ಪ್ರಾಣದ ಹಂಗನ್ನು ತೊರೆದು ಹೋರಿಯೊಂದಿಗೆ ಕಾದಾಡಿ ತಮ್ಮನ್ನನ್ನು ರಕ್ಷಿಸಿದ ಪುಟಾಣಿಗೆ ಶೌರ್ಯ ಪ್ರಶಸ್ತಿ

ಪುಟ್ಟ ಬಾಲಕಿ ಆರತಿ ತನ್ನ ಪ್ರಾಣದ ಹಂಗನ್ನ ತೊರೆದು ತನ್ನ ತಮ್ಮನನ್ನ ಹೋರಿಯ ದಾಳಿಯಿಂದ ರಕ್ಷಣೆ ಮಾಡಿದ್ದಳು. ತಮ್ಮನ್ನನ್ನು ಕಾಪಾಡಿದ ಆಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ವೈರಲ್​​ ಆದ ವಿಡಿಯೋ ಈಗ ಪುಟ್ಟ ಬಾಲಕಿಯನ್ನ ಹಳ್ಳಿಯಿಂದ ದಿಲ್ಲಿಯಲ್ಲಿ ಪ್ರಶಸ್ತಿ ಗರಿಯನ್ನ ಹಗಲೇರಿಸಿದೆ. ಈಕೆಯ ಸಾಧನೆಯಿಂದಾಗಿ ಇಡೀ ಊರಿಗೆ ಉತ್ತಮ ಹೆಸರು ಸಿಕ್ಕಿದೆ.

news18-kannada
Updated:January 22, 2020, 8:14 PM IST
ಪ್ರಾಣದ ಹಂಗನ್ನು ತೊರೆದು ಹೋರಿಯೊಂದಿಗೆ ಕಾದಾಡಿ ತಮ್ಮನ್ನನ್ನು ರಕ್ಷಿಸಿದ ಪುಟಾಣಿಗೆ ಶೌರ್ಯ ಪ್ರಶಸ್ತಿ
ಶೌರ್ಯ ಪ್ರಶಸ್ತಿಗೆ ಆಯ್ಕೆಯಾದ ಆರತಿ
  • Share this:
ಕಾರವಾರ(ಜ.22): ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ನೀಡುವ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಕೇಂದ್ರ ಸರಕಾರ ಪ್ರಕಟಿಸಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ನವೀಲುಗೋಣ ಗ್ರಾಮದ ಒಂಬತ್ತು ವರ್ಷದ ಬಾಲಕಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆದ್ದರಿಂದಲೇ ಈ ಊರು ಕೇರಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಬಾಲಕಿ ಆರತಿಗೆ ಶೌರ್ಯ ಪ್ರಶಸ್ತಿ ಸಿಗಲು ಕಾರಣ ಏನು?

ಪುಟ್ಟ ಬಾಲಕಿ ಆರತಿ ತನ್ನ ಪ್ರಾಣದ ಹಂಗನ್ನ ತೊರೆದು ತನ್ನ ತಮ್ಮನನ್ನ ಹೋರಿಯ ದಾಳಿಯಿಂದ ರಕ್ಷಣೆ ಮಾಡಿದ್ದಳು. ತಮ್ಮನ್ನನ್ನು ಕಾಪಾಡಿದ ಆಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ವೈರಲ್​​ ಆದ ವಿಡಿಯೋ ಈಗ ಪುಟ್ಟ ಬಾಲಕಿಯನ್ನ ಹಳ್ಳಿಯಿಂದ ದಿಲ್ಲಿಯಲ್ಲಿ ಪ್ರಶಸ್ತಿ ಗರಿಯನ್ನ ಹಗಲೇರಿಸಿದೆ. ಈಕೆಯ ಸಾಧನೆಯಿಂದಾಗಿ ಇಡೀ ಊರಿಗೆ ಉತ್ತಮ ಹೆಸರು ಸಿಕ್ಕಿದೆ.

ಘಟನೆ ಏನು? 

ಅಂದು 2018 ಫೆಬ್ರವರಿ ತಿಂಗಳು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನವೀಲಗೋಣ ಗ್ರಾಮದಲ್ಲಿ ಏಳು ವರ್ಷದ ಬಾಲಕಿ ಆರತಿ ಶೇಟ್ ತನ್ನ ಮೂರು ವರ್ಷದ ತಮ್ಮನನ್ನ ಮನೆಯ ಅಂಗಳದಲ್ಲಿ ಆಟ ಆಡಿಸುತ್ತಿದ್ದಂತ ಸಂದರ್ಭ. ಈ ಹೊತ್ತಲ್ಲಿ ಹೋರಿಯೊಂದು ಇಬ್ಬರ ಮೇಲೆ ಎರಗಿ ಬಂದು ದೊಡ್ಡ ಮಟ್ಟದಲ್ಲಿ ದಾಳಿ ಮಾಡಿತ್ತು. ಹೋರಿಯ ದಾಳಿಯಿಂದ ತನ್ನ ಜೀವದ ಹಂಗನ್ನ ತೊರೆದು ಸಮಯ ಪ್ರಜ್ಞೆಯಿಂದ ತನ್ನ ತಮ್ಮನನ್ನ ರಕ್ಷಣೆ ಮಾಡಿದ ಬಾಲಕಿ ಆರತಿ ಈಗ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ. ಅಂದು ನಡೆದ ಈ ಘಟನೆ ಇಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕ್ಷಾಣಾರ್ದದಲ್ಲಿ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿ ಎಲ್ಲಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಘಟನೆಯ ದೃಶ್ಯವನ್ನು ನೋಡಿದ ಭಾರತೀಯ ಸರ್ಕಾರ ಆರತಿ ಶೇಟ್​​ಗೆ ಶೌರ್ಯ ಪ್ರಶಸ್ತಿ ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಊರು ಕೇರಿಯಲ್ಲಿ ಸಂಭಂದಿಕರಲ್ಲಿ ಆರತಿ ಬಗ್ಗೆ ಹೆಮ್ಮೆಯ ಮಾತಿನ ಜೊತೆ ಖುಷಿಯ ವಾತಾವರಣ ಕಂಡು ಬರುತ್ತಿದೆ.

ಇದನ್ನೂ ಓದಿ: ಡಿಸಿಎಂ ಹುದ್ದೆಗೆ ಶ್ರೀರಾಮುಲು ಪಟ್ಟು: ಅಮಿತ್​​ ಶಾ ಮೂಲಕವೇ ಉಪ ಮುಖ್ಯಮಂತ್ರಿಯಾಗಲು ಯತ್ನ

ಆರತಿ ಕಲಿತ ಶಾಲೆಯಲ್ಲೂ ಖುಷಿಇನ್ನೂ ಊರು ಕೇರಿಯಲ್ಲಿ ಆರತಿ ಸಾಧನೆಗೆ ಮೆಚ್ಚುಗೆ ವ್ಯಕ್ತವಾದರೆ, ಆರತಿ ಕಲಿಯುತ್ತಿರುವ ಕೆನರಾ ವೆಲ್ಪರ್ ಶಾಲೆಯಲ್ಲೂ ಕೂಡಾ ಆಕೆಯ ಬಗ್ಗೆ ಹೆಮ್ಮೆಯ ಮಾತು ಕೇಳಿ ಬರುತ್ತಿವೆ. ಶಾಲೆಯಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡೆ ಓದಿನಲ್ಲಿ ಚುರುಕಾಗಿರುವ ಬಾಲಕಿ ಆರತಿ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆ ಜೊತೆಗೆ ಹೇಳಲಾಗದಷ್ಟು ಖುಷಿ ಕೊಟ್ಟಿದೆ ಅಂತಾರೆ ಶಿಕ್ಷಕರು.

ಒಟ್ಟಾರೆ ಪ್ರಾಣದ ಹಂಗನ್ನ ತೊರೆದು ಹೋರಿ ದಾಳಿಯಿಂದ ತನ್ನ ತಮ್ಮನ ಪ್ರಾಣ ರಕ್ಷಣೆ ಮಾಡಿದ್ದ ಆರತಿ ಈಗ ಊರು ಕೇರಿಯಲ್ಲಿ ಮನೆಮಾತಾಗಿದ್ದಾಳೆ. ಆರತಿಯ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎನ್ನೋದೆ ನಮ್ಮ ಆಶಯ.

(ವರದಿ: ದರ್ಶನ್​​ ನಾಯಕ್​​)
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ