ಹಾಸನ (ಮಾರ್ಚ್ 04); ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಪೂಜಿಸುವ ಹಾಸನ ಜಿಲ್ಲೆ ಅರಕಲಗೋಡು ತಾಲೂಕಿನ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಅರ್ಚಕರ ತಂಡ ಕಿತ್ತಾಡಿಕೊಂಡಿದ್ದು, ಒಂದು ಗುಂಪು ಇದೀಗ ದೇವಾಲಯಕ್ಕೆ ಬೀಗ ಜಡಿದು ಪೂಜೆಯನ್ನು ಸ್ಥಗಿತಗೊಳಿಸಿದ್ದಾರೆ.
ಇಲ್ಲಿನ ರಂಗನಾಥ ಸ್ವಾಮಿ ದೇವಾಲಯ 10ನೇ ಶತಮಾನದಲ್ಲಿ ಚೋಳ ಅರಸರಿಂದ ಕಟ್ಟಲ್ಪಟ್ಟ ದೇವಾಲಯ. ಆದರೆ, ಇಲ್ಲಿ ಪೂಜೆ ಸಲ್ಲಿಸುವ ಸಲುವಾಗಿ 24 ಮಂದಿ ಹಾಗೂ ರಾಮಸ್ವಾಮಿ, ಧರ್ಮರಾಜ್ ಮತ್ತು ಚಿನ್ನಸ್ವಾಮಿ ಎಂಬ 3 ಮಂದಿ ಅರ್ಚಕರ ಗುಂಪಿನ ನಡುವೆ ಬಹಳ ದಿನಗಳಿಂದ ವ್ಯಾಜ್ಯ ಇದೆ. ಪರಿಣಾಮ ಈ ಕಿತ್ತಾಟ ಕೋರ್ಟ್ ಮೆಟ್ಟಿಲೇರಿತ್ತು.
ಡಿಸಿ ಕೋರ್ಟ್ ಮತ್ತು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಎರಡೂ ನ್ಯಾಯಾಲಯದಲ್ಲಿ ರಾಮಸ್ವಾಮಿ, ಧರ್ಮರಾಜ್, ಚಿನ್ನಸ್ವಾಮಿ ಪರ ಆದೇಶವಾಗಿತ್ತು. ಇವರಿಗೆ ದೇವಾಲಯದ ಬೀಗ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿತ್ತು. ಆದರೆ, ನ್ಯಾಯಾಲಯದ ಆದೇಶಕ್ಕೂ ಬೆಲೆ ನೀಡದ ರಂಗನಾಥ್ ಅವರ 24 ಜನರನ್ನೊಳಗೊಂಡ ಗುಂಪು ಅಧಿಕಾರಿಗಳ ಎದುರೇ ಮತ್ತೆ ಕಿತ್ತಾಟ ಆರಂಭಿಸಿದೆ. ಅಲ್ಲದೆ, ದೇವಾಲಯದಲ್ಲಿ ಪೂಜೆ ನಡೆಯದಂತೆ ಬೀಗ ಜಡಿದಿದೆ.
ಇದೀಗ ಸ್ಥಳೀಯ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಈ ತಂಡ ಹೈಕೋರ್ಟ್ ಮೆಟ್ಟಿಲೇರಿದ್ದು, ಅಲ್ಲಿಗೆ ಮಾಜಿ ಪ್ರಧಾನಿ ದೇವೇಗೌಡದ ಇಷ್ಟದ ದೈವ ಮತ್ತು ದೇವಾಸ್ಥಾನದ ವ್ಯಾಜ್ಯ ಹೈಕೋರ್ಟ್ ಅಂಗಳಕ್ಕೆ ತಲುಪಿದಂತಾಗಿದೆ.
ಇದನ್ನೂ ಓದಿ : ಮಧ್ಯಪ್ರದೇಶದ ಕೈ ಶಾಸಕರು ಕರ್ನಾಟಕದ ರೆಸಾರ್ಟ್ಗೆ ಶಿಫ್ಟ್; ಪರಿಸ್ಥಿತಿ ಇನ್ನೂ ಕೈಮೀರಿಲ್ಲ ಎಂದ ಸಿಎಂ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ