• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Viral Letter: ವಸೂಲಿ ಕೇಂದ್ರಗಳಾಗಿವೆಯಾ ಬೆಂಗಳೂರು ಪೊಲೀಸ್ ಠಾಣೆಗಳು? ರಾಷ್ಟ್ರಪತಿಗಳಿಗೆ ಬರೆದ ಪತ್ರ ವೈರಲ್

Viral Letter: ವಸೂಲಿ ಕೇಂದ್ರಗಳಾಗಿವೆಯಾ ಬೆಂಗಳೂರು ಪೊಲೀಸ್ ಠಾಣೆಗಳು? ರಾಷ್ಟ್ರಪತಿಗಳಿಗೆ ಬರೆದ ಪತ್ರ ವೈರಲ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bengaluru Police Station: ಸಿಬ್ಬಂದಿ ಮನೆಯಲ್ಲಿ ಯಾರಾದ್ರೂ ಸತ್ತಿದ್ರೆ ಹೆಣದ ಜೊತೆ ಸೆಲ್ಫಿ ಕಳಿಸಿ ಅಂತ ಹೇಳುತ್ತಾರೆ. ರೋಲ್​ಕಾಲ್​ ಹೆಸರಿನಲ್ಲಿ ಮಾನಸಿಕ ಕಿರುಕುಳ ನೀಡುತ್ತಾರೆ. ಅಮಾಯಕರನ್ನು ಠಾಣೆಗೆ ಕರೆ ತಂದು ಕೇಸ್ ಹಾಕೋದಾಗಿ ಹೇಳಿ 10 ರಿಂದ 15 ಸಾವಿರ ರೂಪಾಯಿ ಪಡೆದುಕೊಳ್ಳುತ್ತಾರೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Bangalore, India
 • Share this:

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರಿಗೆ ಅನಾಮಧೇಯರೊಬ್ಬರು ಬರೆದ ಪತ್ರ ವೈರಲ್ (Letter Viral) ಆಗಿದೆ. ಪತ್ರದಲ್ಲಿ ಸುಬ್ರಹ್ಮಣ್ಯ ನಗರ ಠಾಣೆಯ ಪ್ರತಿಯೊಂದು ಅವ್ಯವಹಾರ ಹಾಗೂ ಇನ್​​ಸ್ಪೆಕ್ಟರ್​ (Police Inspector) ಕಿರುಕುಳದ ಬಗ್ಗೆ ಆರೋಪ ಮಾಡಲಾಗಿದೆ. ಈ ಪತ್ರ ನೋಡಿದ್ರೆ ಬೆಂಗಳೂರು ಪೊಲೀಸ್ ಠಾಣೆಗಳು ವಸೂಲಿ ಕೇಂದ್ರಗಳಾಗಿವೆಯಾ ಎಂಬ ಅನುಮಾನ ಮೂಡುತ್ತದೆ. ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ಪೊಲೀಸ್ ಇನ್​ಸ್ಪೆಕ್ಟರ್ ಶರಣಗೌಡರವರು ನಮಗೆ ರಜೆ ನೀಡದೇ ಹಾಗೂ ತಮಗೆ ಹಣ ಮಾಡಿಕೊಡುವಂತೆ ತಮ್ಮ ಅತಿ ಕೆಳಗಿನ ಅಧಿಕಾರಿ ಹಾಗೂ ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಸಹಿ ಇಲ್ಲದ ದೂರಿನ ಪ್ರತಿ ಎಲ್ಲಾ ಕಡೆ ವೈರಲ್ ಆಗಿದೆ.


ವೈರಲ್ ಆಗಿರುವ ಪತ್ರದಲ್ಲಿರುವ ಪ್ರಮುಖ ಅಂಶಗಳು


*ರಜೆ ಕೇಳಲು ಹೋದರೆ ನಮಗೆ ಹಣ ಮಾಡಿಕೊಟ್ಟರಷ್ಟೇ ರಜೆ ಮಂಜೂರು ಮಾಡೋದಾಗಿ ಹೇಳುತ್ತಾರೆ. ಹಣ ಮಾಡಿಕೊಡೋರಿಗೆ ಮಾತ್ರ ರಜೆ ನೀಡುತ್ತಾರೆ. ರಜೆ ನೀಡದೇ ಕಿರುಕುಳ ನೀಡುತ್ತಾರೆ.


*ಠಾಣಾ ಸರಹದ್ದು ಗಸ್ತಿಗೆ ಮಂಜೂರು ಆಗಿರುವ ದ್ವಿಚಕ್ರ ವಾಹನಗಳ ಬೀಟ್ ಸಿಬ್ಬಂದಿಗೆ 5 ಸಾವಿರ ಹಣ ಕೇಳುತ್ತಾರೆ.


*ಪತ್ನಿಯನ್ನು ಠಾಣೆಗೆ ಕರೆತಂದು ಚೇಂಬರ್​ನಲ್ಲಿ ಹರಠೆ ಹೊಡೆಯುತ್ತಾರೆ. ಖಾಸಗಿ ಕೆಲಸಕ್ಕೆ ಸರ್ಕಾರಿ ವಾಹನದ ಬಳಕೆ ಮಾಡುತ್ತಾರೆ. ಕೆಳ ಹಂತದ ಸಿಬ್ಬಂದಿಯನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ.


ಸಾಂದರ್ಭಿಕ ಚಿತ್ರ


*ಮಹಿಳಾ ಸಿಬ್ಬಂದಿ ರಜೆ ಕೇಳಲು ಹೋದ್ರೆ ಅಸಭ್ಯವಾಗಿ ವರ್ತಿಸುತ್ತಾರೆ. ಅವರ ಮಾತುಯ ಕೇಳದಿದ್ರೆ ಮೆಮೋ ನೀಡುತ್ಥಾರೆ. ಭಾನುವಾರ ಬಂದ್ರೆ ಠಾಣಾ ಸರಹದ್ದಿನ ಪಂಚತಾರಾ ಹೋಟೆಲ್​ಗಳಲ್ಲಿ ಸಮಯ ಕಳೆಯುತ್ತಾರೆ. ಸಿಬ್ಬಂದಿ ಸಮಸ್ಯೆ ಆಲಿಸಲು ಇವರ ಬಳಿ ಸಮಯ ಇರಲ್ಲ.


*ರಾತ್ರಿ ಕರ್ತವ್ಯದ ವೇಳೆ ಠಾಣಾ ಸರಹದ್ದಿನ ಪಬ್​ಗೆ ಗೆಳೆಯರೊಂದಿಗೆ ಹೋಗಿ ಅಲ್ಲಿಯೇ ಮದ್ಯ ಸೇವಿಸಿ ಮಲಗುತ್ತಾರೆ.


*ಸಿಬ್ಬಂದಿ ಮನೆಯಲ್ಲಿ ಯಾರಾದ್ರೂ ಸತ್ತಿದ್ರೆ ಹೆಣದ ಜೊತೆ ಸೆಲ್ಫಿ ಕಳಿಸಿ ಅಂತ ಹೇಳುತ್ತಾರೆ. ರೋಲ್​ಕಾಲ್​ ಹೆಸರಿನಲ್ಲಿ ಮಾನಸಿಕ ಕಿರುಕುಳ ನೀಡುತ್ತಾರೆ. ಅಮಾಯಕರನ್ನು ಠಾಣೆಗೆ ಕರೆ ತಂದು ಕೇಸ್ ಹಾಕೋದಾಗಿ ಹೇಳಿ 10 ರಿಂದ 15 ಸಾವಿರ ರೂಪಾಯಿ ಪಡೆದುಕೊಳ್ಳುತ್ತಾರೆ.
ತಿಂಗಳಿಗೆ ಎಲ್ಲೆಲ್ಲಿ ಎಷ್ಟು ಮಾಮೂಲಿ?


ಓರಾಯನ್ ಮಾಲ್ - 1 ಲಕ್ಷ 30 ಸಾವಿರ ರೂಪಾಯಿ


ಜೋಮೇಟ್ರಿ ಪಬ್ - 45 ಸಾವಿರ ರೂಪಾಯಿ


ಜೆಟ್ ಲಾಗ್ ಪಬ್ - 75 ಸಾವಿರ ರೂಪಾಯಿ


ಸ್ಟೋರಿಸ್ ಪಬ್ - 50 ಸಾವಿರ ರೂಪಾಯಿ


ಸಪ್ತಗಿರಿ ಬಾರ್ ಅಂಡ್ ರೆಸ್ಟೋರೆಂಟ್ - 50 ಸಾವಿರ ರೂಪಾಯಿ


ಇದನ್ನೂ ಓದಿ:  Bengaluru: ಅಮಿತ್ ಶಾ ಪ್ರಯಾಣಿಸುತ್ತಿದ್ದ ಮಾರ್ಗಮಧ್ಯೆ ಭದ್ರತಾ ವೈಫಲ್ಯ; ಕಾರ್ ಹಿಂದೆಯೇ ಬಂದ ಬೈಕರ್ಸ್​


ಉಳಿದಂತೆ ಬಾರ್, ರೆಸ್ಟೋರೆಂಟ್ ಹಾಗೂ MRP ಶಾಪ್ ಗಳಿಂದ 25 ಲಕ್ಷ ಮಾಮೂಲಿ ಪಡೀತಾರೆ ಅಂತ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

top videos
  First published: