Chaddi Politics: ಬರುವ ಚುನಾವಣೆಯಲ್ಲಿ ಜನ ಕಾಂಗ್ರೆಸ್​ ಲಂಗೋಟಿ ಬಿಚ್ಚಿ‌ ಕಳಿಸ್ತಾರೆ ಎಂದ ಆರಗ ಜ್ಞಾನೇಂದ್ರ

ವಿರೋಧ ಪಕ್ಷದವರಿಗೆ ಮಾಡಲು ಬೇರೆ ಕೆಲಸ ಇಲ್ಲ, ಕಾಂಗ್ರೆಸ್ ಗೆ ಇಡೀ ದೇಶದಲ್ಲಿ ಜನ ಚಡ್ಡಿ ಬಿಚ್ಚಿ ಕಳಿಸಿದ್ದಾರೆ. ಬರುವ ಚುನಾವಣೆಯಲ್ಲಿ ಕರ್ನಾಟಕದ ಜನರು ಲಂಗೋಟಿಯನ್ನು ಬಿಚ್ಚಿ‌ ಕಳಿಸ್ತಾರೆ‌ ಎಂದು ವಿರೋಧ ಪಕ್ಷದ  ನಾಯಕ ಮಾಜಿ ಸಿಎಂ ಸಿದ್ಧರಾಮಯ್ಯಗೆ ಆರಗ ಜ್ಞಾನೇಂದ್ರ ಪರೋಕ್ಷ‌ ಟಾಂಗ್ ಕೊಟ್ಟಿದ್ದಾರೆ.

ಆರಗ ಜ್ಞಾನೇಂದ್ರ

ಆರಗ ಜ್ಞಾನೇಂದ್ರ

  • Share this:
ಚಿತ್ರದುರ್ಗ(ಜೂ.09): ಕಾಂಗ್ರೆಸ್ ಗೆ ಇಡೀ ದೇಶದಲ್ಲಿ ಚಡ್ಡಿ ಬಿಚ್ಚಿ ಕಳಿಸಿದ್ದಾರೆ. ವಿರೋಧ ಪಕ್ಷವಾಗಿ ಕೆಲಸ ಮಾಡುವ ಶಕ್ತಿ ಸಹ ಅವರಿಗಿಲ್ಲ. ಬರುವ ಚುನಾವಣೆಯಲ್ಲಿ ಜನ ಲಂಗೋಟಿಯನ್ನು ಬಿಚ್ಚಿ‌ ಕಳಿಸ್ತಾರೆ‌. ಕಾಂಗ್ರೆಸ್ (Congress) ಜೆಡಿಎಸ್ (JDS) ನವರು ಯಾವಾಗ ಜತೆಯಾಗುತ್ತಾರೆ. ಯಾವಾಗ ಬೇರೆ ಆಗುತ್ತಾರೋ‌ ಗೊತ್ತಿಲ್ಲ. ಅವರಿಬ್ಬರ ಜಗಳದ ನಡುವೆ ನಾವಂತೂ ಸೇಫ್ ಆಗಿದ್ದೇವೆ ಎಂದು ಚಿತ್ರದುರ್ಗದಲ್ಲಿ (Chitradurga) ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ‌. ಇಂದು ಚಿತ್ರದುರ್ಗ ಬೇಟಿ ನೀಡಿ ಗ್ರಾಮಂತರ ಪೊಲೀಸ್ ಠಾಣೆ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿ ಬಳಿಕ ನಗರದ ಪ್ರವಾಸಿ ಮಂದಿರದಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ಲಂಗೋಟಿ ಬಿಚ್ಚಿ ಕಳಿಸ್ತಾರೆ

ಕಾಂಗ್ರೇಸ್ ಚಡ್ಡಿ ಸುಟ್ಟ ವಿಚಾರ ಕುರಿತು ಮಾತನಾಡಿ ವಿರೋಧ ಪಕ್ಷದವರಿಗೆ ಮಾಡಲು ಬೇರೆ ಕೆಲಸ ಇಲ್ಲ, ಕಾಂಗ್ರೆಸ್ ಗೆ ಇಡೀ ದೇಶದಲ್ಲಿ ಜನ ಚಡ್ಡಿ ಬಿಚ್ಚಿ ಕಳಿಸಿದ್ದಾರೆ, ವಿರೋಧ ಪಕ್ಷವಾಗಿ ಕೆಲಸ ಮಾಡುವ ಶಕ್ತಿ ಸಹ ಅವರಿಗಿಲ್ಲ, ಬರುವ ಚುನಾವಣೆಯಲ್ಲಿ ಕರ್ನಾಟಕದ ಜನರು ಲಂಗೋಟಿಯನ್ನು ಬಿಚ್ಚಿ‌ ಕಳಿಸ್ತಾರೆ‌ ಎಂದು ವಿರೋಧ ಪಕ್ಷದ  ನಾಯಕ ಮಾಜಿ ಸಿಎಂ ಸಿದ್ಧರಾಮಯ್ಯಗೆ  ಅರಗ ಜ್ಞಾನೇಂದ್ರ ಪರೋಕ್ಷ‌ ಟಾಂಗ್ ಕೊಟ್ಟಿದ್ದಾರೆ.

ಹೇಳಿಕೆ ದುರ್ಬಳಕೆ ಮಾಡಿ ಸರ್ಕಾರ ನಡೆಸೋ ಅಗತ್ಯವಿಲ್ಲ

ಇನ್ನೂ ಸಮಾಜದಲ್ಲಿ ಹೊಣೆಗಾರಿಕೆ ಮರೆತು ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.  ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಯಾರನ್ನೋ ದುರ್ಬಳಕೆ ಮಾಡಿಕೊಂಡು ಸರ್ಕಾರ ನಡೆಸುವ ಅಗತ್ಯವಿಲ್ಲ, ನ್ಯಾಯ ನೀತಿಯಿಂದ ಬೊಮ್ಮಾಯಿ ಸರ್ಕಾರ ನಡೆಯುತ್ತಿದೆ. ಅದಕ್ಕೆ ಯಡಿಯೂರಪ್ಪನವರ ಮಾರ್ಗದರ್ಶನವಿದೆ, ಯಾರ್ ಯಾರನ್ನೋ ದುರ್ಬಳಕೆ ಮಾಡುಕೊಂಡು ಸರ್ಕಾರ ನಡೆಸುವ ದರಿದ್ರತನ ನಮಗಿಲ್ಲ ಎಂದಿದ್ದಾರೆ.

ಇದನ್ನೂ ಓದಿ: BMTCಗೆ ಪ್ರೈವೇಟ್ ಡ್ರೈವರ್ಸ್! ಔಟ್​ಸೋರ್ಸ್ ಏಜೆನ್ಸಿಯಿಂದ ಚಾಲಕರ ನೇಮಕಕ್ಕೆ ಚಿಂತನೆ

ಮುತಾಲಿಕ್ ಹೇಳಿಕೆಗೆಲ್ಲ ಪ್ರತಿಕ್ರಿಯೆ ನೀಡಲ್ಲ ಎಂಂದಿದ್ದಾರೆ. ಇನ್ನೂ ಕಾಂಗ್ರೆಸ್, ಜೆಡಿಎಸ್ ನವರು ಯಾವಾಗ ಜತೆಯಾಗುತ್ತಾರೆ, ಯಾವಾಗ ಬೇರೆ ಆಗುತ್ತಾರೋ‌ ಗೊತ್ತಿಲ್ಲ, ಅವರಿಬ್ಬರ ಜಗಳದ ನಡುವೆ ನಾವಂತೂ ಸೇಫ್ ಆಗಿದ್ದೇವೆ, ಬಿಜೆಪಿ ಭದ್ರವಾಗಿದ್ದು ರಾಜ್ಯಸಭೆ ಸ್ಥಾನ ಗೆಲ್ಲಲಿದೆ, ಅಭಿವೃದ್ಧಿಗಾಗಿ ಬಿಎಸ್ ವೈ ಆಡಳಿತದಲ್ಲಿ ಸಾಲ ಆಗಿರಬಹುದು, ಹಾಗಾದರೇ ಸಿದ್ಧರಾಮಯ್ಯ ಕಾಲದಲ್ಲಿ ಸಾಲವೇ ಮಾಡಿಲ್ಲವೇ? ದೇವಲೋಕವನ್ನೇ ಇಳಿಸಿದಂತೆ ಸಿದ್ಧರಾಮಯ್ಯ ಮಾತಾಡ್ತಾರೆ.

ಗುತ್ತಿಗೆದಾರರಿಗೆ ಬಿಲ್ ಕೊಡದೆ ಸತಾಯಿಸಿದ್ದು ಜನ ಮರೆತಿಲ್ಲ

ಸಿದ್ಧರಾಮಯ್ಯ ಆಡಳಿತದಲ್ಲೂ ಗುತ್ತಿಗೆದಾರರಿಗೆ ಬಿಲ್ ಕೊಡದೆ ಸತಾಯಿಸಿದ್ದು ಜನ ಮರೆತಿಲ್ಲ ಎಂದಿದ್ದಾರೆ, ಇನ್ನೂ ರಾಜ್ಯದಲ್ಲಿ ಮತ್ತೆ  ಬಿ.ವೈ.ವಿಜಯೇಂದ್ರ ಮುಂದಿನ ಸಿಎಂ ಎಂಬ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸದ್ಯ ಸಿಎಂ ಖುರ್ಚಿ ಖಾಲಿ ಇಲ್ಲ, ಬೊಮ್ಮಾಯಿ ಸಮರ್ಥ ಆಡಳಿತ ನೀಡುತ್ತಿದ್ದಾರೆ ಎಂದಿದ್ದಾರೆ.

ಇನ್ನೂ  ಬೆಂಗಳೂರಿನಲ್ಲಿ ಭಯೋತ್ಪಾದಕನ ಬಂಧನ ಆಗಿದೆ, ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ನಮ್ಮ ಪೊಲೀಸರು ಅವರಿಗೆ ಸಾಥ್ ನೀಡಿದ್ದಾರೆ. ಭಯೋತ್ಪಾದಕಗೆ ಆಶ್ರಯ ನೀಡಿದವರು, ಸಂಪರ್ಕದಲ್ಲಿದ್ದವರ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ‌.

ಇದನ್ನೂ ಓದಿ: Chaddi Politics: ಚಡ್ಡಿ ಹೋಗಿ ಪ್ಯಾಂಟ್ ಬಂದಿರೋದು ಸಿದ್ದುಗೆ ಗೊತ್ತಿಲ್ಲ! ಬಿ.ಸಿ. ನಾಗೇಶ್ ಟಾಂಗ್

ಇನ್ನೂ ಬಿಜೆಪಿ, RSS ಸಾಂಸ್ಕೃತಿಕ ಬಯೋದ್ಪಾದಕರು ಎಂಬ ಸಿದ್ದರಾಮಯ್ಯ, ಪ್ರತಿಕ್ರಿಯೆ ನೀಡಿ, ಸಿದ್ಧರಾಮಯ್ಯ ಟಿಪ್ಪು ಜಯಂತಿ ಮಾಡಿದ್ದು ಯಾವ ಸಾಂಸ್ಕೃತಿಕ ಕಾರ್ಯ? ಎಂದು ಪ್ರಶ್ನಿಸಿದ್ದಾರೆ. ಇನ್ನೂ MLC ಚಲವಾದಿ ನಾರಾಯಣಸ್ವಾಮಿ ತಲೆ ಮೇಲೆ ಚಡ್ಡಿ ಹೊತ್ತ ಬಗ್ಗೆ ಸಿದ್ಧರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿ ಚಲವಾದಿ ನಾರಾಯಣಸ್ವಾಮಿ ಪ್ರತಿಭಟನೆ ನಡೆಸಿದ್ದಾರೆಂದು ಸಮರ್ಥಿಸಿಕೊಂಡಿದ್ದಾರೆ.
Published by:Divya D
First published: