ಪುನೀತ್ ಅಭಿನಯದ ನಟಸಾರ್ವಭೌಮ ಚಿತ್ರತಂಡದ ವಿರುದ್ಧ ಕ್ರಮಕ್ಕೆ ಸೂಚನೆ


Updated:July 16, 2018, 8:10 PM IST
ಪುನೀತ್ ಅಭಿನಯದ ನಟಸಾರ್ವಭೌಮ ಚಿತ್ರತಂಡದ ವಿರುದ್ಧ ಕ್ರಮಕ್ಕೆ ಸೂಚನೆ

Updated: July 16, 2018, 8:10 PM IST
-ರಾಚಪ್ಪ ಬನ್ನಿದಿನ್ನಿ, ನ್ಯೂಸ್ 18 ಕನ್ನಡ

ಬಾಗಲಕೋಟೆ(ಜು.16): ಪುನೀತ್ ರಾಜ್​ಕುಮಾರ್ ಅಭಿನಯದ ನಟ ಸಾವ೯ಭೌಮ ಚಿತ್ರತಂಡದ ವಿರುದ್ದ  ಕಾನೂನು ಕ್ರಮಕೈಗೊಳ್ಳುವಂತೆಬಾಗಲಕೋಟೆ ಜಿಲ್ಲಾ ರಕ್ಷಣಾಧಿಕಾರಿಗೆ ಧಾರವಾಡದ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಉಪನಿರ್ದೇಶಕರು ಪತ್ರ ಬರೆದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ  ಮಹಾಕೂಟದಲ್ಲಿ ಇಲಾಖೆಯಿಂದ ಅನುಮತಿ ಪಡೆಯದೇ ಪುಷ್ಕರಣಿಯಲ್ಲಿ ಸೆಟ್ ಹಾಕಿದ ಹಿನ್ನೆಲೆ ಚಿತ್ರತಂಡದ ವಿರುದ್ದ ಕಾನೂನು ಕ್ರಮಕ್ಕೆ ಸೂಚನೆ ನೀಡಲಾಗಿದೆ

ಕೆಲ ದಿನಗಳ ಹಿಂದೆ ಇಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ, ಪವನ್ ಒಡೆಯರ್ ನಿರ್ದೇಶನದ ನಟಸಾವ೯ಭೌಮ ಚಿತ್ರದ ಪ್ರೀ ಕ್ಲೈಮ್ಯಾಕ್ಸ್  ಚಿತ್ರೀಕರಣ ನಡೆದಿತ್ತು. ಇಲ್ಲಿನ ಇತಿಹಾಸ ಪ್ರಸಿದ್ಧ ಪುಷ್ಕರಣಿಯಲ್ಲಿ ಅನುಮತಿ ಪಡೆಯದೇ ಸೆಟ್ ಹಾಕಿದ ಹಿನ್ನೆಲೆಯಲ್ಲಿ ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ ಅಧಿನಿಯಮ 1961-1965ರ ಅಡಿ ಕಾನೂನು ಕ್ರಮಕ್ಕೆ ಸೂಚನೆ ನೀಡಲಾಗಿದೆ. ಜೊತೆಗೆ, ದೇಗುಲದ ಸುತ್ತಮುತ್ತ ಚಿತ್ರೀಕರಣ ಸ್ಥಗಿತಕ್ಕೆ ಸೂಚನೆ ನೀಡಲಾಗಿದೆ.

ಮಹಾಕೂಟದ ಪುಷ್ಕರಣಿ ಎಂದೂ ಬತ್ತದ ಅಂತರ್ಜಲದಿಂದ ಖ್ಯಾತಿ ಗಳಿಸಿದೆ. ಇತಿಹಾಸ ಪ್ರಸಿದ್ಧ ಈ ಪುಷ್ಕರಣಿಯಲ್ಲಿ ಹಳ್ಳತೋಡಿ ಸೆಟ್ ಹಾಕಿದ್ದರಿಂದ ಸ್ಥಳೀಯ ಜನರಿಂದ ಆಕ್ಷೇಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸ್ಪಷ್ಟೀಕರಣ ನಿಡಿದ್ದ ಚಿತ್ರತಂಡ ಪಾರಂಪರಿಕ ತಾಣಕ್ಕೆ ಯಾವುದೇ ಧಕ್ಕೆ ಮಾಡಿಲ್ಲ ಎಂದು ಸಮರ್ಥನೆ ನೀಡಿತ್ತು.
First published:July 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ