Araga Jnanendra: ಪಿಎಸ್ಐ ಪರೀಕ್ಷೆ ಹಗರಣದ ಅಪರಾಧಿಗಳು ಮುಟ್ಟಿನೋಡಿಕೊಳ್ಳುವಂತೆ ಮಾಡುತ್ತೇವೆ! ಗೃಹಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ

ಪಿಎಸ್ಐ ಪರೀಕ್ಷಾ ಹಗರಣದ ಸಂಬಂಧ ನಡೆಯುತ್ತಿರುವ ಸಿಐಡಿ ತನಿಖೆ ಬಗ್ಗೆ ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra) ಕಲಬುರಗಿಯಲ್ಲಿ (Kalaburagi) ಪ್ರತಿಕ್ರಿಯೆ ನೀಡಿದ್ದಾರೆ.  ಪಿಎಸ್ಐ ನೇಮಕಾತಿ ಹಗರಣ ಸಂಬಂಧ ಸರ್ಕಾರ ಬೇರು ಮಟ್ಟದ ತನಿಖೆ ನಡೆಸುತ್ತಿದ್ದು, ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಈ ಕೇಸ್‌ನಲ್ಲಿ ತಪ್ಪಿತಸ್ಥರು ಮುಟ್ಟಿ ನೋಡಿಕೊಳ್ಳುವಂತೆ ಮಾಡುತ್ತೇವೆಂದು ಅಂತ ಅವರು ಎಚ್ಚರಿಸಿದ್ದಾರೆ.

ಗೃಹಸಚಿವ ಆರಗ ಜ್ಞಾನೇಂದ್ರ

ಗೃಹಸಚಿವ ಆರಗ ಜ್ಞಾನೇಂದ್ರ

  • Share this:
ಕಲಬುರಗಿ: ದೇಶಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿರುವ ಪಿಎಸ್ಐ ಪರೀಕ್ಷಾ ಹಗರಣದ (PSI Exam Scam) ತನಿಖೆ (Investigation) ಚುರುಕುಗೊಂಡಿದೆ. ಪ್ರಮುಖ ಆರೋಪಿ (Main Accused) ದಿವ್ಯಾ ಹಾಗರಗಿ (Divya Hagaragi) ಸೇರಿದಂತೆ ಹಲವರನ್ನು ಬಂಧಿಸಿರುವ ಸಿಐಡಿ ಅಧಿಕಾರಿಗಳು (CID Officers), ಅವರಿಂದ ಮಹತ್ವದ ಮಾಹಿತಿ (Information) ಕಲೆ ಹಾಕುತ್ತಿದ್ದಾರೆ. ಇನ್ನು ಈ ಪ್ರಕರಣದ ಬಗ್ಗೆ, ಸಿಐಡಿ ತನಿಖೆ ಬಗ್ಗೆ ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra) ಕಲಬುರಗಿಯಲ್ಲಿ (Kalaburagi) ಪ್ರತಿಕ್ರಿಯೆ ನೀಡಿದ್ದಾರೆ.  ಪಿಎಸ್ಐ ನೇಮಕಾತಿ ಹಗರಣ ಸಂಬಂಧ ಸರ್ಕಾರ ಬೇರು ಮಟ್ಟದ ತನಿಖೆ ನಡೆಸುತ್ತಿದ್ದು, ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಈ ಕೇಸ್‌ನಲ್ಲಿ ತಪ್ಪಿತಸ್ಥರು ಮುಟ್ಟಿ ನೋಡಿಕೊಳ್ಳುವಂತೆ ಮಾಡುತ್ತೇವೆಂದು ಅಂತ ಅವರು ಎಚ್ಚರಿಸಿದ್ದಾರೆ.

“ತಪ್ಪಿತಸ್ಥರು ಮುಟ್ಟಿ ನೋಡಿಕೊಳ್ಳುವಂತೆ ಮಾಡುತ್ತೇವೆ”

ಕಲಬುರಗಿ ಭೇಟಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಸಿಐಡಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿದ್ದು, ಹಗರಣ ಮಾಡುವವರು ಭವಿಷ್ಯದಲ್ಲಿ ‌ಮುಟ್ಟಿ ನೋಡಿಕೊಳ್ಳುವಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

“ಸಿಐಡಿಗೆ ಫ್ರೀಂ ಹ್ಯಾಂಡ್ ಕೊಟ್ಟಿದ್ದೇವೆ”

ಸಿಐಡಿ ತನಿಖೆಯಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಅಂತ ಸಚಿವರು ಭರವಸೆ ನೀಡಿದ್ರು. ಪ್ರಕರಣದ ಹಿಂದೆ ಯಾರು ಬೇಕಾದರೂ ಇರಲಿ ಅವರಿಗೆ ಶಿಕ್ಷೆ ನೀಡುವಂತೆ ಸಿಐಡಿಗೆ ಆದೇಶ ನೀಡಲಾಗಿದೆ. ಸಿಐಡಿ ತನಿಖಾ ತಂಡಕ್ಕೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ. ಯಾರೇ ಶಾಮೀಲಾಗಿದ್ದರೂ ಅವರನ್ನು ಬಂಧಿಸದೇ ಬೀಡಬೇಡಿ ಎಂದು ಸಿಐಡಿಗೆ ಸೂಚನೆ ನೀಡಲಾಗಿದೆ ಅಂತ ಹೇಳಿದ್ರು.

ಇದನ್ನೂ ಓದಿ: PSI Exam Scam: ಎಕ್ಸಾಂ ಮುಗಿದ ಮೇಲೆ ದಿವ್ಯಾ ಹಾಗರಗಿ ಜೊತೆ ಗ್ರೂಪ್ ಫೋಟೋ! ಆಯ್ಕೆಯಾದ ಅಣ್ಣ-ತಮ್ಮನಿಗೂ ಈಗ ಸಂಕಷ್ಟ

ಸಿದ್ದರಾಮಯ್ಯಗೆ ಆರಗ ಜ್ಞಾನೇಂದ್ರ ತಿರುಗೇಟು

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ 300 ಕೋಟಿ ರೂ ಅಕ್ರಮ ನಡೆದಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯ 300 ಕೋಟಿ ಅಲ್ಲ 3,000 ಕೋಟಿ ಆರೋಪ ಮಾಡಲಿ, ಮಾತಾಡೋಕೆ ಅವರಿಗೆ ವಾಕ್ ಸ್ವಾತಂತ್ರ್ಯ ಇದೆ. ನಿರಾಧಾರವಾಗಿ ಆರೋಪ ಮಾಡೋದು, ದಾಖಲಾತಿ ಕೇಳಿದರೆ, ಓಡಿಹೋಗೋದು ಕಾಂಗ್ರೆಸ್ ಕೆಲಸ. ಪ್ರಕರಣದಲ್ಲಿ ಸಿಲುಕಿದವರು ಬಹುತೇಕ ಕಾಂಗ್ರೆಸ್​ನವರೇ ಆಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ನವರು ಸರಕಾರದ ಕೆಲ ಸಚಿವರ ತೇಜೋವಧೆ ಮಾಡುತ್ತಿದ್ದಾರೆ ಅಂತ ಆರೋಪಿಸಿದ್ರು.

ಪಿಡಬ್ಲ್ಯೂಡಿ ಪರೀಕ್ಷೆ ಗೋಲ್ಮಾಲ್‌ ಬಗ್ಗೆ ಪ್ರತಿಕ್ರಿಯೆ

ಇನ್ನು PWD ಇಲಾಖೆ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎನ್ನುವ ಆರೋಪಕ್ಕೂ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ರು. ಈ ಆರೋಪಕ್ಕೆ ಸಂಬಂಧಿಸಿದಂತೆ ಚಾರ್ಜ್ ಶಿಟ್ ಆಗಿದೆ. ಸದ್ಯ ಪಿಎಸ್ಐ ಪ್ರಕರಣದಲ್ಲಿ ಬೇರು ಮಟ್ಟಕ್ಕೆ ಹೋಗಿದ್ದೇವೆ. ಅಕ್ರಮ‌ ಮಾಡಿದವರನ್ನು ಬಿಡೋದಿಲ್ಲ, ನಾವ್ಯಾರು ಈ ಸೂತಕದಲ್ಲಿ ಇಲ್ಲ. ನಮಗೆ ನೈತಿಕತೆ ಇದೆ. ತನಿಖೆ ಮಾಡಿಸುತ್ತೇವೆ ಅಂತ ಸ್ಪಷ್ಟನೆ ನೀಡಿದ್ರು.

ಆರಗ ಜ್ಞಾನೇಂದ್ರ ವಿರುದ್ಧ ಕಿಮ್ಮನೆ ರತ್ನಾಕರ್ ಪಾದಯಾತ್ರೆ

ಇನ್ನು ಗೃಹಸಚಿವ ಆರಗ ಜ್ಞಾನೇಂದ್ರ ಅವರ ತವರು ಜಿಲ್ಲೆಯ ಮತ್ತೋರ್ವ ಹಿರಿಯ ರಾಜಕಾರಣಿ, ಮಾಜಿ ಸಚಿವ ಕಿಮ್ಮನೆ ರತ್ಮಾಕರ್ ಆರಗ ಜ್ಞಾನೇಂದ್ರ ವಿರುದ್ಧ ತೊಡೆ ತಟ್ಟಿದ್ದಾರೆ. ಆರಗ ಜ್ಞಾನೇಂದ್ರ ರಾಜೀನಾಮೆಗೆ ಆಗ್ರಹಿಸಿ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾಂಗ್ರೆಸ್ 5 ದಿನಗಳ ಪಾದಯಾತ್ರೆ ಹಮ್ಮಿಕೊಂಡಿದೆ.

ತೀರ್ಥಹಳ್ಳಿಯಿಂದ ಶಿವಮೊಗ್ಗದವರೆಗೆ ಪಾದಯಾತ್ರೆ

ಈಗಾಗಲೇ ತೀರ್ಥಹಳ್ಳಿಯ ಗುಡ್ಡೆಕೊಪ್ಪದಿಂದ ಆರಂಭವಾಗಿರುವ ಕಾಂಗ್ರೆಸ್ ಪಾದಯಾತ್ರೆ ಶಿವಮೊಗ್ಗದವರೆಗೂ ನಡೆಯಲಿದ್ದು, ಮೇ 10ರಂದು ನಡೆಯುವ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: Morning Digest: ಪಿಎಸ್ಐ ಎಕ್ಸಾಂ ಹಗರಣದ ಅಪ್‌ಡೇಟ್ಸ್, ಮೇ 19ರವರೆಗೆ ಸಿಗಲ್ಲ ಎಣ್ಣೆ! ಯಶ್ ಮುಂದಿನ ಸಿನಿಮಾ ಯಾವುದು?

"ಕರ್ನಾಟಕ‌ದಲ್ಲಿ‌ ತಾಂಡವವಾಡುತ್ತಿರುವ 40% ಕಮಿಷನ್, ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ‌ ಪರೀಕ್ಷೆ ಹಗರಣ, ಪ್ರಥಮ ದರ್ಜೆ ಸಹಾಯಕ ಹುದ್ದೆ ನೇಮಕಾತಿ ಹಗರಣ, ಪ್ರಾಧ್ಯಾಪಕರ ನೇಮಕಾತಿ ಹಗರಣ, ಲೋಕೋಪಯೋಗಿ ಜೆಇ ಪರೀಕ್ಷೆಯಲ್ಲಿ ಲೋಪ ಹಾಗೂ ವರ್ಗಾವಣೆಯಲ್ಲಿ ರೇಟ್ ಕಾರ್ಡ್ ಫಿಕ್ಸ್ ಹಗರಣ, ಆಶ್ರಯ ಮನೆಗಳ ಹಂಚಿಕೆಯಲ್ಲಿ ನಡೆದಿರುವ ಭ್ರಷ್ಟಾಚಾರಗಳನ್ನು ವಿರೋಧಿಸಿ ಜನರಲ್ಲಿ ಅರಿವು ಮೂಡಿಸಲು ಈ ಪಾದಯಾತ್ರೆ ಕೈಗೊಳ್ಳಲಾಗಿದೆ" ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
Published by:Annappa Achari
First published: