ಹೇಳಲಾರದೇ, ಆಕೆಯ ಜೀವವನ್ನು ತೆಗೆದ ಆರೋಪಿಯಾಗಿದ್ದಾನೆ.

ಆರೋಪಿ ರಾಜು

ಆರೋಪಿ ರಾಜು

  • Share this:
ಚಿಕ್ಕೋಡಿ (ಫೆ. 2): ದೇಶಕ್ಕಾಗಿ ಪ್ರಾಣ ನೀಡಲು ಸಿದ್ಧವಾದ ಸೈನಿಕನೊಬ್ಬ ಮದುವೆಗಾಗಿ ತಾನು ಪ್ರೀತಿಸಿದ ಹುಡುಗಿ ಜೀವವನ್ನೇ ತೆಗೆದು ಪೊಲೀಸರ ವಶವಾಗಿದ್ದಾನೆ. ಗಡಿಯಲ್ಲಿ ನಿಂತು ಶತ್ರುಗಳ ಸದೆಬಡಿಯುವಾತ, ಮನೆಯವ ಮುಂದೆ ನಿಂತು ತಾನು ಇದೇ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದು ಹೇಳಲಾರದೇ, ಆಕೆಯ ಜೀವವನ್ನು ತೆಗೆದು ಆರೋಪಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿದ ಆರೋಪಿ ರಾಜು. ತನ್ನ ಗ್ರಾಮದ ರೂಪಾಲಿ ಎಂಬ ಹುಡುಗಿಯನ್ನು ಬಾಲ್ಯದಿಂದಲೇ ಪ್ರೇಮಿಸುತ್ತಿದ್ದ ಈತ. ಬಾಲ್ಯದಿಂದಲೂ ಇದ್ದ ಪ್ರೇಮಕ್ಕೆ ದೊಡ್ಡವರಾದ ಬಳಿಕ ಜಾತಿ ಅಡ್ಡವಾಗಿದೆ. ಇದೇ ಕಾರಣಕ್ಕೆ ಮನೆಯವರು ಒಪ್ಪಿಲ್ಲ . ಈ ಹಿನ್ನಲೆ ರಿಜಿಸ್ಟರ್​ ಮದುವೆ ಆಗೋಣ ಬಾ ಎಂದು ಕರೆದ ರಾಜೂ ಆಕೆಯನ್ನು ಕೊಲೆ ಮಾಡಿ ಪೊಲೀಸರು ಅತಿಥಿಯಾಗಿದ್ದಾನೆ. 

ಏನಿದು ಘಟನೆ?

ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ರಾಜೂ ಹಾಗೂ ರೂಪಾಲಿ ಚಿಕ್ಕಂದಿನಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿ ವಿಷಯ ಮನೆಯವರಿಗೆ ತಿಳಿದಿರಲಿಲ್ಲ. ಈ ನಡುವೆ ಸೇನೆಯಿಂದ ರಜೆ ಮೇಲೆ ಬಂದ ರಾಜೂಗೆ ಮನೆಯವರು ಹುಡುಗಿ ನೋಡಿ ನಿಶ್ಚಯಿಸಿದ್ದಾರೆ. ಅಲ್ಲದೇ, ಮದುವೆ ತಯಾರಿಗೂ ಮುಂದಾಗಿದ್ದಾರೆ. ಈ ವೇಳೆ ರಾಜೂ ತನ್ನ ಪ್ರೀತಿ ವಿಚಾರವನ್ನು ಮನೆಯವರಿಗೆ ಹೇಳಿದ್ದಾನೆ. ಆದರೆ, ಹುಡುಗಿ ಅನ್ಯ ಜಾತಿಯವಳು ಎಂಬ ಕಾರಣಕ್ಕೆ ರಾಜೂ ಮನೆಯಲ್ಲಿ ಆತನ ಪ್ರೀತಿಯನ್ನು ನಿರಾಕರಿಸಿದ್ದಾರೆ.

ಮನೆಯವರಿಗೆ ವಿರೋಧಕ್ಕೆ ಮಣಿದ ರಾಜೂ ಕಡೆಗೆ ಆತನ ಮನೆಯವರು ನಿಶ್ಚಯಿಸಿದ ಯುವತಿ ಜೊತೆಗೆ ಜ. 21ರಂದು ನಿಶ್ಚಿತಾರ್ಥ ನಡೆಸಿದ್ದಾರೆ. ಇದಾದ ಮಾರನೇ ದಿನವೇ ರಾಜೂ ಈ ಕುರಿತು ರೂಪಾಲಿಗೆ ತಿಳಿಸಿದ್ದಾನೆ. ಅಲ್ಲದೇ, ತಮ್ಮ ಮನೆಯಲ್ಲಿ ನಮ್ಮಿಬ್ಬರ ಮದುವೆ ಒಪ್ಪುತ್ತಿಲ್ಲ. ನಾವು ರಿಜಿಸ್ಟರ್​ ಮದುವೆಯಾಗೋಣ ಬಾ ಎಂದು ಕರೆದಿದ್ದಾನೆ.

ಇದನ್ನು ಓದಿ: ಕಣ್ಣು ಬಿಟ್ಟ ಶಿವಲಿಂಗ: ದೇವರ ದರ್ಶನಕ್ಕೆ ಮುಗಿಬಿದ್ದ ಜನರು; ಏನಿದರ ಹಿಂದಿನ ಮರ್ಮ?

ರಾಜು ಮಾತು ನಂಬಿದ ರೂಪಾಲಿ ರಿಜಿಸ್ಟರ್​ ಮದುವೆಯಾಗಲೇಂದು ಆತನನ್ನು ಭೇಟಿಯಾಗಿದ್ದಾಳೆ. ಈ ಸಂದರ್ಭದಲ್ಲಿ ರಾಜು ಆತನ ನಿಶ್ಚಿತಾರ್ಥದ ವಿಷಯವನ್ನು ಹೇಳಿದ್ದಾಳೆ. ಅಲ್ಲದೇ, ತಾವು ದೂರಾಗೋಣ ಎಂದು ಒಲೈಕೆಯ ಯತ್ನ ನಡೆಸಿದ್ದಾನೆ. ಆದರೆ, ಇದು ಯಾವುದು ಪ್ರಯೋಜನಕ್ಕೆ ಬಂದಿಲ್ಲ. ರೂಪಾಲಿ ಈ ಸಂಬಂಧ ಈತನೊಡನೆ ಜಗಳವಾಡಿದ್ದಾಳೆ. ಬಳಿಕ ಆಕೆಯನ್ನು ಸಮಾಧಾನ ಮಾಡಿದ ರಾಜೂ ಹೋಟೇಲ್​ವೊಂದಕ್ಕೆ  ಊಟಕ್ಕೆ ಕರೆದೊಯ್ದಿದ್ದಾನೆ. ಊಟವಾದ ಬಳಿಕ ಕೂಲ್ಡ್ರಿಂಕ್ಸ್​ಗೆ ವಿಷ ಬೆರೆಸಿ ನೀಡಿದ್ದಾನೆ. ಕುಲ್ಡ್ರಿಂಕ್ಸ್​ ಕುಡಿದ ಸ್ಪಲ್ಪ ಹೊತ್ತಿನಲ್ಲೇ ಆಕೆ ಅಸ್ವಸ್ಥಗೊಂಡಿದ್ದಾಳೆ.

ಈ ವೇಳೆ ತನಗೇನು ಗೊತ್ತಿಲ್ಲದಂತೆ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ನಾಟಕವಾಡಿದ್ದಾನೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ​ ರೂಪಾಲಿ ಸಾವನ್ನಪ್ಪಿದ್ದಾಳೆ. ಆಕೆ ಸಾವನ್ನಪ್ಪುತ್ತಿದ್ದಂತೆ ರಾಜು ಮತ್ತು ಆತನ ಸ್ನೇಹಿತ ಸುರೇಶ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಪ್ರಕರಣ ಪೊಲೀಸರು ತನಿಖೆ ನಡೆಸಿದಾಗ ಆತನ ಪ್ರಿಯಕರ, ದೇಶ ಕಾಯುವ ಸೈನಿಕನೇ ಈ ಕೃತ್ಯ ನಡೆಸಿರುವುದು ಬಯಲಾಗಿದ್ದು, ಆತನನ್ನು ವಶಕ್ಕೆ ಪಡೆದಿದ್ದಾರೆ.
Published by:Seema R
First published: