HOME » NEWS » State » ARBI FALLS NATURE LOVERS ONCE VISIT ARBI FALLS OF UDUPI IN WEEKEND LG

Arbi Falls: ವೀಕೆಂಡ್​ನಲ್ಲಿ ಉಡುಪಿಯ ಅರ್ಬಿ ಫಾಲ್ಸ್​​ಗೆ ಒಮ್ಮೆ ಭೇಟಿ ನೀಡಿ..!

ಸ್ಥಳೀಯರನ್ನು ಹೊರತುಪಡಿಸಿದರೆ ಯಾರಿಗೂ ಈ ರಮಣೀಯತೆಯ ಅರಿವಿಲ್ಲ. ಆದರೆ ಮಣಿಪಾಲದ ವಿದ್ಯಾರ್ಥಿಗಳು ಈ ಜಲಪಾತಕ್ಕೆ ಬಂದು ಸಖತ್ತಾಗೇ ಎಂಜಾಯ್ ಮಾಡ್ತಾರೆ. ವೀಕೆಂಡ್ ಮೋಜುಮಸ್ತಿಗೆ ಈ ಫಾಲ್ಸ್ ಹೇಳಿ ಮಾಡಿಸಿದ ಸ್ಥಳ.

news18-kannada
Updated:October 4, 2020, 2:59 PM IST
Arbi Falls: ವೀಕೆಂಡ್​ನಲ್ಲಿ ಉಡುಪಿಯ ಅರ್ಬಿ ಫಾಲ್ಸ್​​ಗೆ ಒಮ್ಮೆ ಭೇಟಿ ನೀಡಿ..!
ಅರ್ಬಿ ಫಾಲ್ಸ್​
  • Share this:
ಉಡುಪಿ(ಅ.04): ಮಳೆಗೆ ಪ್ರಕೃತಿಯಲ್ಲಿ ಅದ್ಬುತಗಳನ್ನು ಸೃಷ್ಟಿಸುವ ಶಕ್ತಿಯಿದೆ. ಮುಂಗಾರಿನಲ್ಲಿ ಮಿಂಚಿ ಮರೆಯಾಗುವ ಕಿರು ಜಲಪಾತಗಳೇ ಅದಕ್ಕೊಂದು‌ ಉದಾಹರಣೆ. ಭೂತಾಯಿಯ ಮುಡಿಯಲ್ಲಿ ಬೆಳ್ಳಿಯ ಜಡೆಯಂತಿರುವ ಮನಮೋಹಕ ಜಲಪಾತಗಳು ಉಡುಪಿಯಲ್ಲಿವೆ.  ನಗರದ ಮಣಿಪಾಲ ಸಮೀಪದ ಅರ್ಬಿ ಇರುವ ಜಲಪಾತದ ಒಂದು ಝಲಕ್ ಇಲ್ಲಿದೆ ನೋಡಿ. ಜಲಲ ಜಲಲ ಜಲಧಾರೆ. ಹಾಲಿನ ನೊರೆಯಂತೆ ಭಾಸವಾಗುವ ಈ ನೀರರಾಶಿ ಇರೋದು ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ. ಇದನ್ನು ಸ್ಥಳೀಯರು ಅರ್ಬಿ ಫಾಲ್ಸ್ ಎನ್ನುತ್ತಾರೆ. ಜನ ಸಂಪರ್ಕದಿಂದ ದೂರದಲ್ಲಿ ಮೌನವಾಗಿ ಹರಿಯುವ ಝರಿಯಿದು. ಈ ಜಲಪಾತ ವರ್ಷಪೂರ್ತಿಯೇನೂ ಇರುವುದಿಲ್ಲ, ಸಣ್ಣ ಪುಟ್ಟ ತೊರೆಗಳ ಸಂಗ್ರಹ ರಾಶಿಗೆ ಮೈದುಂಬಿದ ಜಲಪಾತದ ರೂಪ ಮತ್ತು ಚೆಲುವು ನೀಡಿದ್ದೇ ಈ ಸಲದ ಮುಂಗಾರು. ಅಜ್ಞಾತವಾಗಿರುವ ಈ ಝರಿಯ ಬಗ್ಗೆ ಮಾಹಿತಿಯಿದ್ದವರು ಮಾತ್ರ ಬೇಟಿ ನೀಡ್ತಾರೆ. ಎತ್ತರದಿಂದ ಮೈಚಲ್ಲಿ ಹರಿಯುವ ನೀರಿನಲ್ಲಿ ಮಿಂದೇಳುವ ಸಂಭ್ರಮ ಅನುಭವಿಸದವರಿಗೇ ಗೊತ್ತು.

ಜೆಡಿಎಸ್​ನವರು ಇನ್ನೊಬ್ಬರ ಹೆಗಲ ಮೇಲೆ ಕುತ್ಕೊಂಡು ಅಧಿಕಾರಕ್ಕೆ ಬರೋರು; ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ದಟ್ಟ ಕಾಡಿ‌ನ‌ ನಡುವೆ  ಮೆಟ್ಟಿಲು ಮೆಟ್ಟಿಲಾಗಿ ಹರಿಯುವ ನೀರಿಗೆ ಇಕ್ಕೆಲದ ಹಸಿರುರಾಶಿ ಮತ್ತು ಕಪ್ಪು ಕಲ್ಲಿನ ಹಾಸು ಇನ್ನಷ್ಟು ರಮಣೀಯತೆ ನೀಡಿದೆ. ಮಳೆ ಬಂದಾಗ ಅಬ್ಬರಿಸುವ, ಇಲ್ಲದಿದ್ದಾಗ ತೆಪ್ಪಗೆ ಹರಿಯುವ ಈ ಜಲಪಾತ ಅಪಾಯಕಾರಿಲ್ಲ. ಮಕ್ಕಳು ಇಲ್ಲಿಗೆ ಬಂದು ಖುಷಿ ಪಡಬಹುದು.

ಸ್ಥಳೀಯರನ್ನು ಹೊರತುಪಡಿಸಿದರೆ ಯಾರಿಗೂ ಈ ರಮಣೀಯತೆಯ ಅರಿವಿಲ್ಲ. ಆದರೆ ಮಣಿಪಾಲದ ವಿದ್ಯಾರ್ಥಿಗಳು ಈ ಜಲಪಾತಕ್ಕೆ ಬಂದು ಸಖತ್ತಾಗೇ ಎಂಜಾಯ್ ಮಾಡ್ತಾರೆ. ವೀಕೆಂಡ್ ಮೋಜುಮಸ್ತಿಗೆ ಈ ಫಾಲ್ಸ್ ಹೇಳಿ ಮಾಡಿಸಿದ ಸ್ಥಳ. ಈಗೀಗ ಉಡುಪಿಗೆ ಬಂದ ದೂರದ ಊರಿನವರು ಕೇಳಿ ಕೇಳಿ ಬರುತ್ತಿದ್ದಾರೆ.
Youtube Video

ಮಳೆಗಾಲದ ಮ್ಯಾಜಿಕ್ ಈ ಜಲಧಾರೆ. ಮುಂಗಾರಿನ ಈ ಕೊಡುಗೆ ಮಣಿಪಾಲದ ಸೌಂದರ್ಯಕ್ಕೆ ಮುಕುಟಪ್ರಾಯ ಅಂದರೂ ತಪ್ಪಲ್ಲ.‌ ಪ್ರವಾಸೋದ್ಯಮ ಇಲಾಖೆ ಈ ಫಾಲ್ಸ್ ಕಡೆ ಗಮನ ಹರಿಸಿ ಈ ಪ್ರವಾಸಿ ಸ್ಥಳವನ್ನ ಇನ್ನಷ್ಟು ಅಭಿವೃದ್ಧಿಪಡಿಸಬೇಕು ಎನ್ನುವುದು  ಪ್ರವಾಸಿಗರ ಆಗ್ರಹ.
Published by: Latha CG
First published: October 4, 2020, 2:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories