• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮಲೆನಾಡಿನಲ್ಲಿ ಈ ವರ್ಷ ಕುಸಿದ ಅಡಿಕೆ ಇಳುವರಿ ; ಅಡಿಕೆ ಬೆಳೆಗಾರಿಗೆ ಮತ್ತೆ ಸಂಕಷ್ಟ

ಮಲೆನಾಡಿನಲ್ಲಿ ಈ ವರ್ಷ ಕುಸಿದ ಅಡಿಕೆ ಇಳುವರಿ ; ಅಡಿಕೆ ಬೆಳೆಗಾರಿಗೆ ಮತ್ತೆ ಸಂಕಷ್ಟ

ಅಡಿಕೆ

ಅಡಿಕೆ

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಅಡಿಕೆಗೆ ರೋಗಗಳ ಬಾಧೆ ಕಾಡುತ್ತಿದೆ. ಅದರಲ್ಲೂ ಮಳೆಗಾಲದ  ಸಮಯದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ ಅಡಿಕೆ ಬೆಳೆಗೆ ರೋಗಗಳು ಬಾಧಿಸುತ್ತಿದೆ

  • Share this:

ಶಿವಮೊಗ್ಗ(ಅಕ್ಟೋಬರ್​. 14): ಮಲೆನಾಡಿನ ಅಡಿಕೆ ಬೆಳೆಗಾರರಿಗೆ ಸಂಕಷ್ಟದ ಮೇಲೆ ಸಂಕಷ್ಟಗಳು ಎದುರಾಗುತ್ತಲೇ ಇವೆ. ಒಂದು ಕಡೆ ಅಡಿಕೆ ಬೆಲೆ ಏರಿಕೆಯಾಗುತ್ತಿಲ್ಲ. ಮತ್ತೊಂದು ಕಡೆ ಈ ಬಾರಿ ಅಡಿಕೆ ಇಳುವರಿ 35 ರಿಂದ 40 ರಷ್ಟು ಇಳಿ ಮುಖವಾಗಿದೆ. ಮಳೆಗಾಲದ ಸಮಯದಲ್ಲಿ ಅಡಿಕೆ ಬೆಳೆಗೆ ರೋಗಗಳು ಬಾಧಿಸುತ್ತಿದ್ದು, ಇದು ಇಳುವರಿ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಅಡಿಕೆಯನ್ನೇ ನಂಬಿ ಕೃಷಿ ಮಾಡುತ್ತಿರುವ ರೈತರು ಅಡಿಕೆ ಬೆಳೆಗೆ ತಿಲಾಂಜಲಿ ಹಿಡುವಂತ ಪರಿಸ್ಥಿತಿ ಮಲೆನಾಡಿನಲ್ಲಿ ನಿರ್ಮಾಣವಾಗುತ್ತಿದೆ. ಅಡಿಕೆ ಬೆಳೆಗಾರರು ಎಂದರೇ ಶ್ರೀಮಂತರು ಎಂಬ ಕಾಲವೊಂದಿದ್ದು. ಅಡಿಕೆ ಬೆಳೆಗಾರರಿಗೆ ಯಾವುದೇ ರೀತಿಯ ಸಂಕಷ್ಟಗಳು ಇಲ್ಲ ಎಂಬ ಮಾತುಗಳು ಇದ್ದವು. ಅದರೆ, ಈಗ ಕಾಲ ಬದಲಾಗುತ್ತಿದೆ. ಅಡಿಕೆ ಬೆಳೆಗಾರರು ಬೀಗಿದೆ ಬೀಳುವಂತ ಸ್ಥಿತಿಗೆ ಬಂದು ತಲುಪುತ್ತಿದ್ದಾರೆ. ಇದಕ್ಕೆಲ್ಲ, ಪ್ರಮುಖ ಕಾರಣ ಅಡಿಕೆ ಬೆಳೆಗೆ ಬರುತ್ತಿರುವ ರೋಗಗಳು. ಜೊತೆಗೆ ಅಡಿಕೆ ಬೆಲೆ ಏರಿಕೆಯಾಗದೇ ಇರುವುದು. ಇಷ್ಟರ ಮಧ್ಯೆ ಈ ವರ್ಷ ಅಡಿಕೆ ಇಳುವರಿ ಕುಸಿದಿವುದು ರೈತರನ್ನು ಕಂಗಾಲಾಗುವಂತೆ ಮಾಡಿದೆ. ಈ ಬಾರಿ ಇಳುವರಿ ನೋಡಿ ರೈತರು ಕಣ್ಣೀರು ಹಾಕುವಂತ ಪರಿಸ್ಥಿತಿ ಬಂದಿದೆ.


ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಅಡಿಕೆಗೆ ರೋಗಗಳ ಬಾಧೆ ಕಾಡುತ್ತಿದೆ. ಅದರಲ್ಲೂ ಮಳೆಗಾಲದ  ಸಮಯದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ ಅಡಿಕೆ ಬೆಳೆಗೆ ರೋಗಗಳು ಬಾಧಿಸುತ್ತಿದೆ. ಕೊಳೆ ರೋಗ, ಹಳದಿ ಎಲೆ ರೋಗ, ಕಾಂಡಕೊರಕ, ಬೂದಿ ರೋಗಗಳ ಕಾಟ ಹೆಚ್ಚಾಗಿದೆ. ಇದರ ಜೊತೆಗೆ ಈ ಬಾರಿ ಇಳುವರಿ ಇಳಿಮುಖವಾಗಿದ್ದು, ಅಡಿಕೆ ಬೆಳೆಗಾರರಿಗೆ ದೊಡ್ಡ ಪೆಟ್ಟು ನೀಡಿದೆ.


ಒಂದು ಎಕರೆ ಪ್ರದೇಶದಲ್ಲಿ 80 ರಿಂದ 85 ಕ್ವಿಂಟಾಲ್ ಹಸಿ ಅಡಿಕೆ ಬರುತ್ತಿದ್ದ ಜಾಗದಲ್ಲಿ ಈ ವರ್ಷ ಕೇವಲ 50 ರಿಂದ 55 ಕ್ವಿಂಟಾಲ್ ಅಡಿಕೆ ಸಿಗುತ್ತಿದೆ. ಇದು ರೈತರಿಗೆ ಅಂತಕ ಶುರು ಮಾಡಿದೆ. ವರ್ಷಕ್ಕೆ  ಸರಿ ಸುಮಾರು ಒಂದೂವರೆ ಯಿಂದ ಎರಡು ಲಕ್ಷ ರೂಪಾಯಿ ಒದು ಎಕರೆ ಅಡಿಕೆ ತೋಟದ ನಿರ್ವಹಣೆಗೆ ಹಣ ಖರ್ಚು ಮಾಡಲಾಗುತ್ತಿದೆ. ಈ ವರ್ಷದ ಇಳುವರಿ ನೋಡಿದರೆ ರೈತರು ಸಂಪೂರ್ಣವಾಗಿ ನಷ್ಟ ಅನುಭವಿಸಬೇಕಾಗುತ್ತದೆ.


ಇದನ್ನೂ ಓದಿ : ಕಲಬುರ್ಗಿ : ಮಹಾಮಳೆಯ ಪ್ರವಾಹದಲ್ಲಿಯೇ ಮಹಿಳೆಗೆ ಹೆರಿಗೆ ಮಾಡಿಸಿದ ಅಜ್ಜಿ


ರೋಗಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಮಾಡಿದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಅಡಿಕೆಗೆ ಏಕೆ ರೋಗಗಳು ಬಾಧಿಸುತ್ತಿವೆ. ಇಳುವರಿ ಕಡಿಮೆಯಾಗಲು ಕಾರಣ ಏನು ಎಂಬ ಬಗ್ಗೆ ರೈತರಿಗೆ ಗೊತ್ತಾಗುತ್ತಿಲ್ಲ. ಅಡಿಕೆ ತೋಟಗಳ ನಿರ್ವಹಣೆ ವೆಚ್ಚ ದಿನೇ ದಿನೇ ಹೆಚ್ಚಾಗುತ್ತಿದೆ ಕೃಷಿ ಕೂಲಿ ಕಾರ್ಮಿಕರ ವೇತನ ದುಪ್ಪಟ್ಟಾಗಿದೆ. ಹೀಗಾಗಿ ಅಡಿಕೆ ಬೆಳೆಯುವುದು ಬಿಡುವಂತ ಪರಿಸ್ಥಿತಿಗೆ ರೈತರು ಬಂದಿದ್ದಾರೆ.


ಇಷ್ಟೆಲ್ಲ ಕಷ್ಟಗಳ ನಡುವೆ ಅಡಿಕೆಗೆ ಬೆಲೆ ಏರಿಕೆ ಕಾಣುತ್ತಿಲ್ಲ ಇದು ರೈತರನ್ನು ಮತ್ತೋಷ್ಟು ಅತಂಕ ಸೃಷ್ಠಿ ಮಾಡಿದೆ. ಅಡಿಕೆ ಬೆಳೆಯುವುದಕ್ಕಿಂತ ಬೇರೆ ಕೆಲಸ ಮಾಡುವುದೇ ಲೇಸು ಎನ್ನುತ್ತಿದ್ದಾರೆ ರೈತರು. ಅಡಿಕೆಗೆ ಸೂಕ್ತ ಬೆಂಬಲ ಬೆಲ ನೀಡಬೇಕು, ಅಡಿಕೆ ಬೆಳೆಗಾರರಿಗೆ ವಿಶೇಷ ಫ್ಯಾಕೇಜ್ ಘೋಷಣೆ ಮಾಡಬೇಕು ಎಂಬುದು ಮಲೆನಾಡು ಅಡಿಕೆ ಬೆಳೆಗಾರರ ಮನವಿಯಾಗಿದೆ.

Published by:G Hareeshkumar
First published: